Tuesday, 9 June 2020

ಈ ದಿನ ಮಕ್ಕಳು ಹುಟ್ಟುವುದರಿಂದ ಏನೆಲ್ಲಾ ಶುಭ ಅಶುಭಗಳು ಆಗುತ್ತದೆ

🕉 ಶ್ರೀ ಗುರುಭ್ಯೋ ನಮಃ 🕉 ‌                                                   ‌         ‌                                                                                             *ಈ ದಿನ ಮಕ್ಕಳು ಹುಟ್ಟುವುದರಿಂದ ಏನೆಲ್ಲಾ ಶುಭ ಅಶುಭಗಳು ಆಗುತ್ತದೆ* 

ಅಮಾವಾಸ್ಯೆ ದಿನ ಮಗು ಜನಿಸಿದರೆ ಅದರಿಂದ ಆಗುವ ಶುಭ ಅಶುಭ ಫಲಗಳು. ಅಮಾವಾಸ್ಯೆ ಹುಣ್ಣಿಮೆ ಬಂತು ಎಂದರೆ ಸಾಕು ಏನೋ ಒಂದು ರೀತಿಯಲ್ಲಿ ಜನರು ಯಾವುದೇ ಕೆಲಸವನ್ನು ಮಾಡಲು ಕೂಡ ಹಿಂಜರಿಯುತ್ತಾರೆ ಕೆಲವು ಜನರು ಈ ಅಮಾವಾಸ್ಯೆ ದಿನ ಅಂತೂ ಹೊರಗಡೆ ಬರಲು ಕೂಡ ಹಿಂಜರಿಯುತ್ತಾರೆ ಏನೋ ಅನಾಹುತ ಆಗಿ ಬಿಡುತ್ತದೆ ಎಂಬ ಭಯದಲ್ಲೇ ಇರುತ್ತಾರೆ. ಜೊತೆಗೆ ಅಮಾವಾಸ್ಯೆಯ ದಿನ ಯಾವುದೇ ರೀತಿಯ ತೊಂದರೆ ಆಗದೇ ಇರಲಿ ಎಂದು ಹಲವರು ಪೂಜೆ ಹೋಮ ಹವನವನ್ನು ಮಾಡಿಸುತ್ತಾರೆ ಅಲ್ಲವೇ. ಅಷ್ಟೆಲ್ಲ ನಂಬಿಕೆಯಿಂದ ಇರುವ ಇನ್ನೂ ಈ ಅಮಾವಾಸ್ಯೆಯ ದಿನ ಮಕ್ಕಳು ಜನಿಸಿದರೆ ಸಾಕು ಅದು ಏನೋ ಅಪಶಕುನ ತೊಂದರೆ ಎಂದು ಭಾವಿಸಿ ಬಿಡುತ್ತಾರೆ ಆದರೆ ಅಮಾವಾಸ್ಯೆ ದಿನ ಮಕ್ಕಳು ಹುಟ್ಟುವುದರಿಂದ ಏನೆಲ್ಲಾ ಆಗುತ್ತದೆ ಬನ್ನಿ ತಿಳಿಯೋಣ.

ಅಮಾವಾಸ್ಯೆಯ ದಿನ ಹೆಣ್ಣು ಮಕ್ಕಳ ಜನನ ಆದರೆ ಅದರಲ್ಲೂ ಅಮಾವಾಸ್ಯೆ ಶುಕ್ರವಾರ ಅಥವಾ ಮಂಗಳವಾರ ಬಂದು ಅವರು ಅ ದಿನ ಜನಿಸಿದರೆ ಅವರ ಸ್ಥಾನ ಯಾವಾಗಲೂ ಕೂಡ ಉನ್ನತ ವಾಗಿ ಇರುತ್ತದೆ ಅವರು ಎಲ್ಲದರಲ್ಲೂ ಕೂಡ ಮುನ್ನಡೆಯನ್ನು ಸಾಧಿಸುತ್ತಾರೆ ಅವರು ಕೈ ಹಾಕಿದ ಕೆಲಸಗಳು ಎಲ್ಲವೂ ಕೂಡ ಸುಗಮವಾಗಿ ಸಾಗುತ್ತದೆ.

