ಹಿಂದೂ ಧರ್ಮದ ಇತಿಹಾಸ
#ಮುಂಡಕೋಪನಿಷತ್
ಮುಂಡಕೋಪನಿಷತ್ಇದು ಅಥರ್ವವೇದದ ಶೌನಕ ಶಾಖೆಗೆ ಸೇರಿದೆ.ಆರು ಅಧ್ಯಾಯಗಳಿಂದ ಕೂಡಿದ ಇದು ಕರ್ಮ,ಜ್ಞಾನಗಳ ಸ್ವರೂಪ,ನಿಜವಾದ ಜ್ಞಾನ,ಆತ್ಮಸಾಕ್ಷಾತ್ಕಾರದ ಹಾದಿ ಕುರಿತಾದ ವಿಶೇಷವಾದ ರೀತಿಯಲ್ಲಿ ವಿವರಣೆ ನೀಡುತ್ತದೆ.ಸೃಷ್ಟಿ ಮತ್ತು ಸೃಷ್ಟಿಕರ್ತ,ಪರ ಮತ್ತು ಅಪರವಿದ್ಯೆ,ಬ್ರಹ್ಮ ಮತ್ತು ಬ್ರಹ್ಮಸಾಕ್ಷಾತ್ಕಾರ,ಜೀವಾತ್ಮ ಮತ್ತು ಪರಮಾತ್ಮ ಎಂಬ ವಿಚಾರಗಳ ಕುರಿತಾಗಿ ಈ ಉಪನಿಷತ್ತಿನಲ್ಲಿ ಮಾರ್ಗದರ್ಶನವಿದೆ.ಇಂದ್ರಿಯಜನ್ಯವಾದ ಪ್ರಪಂಚವನ್ನು ತ್ಯಜಿಸಿ ಇಂದ್ರಿಯಾತೀತವಾದ ಬ್ರಹ್ಮಾನಂದದ ಅನುಭವವನ್ನು ಪಡೆದು ಕೃತಾರ್ಥರಾಗಬೇಕೆಂದು ಕರೆಕೊಡುತ್ತದೆ.ಇದರಲ್ಲಿ ಮೂರು ಅಧ್ಯಾಯಗಳಿದ್ದು ೬೪ ಮಂತ್ರಗಳಿವೆ.
#ಮಾಂಡೂಕ್ಯೋಪನಿಷತ್
ಮಾಂಡೂಕ್ಯೋಪನಿಷತ್ ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿದ್ದು ಬರೇ ೧೨ ಮಂತ್ರಗಳಿಂದ ಕೂಡಿದೆ. ಇದು ಅಥರ್ವವೇದಕ್ಕೆ ಸೇರುದುದಾಗಿದೆ. ಇದರಲ್ಲಿ ಓಂ ಶಬ್ದದ ಹಿರಿಮೆ, ಅರ್ಥಶಕ್ತಿ, ಮನುಷ್ಯನ ಜಾಗ್ರತ್, ಸ್ವಪ್ನ, ಸುಷುಪ್ತಿ, ತುರೀಯ ಎಂಬ ನಾಲ್ಕು ಅವಸ್ಥೆಗಳ ವಿವರಣೆ, ಬ್ರಹ್ಮ, ಹಿರಣ್ಯಗರ್ಭ, ತೈಜಸ ಎಂಬ ಸೃಷ್ಟಿಶಕ್ತಿಗಳ ಕುರಿತಾದ ನಿರ್ದಿಷ್ಟ ವಿವರಣೆಗಳಿವೆ. ಈ ಉಪನಿಷತ್ತು ಸೂಕ್ತ ಮಾನಸಿಕ ತಯಾರಿಯೊಂದಿಗೆ ಅದ್ಯಯನ ಮಾಡಿದಾಗ ಇದು ಬಹಳ ಮಹತ್ವದ್ದೂ,ಅರ್ಥಪೂರ್ಣವಾದುದೂ ಎಂದು ಅರಿವಾಗುತ್ತದೆ.
Namma Kannada Naadu
#ಶ್ರೀ_ಕೃಷ್ಣಾರ್ಪಣ_ಮಸ್ತು
No comments:
Post a Comment