Monday, 15 June 2020

ಭಗವಂತನ__ದೃಷ್ಟಿಯಲ್ಲಿ__ಯಜ್ಞ__ಭಾವನೆ__

#ಭಗವಂತನ__ದೃಷ್ಟಿಯಲ್ಲಿ__ಯಜ್ಞ__ಭಾವನೆ__
ಕೃಷ್ಣ ಅರ್ಜುನನ ಮುಂದೆ ವ್ಯಾವಹಾರಿಕ ದೃಷ್ಟಿಯಿಂದ ಮಾತನಾಡು ತ್ತಿದ್ದಾನೆ . ಸ್ವಧರ್ಮದ ದೃಷ್ಟಿಯಿಂದ ಮಾತನಾಡುತ್ತಿದ್ದಾನೆ . ದೃಷ್ಟಿ ಯಿಂದ ಮಾತನಾಡುತ್ತಿದ್ದಾನೆ . ಕೀರ್ತಿ ದೃಷ್ಟಿಯಿಂದ ಮಾತನಾಡು ತ್ತಿದ್ದಾನೆ . ಲಾಭದ ದೃಷ್ಟಿಯಿಂದ ಮಾತನಾಡುತ್ತಿದ್ದಾನೆ . ಈಗ ಕರ್ಮ ಯೋಗದ ದೃಷ್ಟಿಯಿಂದ ಮಾತನಾಡುತ್ತಿದ್ದಾನೆ . ಅಂತೂ ಕೃಷ್ಣ ಹೇಗಾ ದರೂ ಮಾಡಿ ಅರ್ಜುನನ ಕೈಯಲ್ಲಿ ಯುದ್ಧ ಎಂಬ ಕರ್ಮವನ್ನು ಮಾಡಿಸಬೇಕಾಗಿದೆ ಎಂಬುದನ್ನು ನಾವು ಅರಿಯಬೇಕು 

.ಅರ್ಜುನನಿಗೆ ಈಗಾಗಲೇ ವಿಷಾದ  ಪರೀಕ್ಷೆಯಾಗಿದೆ . ನೋಡಿ ಇದುವರೆಗೆ ಅರ್ಜುನ ಶ್ರೀಕೃಷ್ಣನನ್ನು ಸಖ ಎಂದು ಕರೆಯುತ್ತಿದ್ದ . ತನ್ನ ಸಾರಥಿಯನ್ನಾಗಿ ಮಾಡಿಕೊಂಡಿದ್ದ . ಅವನನ್ನು ತನ್ನ ಪರಮ ಆಪ್ತನಂತೆ ಕಾಣುತ್ತಿದ್ದ . ಆದರೆ ಶ್ರೀಕೃಷ್ಣನ ಮೇರು ಸದೃಶ ವ್ಯಕ್ತಿತ್ವವೇ ಇವನಿಗೆ ಪರಿಚಯವಿರಲಿಲ್ಲ . ಈ ಕುರುಕ್ಷೇತ್ರದ ಯುದ್ಧರಂಗದಲ್ಲಿ ತಾನೆಷ್ಟು ಕೆಳಗೆ ಇರುವವನು , ಈ ಶ್ರೀ ಕೃಷ್ಣ ಎಷ್ಟು ಮಹಿಮೋನ್ನತ ವ್ಯಕ್ತಿ ಎಂಬುದು ಅವನಿಗೆ ಅರ್ಥವಾಯಿತು . ಜೀವನದಲ್ಲಿ ನಮ್ಮ ಯೋಗ್ಯತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಒಂದು ಅವಕಾಶ ಬೇಕು 

ಇಲ್ಲಿ ಒರೆಗಲ್ಲಿನ ಮೇಲೆ ತಿಕ್ಕಿ ನೋಡಿದಾಗ ತಾನೇ ಅರ್ಥವಾಗುವುದು ಲೋಹ ದಲ್ಲಿ ಎಷ್ಟು ಚಿನ್ನವಿದೆ ಎಂಬುದು . ಗಾಳಿಗೆ ತೂರಿದಾಗ ತಾನೇ ಜೊಳ್ಳು ಹೋಗುವುದು , ಕಾಳು ಉಳಿಯುವುದು . ಅರ್ಜುನನ ಜೀವನ ವಿಷಾದದ ಬಿರುಗಾಳಿಗೆ ಸಿಕ್ಕಿ ಹಾರಿಹೋಗುತ್ತಿದೆ . ಶ್ರೀಕೃಷ್ಣನಾದರೋ ಆ ಸಮಯದಲ್ಲಿ ಮಂದರ ಪರ್ವತದಂತೆ ನಿಂತಿರುವನು . ಇದನ್ನು ನೋಡಿದಾಗಲೇ ಅರ್ಜುನ ಹೀಗೆ ಹೇಳುತ್ತಾನೆ 

ದೈನ್ಯವೆಂಬ ದೋಷದಿಂದ ಕುಂದಿದ ಸ್ವಭಾವವುಳ್ಳವನಾಗಿ , ಧರ ವಿಷಯದಲ್ಲಿ ಮೂಢವಾದ ಮನಸ್ಸುಳ್ಳವನಾಗಿ , ನಿನ್ನನ್ನು ಪ್ರಶ್ನೆ ಮಾಡುತ್ತಿದ್ದೇನೆ . ಯಾವುದು ನನಗೆ ಶ್ರೇಯ ಸ್ಕರವೋ ಅದನ್ನು ನಿಶ್ಚಯಪೂರ್ವಕ ಹೇಳು . ನಾನು ನಿನ್ನ ಶಿಷ್ಯ : ನಿನಗೆ ಶರಣು ಹೊಂದಿ ದ ನನಗೆ ಬೋಧಿಸು . ಇಲ್ಲಿ ಅರ್ಜುನ ಇನ್ನು ಮೇಲೆ ಶ್ರೀಕೃಷ್ಣ ನನ್ನು ತನ್ನ ಸಖ ಎಂದು ಕರೆಯುವುದಿಲ್ಲ , ನಾನು  ಶಿಷ್ಯ ಎಂದು ಹೇಳುತ್ತಾನೆ . 

