ಯಾವ ನಕ್ಷತ್ರದಲ್ಲಿ ಹುಟ್ಟಿದವರಿಗೆ ಜಾತಕದಲ್ಲಿ ಸರ್ಪ ದೋಷ ಇರೋ ಸಾಧ್ಯತೆ ಹೆಚ್ಚು ಇದಕ್ಕೆ ಪರಿಹಾರ ಏನು...
ಹಿಂದಿನ ಜನ್ಮದಲ್ಲಿ ಅಥವಾ ಈ ಜನ್ಮದಲ್ಲಿ ಸರ್ಪಗಳಿಗೆ ಅಪಚಾರ ಮಾಡಿದರೆ ಕೊಂದರೆ ಅವರು ಶೀಘ್ರ ಕಾಳ ಸರ್ಪ ದೋಷಕ್ಕೆ ಒಳಗಾಗುತ್ತಾರೆ...
ಸರ್ಪವು ಅಧಿಪತಿಯಾಗಿರುವ ಆಶ್ಲೇಷ ನಕ್ಷತ್ರದಲ್ಲಿ ಕೇತುವು ಅಧಿಪತಿಯಾಗಿರುವ ಮೂಲ ನಕ್ಷತ್ರದಲ್ಲಿ ಕುಜನು ಅಧಿಪತಿಯಾಗಿರುವ ಧನಿಷ್ಠ ನಕ್ಷತ್ರದಲ್ಲಿ ಹುಟ್ಟಿದವರಿಗೆ ತಪ್ಪದೆ ಕಾಳ ಸರ್ಪ ದೋಷ ಇರುತ್ತದೆ...
ಇವರು ಜೀವನದಲ್ಲಿ ಸಾಮಾನ್ಯವಾಗಿ ಹುಟ್ಟಿದಾಗಿನಿಂದಲೂ ಕಷ್ಟಗಳು ಇವರ ಬೆನ್ನು ಹತ್ತುತ್ತವೆ...
ಸಾಮಾನ್ಯವಾಗಿ ಈ ರೀತಿ ಸರ್ಪದೋಷ ಹೊಂದಿರುವವರಿಗೆ ಜನಿಸಿದಾಗಿನಿಂದ ೩೧ ಅಥವಾ ೩೩ ವರ್ಷದವರೆಗೆ ಸರ್ಪ ದೋಷಗಳು ಇರುತ್ತವೆ...
ಅನೇಕ ರೀತಿಯ ಕಷ್ಟ ಸಮಸ್ಯೆಗಳು ಜೀವನದಲ್ಲಿ ಸಾಮಾನ್ಯ...
ಅಂತಹ ಪರಿಸ್ಥಿತಿಯಲ್ಲಿ ಇವರು ಈ ಕಾಳ ಸರ್ಪದ ದೋಷವನ್ನು ಪರಿಹಾರ ಮಾಡಿಕೊಂಡರೆ ತಕ್ಕ ಮಟ್ಟಿಗೆ ಅವರ ಸಮಸ್ಯೆಯಿಂದ ಹೊರಗಡೆ ಬರಬಹುದು...
ಹೀಗೆ ಇಷ್ಟೇ ಅಲ್ಲದೆ ಇನ್ನೂ ಕೆಲವು ನಕ್ಷತ್ರಗಳಲ್ಲಿ ಜನಿಸಿದವರಿಗೆ ಸರ್ಪ ದೋಷ ಇರುತ್ತದೆ...
ಪರಿಹಾರಗಳು ಏನು ಮಾಡಬೇಕು...
* ಪಂಚಾಕ್ಷರಿ ಮಂತ್ರ ಮಹಾ ಮೃತ್ಯುಂಜಯ ಜಪವನ್ನು ೧೦೮ ಬಾರಿ ಮಾಡಬೇಕು...
* ನಿತ್ಯವೂ ೧೦೮ ಬಾರಿ ರಾಹುವಿನ ಬೀಜ ಮಂತ್ರವನ್ನು ಜಪಿಸಿ...
* ಪ್ರತಿ ಶನಿವಾರ ಅಶ್ವತ್ಥ ಮರಕ್ಕೆ ಪೂಜೆ ಹಾಗೂ ನೀರನ್ನು ಎರೆಯಬೇಕು...
* ಸೋಮವಾರ ರುದ್ರಾಭಿಷೇಕ ಮಾಡಿಸಿ...
ನಿತ್ಯವೂ ಕಾಳಸರ್ಪ ಗಾಯತ್ರಿ ಮಂತ್ರವನ್ನು ಜಪಿಸುವುದು ಅತ್ಯಂತ ಫಲಪ್ರದ ವಿಧಾನ...
ಮೇಲಿನ ಪರಿಹಾರಗಳು ಮಾಡುವುದರಿಂದ ಪ್ರಭಾವಗಳು ಕಡಿಮೆ ಆಗುತ್ತವೆ ಎಂದು ಧರ್ಮಶಾಸ್ತ್ರದಲ್ಲಿ ತಿಳಿಸಲಾಗಿದೆ...
ಧನ್ಯವಾದಗಳು ಮಾಹಿತಿ ಇಷ್ಟವಾದರೆ ಶೇರ್ ಮಾಡಿ ಹಾಗು ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ...https://www.facebook.com/Astrovedicscience/
© 2020 Astro Vedic Science All Rights Reserved
No comments:
Post a Comment