Thursday, 18 June 2020

ಶ್ರೀ_ಶನೆಶ್ವರ_ಜಯಂತಿ

ದಿನಾಂಕ 22/05/2020 ರಂದು ಅಂದರೆ #ಶನಿವಾರ

 #ಶ್ರೀ_ಶನೆಶ್ವರ_ಜಯಂತಿ 

ಇದರ ಪ್ರಯುಕ್ತ ವಿಶೇಷ ಲೇಖನ 

#ಶನಿ

 ಹಿಂದೂ ಜ್ಯೋತಿಷ್ಯ ಶಾಸ್ತ್ರ ಅಥವಾ ಜ್ಯೋತಿಷ್ಯ ದಲ್ಲಿನ 9 ಪ್ರಥಮ ದಿವ್ಯ ನವಗ್ರಹಗಳಲ್ಲಿ 'ಶನಿ' ಯು ಒಬ್ಬನು. ಶನಿಗ್ರಹದಲ್ಲಿ ಶನಿಯು ಸಶರೀರನಾಗಿದ್ದಾನೆ. ಶನಿಯು ಶನಿವಾರದ ದೇವರು; ಭಾರತೀಯ ಭಾಷೆಗಳಲ್ಲಿ ಶನಿಯು ವಾರದ ಏಳನೇ ದಿನದ ದೇವರಾಗಿದ್ದಾನೆ.

ಶನಿ ಪದದ ವ್ಯುತ್ಪತ್ತಿ

ಶನಿ (शनि) ಶಬ್ದದ ವ್ಯುತ್ಪತ್ತಿ ಈ ರೀತಿ ಇದೆ : ಶನಿಯೇ ಕ್ರಮತಿ ಸ : (शनये क्रमति सः) ಅಂದರೆ, ಯಾರು ನಿಧಾನವಾಗಿ ಚಲಿಸುತ್ತಾರೋ ಅವರು , ಶನಿಗ್ರಹವು ಸೂರ್ಯನನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಲು ತೆಗೆದು ಕೊಳ್ಳುವ ಸಮಯ 30 ವರ್ಷಗಳು.

ಶನಿಯನ್ನು ಶನೈಶ್ವರ (शनैश्वर) ಶನಿ ಭಗವಾನ್ , ಶನೀಶ್ವರ , ಸನೀಸ್ವರ , ಶನೀಶ್ವರನ್ , ಶನಿದೇವ ಮುಂತಾದ ಹೆಸರುಗಳಲ್ಲಿಯೂ ಕರೆಯುತ್ತಾರೆ.

ಶನಿಯು ಸೂರ್ಯ ದೇವ ನ ಪುತ್ರ.( ಹಿಂದೂ ಸೂರ್ಯ ದೇವರು )ಹಾಗು ಸೂರ್ಯನ ಹೆಂಡತಿ ಛಾಯ. (ನೆರಳಿನ ದೇವತೆ ) ಹೀಗಾಗಿ 'ಛಾಯಾಪುತ್ರ' ಎಂದೂ ಕರೆಯಲಾಗುತ್ತದೆ.
ಹಿಂದೂಗಳ ಸಾವಿನ ದೇವತೆ ಯಮ ನ ಹಿರಿಯ ಸಹೋದರ ಶನಿ. ಧರ್ಮ ಗ್ರಂಥಗಳ ಪ್ರಕಾರ ನ್ಯಾಯವನ್ನು ಒದಗಿಸುವ ದೇವರು.

ಆಸಕ್ತಿಯ ವಿಷಯವೆಂದರೆ , ಸೂರ್ಯನ ಇಬ್ಬರು ಮಕ್ಕಳು ಶನಿ ಮತ್ತು ಯಮ ನ್ಯಾಯ ದೇವತೆಗಳೇ! ಒಬ್ಬರು ತಮ್ಮ ಜೀವನದ ಆಗು-ಹೋಗುಗಳನ್ನು ಗಮನಿಸಿ, ಶನಿಯು ಸೂಕ್ತ ರೀತಿಯ ಶಿಕ್ಷೆ ಅಥವಾ ವರವನ್ನು ಬದುಕಿರುವಾಗ ನೀಡುತ್ತಾನೆ,ಆದರೆ ಯಮನು , ಒಬ್ಬ ವ್ಯಕ್ತಿಯು ಸತ್ತ ನಂತರ ಫಲಿತಾಂಶವನ್ನು ನೀಡುತ್ತಾನೆ.

ತಿಳಿದು ಬಂದ ಒಂದು ವಿಷಯವೆಂದರೆ, ಶನಿಯು ಮಗುವಾಗಿದಾಗ, ಸೂರ್ಯಗ್ರಹಣವಾಗಿದ್ದು, ಬಿಟ್ಟ ಕಣ್ಣಿನಿಂದ ಮೊದಲ ಬಾರಿಗೆ ನೋಡಿದ್ದರಿಂದಾಗಿ ಶನಿಯ ಪ್ರಭಾವ ಎಂತಹದೆಂಬುದು ಜ್ಯೋತಿಷ್ಯ ಶಾಸ್ತ್ರದ ಪಟ್ಟಿಯಿಂದ ತಿಳಿಯುತ್ತದೆ. ಈತನು ಒಬ್ಬ ಮಹಾನ್ ಉಪಾಧ್ಯಾಯ. ಶನಿದೇವ ಯಾವ ವ್ಯಕ್ತಿಯು ತಪ್ಪಿನ/ಮೋಸದ ಅನ್ಯಾಯದ ಹಾದಿ ಹಿಡಿಯುತ್ತಾರೋ ಅವರಿಗೆ ಶನಿಯು ಬಹಳ ಕಷ್ಟವನ್ನು ನೀಡುತ್ತಾನೆ. ಹಿಂದೂ ಧರ್ಮಗ್ರಂಥಗಳ ಆಧಾರದ ಪ್ರಕಾರ ಶನಿಯು ತೊಂದರೆಯನ್ನು ಕೊಡುವ ದೇವರು ಹಾಗು ಒಳ್ಳೆಯವರನ್ನು ಆಶೀರ್ವದಿಸುವವನೂ ಸಹ ಆಗಿದ್ದಾನೆ.

