Tuesday, 9 June 2020

ಬಿಲ್ವ ಪತ್ರೆಯಿಂದ ವಾಸ್ತು ದೋಷ ನಿವಾರಣೆ*

🕉 ಶ್ರೀ ಗುರುಭ್ಯೋ ನಮಃ 🕉 ‌    ‌     ‌                                       ‌                  ‌                                                                 *ಬಿಲ್ವ ಪತ್ರೆಯಿಂದ ವಾಸ್ತು ದೋಷ ನಿವಾರಣೆ*

ಬಿಲ್ವಪತ್ರೆಯಲ್ಲಿ ಮೂರು ದಳಗಳಿವೆ. ಎಡದಲ್ಲಿ ಬ್ರಹ್ಮ, ಬಲದಲ್ಲಿ ವಿಷ್ಣು ಮತ್ತು ಮಧ್ಯದಲ್ಲಿ ಸದಾಶಿವ ನೆಲೆಸಿದ್ದಾನೆ ಎಂದು ಪುರಾಣದಿಂದ ತಿಳಿದು ಬರುತ್ತದೆ. ಬಿಲ್ವಪತ್ರೆಯ ಮುಂಭಾಗದಲ್ಲಿ ಅಮೃತ, ಹಿಂಭಾಗದಲ್ಲಿ ಯಕ್ಷರು ಇರುತ್ತಾರೆ. ಈ ಬಿಲ್ವಪತ್ರೆಯ ಮರವು ಕಾಶಿ ಕ್ಷೇತ್ರಕ್ಕೆ ಸರಿಸಮಾನ. ಈ ಗಿಡ ಎಲ್ಲಿ ಇರುವುದೋ ಅಲ್ಲಿ ಶಿವನು ಲಿಂಗಾಕಾರದಲ್ಲಿ ನೆಲೆಸಿರುತ್ತಾನೆ ಎಂಬ ಪ್ರತೀತಿ ಇದೆ. 

🌿 ಬಿಲ್ವ ಮರವು ಮನೆಯ ಈಶಾನ್ಯ ಭಾಗದಲ್ಲಿದ್ದರೆ ತೊಂದರೆಗಳು ಪರಿಹಾರವಾಗುತ್ತದೆ ಮತ್ತು ಐಶ್ವರ್ಯ ಉಂಟಾಗುತ್ತದೆ.

 🌿 ಮನೆಯ ಪಶ್ಚಿಮ ಭಾಗದಲ್ಲಿದ್ದರೆ ಸಂತಾನ ಲಾಭವಾಗುತ್ತದೆ. ದಕ್ಷಿಣದಲ್ಲಿದ್ದರೆ ಯಮ ಬಾಧೆ ಇರುವುದಿಲ್ಲ. 

🌿 ಬಿಲ್ವಪತ್ರೆಗಳಿಂದ ತೋರಣ ಕಟ್ಟಿದರೆ ಯಾವ ದುಷ್ಟಶಕ್ತಿಗಳೂ ಒಳಬರುವುದಿಲ್ಲ.

 🌿 ಶಿವನಿಗೆ ಪೂಜೆ ಮಾಡಿದ ಬಿಲ್ವಪತ್ರೆಯನ್ನು ಪ್ರತಿದಿನ ನೀರಿಗೆ ಹಾಕಿ ಮೂರು ಗಂಟೆಗಳ ನಂತರ ಆ ನೀರನ್ನು ಸೇವಿಸಿದರೆ ಆರೋಗ್ಯವೂ ಉತ್ತಮ ಇರುತ್ತದೆ. 

🌿 ಬಿಲ್ವಪತ್ರೆಯ ಕಾಯಿಯನ್ನು ದೇವರ ಕೋಣೆ ಮತ್ತು ಹಾಲ್‌ ನಲ್ಲಿ ಈಶಾನ್ಯ ಮೂಲೆಯಲ್ಲಿ ಕಟ್ಟಿದರೆ ವಾಸ್ತುದೋಷ ಇದ್ದರೆ ನಿವಾರಣೆ ಆಗುವುದು. 

🌿 ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಬಿಲ್ವಪತ್ರೆಯ ಮರವನ್ನು ನೋಡಿದರೆ, ಆ ದಿನಪೂರ್ತಿ ಸಂತೋಷದಿಂದ ಇರಬಹುದು.

No comments:

Post a Comment