Tuesday, 9 June 2020

ನವಗ್ರಹಗಳ ದೋಷ ನಿವಾರಣೆಗೆ ನವ ಧಾನ್ಯಗಳಿಂದ ಪರಿಹಾರ

🕉 ಶ್ರೀ ಗುರುಭ್ಯೋ ನಮಃ 🕉     ‌       ‌      ‌ 
🕉 ಶ್ರೀ ಗುರುಭ್ಯೋ ನಮಃ 🕉 ‌     ‌      ‌             ‌                                                                                *ನವಗ್ರಹಗಳ  ದೋಷ ನಿವಾರಣೆಗೆ ನವ ಧಾನ್ಯಗಳಿಂದ ಪರಿಹಾರ*                                                        
ನವಗ್ರಹಗಳಾದ ಸೂರ್ಯ, ಚಂದ್ರ, ಕುಜ, ಬುಧ, ಗುರು, ಶುಕ್ರ ಶನಿ, ರಾಹು ಮತ್ತು ಕೇತು. ಇವುಗಳು  ಪ್ರತಿಯೊಬ್ಬ ಜಾತಕನ ಅಂದರೆ ವ್ಯಕ್ತಿಯ ಮೇಲೆಯೂ ಅವುಗಳ ಜನ್ಮ ಕುಂಡಲಿಯಲ್ಲಿ ಯಾವ ಮನೆಯಲ್ಲಿ ಇದೆ ಎಂಬುದನ್ನು ತಿಳಿದು ಅವುಗಳ ದೋಷವಿದ್ದರೆ ಈ ನವ ಧಾನ್ಯಗಳಿಂದ ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು.

1. *ಸೂರ್ಯ ದೋಷ ನಿವಾರಣೆಗೆ - ಗೋಧಿ*

ಗೋಧಿ ಸೂರ್ಯ ಗ್ರಹದ ಸಂಕೇತವಾಗಿದೆ. ಸೂರ್ಯ ದೋಷ ಇರುವವರು ಪ್ರತಿ ಭಾನುವಾರ ನವಗ್ರಹಗಳಿಗೆ ಒಂಬತ್ತು ಸುತ್ತು ಪ್ರದಕ್ಷಿಣೆ ಮಾಡಿ ನಂತರ ಗೋಧಿಯನ್ನು, ಶಿವನ ದೇವಸ್ಥಾನಕ್ಕೆ,  ಬ್ರಾಹ್ಮಣರಿಗೆ, ಸತ್ಪಾತ್ರರಿಗೆ ಅಥವಾ ಬಡವರಿಗೆ ದಾನ ಮಾಡಿದರೆ ಒಳ್ಳೆಯದು. ಗೋಧಿಯನ್ನು ಆಹಾರದಲ್ಲಿ ಸೇವಿಸಿದರೆ ಪಿತ್ತ ಮತ್ತು ಪಿತ್ತಕ್ಕೆ ಸಂಬಂಧಪಟ್ಟ ಖಾಯಿಲೆಗಳು ವಾಸಿಯಾಗುತ್ತವೆ.
  ‌      ‌                                                                                                                               
2. *ಚಂದ್ರ ದೋಷ ನಿವಾರಣೆಗೆ - ಅಕ್ಕಿ*

ಅಕ್ಕಿ ಚಂದ್ರನಿಗೆ ಸಂಬಂಧಪಟ್ಟ ಧಾನ್ಯ. ಚಂದ್ರನು ಮನಸ್ಸಿನ ಮೇಲೆ ಪ್ರಭಾವ ಬೀರುತ್ತಾನೆ. ನಮ್ಮ ಮನಸ್ಸಿನ ನೋವು, ನಲಿವುಗಳು, ಮಾನಸಿಕ ರೋಗಕ್ಕೂ ಚಂದ್ರನೇ ಕಾರಣ. ಆದ್ದರಿಂದ ಚಂದ್ರ ದೋಷ ಹೊಂದಿರುವವರು ನಿವಾರಣೆಗೆ ಪ್ರತಿ ಸೋಮವಾರ ನವಗ್ರಹಗಳಿಗೆ ಒಂಬತ್ತು ಸುತ್ತು ಪ್ರದಕ್ಷಿಣೆ ಹಾಕಿ ನಂತರ ಅಕ್ಕಿಯನ್ನು ದಾನ ಮಾಡಿ. ಅಕ್ಕಿ ಮನಸ್ಸಿನ ಏಕಾಗ್ರತೆಯನ್ನು ವೃದ್ಧಿಸುವುದು ಮಕ್ಕಳಲ್ಲಿ ಕಂಡು ಬರುವ ಮಾನಸಿಕ ತೊಳಲಾಟಗಳಿಗೆ ಅಕ್ಕಿಯ ಆಹಾರ ಸೇವನೆಯಿಂದ ಉತ್ತಮವಾಗುವುದು.

