Thursday, 18 June 2020

ಚಕ್ರಾನದಿ ಜೀವಕ್ಕೆ_ಜೀವನಕ್ಕೆ_ಜೀವನದಿಗಳ_ಕೊಡುಗೆ_ಅಪಾರ

#ಜೀವಕ್ಕೆ_ಜೀವನಕ್ಕೆ_ಜೀವನದಿಗಳ_ಕೊಡುಗೆ_ಅಪಾರ

ಅಂತಹ *ಜಲದ ಸಿಂಚನದ ನದಿಗಳ ಬಗ್ಗೆ ತಿಳಿಯೋಣ ಬನ್ನಿ

               #ಚಕ್ರಾನದಿ

ಒಂದಾನೊಂದು ಕಾಲದಲ್ಲಿ ಕಿರಾತ ದೇಶವನ್ನು ರಾಜಾ ಧರ್ಮಾಂಗದನು  ಆಳುತ್ತಿದ್ದನು. *ಶಿವನ ಪರಮ‌ ಭಕ್ತನಾದ ಈತ ಸತ್ಯ- ಧರ್ಮದಿಂದ ರಾಜ್ಯಭಾರ ನಡೆಸುತ್ತಿದ್ದನು. ಪ್ರಜೆಗಳೆಲ್ಲರೂ  ಈತನ ಆಳ್ವಿಕೆಯಿಂದ ಸಂತೃಪ್ತರಾಗಿದ್ದರು* ಇವನ ಪತ್ನಿ ಸುಧರ್ಮಿ . ಈಕೆ ಪತಿ ಪರಾಯಣೆ . ಇವರಿಗೆ ಓರ್ವ ಕಂದ ಜನಿಸಿದನು. ರಾಜ ದಂಪತಿಗಳು ಆ ಶಿಶುವಿಗೆ ಹೇಮಾ ಎಂದು ಹೆಸರಿರಿಸಿದರು. 

ಕಂದನ ಬಾಲಲೀಲೆಗಳನ್ನು ಕಂಡು ತಂದೆ ತಾಯಿಗಳು  ಅತ್ಯಂತ ಸಂತೋಷ  ತಾಳುತ್ತಿದ್ದರು. *ಮಗು ದಿನ ದಿನ ಬೆಳೆಯುತ್ತಿತ್ತು . ಐದು ವರುಷ ತುಂಬಿತು . ಆಗ ಆತನಿಗೆ ಪೂರ್ವ ಸ್ಮರಣೆ ಉಂಟಾಯಿತು* ಇದರಿಂದ ಆಟ ಪಾಠಗಳನ್ನೇಲ್ಲಾ ಬದಿಗಿರಿಸಿದ ಹೇಮ ಸದಾ ವಿರಾಗಿಯಾಗಿ ಶಿವನ ಪೂಜೆ ಮಾಡಲು ಆರಂಭಿಸಿರುವುದನ್ನು ಕಂಡು ರಾಜ ದಂಪತಿಗಳಿಗೆ ಆಶ್ಚರ್ಯವಾಯಿತು. *ಜೊತೆಗೆ ದುಃಖವೂ ಉಂಟಾಯಿತು ಹೇಗಾದರೂ ಮಗನನ್ನು ವೈರಾಗ್ಯದಿಂದ ವಿಮುಖನನ್ನಾಗಿ ಮಾಡಬೇಕೆಂದು ಬಯಸಿದರು* ಬೇರೆ ಬೇರೆ ರೀತಿಯಿಂದ ಪ್ರಯತ್ನಿಸಿದರು. ಪ್ರಯೋಜನವಾಗಲಿಲ್ಲ. *ಮಗನ ಚಿಂತೆ ಸುಧರ್ಮಿ - ಧರ್ಮಾಂಗದರನ್ನು ತೀವ್ರವಾಗಿ ಕಾಡಿತು* 

