Monday, 15 June 2020

ಅರ್ಚಕರು ಮಂತ್ರ ಹೇಳುತ್ತಾರೆ.ಭಕ್ತರು ಭಜನೆ ಮಾಡುತ್ತಾರೆ.ಯಾಕೆ ಇದೆಲ್ಲಾ?

ಅರ್ಚಕರು ಮಂತ್ರ ಹೇಳುತ್ತಾರೆ.
ಭಕ್ತರು ಭಜನೆ ಮಾಡುತ್ತಾರೆ.
ಯಾಕೆ ಇದೆಲ್ಲಾ?

ಒಂದು ಜಿಜ್ಞಾಸೆ ಉಂಟಾಗುತ್ತದೆ. ಯಾರೋ ಪೂರ್ವಿಕರು ಹೇಳಿದರು.ಅದನ್ನೇ ಅಪ್ಪ ನೆಟ್ಟ ಆಲದ ಮರಕ್ಕೆ ನೀರೆರೆಯುವುದು ಎಂದಂತೆ ಮೇಲ್ನೋಟಕ್ಕೆ ಕಾಣುತ್ತದೆ.
ಮೊದಲಾಗಿ ಒಂದು ಸಣ್ಣ ಉದಾಹರಣೆಯನ್ನು ಕೊಡುತ್ತೇನೆ.ಅಕ್ಷರ ಸಂಯೋಜನೆಯಲ್ಲಿ ವೆತ್ಯಾಸವಾದಾಗ ಏನಾಗುತ್ತದೆ? ಬುದ್ಧಿ ಕ್ಷೀಣವಾಗಿ  ಆಯು ಕ್ಷೀಣ, ಆರೋಗ್ಯ ಕ್ಷೀಣವಾಗುತ್ತದೆ. *ಇವನಾರವ ಇನಾರವ ಇವ ನಮ್ಮವ ಇವ ನಮ್ಮವ* ಎಂಬ ಬಸವಣ್ಣನವರ ವಚನದಲ್ಲಿ ಅದೆಷ್ಟು ಆತ್ಮೀಯತೆ ಇದೆ ನೋಡಿ.ಸಾಗರವೇ ಇದರೊಳಗಿದೆ. ಇಡೀ ದೇಶದ ಪ್ರಜೆಗಳೊಳಗಿರುವ ಮತ್ಸರವೂ ನಾಶವಾಗಬಹುದು. ಇದನ್ನೇ 😃ಇವ ನರ್ವ ಇವ ನರ್ವ 😂
 ನಮ್ವ  ಇವ ನಮ್ವ ಇವ ನಮ್ವ 😂
ಎಂದಾಗ ತಮಾಶೆ( troll ಎನ್ನಿ) ಮಾಡುವವರಿಗೊಂದು ಅವಕಾಶ ಸಿಕ್ಕಂತಾಗುತ್ತದೆ. ಇದನ್ನಾಡಿದವ ಕೇಳಿಸಿಕೊಂಡಾಗ ಸ್ವಯಂ ಅವಮಾನಿತನಾಗಿ ಇನ್ನಷ್ಟು ತಪ್ಪು ಮಾಡಿಕೊಂಡು ಕೋಪಗ್ರಸ್ತನಾದರೆ ( ಹುಚ್ಚರ,ಬುದ್ಧಿಗೇಡಿಗಳ ವಿಚಾರ ಬಿಡಿ) ಆಯುರಾರೋಗ್ಯಕ್ಕೆ ಹಾನಿಯೂ, ನಿಷ್ಟುರದ ಪ್ರಬಲತೆಯೂ ಜಾಸ್ತಿಯಾಗುತ್ತದೆ. ಯಾರೋ ಉನ್ನತ ಪೀಠದಲ್ಲಿದ್ದವರು  ಯಾವುದೋ ಒಂದು ಗಂಭೀರ ವಿಚಾರದ ವಿಚಾರದಲ್ಲಿ * ಮಿಣಿ ಮಿಣಿ* ಎಂದದ್ದು ಎಷ್ಟು ಅವಮಾನಕ್ಕೊಳಗಾಯಿತು ನೋಡಿ. ಇನ್ನೊಬ್ಬ ಜವಬ್ದಾರಿ ಹೊತ್ತಿರುವಾಗಲೇ
ಒಂದು ಪ್ರಾಮುಖ್ಯ ದಿನಾಚರಣೆಯ ವಿಚಾರವನ್ನು ಇನ್ನೊಂದು ಪ್ರಮುಖ್ಯ ದಿನಾಚರಣೆಯಾಗಿ ಹೇಳಿದ್ದು ಎಷ್ಟು ದೊಡ್ಡ ವಿಚಾರವಾಯ್ತು?
