Thursday, 18 June 2020

ತುಳಸೀ_ಪೂಜೆ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಹಬ್ಬಗಳಲ್ಲಿ ಇದೊಂದು ವಿಶೇಷವಾದ ಹಬ್ಬ

#ತುಳಸೀ_ಪೂಜೆ

ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ|
ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:||

ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು ಎಲ್ಲರು ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನವನ್ನು ಅಲಂಕರಿಸಿ ತುಳಸಿ-ದಾಮೋದರನನ್ನು ಪೂಜಿಸುತ್ತಾರೆ.

ಅಂದು ಎಲ್ಲರೂ ಸಂಜೆಯ ಹೊತ್ತು ಶುಚಿರ್ಭೂತರಾಗಿ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ತುಳಸಿಕಟ್ಟೆಯಲ್ಲಿ ತುಳಸಿಯ ಕಡೆಗೆ ದೀಪ ಜ್ವಾಲೆಯು ಮುಖಮಾಡಿರುವಂತೆ ತುಪ್ಪದ ಯಾ ಎಳ್ಳೆಣ್ಣೆಯ ದೀಪವನ್ನು ಸಾತ್ವಿಕ ಊದುಬತ್ತಿಯನ್ನು ಉರಿಸಿಟ್ಟು ತುಳಸಿಗೆ ಪ್ರದಕ್ಷಿಣೆ ಗೈದು ನಮಸ್ಕರಿಸಬೇಕು. ತುಳಸಿಯ ಸ್ತೋತ್ರವನ್ನೂ ಭಜನೆ ಹೇಳಬಹುದು. ಹೀಗೆ ಮಾಡುವುದರಿಂದ ಆ ದೀಪದ ಬೆಳಕಿನಲ್ಲಿ ತುಳಸಿಯು ಬ್ರಹ್ಮಾಂಡದಿಂದ ಶ್ರೀಕೃಷ್ಣನ ಮಾರಕ ತತ್ತ್ವವನ್ನು ಆಕರ್ಷಿಸಿ ತುಳಸಿಕಟ್ಟೆಯ ಹಾಗೂ ಮನೆಯ ಸುತ್ತಲೂ ಅದನ್ನು ಪ್ರಕ್ಷೇಪಿಸಿ ಕಣ್ಣಿಗೆ ಗೋಚರವಾಗದ ಸೂಕ್ಷ್ಮರೂಪದ ಸಂರಕ್ಷಣಾ ಕವಚವನ್ನು ನಿರ್ಮಿಸಿ ಅನಿಷ್ಟ ಶಕ್ತಿಗಳಿಂದ ಜೀವಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುವುದು.

ಶ್ರೀ ತುಳಸಿ ಪೂಜೆಯನ್ನು ಮದುವೆಯಾದ ಸ್ತ್ರೀಯರು, ಸುಮಂಗಲಿಯರು, ಹೆಣ್ಣು ಮಕ್ಕಳು ಎಲ್ಲರೂ ಪ್ರತಿದಿನ ಅರಷಿನಾದಿ ಮಂಗಳದ್ರವ್ಯಗಳಿಂದ ಸ್ನಾನ ಮಾಡಿ ಶುಭ್ರರಾಗಿ ಕುಂಕುಮಾದಿಗಳನ್ನು ಧರಿಸಿ ಪ್ರತಿದಿನ ತಪ್ಪದೇ ಶ್ರೀ ತುಳಸಿ ಪೂಜೆ ಮಾಡಬೇಕು.

ಶ್ರೀ ತುಳಸಿ ವೃಂದಾವನದ ಸುತ್ತಲೂ ಚೆನ್ನಾಗಿ ಗೋಮಯದಿಂದ ಸಾರಿಸಿ ರಂಗೋಲಿ ಹಾಕಿ.

|| ಶ್ರೀಯಃ ಪ್ರಿಯೇ ಶ್ರಿಯಾವಾಸೇ ನಿತ್ಯಂಶ್ರೀಧರವಲ್ಲಭೇ||

|| ಭಕ್ತ್ಯಾ ದತ್ತಂ ಮಯಾರ್ಘ್ಯಂ ಹಿ ತುಳಸಿ ಪ್ರತಿಗ್ರಹ್ಯತಾಮ್ ||

ಮೇಲಿನ ಮಂತ್ರ ಹೇಳುತ್ತಾ ತುಳಸಿಗೆ
 ಅರಶಿನ ಕುಂಕುಮ ಹೂವುಗಳಿಂದ ಪೂಜೆ ಮಾಡಿ.

|| ತುಳಸಿ ಶ್ರೀಸಖಿ ಶುಭೆ ಪಾಪಹಾರಿಣಿ ಪುಣ್ಯದೇ||

|| ನಮಸ್ತೇ ನಾರದನುತೇ ನಾರಾಯಣಮನಃ ಪ್ರಿಯೇ ||

ಮೇಲಿನ ಮಂತ್ರ ಹೇಳಿ ನಮಸ್ಕರಿಸಿ.

ಶ್ರೀ ತುಳಸಿ ಪ್ರಾರ್ಥನೆ

ನಮಸ್ತುಳಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೆ |

ನಮೋ ಮೋಕ್ಷ ಪ್ರದಾಯಿಕೆ ದೇವೀ ನಮಃ ಸಂಪತ್ಪ್ರದಾಯಿಕೆ ||

ಶ್ರೀ ತುಳಸಿ ಪ್ರಣಾಮ

ವೃಂದಾಯೈ ತುಳಸಿ ದೇವ್ಯೈ

ಪ್ರಿಯಾಯೈ ಕೇಶವಸ್ಯ ಚ

ಕೃಷ್ಣ ಭಕ್ತಿ ಪರದೆ ದೇವಿ

ಸತ್ಯವತ್ಯೈ ನಮೋ ನಮಃ

ಶ್ರೀ ತುಳಸಿ ಪ್ರದಕ್ಷಿಣ ಮಂತ್ರ

ಯಾನಿ ಕಾನಿ ಚಪಾಪಾನಿ

ಬ್ರಹ್ಮ ಹತ್ಯಾದಿಕಾನಿ ಚ

ತಾನಿ ತಾನಿ ಪ್ರನಶ್ಯಂತಿ

ಪ್ರದಕ್ಷಿಣಃ ಪದೇ ಪದೇ

ಶ್ರೀ ತುಳಸಿ ನಮಸ್ಕಾರ 

ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ |
ಯದಗ್ರೇ ಸರ್ವವೇದಾಸ್ಚ ತುಳಸಿ ತ್ವಾಂ ನಮಾಮ್ಯಹಂ ||

ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೊದ್ಭೋತೇ ತುಳಸಿ ತ್ವಾಂ ನಮಾಮ್ಯಹಂ ||

#ಶ್ರೀ_ಕೃಷ್ಣಾರ್ಪಣ_ಮಸ್ತು

No comments:

Post a Comment