ಈತನು ಕಪ್ಪು ಬಣ್ದವನಾಗಿದ್ದು, ಕಪ್ಪು ಬಟ್ಟೆಯನ್ನು ಧರಿಸಿದವನು , ಕೈಯಲ್ಲಿ ಕತ್ತಿಯನ್ನು ಹಿಡಿದವನಾಗಿದ್ದ್ದು,ಬಾಣ ಹಾಗು ಎರಡು ಚಾಕು ಹೊಂದಿದ್ದು, ಕಪ್ಪಗಿನ ಕಾಗೆಯ ಮೇಲೆ ಸವಾರಿ ಮಾಡುವವನಾಗಿದ್ದಾನೆ 

ಶ್ರೀಶನೈಶ್ಚರನು ಮಹಾಪರಾಕ್ರಮಿ ಪುರಾಣಗಳ ಪ್ರಕಾರ ಸೂರ್ಯಪುತ್ರ.
 ಶನಿಯ ಅವತಾರದ ಕಥೆ ಬೇರೆ ಬೇರೆ ಪುರಾಣಗಳಲ್ಲಿ ಸ್ವಲ್ಪ ವಿಭಿನ್ನವಾಗಿ ನಿರೂಪಿತವಾಗಿದೆ. ಈ ಆಖ್ಯಾನಗಳನ್ನು ಕಲ್ಪಾಂತರ ಭೇಧದಿಂದ ಗ್ರಹಿಸಬೇಕು ಎನ್ನುವುದು ಶಾಸ್ತ್ರನಿರ್ಣಯ. ಕಶ್ಯಪ ಮಹರ್ಷಿಯ ಮಗನಾದ ಸೂರ್ಯನು ತ್ವಷ್ಟೃ ಪ್ರಜಾಪತಿಯ ಮಗಳಾದ ಸಂಜ್ಞಾ ಎಂಬುವಳೊಡನೆ ವಿವಾಹವಾದನು. ಈ ದಂಪತಿಗಳಿಗೆ ವೈವಸ್ವತ ಮನು, ಯಮಧರ್ಮ ಎಂಬ ಇಬ್ಬರು ಪುತ್ರರು ಮತ್ತು ಯಮುನೆಯೆಂಬ ಮಗಳು ಹುಟ್ಟಿದರು.

 ಕಾಲಾಂತರದಲ್ಲಿ ಸಂಜ್ಞೆಗೆ ತನ್ನ ಪತಿಯಾದ ಸೂರ್ಯನ ದಿವ್ಯವಾದ, ಪ್ರಖರವಾದ ತೇಜಸ್ಸು ಸಹಿಸಲು ಅಸಾಧ್ಯವಾಯಿತು. ತನ್ನ ಪ್ರತಿಕೃತಿಯಾಗಿ ಛಾಯಾ ಎಂಬುವಳನ್ನು ಸಂಜ್ಞೆಯು ಸೃಷ್ಟಿಮಾಡಿ ತನ್ನ ಪತಿಯ ಸೇವೆ ಮತ್ತು ಮಕ್ಕಳ ಆರೈಕೆ ಮಾಡುವುದಾಗಿ ನಿಯಮನ ಮಾಡಿ ತಾನು ಪಿತೃಗ್ರಹಕ್ಕೆ ತೆರಳಿದಳು. ಛಾಯಾದೇವಿಯು ಪತಿಸೇವಾ ಕಾರ್ಯದಲ್ಲಿ ತತ್ಪರಳಾಗಿ ಸೂರ್ಯನ ವಿಶೇಷ ಅನುಗ್ರಹವನ್ನು ಪಡೆದಳು. ಸಂಜ್ಞೆಯಂತೆಯೆ ಛಾಯೆಯು ಸಹ ಸೂರ್ಯನಿಂದ ಸಾವರ್ಣಿ ಮನು, ಶನೈಶ್ಚರರೆಂಬ ಗಂಡು ಮಕ್ಕಳನ್ನು ತಪತಿಯೆಂಬ ಹೆಣ್ಣುಮಗುವನ್ನು ಪಡೆದಳು.

ಶನಿರಾಯನ ಜನನದ ಸಮಾಚಾರವನ್ನು ಕೇಳಿದ ಸೂರ್ಯನು ಅವಸರದಿಂದ ಪುತ್ರನನ್ನು ನೋಡಲು ಬಂದನು. ಆಗ ತಾನೇ ಜನಿಸಿದ ಶಿಶು ಶನೈಶ್ಚರನ ದೃಷ್ಟಿಯು ಸೂರ್ಯ, ಅವನ ಸಾರಥಿ ಅರುಣ, ರಥದ ಕುದುರೆಗಳು ಹೀಗೆ ಎಲ್ಲದಕ್ಕೂ ಪೀಡೆಯನ್ನುಂಟುಮಾಡಲು ಜಗದಾದ್ಯಂತ ಈತನ ಶಕ್ತಿ, ಸಾಮರ್ಥ್ಯಗಳ ಪ್ರಸಿದ್ಧಿಯಾಯಿತು.  

ಶನಿಯ ಅನುಗ್ರಹದಿಂದ ಮತ್ತೆ ಇವರನ್ನು ಮತ್ತೆ ಮೊದಲಿನ ಹಾಗೆ ಮಾಡಿ ಸಂತೋಷಪಡಿಸಿದನು.

