#ಜೀವಕ್ಕೆ_ಜೀವನಕ್ಕೆ_ಜೀವನದಿಗಳ_ಕೊಡುಗೆ_ಅಪಾರ
ಅಂತಹ *ಜಲದ ಸಿಂಚನದ ನದಿಗಳ ಬಗ್ಗೆ ತಿಳಿಯೋಣ ಬನ್ನಿ
#ನೇತ್ರಾವತಿ_ನದಿ
ಒಮ್ಮೆ ನಾರದರು ಭೂಲೋಕದಲ್ಲಿ ಸಂಚರಿಸುತ್ತಿದ್ದ . ಹೆಚ್ಚಿನ ಜನರು ಮೋಸ ವಂಚನೆಗಳಲ್ಲೇ ನಿರತರಾಗಿದ್ದರು . *ತಂದೆ ತಾಯಿಗಳನ್ನು ಕೊಲ್ಲುವ ಕ್ರೂರ ಮಕ್ಕಳು . ಪರಸ್ಪರ ಸಾಮರಸ್ಯದಿಂದ ಬಾಳಲಾರದ ಗಂಡ ಹೆಂಡಿರು* ವಿದ್ಯಾರ್ಥಿಗಳನ್ನು ಚೆನ್ನಾಗಿ ರೂಪಿಸದ ಶಿಕ್ಷಕರು
ಪ್ರಜೆಗಳ ಸಂಪತ್ತುಗಳನ್ನು ಸೂರೆಮಾಡಿ ಐಷಿರಾಮಿ ಜೀವನವನ್ನು ನಡೆಸುವ ಪ್ರಭುತ್ವ ಧರ್ಮದ ಮುಖವಾಡವನ್ನು ಧರಿಸಿ ಅಧರ್ಮವನ್ನೇ ಆಚರಿಸುತ್ತಿರುವ ಆಷಾಡಭೂತಿಗಳು ...... *ಎಲ್ಲಿ ನೋಡಿದರೂ ಮೋಸ , ವಂಚನೆ , ಕ್ರೌರ್ಯ, ಕೊಲೆ , ಸುಲಿಗೆ , ದ್ಯೂತ , ಮದ್ಯವ್ಯಸನ, ಹೆಣ್ಣಿನಾಸೆ , ಭ್ರಷ್ಟಾಚಾರಗಳೇ ನಾರದನ ಕಣ್ಣಿಗೆ ಬಿತ್ತು.*
ಇದನ್ನೆಲ್ಲಾ ಕಂಡ ನಾರದರಿಗೆ ತುಂಬಾ ದುಃಖವಾಯಿತು *ನಾರಾಯಣನೇಕೆ ತನ್ನ ಪಾಲನೆಯ ಕೆಲಸವನ್ನು ಚೆನ್ನಾಗಿ ನಿರ್ವಹಿಸುತ್ತಿಲ್ಲ*? ಪ್ರಳಯ ಕಾಲವು ಹತ್ತಿರ ಬಂತೇ? ಎಂದೆಲ್ಲಾ ಯೋಚಿಸಿದ ನಾರದ ಭೂಮಿಯ ದುರವಸ್ಥೆಯನ್ನು ಶಿವನಿಗೆ ತಿಳಿಸೋಣವೆಂದು ನೇರ ಕೈಲಾಸಕ್ಕೆ ಬಂದನು. *ಮನೆಗೆ ಅತಿಥಿಯಾಗಿ ಬಂದ ನಾರದನನ್ನು ಕಂಡು ಶಿವನು ಬಹಳ ಸಂತೋಷದಿಂದ ಮತ್ತು ಆದರದಿಂದ ಸತ್ಕರಿಸಿದನು* . ಆದರೆ ನಾರದನ ಮುಖವೇಕೋ ಪ್ರಸನ್ನವಾಗಿರಲಿಲ್ಲ ಈಶ್ವರನಿಗೆ ಆಶ್ಚರ್ಯವಾಯಿತು. ಲವಲವಿಕೆಯಿಲ್ಲದ ನಾರದನನ್ನು ಕುರಿತು ಪರಮೇಶ್ವರನು ಕೇಳಿಯೇ ಬಿಟ್ಟನು. "ನಿನ್ನ ಮುಖವೇಕೆ ಬಾಡಿದೆ?
