Tuesday, 9 June 2020

*ಶಿವಲಿಂಗಕ್ಕೆ ವಿಧ ವಿಧವಾದ ಅಭಿಷೇಕವನ್ನು ಮಾಡಿದರೆ ಸಿಗುವ ಪ್ರಯೋಜನಗಳೇನು ಗೊತ್ತಾ ?*

🕉 ಶ್ರೀ ಗುರುಭ್ಯೋ ನಮಃ 🕉  ‌    ‌    ‌         ‌                     ‌                 ‌     ‌                                                                                  *ಶಿವಲಿಂಗಕ್ಕೆ ವಿಧ ವಿಧವಾದ ಅಭಿಷೇಕವನ್ನು ಮಾಡಿದರೆ ಸಿಗುವ ಪ್ರಯೋಜನಗಳೇನು ಗೊತ್ತಾ ?*

ದೇವರನ್ನು ನಾನಾನ ವಿಧಗಳಿಂದ ನಾವು ಪೂಜಿಸುತ್ತೇವೆ. ಅರ್ಚನೆಯನ್ನು ಮಾಡುತ್ತೇವೆ. ಈ ಪೂಜಾವಿಧಾನಗಳಲ್ಲಿ ಅಭಿಷೇಕವೂ ಒಂದು. ಶಿವಲಿಂಗಕ್ಕೆ ಮಾಡುವಂತಹ ನಾನಾ ದ್ರವ್ಯ, ಫಲ, ಪುಷ್ಪ, ಜಲಗಳಿಂದ ಮಾಡುವಂತಹ ಅಭಿಷೇಕದಿಂದ ಹಲವು ಪ್ರಯೋಜನವನ್ನು ಪಡೆಯಬಹುದು. 
 
ಲಯಕರ್ತನಾದ ಶಿವನು ಭೂಮಂಡಲದಲ್ಲಿ ಲಯವನ್ನು ಉಂಟು ಮಾಡುವನು. ನಿರಾಭರಣ ಪ್ರಿಯನಾದ ಈಶ್ವರನು ಸರಳವಾದ ಭಕ್ತಿಗೆ ಮೆಚ್ಚುವವನು. ಆಡಂಬರಗಳಿಲ್ಲದ ಶುದ್ಧ ಭಕ್ತಿಯೇ ಶಿವನನ್ನು ಮೆಚ್ಚಿಸಲು ಇರುವಂತಹ ಮಾರ್ಗ. ಭಕ್ತರ ಕಷ್ಟವನ್ನು ಆಲಿಸುವ ಶಿವನು ತನ್ನನ್ನು ಬೇಡುವ ಭಕ್ತರಿಗೆ ಸದಾ ಒಳ್ಳೆಯದನ್ನೇ ಕರುಣಿಸುತ್ತಾನೆ.
ರೂಪಾಂತರಿಯಾದ, ತ್ರಿಮೂರ್ತಿಗಳಲ್ಲಿ ಒಬ್ಬನಾದ ಈಶ್ವರನು ಮೋಕ್ಷದೊಂದಿಗೆ ಸಂಬಂಧವನ್ನು ಹೊಂದಿದ್ದಾನೆ. ಶಿವನಿಗೆ ಪೂಜೆಯನ್ನು ಸಾಮಾನ್ಯವಾಗಿ ಲಿಂಗಗಳಿಗೆ ಮಾಡಲಾಗುತ್ತದೆ. ಲಿಂಗ ರೂಪದಲ್ಲಿ ಪೂಜಿಸುವ ದೇವರೆಂದರೆ ಶಿವನೊಬ್ಬನೇ. ಲಿಂಗವು ಆದಿ ಹಾಗೂ ಅಂತ್ಯವಿಲ್ಲದ ಬ್ರಹ್ಮಾಂಡವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ಶಿವಾಲಯಗಳಲ್ಲೂ ಕೂಡಾ ಶಿವಲಿಂಗದ ಮೇಲೆ ಧಾರಾಪಾತ್ರೆಯಿಂದ ಒಂದೊಂದೇ ಹನಿ ಜಲವು ಹರಿಯುವುದನ್ನು ಕಾಣಬಹುದು. ಶಿವನ ಇಚ್ಛೆಗೆ ಅನುಗುಣವಾಗಿ ಇತರ ಅಭಿಷೇಕಗಳನ್ನು ಕೂಡಾ ಶಿವಲಿಂಗಕ್ಕೆ ಮಾಡಲಾಗುತ್ತದೆ. ಆ ಶಿವಲಿಂಗದ ಅಭಿಷೇಕಗಳು ಯಾವುವು, ಅದರಿದಾಗುವ ಪ್ರಯೋಜನಗಳೇನು ಎನ್ನುವುದನ್ನು ತಿಳಿಯೋಣ ಬನ್ನಿ