ಅಂದರೆ ವಾಕ್ಯ ಸಂಯೋಜನೆ,ಅಕ್ಷರ ಸಂಯೋಜನೆ, ವಿಚಾರ ಸಂಯೋಜನೆ,ಧ್ವನಿ ಸಂಯೋಜನೆ ಸರಿ ಇದ್ದಾಗ ಅದು ಮಂತ್ರವಾಗುತ್ತದೆ. ಅಪದ್ಧವಾದಾಗ ಹಾಸ್ಯಾಸ್ಪದವೋ,ಬೈಗುಳವೋ ಆಗಿ ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಧಕ್ಕೆಯೂ,ಸಮಾಜಕ್ಕೆ ತಪ್ಪು ಸಂದೇಶವೋ ಆಗುತ್ತದೆ.
ಮಾನ್ಯ ಪ್ರಧಾನ ಮಂತ್ರಿಗಳು ,' ನಾನು ದೇಶದ ಪ್ರಧಾನ ಸೇವಕ, ಆತ್ಮನಿರ್ಭರತಾ ( ಸ್ವಾವಲಂಭನೆ) ಎಂಬಿತ್ಯಾದಿ ಹೇಳಿದ ಮಾತುಗಳು ದೇಶ ವಿದೇಶದಲ್ಲಿ ಪ್ರತಿಧ್ವನಿಸುತ್ತಾ ಜಗ ಮೆಚ್ಚುವಂತಾಯಿತು. ಇದನ್ನು ಹೇಳಿದವರ ಆಯುರಾರೋಗ್ಯ ವೃದ್ಧಿಯೂ ಆಗುತ್ತದೆ. 
ಆಶೀರ್ಮಂತ್ರದಲ್ಲಿ
*ಭದ್ರಂ ಕರ್ಣೇಭಿ ಶ್ರುಣುಯಾಮ ದೇವಾಃ......*
ಎಂಬ ಆಶೀರ್ವಚನವಿದೆ. ಒಳ್ಳೆಯದ್ದನ್ನೇ ಕೇಳು,ಹೇಳು,ನೋಡು ಎಂಬ ಆಶೀರ್ವಾದ ಮಂತ್ರವಿದು. ಇದು ಮಂತ್ರವಾಗಿ ಆದದ್ದು ಹೇಗೆಂದರೆ ಅದರೊಳಗಿನ ಅಕ್ಷರ ಸಂಯೋಜನೆಯ ಮೂಲಕ ಪ್ರಕಟವಾದ ಸತ್ ಸಂದೇಶ. ಗಾಂಧೀಜಿಯ ಆಶ್ರಮದ ಮೂರು ಕೋತಿಗಳ ಸಂಜ್ಞೆಯೂ ಇದೇ ಆಗಿದೆ.
ಸದ್ವಾಕ್ಯಕ್ಕೆ ದೇವತಾನುಗ್ರಹ ಇರುತ್ತದೆ. ಸೂರ್ಯನ ರಥದಲ್ಲಿ ಪ್ರತೀ ಕ್ಷಣಕ್ಕೂ ತಥಾಸ್ತು ಎಂಬ ವಾಕ್ಯೋತ್ಪತ್ತಿ ಆಗುತ್ತಿರುತ್ತದೆ.ಆಗ ನಾವು ಅಶುಭ ನುಡಿದರೂ, ಶುಭ ನುಡಿದರೂ ಉತ್ತರ *ತಥಾಸ್ತು*. ಸಪ್ತಶತಿಯಲ್ಲಿ ಪ್ರಾರಂಭದಲ್ಲಿ ದೇವಿಯ ಧ್ಯಾನ ಮಂತ್ರದಲ್ಲಿ ದೇವಿಯೊಡನೆ ಬೇಡುವ ಅನುಗ್ರಹ ಒಂದಿದೆ. ಹೇ ಮಾತಾ ನಿನ್ನನ್ನು ಧ್ಯಾನಿಸುತ್ತಾ ಅನುಗ್ರಹ ಬೇಡುತ್ತೇನೆ. * ಸರ್ವಾಶುಭಂ ಸಂಹೃತ್ಯಾಂಶು* ( ಸರ್ವ+ ಅಶುಭಾಂ-- ಸರ್ವಾಶುಭಾಂ) ಅಂದರೆ ಸರ್ವ ಅಶುಭವನ್ನು ನಾಶ ಮಾಡು ಎಂದು ಕೇಳುವುದಾಗಿದೆ. ಇದಕ್ಕೂ ತಥಾಸ್ತು ಎನ್ನುವಳು. ಇಲ್ಲಿ ಕೇಳುವುದರಲ್ಲಿ ಅಪದ್ಧವಾಗಿ 
* ಸರ್ವಶುಭಾಂ* ಆಗಿಬಿಟ್ಟರೂ ಅವಳ ಉತ್ತರ ತಥಾಸ್ತು.! 
