Tuesday, 9 June 2020

ಬುಧವಾರ ಗಣೇಶನನ್ನು ಪೂಜಿಸಿದರೆ ಸಿಗುವ ಪ್ರಯೋಜನಗಳೇನು ಗೊತ್ತಾ ?*

🕉 ಶ್ರೀ ಗುರುಭ್ಯೋ ನಮಃ 🕉 ‌     ‌      ‌          ‌             ‌       ‌              ‌            ‌                 ‌                                                                       ‌                                                                                                             *ಬುಧವಾರ ಗಣೇಶನನ್ನು ಪೂಜಿಸಿದರೆ ಸಿಗುವ ಪ್ರಯೋಜನಗಳೇನು ಗೊತ್ತಾ ?*

ಬುಧವಾರ ಗಣೇಶನನ್ನು ಆರಾಧಿಸುವುದು ಅತ್ಯಂತ ಶ್ರೇಷ್ಠ. ಈ ದಿನ ಗಣೇಶನನ್ನು ಹೇಗೆ ಪೂಜಿಸಬೇಕು ಎನ್ನುವುದರ ಕುರಿತು ತಿಳಿಯೋಣ...
 
ಯಾವುದೇ ಕಾರ್ಯಗಳನ್ನು ಆರಂಭಿಸುವ ಮೊದಲು ನಾವು ವಿಘ್ನಗಳನ್ನು ನಿವಾರಿಸುವ ಗಣೇಶನನ್ನು ಪ್ರಾರ್ಥಿಸುತ್ತೇವೆ. ಸಕಲ ವರಗಳನ್ನು ಪಾಲಿಸುವ ಗಣೇಶನಿಗೆ ಬುಧವಾರ ಸಲ್ಲಿಸುವ ಪೂಜೆಯು ವಿಶೇಷವಾದದ್ದು. ಈ ದಿನ ಗಣೇಶನನ್ನು ಪೂಜಿಸಿದರೆ ಎಲ್ಲಾ ಕಷ್ಟಗಳು ನಿವಾರಣೆಯಾಗಿ ಭಕ್ತರ ಆಸೆಯನ್ನು ಈಡೇರಿಸುತ್ತಾನೆ. ಬುಧವಾರ ಗಣೇಶನನ್ನು ಆರಾಧಿಸುವುದು ಅತ್ಯಂತ ಶ್ರೇಷ್ಠ. 
ಬುಧವಾರ ಗಣೇಶನ ಆರಾಧನೆ ಹೀಗಿರಲಿ.  ಭಕ್ತರು ಬುಧವಾರದಂದು ಗಣೇಶನ ಜೊತೆಗೆ ದುರ್ಗಾದೇವಿಯನ್ನೂ ಪೂಜಿಸಬೇಕು. 'ಓಂ ಬುಂ ಬುಧಾಯ ನಮಃ' ಈ ಮಂತ್ರವನ್ನು ಸ್ಪಟಿಕ ಮಣಿಯ ಜಪಮಾಲೆಯೊಂದಿಗೆ 108 ಬಾರಿ ಜಪಿಸಬೇಕು. ಬುಧವಾರದಂದು 21 ಗರಿಕೆಗಳನ್ನು ಅರ್ಪಿಸುವ ಮೂಲಕ ವಿನಾಯಕನನ್ನು ಸಂತುಷ್ಟಗೊಳಿಸಬಹುದು. ಜೊತೆಗೆ ಗಣೇಶನಿಗೆ ಪ್ರಿಯವಾದ ಮೋದಕ, ಲಡ್ಡನ್ನೂ ಪೂಜೆಯ ಸಂದರ್ಭದಲ್ಲಿ ಅರ್ಪಿಸಬಹುದು. ಬುಧವಾರ ಮಾತ್ರವಲ್ಲದೇ ಚತುರ್ಥಿಯಂದೂ ಗಣೇಶನನ್ನು ಪೂಜಿಸಬಹುದು.