ಭಾವುಕಾ ಅಮಾವಾಸ್ಯೆಯೆಂದು ಕರೆಯಿಸಿಕೊಳ್ಳುವ ವೈಶಾಖ ಕೃಷ್ಣ ಅಮಾವಾಸ್ಯೆಯು ಶನಿದೇವನ ಜಯಂತ್ಯುತ್ಸವವಾಗಿ ಭಾರತದಾದ್ಯಂತ ಆಚರಿಸಲಾಗುತ್ತದೆ. ಈ ಅಮಾವಾಸ್ಯೆಯನ್ನು ಶನಿ ಅಮಾವಾಸ್ಯೆಯೆಂದು ಸಹ ಕರೆಯಲಾಗುತ್ತದೆ.  ಮೇ 25, 2017 ಗುರುವಾರ ಈ ದಿವಸ. ದೇಶದಾದ್ಯಂತ ಇರುವ ಎಲ್ಲ ಶ್ರೀಶನಿದೇವಾಲಯಗಳಲ್ಲಿ ವಿಶೇಷ ಪೂಜಾ ಉತ್ಸವಗಳನ್ನು ಆಚರಿಸಲಾಗುತ್ತದೆ. ಈ ದಿನ ಪ್ರಾತಃ ಕಾಲದಲ್ಲಿ ಶ್ರೀಶನೈಶ್ಚರ ದರ್ಶನ ಮಹಾಪುಣ್ಯಪ್ರದ, ಸಕಲ ದೋಷನಾಶಕವಾಗಿದೆ. ಶನಿದೇವತಾ ಕುರಿತಾದ ಜಪ, ಸ್ತೋತ್ರಗಳ ಪಾರಾಯಣ ಮಾಡಬೇಕು, ಇದರಿಂದ ಶನಿಗ್ರಹ ನಿಮಿತ್ತ ದೋಷಗಳಿಂದ ನಿವೃತ್ತಿ. ಈ ದಿನದಂತು ಸತ್ಪಾತ್ರರಾದ ಬ್ರಾಹ್ಮಣರಿಗೆ ಶನಿಪ್ರೀತ್ಯರ್ಥ ಸದಕ್ಷಿಣಾಕ ತಿಲದಾನ (ಎಳ್ಳಿನದಾನ), ತೈಲದಾನ, ವಸ್ತ್ರದಾನಗಳನ್ನು ಮಾಡಬೇಕು.

ಶ್ರೀಶನಿಪ್ರೀತ್ಯರ್ಥ ತಿಲದಾನ ಮಂತ್ರ –

ತಿಲಾಃ ಕಾಶ್ಯಪ ಸಂಭೂತಾಃ ತಿಲಾಃ ಪಾಪಹರಾಃ ಶುಭಾಃ |
ತಿಲದಾನಪ್ರದಾನೇನ ಸ ಮೇ ಮಂದಃ ಪ್ರಸೀದತು ||

ಶ್ರೀವಾದಿರಾಜ ಸ್ವಾಮಿಗಳಿಂದ ರಚಿತವಾದ ಈ ಕೆಳಕಂಡ ಶನಿದೇವನ ಪ್ರಾರ್ಥನೆಯನ್ನು ನಿತ್ಯದಲ್ಲಿ, ಶನಿವಾರ, ಶನಿಪ್ರದೋಷಗಳಂದು ವಿಶೇಷವಾಗಿ ಮಾಡಿದಲ್ಲಿ ಶ್ರೀಶನೈಶ್ಚರನ ಕೃಪೆ ಅವಶ್ಯವಾಗಿ ಆಗುವುದು.