ಹಾಗೆಯೇ ಅ ದಿನದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಮದುವೆ ಆಗಿ ಗಂಡನ ಮನೆಗೆ ಹೋದ ಮೇಲೂ ಕೂಡ ಗಂಡನ ಮನೆಗೆ ಶ್ರೇಯಸ್ಸು ಆರೋಗ್ಯ ಐಶ್ವರ್ಯ ಎಲ್ಲವೂ ಕೂಡ ಬರುತ್ತದೆ ಜೊತೆಗೆ ಅ ಮನೆಯಲ್ಲಿ ಅವರು ಯಾವುದಾದರೂ ಕಷ್ಟದಲ್ಲಿ ಇದ್ದರೆ ಅ ಕಷ್ಟ ಎಲ್ಲವೂ ಕೂಡ ಮಂಜಿನಂತೆ ಕರಗಿ ಹೋಗುತ್ತವೆ. ಆದರೆ ಗಂಡನ ಮನೆಗೆ ಅ ಹೆಣ್ಣು ಹೋದಾಗ ಅ ಹೆಣ್ಣಿನ ತವರು ಮನೆಯಲ್ಲಿ ಕಷ್ಟಗಳು ಎದುರಾಗುತ್ತವೆ. ಹಾಗೆಯೇ ಅಮವಾಸ್ಯೆ ದಿನ ಗಂಡು ಮಕ್ಕಳು ಜನಿಸಿದರೆ ಸ್ವಲ್ಪ ಕಷ್ಟವನ್ನು ಎದುರಿಸಬೇಕು ಇವರ ಜೀವನದಲ್ಲಿ ಅಭಿವೃದ್ದಿ ಎಂಬುದು ಇರುವುದಿಲ್ಲ, ಇವರು ಮಾಡುವ ಕೆಲಸಗಳಿಂದ ಬೇರೆಯವರಿಗೆ ಸಹಾಯ ಆಗುತ್ತದೆ ವಿನಃ ಇವರಿಗೆ ಬರಿ ಕಷ್ಟಗಳೇ ಇರುತ್ತವೆ, ಆರ್ಥಿಕ ಪರಿಸ್ಥಿತಿ ಅನುಕೂಲವಾಗಿ ಇರುವುದಿಲ್ಲ. ಆದರೆ ಕೆಲವೊಂದು ಅಮಾವಾಸ್ಯೆಯ ತಿಥಿಗಳಲ್ಲಿ ಜನಿಸಿದರೆ ಅವರಿಗೆ ಒಂದು ವಿಶಿಷ್ಟವಾದ ಶಕ್ತಿಯೇ ಇರುತ್ತದೆ. ಅಂದರೆ ಇವರಿಗೆ ಕಷ್ಟ ಸುಖ ಎಲ್ಲವನ್ನೂ ಕೂಡ ಸಮಾನವಾಗಿ ತೆಗೆದು ಕೊಳ್ಳುತ್ತಾರೆ. ಹೇಗೆಂದರೆ ಅಮಾವಾಸ್ಯೆಯ ತಿಥಿಯಲ್ಲಿ ಹುಟ್ಟಿದವರಿಗೆ ಗೋಚಾರ ಫಲ ಮತ್ತು ಜಾತಕ ಎರಡೂ ಕೂಡ ಇವರಿಗೆ ಕೆಲಸ ಮಾಡುತ್ತದೆ.
                                               ಅಮಾವಾಸ್ಯೆಯಂದು ಜನಿಸಿದ ಗಂಡುಮಕ್ಕಳು ಬಡತನ ಅನುಭವಿಸಬೇಕಾದ ಸ್ಥಿತಿ ಏರ್ಪಡುತ್ತದೆ. ಆದ್ದರಿಂದ ಆ ಜನನ ದೋಷದ ನಿವಾರಣೆ ಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗೆ ನಿವಾರಣೆ ಮಾಡಿಕೊಂಡರೆ ಅಮಾವಾಸ್ಯೆ ಜನನ ದೋಷವು ಹೋಗಿ, ಆ ಮಗುವಿಗೆ ಉತ್ತಮ ಫಲಗಳು ದೊರೆಯುತ್ತವೆ.