*ಬುಧವಾರದ ಗಣೇಶ ಪೂಜೆಯಿಂದ ಸಿಗುವ ಪ್ರಯೋಜನಗಳೇನು ?*
                                                                                                    *  ಗಣೇಶನು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ನಿವಾರಿಸುತ್ತಾನೆ.
*  ನಿಮ್ಮ ಬುದ್ಧಿಶಕ್ತಿಯು ಗಣೇಶನ ಆಶೀರ್ವಾದದಿಂದ ತೀಕ್ಷ್ಣವಾಗುವುದು.
*  ನಿಮ್ಮಲ್ಲಿ ಮಾನಸಿಕ ಶಕ್ತಿ ಹೆಚ್ಚಾಗುವುದು.
*  ನಿಮ್ಮಲ್ಲಿರುವಂತಹ ಆಜ್ಞಾಚಕ್ರ ಜಾಗೃತವಾಗುವುದು.
*  ಭಕ್ತರ ಸೂಕ್ಷ್ಮ ದೇಹವು ಶುದ್ಧವಾಗುವುದು.
*  ಹಣಕಾಸು ಸಮಸ್ಯೆಗಳಿದ್ದಲ್ಲಿ ನಿವಾರಣೆಯಾಗಿ, ಆರ್ಥಿಕವಾಗಿ ಬಲಗೊಳ್ಳುವಿರಿ.

*ಗಣೇಶನ ಪೂಜೆಗೆ ಅವಶ್ಯವಾಗಿ ಈ ಸಾಮಾಗ್ರಿಗಳನ್ನು ಬಳಸಿ*
1. ಮೋದಕ
2. ಗರಿಕೆ
3. ಕಣಗಲೆ ಹೂವು, ಕೆಂಪು ಬಣ್ಣದ ಹೂವುಗಳು
4. ಶಂಖ
5. ಹಣ್ಣು, ಬಾಳೆಹಣ್ಣು, ಕಬ್ಬು ಇದ್ದರೆ ಒಳ್ಳೆಯದು.

*ಗಣೇಶನ ಮನೆಯಲ್ಲಿ ಇಡುವ ಮುನ್ನ* -
* ಗಣೇಶನ ಹಿಂಭಾಗವು ಗೋಡೆಗೆ ಅಭಿಮುಖವಾಗಿರಬೇಕು.                                                                   * ಯಾವುದೇ ಕಿಟಕಿ ಹಾಗೂ ಬಾಗಿಲುಗಳು ಗಣೇಶನ ಮೂರ್ತಿಯ ಹಿಂಭಾಗದಲ್ಲಿ ಇರಬಾರದು.
* ಗಣೇಶನ ಮೂರ್ತಿಯನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡಬಾರದು.
* ವಿನಾಯಕನ ವಿಗ್ರಹವನ್ನು ಇಡಲು ಸೂಕ್ತ ಜಾಗವೆಂದರೆ ಪೂರ್ವ ಅಥವಾ ಪಶ್ಚಿಮ ದಿಕ್ಕು.
* ಗಣೇಶನ ವಿಗ್ರಹವನ್ನು ಶೌಚಾಲಯದ ಗೋಡೆಗೆ ತಾಗಿಕೊಂಡಿರುವ ಕೋಣೆಯಲ್ಲಿ ಇಡಬಾರದು.
* ಗಣೇಶನ ವಿಗ್ರಹವನ್ನು ಮನೆಯಲ್ಲಿ ಇಡುವುದಾದರೆ ಶುದ್ಧ ಲೋಹದ ವಿಗ್ರಹವನ್ನು ಇಟ್ಟು ಪೂಜಿಸಬೇಕು.
* ಮನೆಯೊಳಗಿರುವ ಮೆಟ್ಟಿಲುಗಳ ಕೆಳಭಾಗದಲ್ಲಿ ಗಣೇಶನ ವಿಗ್ರಹವನ್ನು ಇಡಬಾರದು.

No comments:

Post a Comment