ಶನೇ ದಿನಮಣೇಃ ಸೂನೋ ಹ್ಯನೇಕಗುಣಸನ್ಮಣೇ | 
ಅರಿಷ್ಟಂ ಹರ ಮೇಽಭೀಷ್ಟಂ ಕುರು ಮಾ ಕುರು ಸಂಕಟಮ್ ||

ಶನಿ ಜ್ಯೋತಿಷ್ಯ ಶಾಸ್ತ್ರದಲ್ಲಿ

ವೇದಗಳ ಜ್ಯೋತಿಷ್ಯ ಶಾಸ್ತ್ರ ಪ್ರಕಾರ ,9 ನವಗ್ರಹ ಗಳಲ್ಲಿ ಶನಿಭಗವಾನ್ ಒಬ್ಬನು. ಶನಿಯು ತುಂಬಾ ಶಕ್ತಿಯುತವಾದ ನಿಷ್ಟುರ ಮಾತಿನ ಉಪಾಧ್ಯಾಯನಾಗಿದ್ದು, ಸಹನೆ, ಶ್ರಮ, ಪ್ರಯತ್ನ, ಅನುಭವಗಳ ಪ್ರತೀಕವಾಗಿದ್ದಾನೆ. ಅಡೆತಡೆಗಳನ್ನು, ದುರಾದೃಷ್ಟಗಳನ್ನು, ತರುವವನೂ ಆಗಿದ್ದಾನೆ. ಆದರೂ ,ಜಾತಕದಲ್ಲಿ ಇವನ ಸ್ಥಾನವು ಅನುಗ್ರಹ ಸ್ಥಾನದಲ್ಲಿ ಇದ್ದರೆ, ಆ ವ್ಯಕ್ತಿಯ ಜೀವನ ಒಳ್ಳೆಯ ಭವಿಷ್ಯವನ್ನು ಹೊಂದುತ್ತದೆ, ಆರೋಗ್ಯಕರ ಜೀವನವಾಗಿರುತ್ತದೆ, ಎಲ್ಲವೂ ಧನಾತ್ಮಕವಾಗಿರುತ್ತದೆ. ವಾಸ್ತವವಾಗಿ , ಹಿಂದೂ ಜ್ಯೋತಿಷಿಗಳು ನಂಬುವಂತೆ ,ಯಾರ ಜಾತಕದಲ್ಲಿ ಶನಿಯು ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ, ಅವರಿಗೆ ಬೇರೆ ಯಾವುದೇ 'ಗ್ರಹ' ಗಳು ಶನಿಯು ನೀಡುವಂತೆ ಒಳ್ಳೆಯದನ್ನು ನೀಡಲಾರರು. ಅದೇ ಶನಿಯು "ಕೆಟ್ಟಸ್ಥಾನ"ದಲ್ಲಿ ಕುಳಿತಿದ್ದರೆ, ಎಲ್ಲ ರೀತಿಯ ತೊಂದರೆ ಅನುಭವಿಸಬೇಕಾಗುತ್ತದೆ. ಜ್ಯೋತಿಷ್ಯವನ್ನು ನಂಬುವ ಹಿಂದೂಗಳು ಶನಿಯ ಬಗ್ಗೆ ಬಹಳ ಭಯ ಹಾಗು ಹೆದರಿಕೆಯಿದ್ದು, ಆತನು ಕೆಟ್ಟಸ್ಥಾನದಲ್ಲಿ ಕುಳಿತಾಗ ಆಗುವ ಅನಾಹುತಗಳಿಗೆ ಹೆದರುತ್ತಾರೆ. ಆದರೂ ಒಂದು ವಿಷಯ ಜ್ಞಾಪಕದಲ್ಲಿಟ್ಟುಕೊಳ್ಳಬಹುದೆಂದರೆ, ಯಾವುದೇ ಸುಖ ಅಥವಾ ದುಃಖಕ್ಕೆ ಶನಿಯ ಪ್ರಭಾವದಿಂದ ಮನುಷ್ಯನಿಗೆ ನೆರವಾದ ಕಾರಣವಾಗಿರದೆ, ಮನುಷ್ಯ ತಾನು ಮಾಡಿದ ಸ್ವಂತ ಕರ್ಮ ದ ನೇರ ಫಲವಾಗಿರುತ್ತದೆ . ಅದು ಶನಿಯ "ಮುಖಾಂತರ" ಘಟಿಸುತ್ತದೆ ಅಷ್ಟೇ. ಮನುಷ್ಯ ತಾನು ಮಾಡಿದ ಕೆಟ್ಟ ಕರ್ಮ ದ ಫಲದ ಅನುಸಾರ, ಶನಿಯ "ಸ್ಥಾನ-ಕೆಟ್ಟದಾಗಿ " ಕಷ್ಟಗಳು ಬರುತ್ತವೆ. ಹಾಗೆಯೇ ಒಳ್ಳೆಯದೂ ಸಹ . ಶನಿಯ ಪ್ರಭಾವದಿಂದ ಬರುವ ಖಾಯಿಲೆಗಳೆಂದರೆ-ಕೊಳೆಯುವಿಕೆ, ರಕ್ತ ಸರಬರಾಜಿನಲ್ಲಿನ ಏರು-ಪೇರು, ಕ್ಷಯ ರೋಗ ,ಮುಂತಾದವು. ಮಾನಸಿಕವಾಗಿ, ಸಂಕುಚಿತ ಮನೋಭಾವ, ಕೆಳಮಟ್ಟದ ಚಿಂತನೆ. ಈ ಖಾಯಿಲೆಗಳನ್ನು ಶನಿಯ ನಿಯಮ ಮತ್ತು ಷರತ್ತುಗಳನ್ವಯವೇ ಸುಧಾರಿಸಲು ಸಾಧ್ಯ.
ಶನಿಗ್ರಹವು ಸೂರ್ಯನನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಕಾಲಾವಧಿಯು 30 ವರ್ಷಗಳು. ಅಂದರೆ ಎಲ್ಲಾ 12 ರಾಶಿ ಗಳನ್ನೂ ಅಥವಾ ಚಂದ್ರ ಚಿನ್ಹೆಯನ್ನು ದಾಟಲು 30 ವರ್ಷದ ಅವಧಿ ಬೇಕಾಗುತ್ತದೆ. ಪ್ರತಿಯೊಂದು ರಾಶಿ ಯಲ್ಲಿ ಶನಿಭಗವಾನ್ ಎರಡೂವರೆ ವರ್ಷ ಕಾಲವನ್ನು ಕಳೆಯುತ್ತಾನೆ. ಚಂದ್ರ ಚಿನ್ಹೆ ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರಚಿನ್ಹೆಯ ಮುಖಾಂತರದ ಈ ಚಲನೆಯ ಶನಿಯ ಅವಧಿಯು ಮುಖ್ಯವಾದುದಾಗಿದೆ ಹಾಗು ಜಾತಕದ ತಿಳುವಳಿಕೆಗೆ ಇದರ ಅಗತ್ಯವಿರುತ್ತದೆ. ಒಬ್ಬ ವ್ಯಕ್ತಿಯ ಹುಟ್ಟಿದ ರಾಶಿ /ಚಂದ್ರಚಿನ್ಹೆ ಯ ಹಿಂದಿನ ಮನೆಯ ರಾಶಿಯ ಪ್ರವೇಶವಾದಾಗ, ಶನಿಯ ಪ್ರಭಾವವು ಪ್ರಾರಂಭವಾಗಿ , ಹುಟ್ಟಿದ ರಾಶಿ /ಚಂದ್ರಚಿನ್ಹೆ ಯ ಮುಂದಿನ ಮನೆ ಪ್ರವೇಶದೊಂದಿಗೆ ಶನಿಯ ಪ್ರಭಾವವು ನಿಲ್ಲುತ್ತದೆ. ಒಟ್ಟು ಅವಧಿಯ 7.5 ವರ್ಷ (2.5 ವರ್ಷ × 3) ವನ್ನು ಸಾಡೇ ಸಾತಿ ಅಥವಾ "ಏಳರಾಟ ಶನಿ" ಎಂದು,ಈ ಅವಧಿಯು ಅತ್ಯಂತ ತ್ರಾಸದಾಯಕ ವಾದುದಾಗಿದೆ. ಶನಿ ಮಹಾದೆಶೆಯು ಮನುಷ್ಯನಲ್ಲಿ ನಡೆಯುವಾಗ ಆತನ ಪ್ರಭಾವವು ಉನ್ನತ ಮಟ್ಟದಲ್ಲಿ ನಿಶ್ಚಿತವಾಗುತ್ತದೆ. ಹೇಳಿಕೆಯಂತೆ ಶನಿಯ ಪ್ರಭಾವದಿಂದ ರಾಜನೂ ಸಹ 'ಪಾಪರ್' ಆಗಿ ಬೀದಿಗೆ ಬೀಳುವ ಸಂದರ್ಭ ಆ ಸಮಯದಲ್ಲಿ ಬರಬಹುದು.

