Tuesday, 9 June 2020
ದೇವಸ್ಥಾನದಲ್ಲಿ ಚಪ್ಪಲಿ ಕಳೆದು ಹೋದರೆ ಏನರ್ಥ ಗೊತ್ತಾ
🕉 ಶ್ರೀ ಗುರುಭ್ಯೋ ನಮಃ 🕉 *ದೇವಸ್ಥಾನದಲ್ಲಿ ಚಪ್ಪಲಿ ಕಳೆದು ಹೋದರೆ ಏನರ್ಥ ಗೊತ್ತಾ?* ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾಗುವುದು ಸಾಮಾನ್ಯ ಸಂಗತಿ. ಚಪ್ಪಲಿ ಕಳ್ಳತನವಾದರೆ ನಿಶ್ಚಿತವಾಗಿ ನಮಗೆ ನಷ್ಟವೇ, ಆದರೆ ಜ್ಯೋತಿಷ್ಯ ಶಾಸ್ತ್ರ ಬೇರೆಯದನ್ನೇ ಹೇಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾಗುವುದು ಶುಭ ಸಂಕೇತ, ಅದರಲ್ಲೂ ಶನಿವಾರ ಚಪ್ಪಲಿ ಕಳುವಾದರೆ ಬಹಳ ಒಳ್ಳೆಯದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರ ಚಪ್ಪಲಿ ಕಳ್ಳತನವಾದರೆ ಶೀಘ್ರದಲ್ಲಿಯೇ ಕೆಟ್ಟ ಸಮಯ ಕಳೆಯಲಿದೆ ಎಂದರ್ಥ, ಶನಿ ದೋಷ ಕಳೆದು ಒಳ್ಳೆಯದಾಗಲಿದೆ ಎನ್ನುವುದರ ಸಂಕೇತವಿದು. ಯಾವುದೇ ಕೆಲಸ ಕೈಗೂಡದೇ ತೊಂದರೆಯಲ್ಲಿದ್ದ ವೇಳೆ ಚಪ್ಪಲಿ ಕಳುವಾದರೆ ದುಃಖ ಪಡುವ ಬದಲು ಖುಷಿಯಾಗಿರಿ. ಇದು ಶನಿ ದೋಷ ನಿವಾರಣೆಯಾಗುತ್ತದೆ ಎಂಬುದರ ಮುನ್ಸೂಚನೆ ಎಂಬುದನ್ನು ಮರೆಯಬೇಡಿ. ದೇಹದ ಪ್ರತಿಯೊಂದು ಅಂಗಕ್ಕೂ ಗ್ರಹಕ್ಕೂ ಸಂಬಂಧವಿದೆ. ಪಾದಗಳನ್ನು ಶನಿಗೆ ಹೋಲಿಸಲಾಗುತ್ತದೆ, ಚಪ್ಪಲಿ ಹಾಗೂ ಬೂಟು ಕಳ್ಳತನವಾಗಲು ಶನಿಯೇ ಕಾರಣ ಹಾಗಾಗಿಯೇ ಶನಿವಾರ ಚಪ್ಪಲಿ ದಾನ ಮಾಡಿದರೆ ಶನಿ ಪ್ರಸನ್ನನಾಗುತ್ತಾನೆ. ಶೀಘ್ರದಲ್ಲಿ ಅದೃಷ್ಟದ ದಾರಿ ತೋರಿಸುತ್ತಾನೆ.
Subscribe to:
Post Comments (Atom)
No comments:
Post a Comment