*ಒಂದು ದಿನ ಕಣ್ವ ಮಹರ್ಷಿಗಳು ಅರಸನ ಆಸ್ಥಾನಕ್ಕೆ ಬಂದರು*. ಬಂದ *ಮುನಿಯನ್ನು ರಾಜ ದಂಪತಿಗಳು ಆದರದಿಂದ ಸ್ವಾಗತಿಸಿದರು ಸತ್ಕರಿಸಿದರು*. ಆದರೂ ಅರಸ ನಿರುತ್ಸಾಹಿಯಾಗಿದ್ದರು.‌ ಅದನ್ನು ಅರಿತ ಮಹರ್ಷಿಗಳು *ಅರಸನೊಡನೆ ಚಿಂತೆಯ ಕಾರಣವನ್ನು ಕೇಳಿದನು*. ರಾಜದಂಪತಿಗಳು ವಿನಯಪೂರ್ವಕವಾಗಿ ಕಣ್ವ ಮಹರ್ಷಿಗಳಿಗೆ ನಮಿಸಿ " *ಮಗನು ವೈರಾಗ್ಯವನ್ನು ತಾಳಿದರೆ ಮುಂದೆ ನನ್ನ ರಾಜ್ಯದ ಉತ್ತರಾಧಿಕಾರಿ ಯಾರು*? ನಾನೇನು ಮಾಡಲಿ? ಎಂದು ತಮ್ಮ ಹೃದಯಾಂತರಾಳದ ನೋವನ್ನು ತೋಡಿಕೊಂಡರು.
ಮಹರ್ಷಿಗಳು ರಾಜನನ್ನು ಸಂತೈಸಿದರು. ದಿವ್ಯದೃಷ್ಠಿಯನ್ನು ತೆರೆದರು. ಬಾಲಕನ ಪೂರ್ವಜನ್ಮದ ವೃತ್ತಾಂತ ಅವರಿಗೆ ಗೋಚರಿಸಿತು. ಅದನ್ನು ತಾನು ಕಂಡಂತೆಯೇ ಅರಸನಿಗೆ ವಿವರಿಸಿದರು. 
*ನನ್ನ ಆಶ್ರಮ ಚಕ್ರಾ ನದಿಯ ತೀರದಲ್ಲಿತ್ತು* ಒಂದು ದಿನ ಬ್ರಾಹ್ಮಣನೋರ್ವ ನನ್ನ ಆಶ್ರಮದ ಸಮೀಪ ಹೋಮ ಮಾಡುತ್ತಿದ್ದ  ಬಳಿಕ ಜಪ- ತಪಗಳಲ್ಲಿ ನಿರತನಾದ ಸಂದರ್ಭ *ಅಲ್ಲಿಗೊಂದು ನಾಯಿ ಬಂತು ತಕ್ಷಣ ಬ್ರಾಹ್ಮಣನ ಪತ್ನಿ ಆ ನಾಯಿಯ ಮೇಲೆ ನೀರೆರಚಿದಳು* ನಾಯಿ ಮೈಕೊಡವಿ ಅಲ್ಲೇ ನಿಂತಿತು . ಆಗ ಬಡಿಗೆ ಎತ್ತಿ ಆಕೆ ಆ ನಾಯಿಯನ್ನು ಹೊಡೆದೋಡಿಸಿದಳು . ತಕ್ಷಣ ಅದು ಓಡಿ ಹೋಗಿ ಚಕ್ರಾ ನದಿಗೆ ಹಾರಿತು. *ಆ ನದಿಯಲ್ಲೊಂದು ಮೊಸಳೆ ಇತ್ತು ಅದು ಧಾವಿಸಿ ಬಂತು ನಾಯಿ ಈಜುತ್ತಾ ಮುಂದೆ ಸಾಗುತ್ತಿದ್ದಂತೆಯೇ ಮೊಸಳೆ ನಾಯಿಯನ್ನು ನುಂಗಿಬಿಟ್ಟನು*