ಶನಿಯು ಮಕರ (ಕಾಪ್ರಿಕಾರ್ನ್ ) ಮತ್ತು ಕುಂಭ (ಅಕ್ವೆರೀಸ್ )ರಾಶಿಯ ಅಧಿಪತಿ, ತುಲಾ (ಲಿಬ್ರ )ರಾಶಿಯಲ್ಲಿ ಸಬಲನಾದರೆ, ಮೇಷ (ಏರೀಸ್ )ರಾಶಿಯಲ್ಲಿ ದುರ್ಬಲನಾಗಿರುತ್ತಾನೆ. 

ಬುಧ , ಶುಕ್ರ , ರಾಹು , ಕೇತು ಗ್ರಹಗಳು ಶನಿಯೊಂದಿಗೆ ಸ್ನೇಹದಿಂದ್ದಿದ್ದರೆ, ಸೂರ್ಯ , ಚಂದ್ರ ಮತ್ತು ಗುರು ಗ್ರಹಗಳು ಶತ್ರುಗ್ರಹಗಳಾಗಿವೆ. ಗುರು ಅಥವಾ ಗುರುಗ್ರಹ ಶನಿಯೊಂದಿಗೆ ಯಾವುದೇ ಪ್ರಭಾವವನ್ನು ಹೊಂದಿರುವುದಿಲ್ಲ. ಪುಷ್ಯ , ಅನುರಾಧಮತ್ತು ಉತ್ತರ - ಭಾದ್ರಪದ ನಕ್ಷತ್ರಗಳಿಗೆ ಒಡೆಯ ಶನಿ ಮಹಾರಾಜ.

ಶನಿ ಭಗವಾನನ ಬಣ್ಣ ಕಪ್ಪು ಅಥವಾ ದಟ್ಟ ನೀಲಿ; ಲೋಹ-ಕಬ್ಬಿಣ; ಹರಳು-ನೀಲಿ. ಇಯಾತನ ಮೂಲವಸ್ತು ಅಥವಾ ತತ್ತ್ವಗಾಳಿ ;ದಿಕ್ಕು-ಪಶ್ಚಿಮ, (ಸೂರ್ಯ ಮುಳುಗುವ-ಕತ್ತಲು ಆರಂಭವಾಗುವ ದಿಕ್ಕು ) ಹಾಗು ಎಲ್ಲಾ ಋತುಗಳನ್ನೂ ಆಳುತ್ತಾನೆ. ಶನಿಯ ಸಾಂಪ್ರದಾಯಿಕ ಆಹಾರಗಳು :ಕರಿ ಮೆಣಸು, ಕರಿ ಉದ್ದು. ಈತನ ಹೂವು ನೇರಳೆ, ಎಲ್ಲಾ ಕರಿ ಬಣ್ಣದ ಪ್ರಾಣಿಗಳು ಹಾಗು ಉಪಯೋಗಕ್ಕೆ ಬಾರದ ಕುರೂಪಿ ಮರಗಳು ಶನಿಯ ಸಂಕೇತ.
ಶನಿಯು ಗುಂಪುಗಳನ್ನು ಆಳುವವನಾಗಿದ್ದಾನೆ. ಒಬ್ಬರ ಜಾತಕದಲ್ಲಿ ಗ್ರಹಗಳ ಆಶೀರ್ವಾದವಿಲ್ಲದೆ ,ಗುಂಪುಗಳನ್ನು ಪರಿಗಣಿಸುವುದು ಕಷ್ಟದಾಯಕ. ಶನಿ ಗ್ರಹವು ಉಚ್ಚಸ್ಥಾನ (ಅಥವಾ ಲಗ್ನ ) ದಲ್ಲಿದ್ದಾಗ ಜ್ಯೋತಿಷ್ಯದ ಜಾತಕ ಫಲದನ್ವಯ ನಾಯಕತ್ವದ ಗುಣ ಅವನದಾಗಿದ್ದು,ಹೆಸರು ಮತ್ತು ಅಧಿಕಾರವನ್ನು ಹೊಂದಿದವನಾಗುತ್ತಾನೆ. ಜೊತೆಗೆ ಅಂತಹ ಜನರು ಹೆಚ್ಚಿನ ಶ್ರದ್ಧೆಯುಳ್ಳವರಾಗಿದ್ದು ,ಕೈಯಲ್ಲಿ ಹಿಡಿದ ಕೆಲಸವನ್ನು ಬಿಡದೆ ಮಾಡುವವರಾಗಿರುತ್ತಾರೆ. ಮತ್ತೊಂದು ಭಾಗದಲ್ಲಿ , ಅದೇ ಶನಿ ಗ್ರಹವು ನೀಚ ಸ್ಥಾನದಲ್ಲಿದ್ದಾಗ,ಒಬ್ಬ ವ್ಯಕ್ತಿಯ 'ಕರ್ಮ 'ದನ್ವಯ ದುರ್ಬಲನಾಗಿದ್ದು,ಕೆಲಸಗಳಲ್ಲಿ ಆಸಕ್ತಿಯಿಲ್ಲದೆ,ಕರ್ಮವನ್ನು ಹಳಿಯುತ್ತಾ, ನಿರಾಶಾದಾಯಕವಾಗಿ ಸೋಲನ್ನು ಅನುಭವಿಸುತ್ತಾನೆ. ಒಬ್ಬನ ಜಾತಕದಲ್ಲಿ ಶನೀಶ್ವರನ ಪ್ರಭಾವವಿಲ್ಲದಿದ್ದರೆ,ಆತನಿಗೆ 'ಮೋಕ್ಷ ' ದುರ್ಲಭವಾಗುತ್ತಾ ಹೋಗುತ್ತದೆ.

ಶನೀಶ್ವರ ಮಹಾರಾಜನನ್ನು ನೀಧಿಮನ್ (ನ್ಯಾಯಾಧೀಶ )ಎಂದೂ ತಿಳಿಯಲಾಗಿದೆ. ವ್ಯಕ್ತಿಯು ಮಾಡಿರುವ ತಪ್ಪುಗಳನ್ನು ಮನಗಂಡು, ಅವನ ದೆಶೆಯಲ್ಲಿ ತೊಂದರೆ ನೀಡುತ್ತಾನೆ. ಶನಿ ದೋಷದಲ್ಲಿ , ವ್ಯಕ್ತಿಯು ಸರಿಯಾಗಿದ್ದು, ಭಕ್ತನಾಗಿದ್ದರೆ ಈ ಕಷ್ಟ ಕಾಲದಲ್ಲಿಯೂ ಯಾವುದೇ ರೀತಿಯ ತೊಂದರೆಗಳಿಲ್ಲದೆ ಹೊರ ಬರುತ್ತಾನೆ.