* ಪಂಚ ದ್ರವ್ಯ ಗಳಾದ ಹಾಲು, ಮೊಸರು, ತುಪ್ಪ, ಗೋಮೂತ್ರ ಹಾಗೂ ಗೋಮಯದಿಂದ ಮಾಡಿರುವ ಪಂಚಗವ್ಯದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಪಾಪಗಳಿಂದ ಮುಕ್ತರಾಗುವಿರಿ.
* ಬಾಳೆಹಣ್ಣು, ಬೆಲ್ಲ, ಕಲ್ಲುಸಕ್ಕರೆ, ಖರ್ಜೂರ, ಜೇನುತುಪ್ಪ ಹಾಗೂ ಒಣಹಣ್ಣುಗಳಿಂದ ಮಾಡಿದ ಪಂಚಾಮೃತದಿಂದ ಅಭಿಷೇಕ ಮಾಡುವುದರಿಂದ ಸಂಪತ್ತು ವೃದ್ಧಿಯಾಗುವುದು.
* ತುಪ್ಪದಿಂದ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿದರೆ ಮೋಕ್ಷ ಪ್ರಾಪ್ತಿಯಾಗುವುದು.
* ಹಾಲಿನಿಂದ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿದರೆ ದೀರ್ಘಾಯುಷ್ಯವನ್ನು ಪಡೆಯುವಿರಿ.
* ಮೊಸರಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಉತ್ತಮ ಸಂತಾನ ಹಾಗೂ ಮಕ್ಕಳ ಭಾಗ್ಯವನ್ನು ಪಡೆಯುವಿರಿ.
* ಶಿವಲಿಂಗಕ್ಕೆ ಜೇನುತುಪ್ಪದಿಂದ ಅಭಿಷೇಕ ಮಾಡಿಸಿದರೆ ಮಧುರ ಧ್ವನಿ ಹಾಗೂ ಸಂಗೀತದಲ್ಲಿ ಪ್ರತಿಭಾನ್ವಿತರಾಗುವರು.
* ಶಿವಲಿಂಗಕ್ಕೆ ಅಕ್ಕಿಯ ಹಿಟ್ಟಿನಿಂದ ಅಭಿಷೇಕ ಮಾಡಿದರೆ ಸಾಲದಿಂದ ಮುಕ್ತರಾಗಬಹುದು.
* ಕಬ್ಬಿನ ಹಾಲಿನಿಂದ ಮಾಡುವ ಶಿವಲಿಂಗಾಭಿಷೇಕದಿಂದ ಉತ್ತಮ ಆರೋಗ್ಯ ವೃದ್ಧಿಯಾಗುವುದಲ್ಲದೇ, ದ್ವೇಷವನ್ನೂ ತೆಗೆದುಹಾಕುವುದು.
* ಸಾವಿನ ಬಗ್ಗೆ ಭಯ, ಅನಾರೋಗ್ಯದಿಂದ ಮುಕ್ತಿ ಪಡೆಯಲು ನಿಂಬೆಹಣ್ಣಿನ ರಸದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಬಹುದು.
* ಎಳನೀರಿನಿಂದ ಶಿವಲಿಂಗಕ್ಕೆ ಮಾಡುವ ಅಭಿಷೇಕವು ಜೀವನದಲ್ಲಿ ಸಂತೋಷ ಹಾಗೂ ನೆಮ್ಮದಿಯನ್ನು ನೀಡುತ್ತದೆ.