*ನಾರದನು ಬಹಳ ವಿಷಾದದಿಂದ ನೈತಿಕಮೌಲ್ಯ ಕುಸಿದ ಭೂಮಿಯ ದುಃಸ್ಥಿತಿಯನ್ನು ವಿವರಿಸಿದನು.* ಶಿವನಿಗೆ ಆಶ್ಚರ್ಯವಾಯಿತು. ಜತೆಗೆ ವಿಷಾದವಾಯಿತು. ಆದರೂ ನಾರದನನ್ನು ಸಮಾಧಾನ ಮಾಡಿ ಕಳುಹಿದ
*ಶಿವನು ಭೂಲೋಕದ ಸಮಸ್ಯೆಗೆ ಏನಾದರೊಂದು ಪರಿಹಾರವನ್ನು ಕಂಡು ಹುಡುಕಲೇ ಬೇಕು ಎಂದು ಸಂಕಲ್ಪಿಸಿದರು*
ಜೀವಿಗಳು ಬೆಳೆಯುವಷ್ಟು ಬೆಳೆದ ಬಳಿಕ ಆಗುವುದು ನಾಶ. *ಜೀವವಿಕಾಸದಲ್ಲಿ ಕೊನೆಯ ಪ್ರಾಣಿ ಮನುಷ್ಯ ಹಾಗಾದರೆ ಆ ಪ್ರಪಂಚದ ನಾಶಕ್ಕಾಗಿಯೇ ಮನುಷ್ಯನ ಸೃಷ್ಠಿಯಾಯಿತೇ*? ಆತನಿಗೆ ಬುದ್ಧಿಯಿದೆ , ವಿವೇಕವಿದೆ ಪ್ರಜ್ಞೆಯಿದೆ, ಆದರೂ ಆತನು ಹುಂಬನಂತೆ ಏಕೆ ವರ್ತಿಸುತ್ತಾನೆ . ಭೂಮಿಯ ಮಣ್ಣು , ಮರ , ಜೀವಜಾಲದ ರಕ್ಷಣೆಗಾಗಿಯೇ ಮುನಿಗಳು ಧರ್ಮವನ್ನು ರೂಪಿಸಿದನು. *ಧರ್ಮವೆಂದರೆ ಮತ ,ಪಂಥ, ಪೂಜೆ , ವ್ರತ , ಉಪವಾಸ ಮುಂತಾದ ಆಚರಣೆಗಳಲ್ಲ.*
ಅದು ಎಲ್ಲರೂ ಜಗತ್ತಿನ ಜಡ- ಚೇತನಗಳ ಜತೆ ಸುಖದಿಂದ ಬಾಳುವ ವಿಧಾನ ತಾನು ಬಾಳುತ್ತಾ ತನ್ನೊಂದಿಗೆ ಇರುವವರನ್ನೂ , ಇರುವುದನ್ನೂ ಚೆನ್ನಾಗಿ ಇರಿಸಿಕೊಳ್ಳುವ ರೀತಿ ಪರಸ್ಪರ *ಪ್ರೀತಿಯನ್ನು ಕೊಡದೆ ಆಚರಿಸುವ ಧರ್ಮ ಕೇವಲ ಧರ್ಮದ ವಿಡಂಬನೆ ಆದುದರಿಂದ ಜೀವನ ಮೌಲ್ಯಗಳೇ ಧರ್ಮ* . ಅದು ಬದುಕಿನ ಎಲ್ಲಾ ರಂಗಗಳಲ್ಲೂ ಬೇಕು* ಅದರ ಮರೆವೆಯೇ ನೈತಿಕ ಕುಸಿತಕ್ಕೆ ಕಾರಣ . *ಆದುದರಿಂದಲೇ ಇಡೀ ದಿನ ದೇವರ ಮುಂದೆ ಕುಳಿತಿರುವವನು. ಧರ್ಮಿಷ್ಟನಾಗಲು ಸಾಧ್ಯವಾದುದು. ನಾಸ್ತಿಕನೂ ಧರ್ಮಿಷ್ಟನಾಗಿರಲು ಸಾಧ್ಯವಾಗಿರುವುದು* ಹೀಗೆಲ್ಲಾ ಯೋಚಿಸಿದ *ಶಿವ ಧರ್ಮರಕ್ಷಣೆಗಾಗಿ ಧರ್ಮದೇವತೆಗಳನ್ನು ಭೂಮಿಗೆ ಕಳುಹಿಸಿದನು. ಆನಂದದಿಂದ ಆತನ ಕಣ್ಣುಗಳಿಂದ ನೀರು ಇಳಿಯಿತು ಆ ಆನಂದಭಾಷ್ಪವೇ ಕನ್ಯೆಯ ರೂಪತಾಳಿತು* ಶಿವನು ಆಕೆಗೆ #ನೇತ್ರಾವತಿ* ಎಂದು ಹೆಸರನ್ನಿರಿಸಿದನು. ಹರಿಯುವ ನದಿಯಂತೆ ಬಾಳು ಇರಬೇಕು ಎಂಬುದನ್ನು ಮನುಷ್ಯರಿಗೆ ತಿಳುಹಲು ಆಕೆ *ಭೂಲೋಕಕ್ಕೆ ಹೋಗಿ ನದಿಯಾಗಿ ಪ್ರವಹಿಸುವಂತೆ ಆಜ್ಞಾಪಿಸಿದನು .* ಶಿವನ ಆಜ್ಞೆಯನ್ನು ಪಡೆದ *ನೇತ್ರಾವತಿ ಭೂಮಿಗೆ ಇಳಿದಳು ಸಹ್ಯ ಪರ್ವತವನ್ನು ಏರಿದಳು ಅಲ್ಲಿಂದ ಸೆಲೆಯಾಗಿ ಚಿಮ್ಮಿ ನದಿಯಾಗಿ ಹರಿದಳು*
*ತುಳು ನಾಡಿನ ಧರ್ಮಸ್ಥಳ ಕ್ಷೇತ್ರದಲ್ಲಿ ಹರಿವ ಈ ನೇತ್ರಾವತಿ ಪವಿತ್ರ ನದಿ ನಮ್ಮ ಕರ್ನಾಟಕದ ಹೆಮ್ಮೆಯ ನದಿಯಿದು*
*ಮುಂದುವರೆಯುವುದು.......*
*ಮತ್ತೊಂದು ನದಿಯ ಮಾಹಿತಿಯೊಂದಿಗೆ*✍💐
(ಸಂಗ್ರಹ)
No comments:
Post a Comment