ಶನಿ ಮಹಾರಾಜನು ನೀಡುವ ಕಷ್ಟಗಳಿಗಿಂತ, ಆತನು ನೀಡುವ ಒಳ್ಳೆಯ ವರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾನೆ. ಆಶೀರ್ವಾದದ ದೃಷ್ಟಿಯಿಂದ ಶನಿ ಮಹಾರಾಜನಷ್ಟು ಬೇರೆ ಯಾವ ಗ್ರಹಗಳೂ ಹೋಲಿಕೆಗೆ ಸಿಗಲು ಸಾಧ್ಯವಿಲ್ಲ. .ಆತನು ತನ್ನ ದೆಶೆಯ ಕೊನೆಯಲ್ಲಿ ವರವನ್ನು ನೀಡುತ್ತಾನೆ.

 ಈತನ ಆದಿ -ದೇವತೆಯು ಪ್ರಜಾಪತಿ ಮತ್ತು ಪ್ರತ್ಯಾದಿ - ದೇವತೆಯು ಯಮ . ಶನಿ ಮಹಾರಾಜನು ಒಬ್ಬ ವ್ಯಕ್ತಿಯ ಸಹನೆಯನ್ನು ಪರೀಕ್ಷಿಸುತ್ತಾನೆ. ನಮ್ಮಲ್ಲಿನ ಕೆಟ್ಟ ಗುಣಗಳು ಒಳ್ಳೆಯ ಗುಣಗಳಾಗಿ ಪರಿವರ್ತನೆಯಾಗಲು ಆಶಾಭಂಗವನ್ನು ಸೃಷ್ಟಿಸುತ್ತಾನೆ ಹಾಗು ಕಾರ್ಯವನ್ನು ತಡ ಮಾಡುತ್ತಾನೆ.

 ಕೊನೆಯಲ್ಲಿ ಒಬ್ಬ ವ್ಯಕ್ತಿಯು ತಾನು ಮಾಡಿದ ತಪ್ಪನ್ನು ಅರಿಯಲು ಅನುವು ಮಾಡಿಕೊಡುತ್ತಾನೆ. ,ಶಿಕ್ಷೆಯನ್ನು ಕೊಡುವ ಮೂಲಕ ಮುಗ್ಧತೆಯನ್ನು ತೊಡೆದು ಹಾಕುತ್ತಾನೆ. ಇದರಿಂದಾಗಿ ಆತ್ಮ ಪರಿಶುದ್ಧವಾಗಿ ,ವ್ಯಕ್ತಿಯು ಬದಲಾಗಿ ತಾಮ್ರ ಚಿನ್ನವಾಗಿ ಪರಿವರ್ತನೆ ಹೊಂದುತ್ತದೆ. ಅಂತರಂಗದಲ್ಲಿ ಅಂದರೆ ,ನಿಜವಾದ ಸತ್ಯವನ್ನು ಅರ್ಥ ಮಾಡಿಕೊಳ್ಳ ಲಾರಂಭಿಸುತ್ತಾನೆ. ಬೇಜವಾಬ್ದಾರಿತನದಿಂದ ಮಾಡಿದ ತಪ್ಪುಗಳನ್ನು ಅರಿಯುತ್ತಾನೆ. ಶನಿಯ ಮಹಾದೆಶೆ ಮುಗಿಯುತ್ತಾ ಬಂದಂತೆ, ಮನುಷ್ಯ ತನ್ನ ಹಿಡಿತದಲ್ಲಿ ಯಾವುದೂ ಇಲ್ಲ ಎಂದು ತಿಳಿಯುತ್ತಾ ಬರುತ್ತಾನೆ. ಎಲ್ಲವೂ ದೈವನಿಯಾಮಕವಾಗಿದ್ದು, ದೇವರು ನಿಜವಾದ ಸಾಧಕನಾಗಿದ್ದು, ಮಾನವ ಆತನ ದೂತರು ಮಾತ್ರ.

ಸಂಖ್ಯಾ ಶಾಸ್ತ್ರದ ಪ್ರಕಾರ 8 ರ ಸಂಖ್ಯೆಯಂದು ಹುಟ್ಟಿದವರು ಶನಿಗೆ ಅಧೀನರಾಗುರುತ್ತಾರೆ. ಯಾವುದೇ ತಿಂಗಳು, ದಿನಾಂಕ 8 ಮತ್ತು 26 ರಂದು ಹುಟ್ಟಿದವರು ಕಷ್ಟಗಳನ್ನು ಜೀವನದಲ್ಲಿ ಎದುರಿಸಬೇಕಾದದ್ದು ಅನಿವಾರ್ಯ. ಈ ಕಷ್ಟಗಳಿಗೆ ಒಂದು ಕಾರ್ಯ-ಕಾರಣ ಗುರಿಯಿದ್ದು, ಅವನ್ನು ಗುರುತಿಸುವುದು ಮುಖ್ಯವಾಗಿದ್ದು, ಜೀವನದಲ್ಲಿ ಅದರ ಕಾರಣವನ್ನು ಕಂಡುಕೊಳ್ಳಬೇಕಾಗುತ್ತದೆ.

ಶನಿಯನ್ನು ಸಂತೃಪ್ತಿಗೊಳಿಸುವ ಉಪಾಯವೆಂದರೆ, ತಾನು ಮಾಡಿದ ತಪ್ಪುಗಳ ಜವಾಬ್ದಾರಿಯನ್ನು ಹೊರಲು ಸಿದ್ಧನಿರಬೇಕು, ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳಬೇಕು, ಕಷ್ಟ ಪಡಬೇಕು. ಶನಿವಾರದಂದು ನೀಲಿ ಬಣ್ಣದ ಬಟ್ಟೆಯನ್ನು ದಾನ ಮಾಡಬೇಕು ಹಾಗು ಬಡವರಿಗೆ ಸಹಾಯ ಮಾಡಬೇಕು.

