Tuesday, 9 June 2020

ಹನುಮಂತನ ಹೆಂಡತಿ - ಸೂರ್ಯದೇವನ ಮಗಳು ಸುವರ್ಚಲಾದೇವಿ*

🕉 ಶ್ರೀ ಗುರುಭ್ಯೋ ನಮಃ 🕉  ‌      ‌                                                        *ಹನುಮಂತನ ಹೆಂಡತಿ - ಸೂರ್ಯದೇವನ ಮಗಳು ಸುವರ್ಚಲಾದೇವಿ*

ಪರಾಶರ ಸಂಹಿತೆಯಲ್ಲಿ ಪರಾಶರ ಮಹರ್ಷಿಗಳ ಪ್ರಕಾರ ಸೂರ್ಯದೇವ ಹನುಮಂತನ ಗುರು. ಎಲ್ಲಾ ವೇದಾಭ್ಯಾಸಗಳು ಮಾಡಿರುವ ಹನುಮಂತನಿಗೆ, ನವ ವ್ಯಾಕರಣ ಒಂದು ಓದುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ಅದನ್ನು ಓದಬೇಕು ಎಂದರೆ ಅವನು ಸಂಸಾರಸ್ಥನಾಗಿರಬೇಕು, ಅಂದರೆ ಮದುವೆಯಾಗಲೇಬೇಕು. 

ಇನ್ನೂ ಲೋಕದ ಕಲ್ಯಾಣಕ್ಕಾಗಿ ಹನುಮಂತನು ಈ ಗ್ರಂಥವನ್ನು ಓದಲೇಬೇಕಿರುತ್ತದೆ. ಹಾಗಾಗಿ ತ್ರಿಮೂರ್ತಿಗಳು ಸೂರ್ಯದೇವನ ಬಳಿ ಮೊರೆ ಹೋಗುತ್ತಾರೆ. ಆಗ ಸೂರ್ಯದೇವನು ಒಂದು ಉಪಾಯವನ್ನು ಮಾಡಿ ಹನುಮಂತನ ಹೆಂಡತಿಯಾಗುವುದಕ್ಕೆ ಒಬ್ಬಳು ಸೌಂದರ್ಯದಿಂದ ಕೂಡಿದ ಸುಂದರವಾದ ಯುವತಿಯನ್ನು ತನ್ನ ರಶ್ಮಿಯಿಂದಲೇ (ಕಿರಣದಿಂದ) ಹುಟ್ಟಿಸುತ್ತಾನೆ. ಅವಳೇ ಸುವರ್ಚಲಾ ದೇವಿ. ಸೂರ್ಯದೇವ ತನ್ನ ಗುರುದಕ್ಷಿಣೆಯಾಗಿ ತನ್ನ ಮಗಳನ್ನು ಮದುವೆಯಾಗು ಎಂದು ಹನುಮಂತ ದೇವನನ್ನು ಕೇಳಿಕೊಳ್ಳುತ್ತಾನೆ. ಅಯೋನಿಜೆಯಾಗಿ ಹುಟ್ಟಿದ ಸುವರ್ಚಲಾ ದೇವಿಯ ಮದುವೆ ಅಷ್ಟು ಸುಲಭವಾಗಿ ಆಗುತ್ತಿರಲಿಲ್ಲ, ಅವಳ ವರ್ಚಸ್ಸು ತಂದೆ ಸೂರ್ಯನಿಂದ ಬಂದಿದ್ದು. ಆ ವರ್ಚಸ್ಸನ್ನು ತಡೆದುಕೊಳ್ಳುವ ಶಕ್ತಿ ಇದ್ದದ್ದು ಜೀವನ ಪರ್ಯಂತ ಬ್ರಹ್ಮಚಾರ್ಯ ಪಾಲಿಸಿ ಬಂದ ಹನುಮಂತನಿಗೆ ಮಾತ್ರ. 