3. *ಕುಜ ದೋಷ ನಿವಾರಣೆಗೆ - ತೊಗರಿಬೇಳೆ*

ತೊಗರಿ ಕಾಳು ಅಥವಾ ತೊಗರಿಬೇಳೆಯ ಬಣ್ಣ ಕೆಂಪು. ಆದ್ದರಿಂದ ಕುಜನಿಗೆ ಸಂಬಂಧಪಟ್ಟ  ಧಾನ್ಯ ಇದು. ಕುಜ, ಮಂಗಳ, ಅಂಗಾರಕ  ದೋಷ ಹೊಂದಿರುವವರು ಪ್ರತಿ ಮಂಗಳವಾರ ನವಗ್ರಹಗಳಿಗೆ ಒಂಬತ್ತು ಸುತ್ತು ಪ್ರದಕ್ಷಿಣೆ ಮಾಡಿ ತೊಗರಿಬೇಳೆಯನ್ನು ದಾನ ಮಾಡಿ. ಆಹಾರದಲ್ಲಿ ತೊಗರಿಬೇಳೆಯ ಸೇವನೆಯಿಂದ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಮತ್ತು ವಿಶೇಷವಾಗಿ  ಸ್ತ್ರೀಯರಲ್ಲಿ ಕಂಡು ಬರುವ ಖಾಯಿಲೆಗಳು ಗುಣವಾಗುತ್ತವೆ.

4. *ಬುಧ ಗ್ರಹ ದೋಷ ನಿವಾರಣೆಗೆ - ಹೆಸರುಕಾಳು*

ಬುಧನ ಬಣ್ಣ ಹಸಿರು ಆದ್ದರಿಂದ ಹೆಸರುಕಾಳು ಕೂಡ ಹಸಿರುಬಣ್ಣ ಹೊಂದಿರುವುದರಿಂದ ಇದು ಬುಧ ಗ್ರಹಕ್ಕೆ ಸಂಬಂಧಪಟ್ಟ ಧಾನ್ಯ ವಾಗಿದೆ. ಬುಧ ದೋಷ ಇರುವವರು ಬುಧವಾರದ ದಿನ ನವಗ್ರಹಗಳಿಗೆ ಒಂಬತ್ತು ಸುತ್ತು ಪ್ರದಕ್ಷಿಣೆ ಹಾಕಿ ಹೆಸರುಕಾಳನ್ನು ದಾನ ಮಾಡಿ. ಇನ್ನು ಆಹಾರದಲ್ಲಿ ಅಧಿಕವಾಗಿ ಹೆಸರು ಕಾಳು ಸೇವನೆಯಿಂದ ಬುದ್ದಿ ಚುರುಕುಗೊಳ್ಳುತ್ತದೆ, ನೆನಪಿನ ಶಕ್ತಿ ವೃದ್ಧಿಸಿ, ಮಾತು ಸ್ಪಷ್ಟವಾಗಿ ಮಾತನಾಡಲು ಸಹಾಯಕವಾಗಿದೆ.

5. *ಗುರು ಗ್ರಹ ದೋಷ ನಿವಾರಣೆಗೆ  - ಕಡಲೆಕಾಳು*

ಗುರು ಗ್ರಹದ ಬಣ್ಣ ಹಳದಿ, ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಧಾನ್ಯ ಹಳದಿ ಬಣ್ಣದ ಕಡಲೆ. ಗುರು ಗ್ರಹ ದೋಷ ಇರುವವರು ಪ್ರತಿ ಗುರುವಾರ ನವಗ್ರಹಗಳಿಗೆ ಒಂಬತ್ತು ಸುತ್ತು ಪ್ರದಕ್ಷಿಣೆ ಹಾಕಿ  ಕಡಲೇಕಾಳನ್ನು  ದಾನ ಮಾಡಿ. ಆಹಾರದಲ್ಲಿ ಕಡಲೇಕಾಳನ್ನು ಸೇವನೆ ಮಾಡುವುದರಿಂದ ಮಧುಮೇಹ, ಕರುಳಿನ ಖಾಯಿಲೆಗಳು ಗುಣವಾಗಿ, ರಕ್ತನಾಳಗಳು ಶುದ್ದಿಯಾಗುತ್ತವೆ.