ಶನಿಯನ್ನು ಸಂತೃಪ್ತಿ ಪಡಿಸುವ/ಸಂತೋಷಪಡಿಸುವ ಹಾದಿ /ಮಾರ್ಗಗಳು

ಪುರಾಣದ ಪ್ರಕಾರ , ಶನಿಯು 'ದೇವ ಶಿವನ' ಆರಾಧಕ . "ಬ್ರಹ್ಮಾಂಡ ಪುರಾಣ " ದ "ನವಗ್ರಹ ಪೀಡಾಹಾರ ಸ್ತೋತ್ರ " ದ ಪ್ರಕಾರ, ಯಾರೇ ಆಗಲಿ ಈ ಕೆಳಕಂಡ ಸ್ತೋತ್ರವನ್ನು ಪಠಿಸಿದರೆ ಶನಿಯ ಎಲ್ಲಾ ರೀತಿಯ ದೃಷ್ಟಿಯಿಂದ ಪಾರಾಗಬಹುದಾಗಿದೆ.

":ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷಃ ಶಿವಪ್ರಿಯಃ

ಮಂದಚಾರಃ ಪ್ರಸನ್ನಾತ್ಮ ಪೀಡಾಮ್ ಹರತು ಮೇ ಶನಿ "||

ತಮಿಳಿನಲ್ಲಿ ಶನೀಶ್ವರ ಮಂತ್ರ  :

ಸಂಗದನಗಲ್ ತೀರ್ಪೈ ಶನಿ ಭಗವಾನ್
ಮಂಗಳಂ ಪೊಂಗ ಮನಂ ವೈಥರುಲ್ ವೈ
ಸಚರವಿಂದ್ರಿ ಸಾಗ ನೆರಿಯಿಲ್
ಇಚ್ಚಗಂ ವಾಜ್ಹ ಇನ್ನರುಲ್ ಥಾ ಥಾ

ವೇದಗಳ ಜ್ಯೋತಿಷ್ಯದ ಪ್ರಕಾರ ,ಶನಿಯ ಸ್ಥಳಾಂತರದಿಂದ ಆಗುವ ಕೆಟ್ಟ ಪರಿಣಾಮಗಳಿಂದ ಪಾರಾಗಲು ಈ ಕೆಳಕಂಡ ಉಪಾಯಗಳು ಇದ್ದು, ಶನಿಗ್ರಹದ ಚಲನೆ , ಶನಿ -ಕಾಂತ ಶನಿ (ಶನಿಯು ಎಂಟನೆಯ ಮನೆಯಲ್ಲಿ ಚಲಿಸುವಾಗ ಚಂದ್ರನ ದೃಷ್ಟಿಯಿಂದ ), ಸಾಡೇ -ಸತಿ (ಶನಿ ಗ್ರಹವು ಹನ್ನೆರಡನೆ ,ಮೊದಲ ಹಾಗು ಎರಡನೇ ಮನೆ ,ಚಂದ್ರ ದೃಷ್ಟಿಯಿಂದ ) -

ತಾಯಿ ದೇವತೆ ಕಾಳಿಯನ್ನು ಅಮಾವಾಸ್ಯೆಯಂದು ಪೂಜಿಸಿರಿ.

ವಿಷ್ಣುವನ್ನು ಲಾರ್ಡ್ ಕೃಷ್ಣನ ರೂಪದಲ್ಲಿ ಪೂಜಿಸುತ್ತಾ, 'ಓಂ ನಮೋ ನಾರಾಯಣಾಯ', 'ಹರೇಕೃಷ್ಣ ಹರೇಕೃಷ್ಣ , ಕೃಷ್ಣ ಕೃಷ್ಣ ಹರೇಹರೇ ,'ಎಂದು ನಾಮವನ್ನು ಭಜಿಸುತ್ತಿರಬೇಕು.

ಶ್ರೇಷ್ಠ ವಿಶ್ವದ ಆಕಾರದಲ್ಲಿ ಶ್ರೀ ಹನುಮಾನನನ್ನು ಅಂದರೆ ಶನಿ ಮಹಾತ್ಮನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡ ಸಂದರ್ಭದಲ್ಲಿದ್ದಂತೆ ಹಾಗು ಆತನಿಂದ ವರವನ್ನು ಪಡೆದ ಸಂದರ್ಭದಲ್ಲಿನ ಹನುಮನ ಪ್ರಾರ್ಥನೆ ಮಾಡಿ ಸೂರ್ಯನಿಂದ ಪಡೆದ ಸಲಹೆ ಹಾಗು ಆಶೀರ್ವಾದ ಪಡೆದ ಸಂದರ್ಭ ...

ಶನಿ ಭಗವಾನನ ಬೆಂಬಲವನ್ನು ಪಡೆಯಲು ಬಳಸುವ ಒಂದು ಸಾಮಾನ್ಯ ಮಂತ್ರ  : ಓಂ ಶಂ ಶನೈಸ್ಕಾರ್ಯಯೇ ನಮಃ . 
ಶನಿಯನ್ನು ಸಂತೃಪ್ತನಾಗಿಸಲು ಇನ್ನೊಂದು ಮಂತ್ರ : ಆಮ್ ಪ್ರಾಂಗ್ ಪ್ರೀಂಗ್ ಪ್ರೌಂಗ್ ಶಾ ಶನಿಯೇ ನಮಃ 

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ , ಛಾಯಾ -ಮಾರ್ತಂಡಂ -ಸಂಭೂತಂ , ತಮ್ ನಮಾಮಿ ಶನೈಶ್ಚರಂ .

ಕೆಲವು ಭಕ್ತರು 'ಓಂ ಶಂ ಶನೈಸ್ಕಾರ್ಯಯೇ ನಮಃ ' ಎಂದು ಪ್ರತಿದಿನ 108 ಸಲ ಪಠಿಸುತ್ತಾರೆ. ಹಾಗೆಯೇ ವೇದ ಪುಸ್ತಕಗಳನ್ನು ಓದಿ ಅಭ್ಯಸಿಸುತ್ತಾರೆ, ನಂತರ ಶನಿ ಶ್ಲೋಕವನ್ನು ನವಗ್ರಹ ಸುಕ ದಿಂದ ಪ್ರಾರಂಭಿಸಿ 'ಶನ್ನೋ ...'