* ಶಿವಲಿಂಗಕ್ಕೆ ಅನ್ನಾಭಿಷೇಕವನ್ನು ಮಾಡಿದರೆ ಉತ್ತಮ ಜೀವನದೊಂದಿಗೆ ರಾಜ್ಯ ಪ್ರಾಪ್ತಿಯಾಗುವುದು.
* ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆಯಲು ಶಿವಲಿಂಗಕ್ಕೆ ಶ್ರೀಗಂಧ ಲೇಪನದ ಅಭಿಷೇಕವನ್ನು ಮಾಡಬಹುದು.
* ಶಿವಲಿಂಗಕ್ಕೆ ಗಂಗಾಜಲದಿಂದ ಕೂಡಿದ ನೀರಿನಿಂದ ಅಭಿಷೇಕ ಮಾಡುವುದರಿಂದ ಶಾಂತಿಯು ನೆಲೆಸುವುದು.
* ಅಪಮೃತ್ಯು ಹಾಗೂ ಅನಾರೋಗ್ಯದಿಂದ ಹೊರಬರಲು ಎಳ್ಳೆಣ್ಣೆಯಿಂದ ಅಭಿಷೇಕ ಮಾಡಬೇಕು.
* ಸಂತಾನ ಭಾಗ್ಯ ಪಡೆಯಲು ಹಾಗೂ ಸರ್ಪದೋಷವನ್ನು ನಿವಾರಿಸಲು ಹಸುವಿನ ಹಾಲಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು.
* ಮೊಸರನ್ನದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಹೊಟ್ಟೆಯಲ್ಲಿನ ಅಲ್ಸರ್‌ ಕಡಿಮೆಯಾಗುವುದು.
* ಚಿನ್ನದ ನೀರಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ದಾರಿದ್ರ್ಯ ಕಡಿಮೆಯಾಗುವುದರ ಜೊತೆಗೆ ಸಮೃದ್ಧಿ ನೆಲೆಸುವುದು.
* ಶಿವಲಿಂಗಕ್ಕೆ ಹಸುವಿನ ಮೊಸರಿನಿಂದ ಅಭಿಷೇಕ ಮಾಡುವುದರಿಂದ ಆರೋಗ್ಯ ಉತ್ತಮಗೊಳ್ಳುವುದು.
* ಶುದ್ಧ ಹಸುವಿನ ತುಪ್ಪದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಆರ್ಥಿಕ ಸಮೃದ್ಧಿ ನೆಲೆಸುವುದು.
* ಭಸ್ಮದಿಂದ ಶಿವಲಿಂಗಕ್ಕೆ ಮಾಡುವ ಅಭಿಷೇಕವು ಮಹಾಪಾಪಗಳನ್ನೂ ನಿವಾರಿಸುವುದು.
* ನಿಮ್ಮ ಮಗನ ಶ್ರೇಯೋಭಿವೃದ್ಧಿಗಾಗಿ ಶಿವಲಿಂಗಕ್ಕೆ ಶ್ರೀಗಂಧದ ನೀರಿನಿಂದ ಅಭಿಷೇಕ ಮಾಡಬೇಕು.

* ಹೂ-ಜಲದಿಂದ ಅಭಿಷೇಕ ಮಾಡುವುದರಿಂದ ಭೂ ಲಾಭ ಉಂಟಾಗುವುದು.
* ಬಿಲ್ವಜಲದಿಂದ ಅಭಿಷೇಕ ಮಾಡುವುದರಿಂದ ಭೋಗ- ಭಾಗ್ಯಗಳು ಲಭಿಸುವುದು.
* ರುದ್ರಾಕ್ಷೋದಕದಿಂದ ಅಭಿಷೇಕ ಮಾಡುವುದರಿಂದ ಮಹಾ ಐಶ್ವರ್ಯಗಳು ಪ್ರಾಪ್ತಿಯಾಗುವುದು.
* ಸಕಲ ಕಾರ್ಯಗಳಲ್ಲೂ ಜಯವನ್ನು ಗಳಿಸಲು ದ್ರಾಕ್ಷಿಯ ರಸದಿಂದ ಅಭಿಷೇಕ ಮಾಡಬೇಕು.
* ನವರತ್ನ ಜಲದಿಂದ ಅಭಿಷೇಕ ಮಾಡುವುದರಿಂದ ಧಾನ್ಯ ಪ್ರಾಪ್ತಿ, ಮನೆಯ ಅಭಿವೃದ್ಧಿಯಾಗುವುದು.

No comments:

Post a Comment