🌹 *[[ #*ಓಂ_ಶ್ರೀ_ಭಗವಾನ್_ಮಹಾವೀರ_ಸ್ವಾಮಿಯೇ_ನಮಃ ]]* 🌹
*#ಸಂಚಿಕೆ_791*
*#ಕರಣಾನುಯೋಗ*
*#ಊರ್ಧ್ವಲೋಕ*
*#ವೈಮಾನಿಕ_ದೇವತೆಗಳು*
*#ಏಕಭವತಾರಿ_ದೇವತೆಗಳು*
ತನ್ನ ಅಗ್ರ ಮಹಿಷೀ ಮತ್ತು ಲೋಕಪಾಲರ ಸಹಿತವಾಗಿ ಸೌಧರ್ಮ ಇಂದ್ರ , ಎಲ್ಲಾ ದಕ್ಷಿಣೇಂದ್ರರು , ಸರ್ವಾರ್ಥಸಿದ್ಧಿಯ ದೇವರು ಹಾಗೂ ಲೌಕಾಂತಿಕ ದೇವರು ನಿಯಮದಿಂದ ಏಕ ಭವತಾರಿಗಳಾಗಿರುತ್ತಾರೆ. ಎಂದರೆ ಅವರು ಸ್ವರ್ಗದಿಂದ ಚ್ಯುತರಾಗಿ ಮನುಷ್ಯರಾಗುತ್ತಾರೆ. ಮತ್ತು ಅದೇ ಭವದಲ್ಲಿ ಮುನಿಗಳಾಗಿ ಮೋಕ್ಷವನ್ನು ಹೊಂದುತ್ತಾರೆ.
*#ಅಣಿಮಾ_ಮುಂತಾದ_ಎಂಟು_ಗುಣಗಳು*
ಎಲ್ಲಾ ದೇವತೆಗಳಿಗೂ ವೈಕ್ರಿಯಿಕ ಶರೀರದ ನಿಮಿತ್ತದಿಂದ ಎಂಟು ಪ್ರಕಾರವಾದ ವಿಶೇಷ ಗುಣಗಳು ಇರುತ್ತವೆ. ಅವುಗಳೆಂದರೆ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಈಶತ್ವ, ವಶಿತ್ವ, ಪ್ರಾಪ್ತಿ ಮತ್ತು ಪ್ರಕಾಮ್ಯ.
*#ಅಣಿಮಾ*
ತನ್ನ ಶರೀರವನ್ನು ಅಣುವಿನಂತೆ ಚಿಕ್ಕದನ್ನಾಗಿ ಮಾಡಿಕೊಳ್ಳುವ ಸಾಮಾರ್ಥ್ಯಕ್ಕೆ ಅಣಿಮಾ ಎನ್ನುವರು.
*#ಮಹಿಮಾ*
ಶರೀರವನ್ನು ಮೇರುವಿನಂತೆ ವಿಶಾಲವನ್ನಾಗಿ ಮಾಡಿಕೊಳ್ಳುವ ಸಾಮರ್ಥ್ಯಕ್ಕೆ ಮಹಿಮಾ ಎನ್ನುವರು.
*#ಗರಿಮಾ*
ಶರೀರವನ್ನು ವಜ್ರದಂತೆ ಭಾರವನ್ನಾಗಿ ಮಾಡಿಕೊಳ್ಳುವ ಸಾಮರ್ಥ್ಯಕ್ಕೆ ಗರಿಮಾ ಎನ್ನುವರು.
*#ಲಘಿಮಾ*
ಶರೀರವನ್ನು ಭಾರ ರಹಿತವನ್ನಾಗಿ ಮಾಡಿಕೊಳ್ಳುವ ಸಾಮರ್ಥ್ಯಕ್ಕೆ ಲಘಿಮಾ ಎನ್ನುವರು.
*#ಈಶತ್ವ*
ಜಗತ್ತಿನಲ್ಲೆಲ್ಲಾ ಪ್ರಭುತ್ವ ಹೊಂದುವ ಸಾಮರ್ಥ್ಯಕ್ಕೆ ಈಶತ್ವ ಎನ್ನುವರು.
*#ವಶಿತ್ವ*
ಸಮಸ್ತ ಜೀವರನ್ನೂ ವಶಪಡಿಸಿಕೊಳ್ಳುವ ಸಾಮರ್ಥ್ಯಕ್ಕೆ ವಶಿತ್ವ ಎನ್ನುವರು.
*#ಪ್ರಾಪ್ತಿ*
ಭೂಮಿಯಲ್ಲಿದ್ದುಕೊಂಡು ಬೆರಳಿನ ತುದಿಯಿಂದ ಸೂರ್ಯ ಚಂದ್ರ ಮುಂತಾದವರನ್ನು ಸ್ಪರ್ಶಿಸುವ ಸಾಮರ್ಥ್ಯಕ್ಕೆ ಪ್ರಾಪ್ತಿ ಎನ್ನುವರು.
*#ಪ್ರಾಕಾಮ್ಯ*
ಜಲದಂತೆ ಭೂಮಿಯಲ್ಲಿ ಮತ್ತು ಭೂಮಿಯಂತೆ ನೀರಿನಲ್ಲಿ ಗಮನ ( ಸಂಚರಿಸುವ ) ಮಾಡುವ ಸಾಮರ್ಥ್ಯಕ್ಕೆ ಪ್ರಾಪ್ತಿ ಎನ್ನುವರು.
ಎಲ್ಲ ದೇವತೆಗಳು ಮೇಲಿನ ಎಂಟು ಪ್ರಕಾರದ ಶಕ್ತಿಗಳನ್ನು ಉಪಯೋಗಿಸಿಕೊಂಡು ಜೀವನ ಪರ್ಯಂತ ಇಂದ್ರಿಯ ಸುಖವನ್ನು ಅನುಭವಿಸುತ್ತಿರುತ್ತಾರೆ.
*#ಮುಂದುವರೆಯುತ್ತದೆ...*
No comments:
Post a Comment