ತಿಲಾಭಿಷೇಕಂ ಅನ್ನು ಶನಿತ್ರಯೋದಶಿಯಂದು, ಶನಿಜಯಂತಿಯಂದು (ಪುಷ್ಯ ಮಾಸ ಬಹುಳ ಅಷ್ಟಮಿ ) ಮತ್ತು ಶನಿ- ಅಮಾವಾಸ್ಯೆ ದಿನಗಳಂದು ಮಾಡಿಸಿ .
ಕರಿ ಎಳ್ಳನ್ನು ಬ್ರಾಹ್ಮಣರಿಗೆ ದಾನ ಮಾಡಿ (1 ಕೆಜಿ 900 ಗ್ರಾಂಗಳು )

ಕಪ್ಪು ಹಸುವಿಗೆ (ಕಪಿಲ ಗೋವು ) ಕರಿ ಎಳ್ಳು , ಬೆಲ್ಲದ ಮಿಶ್ರಣವನ್ನು ತಿನ್ನಿಸಿ .

ಶನಿವಾರದಂದು ಉಪವಾಸ (ದ್ರವಾಹಾರ )ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ (ಶ್ರಾವಣ ಮಾಸದಲ್ಲಿ ಕಡ್ಡಾಯ )

ಕಾಗೆಗಳಿಗೆ ಆಹಾರ (ಬೆಳಗಿನ ಹೊತ್ತು )
ದೈಹಿಕ ಅಂಗವಿಕಲರಿಗೆ ಆಹಾರ .

ನವಗ್ರಹ ಪ್ರದಕ್ಷಿಣೆ (19 ಸುತ್ತು ) .

ಹೆಸರಾಂತ ದೇವಸ್ಥಾನಗಳ ಭೇಟಿ ( ವರ್ಷಕ್ಕೆ ಒಂದು ಸಾರ್ತಿ ) ಮಂದಪಲ್ಲಿ , ಶನಿ ಸಿಂಗನಪುರ , ತಿರುನಲ್ಲರ್ , ನರ್ಸಿನ್ ಗೋಲೆ , ವೆಂಕಥಳ ಮತ್ತು ವೀರಣ್ಣ ಪಲೇಮ್ (ಪರ್ಚುರ್ ಮಂಡಲಂ , ಪ್ರಕಾಶಂ ಜಿಲ್ಲೆ ).

ಪ್ರತಿದಿನ ಮನೆಯ ಮುಖ್ಯದ್ವಾರದ ಮುಂದೆ , ಸೂರ್ಯ ಮುಳುಗಿದ ಮೇಲೆ ಎರಡು ಎಳ್ಳೆಣ್ಣೆಯ ದೀಪಗಳನ್ನು ಹಚ್ಚಿಡಬೇಕು.

ದಶರಥ ಮಹಾರಾಜನಿಂದ ರಚಿಸಲ್ಪಟ್ಟ ಶನಿ ಸ್ತೋತ್ರದ ಪಠಣ.

ಜ್ಯೇಷ್ಥಾದೇವಿ , ಶನೀಶ್ವರ ಸ್ವಾಮಿಯವರ ಮದುವೆ (ಶ್ರಾವಣ ಪೂರ್ಣಿಮ ದಿನ ).
ಶನಿ ಜಪಂ, 19000 ಮೂಲಮಂತ್ರದ ಜೊತೆಗೆ , ಪುನರ್ ಚರಣ , ಹವನಂ , ದಾನಂ .
ಶನಿಚಾರ ವ್ರಥಂ , ಹೋಮ ಪ್ರತಿ ಶನಿವಾರ ಶ್ರಾವಣ ಮಾಸದಲ್ಲಿ .

ಶನೈಚರ ಧೀಕ್ಷ : ಶ್ರಾವಣ ಶುದ್ಧ ವಿದಿಯಿಂದ ಶ್ರಾವಣ ಬಹುಳ ಷಷ್ಠಿಯವರೆಗೆ .

'ರಾಮ - ನಾಮ ', ಹನುಮಾನ್ ಚಾಲೀಸ , ದುರ್ಗಾ ಸ್ತುತಿಯ ಪಠಣ .

ಹನುಮಾನ್ , ಶ್ರೀ ದುರ್ಗಾ ದೇವಿ , ವಿನಾಯಕನಿಗೆ ಪ್ರಾರ್ಥನೆ  .

ಮೊಸರನ್ನ , (ತಮಿಳಿನಲ್ಲಿ ತೋಥಿಯನಂ), ಮೆಣಸು ಬೆರೆಸಿದ ಮೊಸರನ್ನವನ್ನು ದೇವರಿಗೆ ಅರ್ಪಿಸಿ ನಂತರ ಕಾಗೆಗೆ ಉಣಬಡಿಸುವುದು.

ಅಂಗವಿಕಲ ಮಕ್ಕಳಿಗೆ ಆಹಾರ ವಿತರಣೆ
ದೊಡ್ಡ ಕೂದಲಿನ ಬೆಕ್ಕಿಗೆ , ಮೀನು ಗಳಿಗೆ ಆಹಾರ ವಿತರಣೆ.

ಕೆಲವು ಮಾಹಿತಿ ನಿಮಗೆ

ಎಲ್ಲರಿಗೂ ಶ್ರೀ ಶನೈಶ್ಚರನ ಜಯಂತಿ ಶುಭಾಶಯಗಳು,  ಅವನ ಅನುಗ್ರಹದಿಂದ ಎಲ್ಲರೂ ಅಭಿವೃದ್ಧಿ ಹೊಂದಲಿ. 

ಕೃಪೆ:::ಅಂತರ್ಜಾಲ ಮಾಹಿತಿ 

#ಶ್ರೀ_ಕೃಷ್ಣಾರ್ಪಣ_ಮಸ್ತು

No comments:

Post a Comment