ಎಲ್ಲರೂ ಹನುಮಂತನನ್ನು ಮದುವೆಗೆ ಒಪ್ಪಿಸುವುದಕ್ಕೆ ಹರ ಸಾಹಸ ಪಡಬೇಕಾಯಿತು. ಯಾರು ಎಷ್ಟೇ ಹೇಳಿದರೂ ಹನುಮಂತನು ಒಪ್ಪದೇ ಇದ್ದಾಗ, ಸೂರ್ಯದೇವ ತನ್ನ ಗುರುದಕ್ಷಿಣೆಯಾಗಿ ತನ್ನ ಮಗಳನ್ನೇ ಮದುವೆಯಾಗು ಎಂದು ಕೇಳಿಕೊಳ್ಳುತ್ತಾನೆ. ಆಗ ಹನುಮಂತನು ಹಿಂಜರಿಯುತ್ತಾನೆ. ಮದುವೆಯಾದ ಮೇಲೂ ಹನುಮಂತ ಬ್ರಹ್ಮಚಾರಿಯಾಗಿಯೇ ಉಳಿಯುವ ಹಾಗೆ ಸೂರ್ಯದೇವ ವರವನ್ನು ಕೊಡುತ್ತಾನೆ.

ಲೋಕ ಕಲ್ಯಾಣಕ್ಕೋಸ್ಕರ ನಿನ್ನ ಈ ಮದುವೆ ಅಷ್ಟೇ. ಸೂರ್ಯದೇವ ಅದಕ್ಕೆ ಹನುಮಂತನು ಒಪ್ಪಿಕೊಳ್ಳುತ್ತಾನೆ. ಮದುವೆಯಾದ ಮರುಕ್ಷಣವೇ ಸುವರ್ಚಲಾದೇವಿ ತಪಸ್ಸಿಗೆ ಹೊರಟು ಹೋಗುತ್ತಾಳೆ. ಜೇಷ್ಠ ಶುದ್ಧ ದಶಮಿಯ ದಿನ ಸುವರ್ಚಲಾ ದೇವಿ ಮತ್ತು ಹನುಮಂತನ ಮದುವೆ ಆಗುತ್ತದೆ. ಇಂದಿಗೂ ದಕ್ಷಿಣ ಭಾರತದಲ್ಲಿ ಈಕೆಯನ್ನು ಪೂಜೆ ಮಾಡುತ್ತಾರೆ. ತೆಲಂಗಾಣದ ಹೈದರಾಬಾದಿನಲ್ಲಿ ಸುವರ್ಚಲಾ ದೇವಿಯ ದೇವಸ್ಥಾನ ನೆಲೆಸಿದೆ.

ಇದೊಂದು ಜಗತ್ಕಲ್ಯಾಣಕ್ಕಾಗಿ ನಡೆದ ಮದುವೆ ಅಷ್ಟೇ ಆದರೆ ಹನುಮಂತ ಬ್ರಹ್ಮ ಚಾರಿ..
ಹೈದರಾಬಾದಿನಿಂದ ಇನ್ನೂರ ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ಸುವರ್ಚಲಾ ದೇವಿಯ ದೇವಸ್ಥಾನವಿದೆ. ಈ ದೇವಿ ಮತ್ತು ಹನುಮಂತನನ್ನು ಈ ರೂಪದಲ್ಲಿ ಪೂಜೆ ಮಾಡಿದರೆ ಯಾವತ್ತೂ ಗಂಡ ಹೆಂಡತಿಯ ಮಧ್ಯೆ ಭಿನ್ನಾಭಿಪ್ರಾಯ ಬರದೇ ಜೀವನ ಪೂರ್ತಿ ಸಂಸಾರದಲ್ಲಿ ಖುಷಿಯಾಗಿ ಇರುತ್ತಾರಂತೆ. ಹೀಗಿದೆ ಹನುಮಂತನು ಮದುವೆಯಾದ ಸುವರ್ಚಲಾ ದೇವಿಯ ಕಥೆ ...
ಇವರಿಬ್ಬರ ದರ್ಶನದಿಂದ ಪತಿಪತ್ನಿಯರ ಸಂಬಂಧ ಅನ್ಯೋನ್ಯತೆಯಿಂದ ಕೂಡಿರುತ್ತದೆ ಅಂತೆ.

No comments:

Post a Comment