ಕೃಷ್ಣ ಪಕ್ಷದ ಚತುರ್ದಶಿ, ಅಮಾವಾಸ್ಯೆ  ಜನನ ದೋಷದ ವಿಚಾರಕ್ಕೆ ಬಂದರೆ, ಆ ತಿಥಿಯ ಪ್ರಮಾಣವನ್ನು ಆರು ಭಾಗ ಮಾಡಿಕೊಳ್ಳಬೇಕು. ಮೊದಲ ಭಾಗದಲ್ಲಿ ಜನನ ಆಗಿದ್ದರೆ ಶುಭಪ್ರದ. ಎರಡನೇ ಭಾಗದಲ್ಲಿ ಆದರೆ ನಾಶವನ್ನು ಅಥವಾ ತಂದೆಗೆ ಕೆಡುಕನ್ನು ಸೂಚಿಸುತ್ತದೆ. ಮೂರನೇ ಭಾಗವು ತಾಯಿಗೆ ಕೆಡುಕನ್ನು ಸೂಚಿಸುತ್ತದೆ. ನಾಲ್ಕನೇ ಭಾಗದಲ್ಲಿ ಜನನವಾದರೆ ತಾಯಿಯ ಅಣ್ಣ- ತಮ್ಮಂದಿರಿಗೆ ಕೆಡುಕು, ಐದನೇ ಭಾಗದಲ್ಲಿಯಾದರೆ ಕುಟುಂಬವೇ ನಾಶ, ಆರರಲ್ಲಿ ಸ್ವತಃ ಆ ಮಗುವಿಗೇ ತೊಂದರೆಯಾಗುತ್ತದೆ.  ‌                       ‌                                         ‌                 ‌                                                                                                      
ಈ ಗೋಚಾರ ಫಲದಲ್ಲಿ ‌ ಮತ್ತು ಶನಿ ಇದ್ದರೆ ಅವರು ಉತ್ತಮ ಸ್ಥಾನದಲ್ಲಿ ಇರುತ್ತಾರೆ. ಹಾಗೂ ಜನ್ಮ ಕುಂಡಲಿಯಲ್ಲಿ ಶನಿ ಮತ್ತು ಗುರು ನೀಚ ಸ್ಥಾನದಲ್ಲಿದ್ದರೆ ಅಂದರೆ ಗುರು ಮಕರ ರಾಶಿಯಲ್ಲಿ, ಶನಿ ಮೇಷ ರಾಶಿಯಲ್ಲಿ ಸ್ಥಿತನಾಗಿದ್ದರೆ ಅವರ ಜೀವನ ಪೂರ್ತಿ ಸಮಸ್ಯೆಗಳೇ ಇರುತ್ತವೆ. ಇದರ ಜೊತೆಗೆ ಡಿಸೆಂಬರ್. ನವಂಬರ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬರುವ ಅಮಾವಾಸ್ಯೆಯ ದಿನ ಹುಟ್ಟಿದವರಿಗೆ ಯೋಗ ತುಂಬಾ ಚೆನ್ನಾಗಿರುತ್ತದೆ. ಅಮಾವಾಸ್ಯೆಯಲ್ಲಿ ಹುಟ್ಟಿ ಲಗ್ನ ಕುಂಡಲಿಯಲ್ಲಿ, ಸ್ವಕ್ಷೇತ್ರದಲ್ಲಿ ಶನಿ ಇದ್ದರೆ ಮಕರ, ಕುಂಭ ರಾಶಿಯಲ್ಲಿ ಶನಿ ಇದ್ದು, ಅಲ್ಲೇ ಲಗ್ನವು ಇದ್ದರೆ ಅವರಿಗೆ ಪ್ರತಿಯೊಂದು ರಂಗದಲ್ಲೂ ಕೂಡ ಉನ್ನತ ಮಟ್ಟ ಏರುತ್ತಾರೆ. ಅವರಿಗೆ ಕಷ್ಟಗಳು ಎಂಬುದು ಹೇಗೆ ಬರುತ್ತದೋ ಹಾಗೆಯೇ ದೂರ ಆಗಿ ಬಿಡುತ್ತದೆ. ಕೃಷ್ಣ ಚತುರ್ದಶಿ ಹಾಗೂ ಅಮಾವಾಸ್ಯೆ ಜನನ ಶಾಂತಿ ಮಾಡಿಸಬೇಕು. ಅದಕ್ಕಾಗಿ ಅಮಾವಾಸ್ಯೆಯ ದಿನ ಮಕ್ಕಳು ಜನಿಸಿದರೆ ಅದಕ್ಕೆ ಹೆದರುವ ಅವಶ್ಯಕತೆ ಇರುವುದಿಲ್ಲ.

No comments:

Post a Comment