#ಅರ್ಚನೆಯಿಂದ_ಉದ್ಧಾರನಾದ_ಗಜೇಂದ್ರ
ಕ್ಷೀರಸಮುದ್ರದ ಮದ್ಯದಲ್ಲಿ ತ್ರಿಕೂಟಪರ್ವತವಿದೆ. ಅಲ್ಲೊಂದು ಸುಂದರ ಸರೋವರವಿದೆ. ಅಲ್ಲೇ ಹತ್ತಿರದ ಉದ್ಯಾನವನದಲ್ಲಿ ಇಂದ್ರದ್ಯುಮ್ನನು ಬಲಿಷ್ಠವಾದ ಆನೆಯಾಗಿ ಬೆಳೆದಿದ್ದನು. ಸರೋವರದಲ್ಲಿ ಹೂಹು ಎನ್ನುವ ಗಂಧರ್ವನು ಮೊಸಳೆಯಾಗಿ ಬೆಳೆಯುತ್ತಿದ್ದನು. ಆನೆಯು ನೀರುಕುಡಿಯುದಕ್ಕಾಗಿ ಸರೋವರಕ್ಕೆ ಆಗಮಿಸಿತು. ಆಗ ಆ ಗಜರಾಜನ ಕಾಲನ್ನು ಮೊಸಳೆಯಾಗಿದ್ದ ಹೂಹು ಗಂಧರ್ವನು ಹಿಡಿದು ಎಳೆದನು. ಗಜರಾಜನ ಬಲವು ಕ್ರಮೇಣ ಕ್ಷೀಣಿಸಿತು. ಮಕರದ ಶಕ್ತಿಯೇ ಹೆಚ್ಚಾಯಿತು. ಸಾವಿರ ವರ್ಷಗಳ ಕಾಲ ಅವರಿಬ್ಬರಿಗೂ ಯುದ್ಧವೇ ನೆಡೆಯಿತು. ಅಂತಿಮವಾಗಿ ಗಜೇಂದ್ರನು ಸೋಲುವಂತಾಯಿತು. ತನ್ನ ಮರಣ ಹತ್ತಿರವಾಯಿತು. ತನ್ನ ಸಾವು ಹತ್ತಿರ ಬಂತೆಂದು ಅರಿತು, ಆ ಗಜೇಂದ್ರನು ಎನಗೆ ಬೇರ್ಯಾರು ರಕ್ಷಕನಿಲ್ಲ. "ನಾರಾಯಣ"ನೊಬ್ಬನೇ ರಕ್ಷಕನೆಂದು ಭಕ್ತ್ಯುದ್ರಿಕ್ತನಾದನು. ಕಣ್ಣಲ್ಲಿ ಧಾರಾಕಾರ ನೀರನ್ನು ಸುರಿಸುತ್ತಾ, ಗರುಡಾರೂಢನಾದ ಶ್ರೀ ಹರಿಯನ್ನು ಭಕ್ತಿಯಿಂದ ಸ್ಮರಣೆ ಮಾಡಿದನು. ಅಲ್ಲೇ ಎದುರಿನಲ್ಲಿದ್ದ ಕಮಲ ಪುಷ್ಪವನ್ನು ಸೊಂಡಿಲಿನಿಂದ ಕಿತ್ತು ಓ ನಾರಾಯಣನೇ! ಇದೋ ಸ್ವೀಕರಿಸು. ಈ ಕಮಲ ಪುಷ್ಪ ದಿಂದ ನಿನ್ನನ್ನು ಅರ್ಚಿಸುತ್ತೇನೆ. ಓ ನಾರಾಯಣ ಅಖಿಲಗುರೋ ಭಗವಾನ್! ನಿನಗಿದೋ ನನ್ನ ಭಕ್ತಿಯ ನಮನ ಎಂದು ಕೂಗಿದನು. ಕ್ಷಣಮಾತ್ರದಲ್ಲಿ ನಾರಾಯಣನು ಗರುಡಾರೂಢನಾಗಿ ಬಂದು ಆ ಗಜೇಂದ್ರನನ್ನು ಉದ್ದಾರ ಮಾಡಿದನು.
ಸೋಂತಃ ಸರಸ್ಯುರುಬಲೇನ ಗೃಹೀತ ಆರ್ತೋ
ದೃಷ್ಟಾವ ಗರುತ್ಮತಿ ಹರಿಂ ಖ ಉಪಾತ್ತಚಕ್ರಮ್ |
ಉತ್ಕ್ಷಿಪ್ಯ ಸಾಂಬುಕರಮ್ ಗಿರಾಮಹ ಕೃಚ್ಛ್ರಾತ್
ನಾರಾಯಣಕಿಲಗುರೋ ಭಗವನ್ನಮಸ್ತೇ ||
ನೀತಿ :-ಹರಿಪಾದವ ಬಿಡಬೇಡ ಬಿಟ್ಟು ನೀನ್ ಕೆಡಬೇಡ
ಕೃಪೆ :-ಭಾಗವತ
#ಶ್ರೀ_ಕೃಷ್ಣಾರ್ಪಣಮಸ್ತು.
No comments:
Post a Comment