Sunday, 7 June 2020

ದಶೆ ಎಂದರೇನು?

ದಶೆ ಎಂದರೇನು?
ನಿನಗೆ ಆ ದಶೆ,ಈ ದಶೆ,ಈ ಭುಕ್ತಿ,ಈ ಅಂರ್ಭುಕ್ತಿ ಇತ್ಯಾದಿ ಜ್ಯೋತಿಷ್ಯರು ವಿಶ್ಲೇಷಣೆ ಮಾಡುವುದು ಗೊತ್ತಿದೆ.ಆದರೆ ದಶಾ ಎಂದರೆ ಏನು? ಗುರು ದಶೆ,ಶನಿದಶೆ,ರವಿದಶೆ ಇದೇನಾ ಅಥವಾ ಇನ್ನೇನಾದರೂ ವಿಮರ್ಷೆ ಇದೆಯೇ?
ಜಾತಕದಲ್ಲಿ ಯಾವ ಭಾವಾಧಿಪತ್ಯ ಇರುವ ಗ್ರಹನು,ನೈಸರ್ಗೀಕ ಕುಂಡಲಿಯ ಯಾವ ಅಧಿಪತ್ಯ ಇರುವವನೋ,ಗೋಚರದಲ್ಲಿ ಯಾವ ರಾಶಿಯಲ್ಲಿ ಉದಯ ಆಗ್ತಾನೋ,ಜಾತಕದ ಚಂದ್ರ ರಾಶಿಗೆ ಯಾವ ಭಾವದಲ್ಲಿ ಇರುತ್ತಾನೋ ಆ ದಿಕ್ಕಿಗೆ ಆ ಜಾತಕನ ಒಲವನ್ನು ಕೊಂಡೊಯ್ಯುತ್ತಾನೆ.ಇಲ್ಲಿ ಇದಕ್ಕೆ ವಿರುದ್ಧವಾಗಿ ನಡೆದುಕೊಂಡಾಗ ದಶಾ ದೋಷವಾಗುತ್ತದೆ. ದಶಾ ಎಂದರೆ ದಿಕ್ಕು ಎಂದರ್ಥ.
ರವಿಯು ಆಡಳಿತ,ತನುಭಾವಗಳ ಒಲವಿನ ಗ್ರಹ.
ಚಂದ್ರನು ಶೀತಕಾರಕ,ಮನೋ ಕಾರಕ,ಸೌಮ್ಯ ಸ್ವಭಾವದ ಮುಖದವನು.
ಕುಜನು ಪ್ರತಾಪಿ
ಬುಧನು ಚತುರನು
ಗುರುವು ಜ್ಞಾನಿಯು
ಶುಕ್ರನು ಕಳತ್ರ,ವೀರ್ಯ,ಅಲಂಕಾರ ಕಾರಕನು
ಶನಿಯು ಆಡಳಿತಗಾರನು.
ರಾಹುವು ಮೋಹವಾದರೆ,ಕೇತುವು ಮೋಕ್ಷ,ದುಃಖ,ನಿರ್ಲಿಪ್ತತೆ ನೀಡುವ ಗ್ರಹ.
ಜಾತಕದ ಭಾವಕ್ಕನುಗುಣವಾಗಿ ದಶಾನಾಥನ ಫಲ ಸ್ವರೂಪ ಇರುತ್ತದೆ.

No comments:

Post a Comment