ನಾಯಿಯ ಆತ್ಮ ಯಮಲೋಕ ಸೇರಿತು . ಯಮನು ನಾಯಿಗೆ ಶಿಕ್ಷೆಯನ್ನು ವಿಧಿಸದೆ ಮರುಜನ್ಮಕ್ಕಾಗಿ ಕಳುಹಿಸಿದ *ಚಕ್ರಾ ನದಿಯಲ್ಲಿ ಮುಳುಗಿದುದರಿಂದ ನಿನ್ನ ಪಾಪ ನೀಗಿ ಪುಣ್ಯ ಲಭಿಸಿದೆ ಧರ್ಮಾಂಗದ ರಾಜನ ಮಗನಾಗಿ ನೀನು ಹುಟ್ಟಿದೆ.  ಎಂದನು. *ಕಣ್ವ ಮಹರ್ಷಿಗಳ ಮಾತನ್ನು ಕೇಳಿ ದೊರೆಯ ಆ ನದಿಯ ಕಥೆಯನ್ನು ಹೇಳುವಂತೆ ವಿನಯದಿಂದ ವಿನಂತಿಸಿದನು. ಋಷಿಗಳು ಕಥೆಯನ್ನು ಆರಂಭಿಸಿದರು.‌ ಪೂರ್ವದಲ್ಲಿ ಸುದರ್ಶನ ಚಕ್ರ ತನ್ನ ಒಡೆಯನಾದ ಶ್ರೀ ಹರಿಯೊಡನೆ *ನನಗೆ ಅಸ್ರ್ತಾದಿ  ಪತ್ಯವನ್ನು ದಯಪಾಲಿಸಲೆಂದು ವಿನಂತಿಸಿದನು ಆಗ ಹರಿಯು ನೀನು ಶಿವನನ್ನು ತಪಸ್ಸಿನಿಂದ ಒಲಿಸಿ ಆತನಿಂದ ವರವನ್ನು ಪಡೆದರೆ ಮಾತ್ರ ಇದು ಸಾಧ್ಯ* ಎಂದು ಸಲಹೆಯಿತ್ತನು. *ಸುದರ್ಶನ  ಸಹ್ಯಾದ್ರಿಯ ಗೌರೀ ಶಿಖರಕ್ಕೆ ಬಂದು ಒಂದು ಲಿಂಗಸ್ಥಾಪನೆ ಮಾಡಿ ಶಿವನನ್ನು ಅಭಿಷೇಕದಿಂದ ತೃಪ್ತಿಗೊಳಿಸಲು ನೀರಿಗಾಗಿ ಒಂದು ಹೊಂಡ ತೋಡಿದನು*  ಶಿವಪೂಜೆಯ ಬಳಿಕ ಉಗ್ರವಾದ ತಪಸ್ಸನ್ನು ಕೈಗೊಂಡನು . *ಸಾವಿರ ವರುಷಗಳು ಕಳೆಯಿತು ಸುದರ್ಶನ ತಪಸ್ಸಿಗೆ ಶಿವನು ಪ್ರತ್ಯಕ್ಷನಾದನು.ಶಿವನೊಡನೆ ಆತ ಅಸ್ತ್ರಾಧಿಪತ್ಯವನ್ನು ಬೇಡಿದನು. *ಹರನು ನನ್ನ ತ್ರಿಶೂಲವನ್ನು ಹೊರತುಪಡಿಸಿ ಅಸ್ತ್ರಗಳಲ್ಲಿ ನೀನೇ ಶ್ರೇಷ್ಠ* ಎಂದು ವರವಿತ್ತನು . ಸುದರ್ಶನ ಧನ್ಯತೆಯಿಂದ ವೈಕುಂಠಕ್ಕೆ ತೆರಳಿದನು. ಆತ ಶಿವನ ಅಭಿಷೇಕದ ನೀರಿಗಾಗಿ ತೋಡಿದ ಹೊಂಡದಲ್ಲಿ ಒಂದು ನದಿಯು ಹುಟ್ಟಿ ಪ್ರವಹಿಸಿತು. *ಅದು ಚಕ್ರಾ ನದಿಯೆಂದು ಪ್ರಸಿದ್ಧವಾಯಿತು* ಋಷಿಗಳ ಕಥೆ ಕೇಳಿ ಎಲ್ಲರೂ  ಬಿಬ್ಬೆರಗಾದರು.

ಕರ್ನಾಟಕದ  ಕುಂದಾಪುರ ಮತ್ತು ಗಂಗುಲ್ಲಿ ಪ್ರದೇಶಗಳ ಮೂಲಕ ಹರಿದ ಹೋಗುವ ಚಕ್ರ ನದಿಯು ಭಾರತದ ನದಿಗಳಲ್ಲೊಂದು. ಪಶ್ಚಿಮಾಭಿಮುಖವಾಗಿ ಹರಿಯುವ ಇದು ಮೊದಲು ಸೌಪರ್ಣಿಕ, ವರಾಹಿ ಮತ್ತು ಕುಬ್ಜ ನದಿಗಳನ್ನು ಕೂಡಿ ಅಂತಿಮವಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ

#ಮುಂದುವರೆಯುವುದು*💐

#ಮತ್ತೊಂದು_ನದಿಯ_ಮಾಹಿತಿಯೊಂದಿಗೆ* ✍️💐

(#ಸಂಗ್ರಹ)

No comments:

Post a Comment