ಕುಂಭ ಕರ್ಣನ ಜಡದಿಂದಾಗಿ ಇಂದ್ರಾಸನ ಕೇಳುವ ಬದಲು ಎಡವಟ್ಟಿನಿಂದ ನಿದ್ರಾಸನವನ್ನು ಕೇಳುತ್ತಾನೆ. ಅಂದರೆ ಘೋರ ತಪಸ್ಸಿನಿಂದ ಮೊದಲೇ ಬಳಲಿದ್ದ. ಸರಸ್ವತಿಯು ದೇವತೆಗಳ ಇಚ್ಚೆಯಂತೆ, ಕುಂಭಕರ್ಣನ ನಾಲಿಗೆಯಲ್ಲಿ ಕುಳಿತು ಯಾವ ವರವನ್ನು ಕೇಳಬೇಕೋ ಅದರ ಬದಲು ಆಲಸ್ಯದಿಂದ ಇಂದ್ರಾಸನ ಕೇಳುವ ಬದಲು ನಿದ್ರಾಸನ ಕೇಳಿಬಿಟ್ಟ ! ಇದೇ ಆಲಸ್ಯದ ಪರಿಣಾಮ.
ಯಾರು ತನಗೆ ಅದು ಬೇಕು,ಇದು ಬೇಕು,ಆ ಸಾವು ಬರಬಾರದು,ಈ ಸಾವು ಬರಬಾರದು ಎಂದು ಪಟ್ಟಿಯನ್ನೇ ಮಾಡಿಕೊಂಡು ಕೇಳುತ್ತಾರೋ ಅಂತವರು ಎಡವಟ್ಟಿಗೆ ಬೀಳುತ್ತಾರೆ.
ಆಚಾರ್ಯ ಮಧ್ವರು ಹೇಳಿದಂತೆ 
* ಅನಾಯಾಸೇನ ಮರಣಂ
ವಿನಾ ದೈನ್ಯೇನ ಜೀವನಂ
ಕೃಪಯಾ ಭಕ್ತವತ್ಸಲ* ಎಂದರು. ಆಯಾಸ ಇಲ್ಲದ ಮರಣ ಎಂದರೆ ರೋಗದಿಂದ ನರಳದ ಪೂರ್ಣಾಯುಷ್ಯದ ಮರಣ. ವಿನಾ ದೈನ್ಯೇನ ಜೀವನಂ ಎಂದರೆ ಯಾಚನೆ ಮಾಡದ ಅಂದರೆ ಬೇಡದೆ ಜೀವಿಸುವ ಅನುಗ್ರಹ ಎಂದರ್ಥ.
ನಾನು ಮುಖ್ಯಮಂತ್ರಿ ಆಗಬೇಕು,ಪ್ರಧಾನ ಮಂತ್ರಿ ಆಗಬೇಕು ಎಂದು ಹಂಬಲಿಸಿದವರು ಎಡವಟ್ಟಿನಿಂದ ಅವಮಾನಿತರಾಗುತ್ತಾರೆ.
ಆದರೆ ಆಸೆಯೇ ಇಲ್ಲದೆ ತನ್ನ ಕರ್ಮ ಶುದ್ಧಿಯಲ್ಲಿ ಯಾರಿರುತ್ತಾರೋ ಅವರಿಗೆ ಉನ್ನತ ಸ್ಥಾನ ಖಚಿತ.
ಬಹುಷಃ ನಾವು ನೋಡಿದ ಪ್ರಧಾನ ಮಂತ್ರಿಗಳಲ್ಲಿ ಒಬ್ಬರು ಮನ್ಮೋಹನ್ ಸಿಂಗ್, ಅಟಲ್ ಜೀ,  ಶಾಸ್ತ್ರೀ ಜೀ, ರಾಷ್ಟ್ರಾಧ್ಯಕ್ಷರಾಗಿದ್ದ ಅಬ್ದುಲ್ ಕಲಾಂ ಜೀ, ಪ್ರಣವ್ ಮುಖರ್ಜಿ ಲಾಬಿ ಮಾಡಿ ಬಂದವರಲ್ಲ. ಈಗ ಇನ್ನೊಬ್ಬರು ನರೇಂದ್ರ ದಾಸ್ ಮೋದಿ ಜೀ.ಇವರಿಗೂ ನಿರೀಕ್ಷೆ ಇರಲಿಲ್ಲ. ಉಳಿದವರೆಲ್ಲ ನಿರೀಕ್ಷೆ ಇಟ್ಟುಕೊಂಡವರೆ.
ಹಾಗಾಗಿ ಮಾತುಗಳು ಮಾಣಿಕ್ಯವೂ ಹೌದು,ಮಾರಕವೂ ಆಗಬಹುದು.

No comments:

Post a Comment