6. *ಶುಕ್ರಗ್ರಹ ದೋಷ ನಿವಾರಣೆಗೆ - ಅವರೇಕಾಳು*

ಅವರೇಕಾಳು ಶುಕ್ರನಿಗೆ ಸಂಬಂಧಪಟ್ಟ ಧಾನ್ಯ. ಶುಕ್ರ ದೋಷ ಇರುವವರು ಪ್ರತಿ ಶುಕ್ರವಾರ  ನವಗ್ರಹಗಳಿಗೆ ಪೂಜೆ ಮಾಡಿ, ನಂತರ ಅವರೇಕಾಳನ್ನು ದಾನ ಮಾಡಿ. ಆಹಾರದಲ್ಲಿ ಅವರೆಕಾಳನ್ನು ಸೇವನೆ ಮಾಡಿದರೆ ಮೂತ್ರಕೋಶಕ್ಕೆ ಸಂಬಂಧಿಸಿದ ಖಾಯಿಲೆ, ಥೈರಾಯಿಡ್ ಸಮಸ್ಯೆಗಳು ಗುಣವಾಗುತ್ತವೆ.

7. *ಶನಿ ದೋಷ ನಿವಾರಣೆಗೆ - ಕಪ್ಪು ಎಳ್ಳು*

ಕಪ್ಪು ಎಳ್ಳು ಶನಿ ಗ್ರಹದ ಸಂಕೇತವಾಗಿದೆ. ಶನಿ ದೋಷದಿಂದ ಬಳಲುತ್ತಿರುವವರು  ಪ್ರತಿ ಶನಿವಾರ  ಒಂದಾಗಿದೆ ಬಾರಿ ನವಗ್ರಹಗಳಿಗೆ  ಪ್ರದಕ್ಷಿಣೆ ಮಾಡಿ, ಕರಿ ಎಳ್ಳನ್ನು ದಾನ ಮಾಡಿದರೆ ಶನಿ ದೋಷ ನಿವಾರಣೆಯಾಗುತ್ತದೆ. ಕಪ್ಪು ಎಳ್ಳಿನ ಸೇವನೆಯಿಂದ ಸಂಧಿವಾತ, ಕರುಳಿಗೆ ಸಂಬಂಧಪಟ್ಟ  ರೋಗಗಳು ಗುಣವಾಗುತ್ತವೆ.

8. *ರಾಹು ದೋಷ ನಿವಾರಣೆಗೆ - ಉದ್ದಿನ ಬೇಳೆ*

ಉದ್ದಿನಬೇಳೆ ರಾಹುವಿಗೆ ಸಂಬಂಧಿಸಿದ ಧಾನ್ಯ. ರಾಹು ದೋಷ ಇರುವವರು ಪ್ರತಿ ಶನಿವಾರದ ದಿನ ನವಗ್ರಹಗಳಿಗೆ ಒಂಬತ್ತು ಸುತ್ತು ಪ್ರದಕ್ಷಿಣೆ ಹಾಕಿ  ಉದ್ದಿನ ಬೇಳೆಯನ್ನು ದಾನವಾಗಿ ನೀಡಿದರೆ ರಾಹು ದೋಷ ನಿವಾರಣೆಯಾಗುತ್ತದೆ. ಸರ್ಪದೋಷ, ಚರ್ಮರೋಗ, ಭಯದಿಂದ ಮುಕ್ತಿ ಹೊಂದಲು ಈ ಸುಲಭವಾದ ಪರಿಹಾರವನ್ನು ಮಾಡಿಕೊಂಡು ಬಗೆಹರಿಸಿಕೊಳ್ಳಬಹುದು.

9. *ಕೇತು ದೋಷ ನಿವಾರಣೆಗೆ - ಹುರುಳಿಕಾಳು*

ಹುರುಳಿಕಾಳು ಕೇತು ಗ್ರಹಕ್ಕೆ ಸಂಬಂಧಪಟ್ಟ ಧಾನ್ಯ. ಕೇತು ದೋಷ ಇರುವವವರು ಪ್ರತಿ ಮಂಗಳವಾರ ದಿನ ನವಗ್ರಹಗಳಿಗೆ  ಒಂಬತ್ತು ಸುತ್ತು ಪ್ರದಕ್ಷಿಣೆ ಹಾಕಿ ನಂತರ ಹುರುಳಿಕಾಳನ್ನು ದಾನವಾಗಿ ನೀಡಬೇಕು. ಕ್ಯಾನ್ಸರ್, ಗ್ರಂಥಿಯ ಸಮಸ್ಯೆಗಳನ್ನು ಹೊಂದಿರುವವರು ಕೀಟಾಣುಗಳು ಪ್ರಭಾವ ಹೆಚ್ಚು ಇರುವವವರು ಹುರುಳಿಕಾಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಈ ಖಾಯಿಲೆಯನ್ನು ಗುಣ ಪಡಿಸಿಕೊಳ್ಳಬಹುದು.

No comments:

Post a Comment