ನಾನು ನಿನ್ನಲ್ಲಿ ಶರಣಾಗಿದ್ದೇನೆ ಎನ್ನುತ್ತಾನೆ . ನನಗೆ ಶ್ರೇಯಸ್ಸಿನ ದಾರಿಯನ್ನು ತೋರು ಎಂದು ಬೇಡುತ್ತಾನೆ . ಯಾವಾಗ ಒಬ್ಬ ತನ್ನ ಶಿಷ್ಯನಾಗುತ್ತಾನೆಯೋ ಆಗಲೇ ಗುರು ಶಿಷ್ಯನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು , ಅದಕ್ಕೆ ಮುಂಚೆ ಅಲ್ಲ , ಸಖನಾದ ಅರ್ಜುನ ನನ್ನು ಶಿಷ್ಯನ ಸ್ಥಾನದಲ್ಲಿ ಕೂರಿಸುವುದು ಅರ್ಜುನನ ವಿಷಾದ . ಆಗಲೇ ಭಗವಂತನ ಬೋಧನೆ ಮೊದಲಾಗಬೇಕಾದರೆ , ಅದು ಹೇಗೆ ಪ್ರಾರಂಭ ವಾಗವುದು ? ಕರ್ಮ ಯೋಗದಿಂದ ಕೃಷ್ಣ ಇದನ್ನು ಅರ್ಜುನನಿಗೆ ಬಿತ್ತರಿಸುತ್ತಿರುವವನು 

ಕೃಷ್ಣನು ಇಲ್ಲಿಯವರೆಗೂ ನಾವು ಕರ್ಮವನ್ನು ಮಾಡಿದರೆ ಜ್ಞಾನ ನಮ್ಮನ್ನು ಹಿಂಬಾಲಿಸುತ್ತೆ ಅಂತಾ ಹೇಳುತ್ತಾನೆ ಅದಕ್ಕೆ ಮೂಲವಾಗಿ ಹಿಂದಿನ ಸಂಚಿಕೆಯಲ್ಲಿ ಜಮೀನ್ದಾರ ಮತ್ತು ಆಳು ನಡುವಿನ ಮಾರ್ಮಿ ಕ ವಿವರಣಾತ್ಮಕ ವಿಶ್ಲೇಷಣೆ ನೋಡಿದ್ದೀರಿ ಇಲ್ಲಿಯವರೆಗೂ ಭಗವ ದ್ಗೀತೆಯ ಮೂಲಾರ್ಥ ವಿಷಾದದ ಮಡಿಲಲ್ಲಿ ಮಲಗಿರುವ ಅರ್ಜು ನನಿಗೆ ತಾಯಿಯಾಗಿ ಆತ್ಮದ ಬಗ್ಗೆ ಹೇಳುತ್ತಾನೆ ಜ್ಞಾನದ ಬಗ್ಗೆ ಹೇಳ್ತಾನೆ ಆತ್ಮ ಜ್ಞಾನ ಒಂದೇ ನಾಣ್ಯದ ಎರಡು ಮುಖ ಎಂಬುದಾಗಿ ತಿಳಿಸುತ್ತಾನೆ 
ಇದನ್ನು ಅಂದರೆ ಜ್ಞಾನ ಪಡೆಯಲು ಜ್ಞಾನೇಂದ್ರಿಯಗಳ ನಿಗ್ರಹಿಸುವುದು 
ಅನಿವಾರ್ಯ ಎಂದು ಹೇಳುತ್ತಾನೆ. 

ಈಗ ಮುಂದೆ ಕೃಷ್ಣ ಕರ್ಮ ಯೋಗದಲ್ಲಿ ಯಜ್ಞದ ಬಗ್ಗೆ ಹೇಳುತ್ತಾನೆ 
ಅದನ್ನು ಕೃಷ್ಣ ಅರ್ಜುನನಿಗೆ ಈ ರೀತಿಯಾಗಿ ಹೇಳುವನು ನೋಡು ಅರ್ಜುನ ಆರಂಭದಲ್ಲಿ ಎಲ್ಲಾ ಜೀವಿಗಳ ಒಡೆಯನು ಯಜ್ಞಗಳ ಜೊತೆ ಗೆ ಸಕಲ ಸಂತತಿಗಳನ್ನು ಸೃಷ್ಟಿಸಿ ಅವರಿಗೆ "ಈ ಯಜ್ಞದಿಂದ ಸುಖ ವಾಗಿರಿ, ಇದನ್ನು ನಡೆಸಿ ಅಪೇಕ್ಷಿತವಾದದ್ದೆಲ್ಲಾ ಸಿದ್ಧಿಸಿಕೊಂಡು ಸಮೃದ್ಧ ರಾಗಿ ಮುಕ್ತಿಸಾಧನೆ ಮಾಡಿರಿ" ಎಂದು ಹೇಳಿದನು ಈ ಯಜ್ಞಗಳಿಂದ ದೇವತೆಗಳು ಸಂತೋಷಪಟ್ಟು ನಿಮ್ಮನ್ನು ಸಂತೋಷ ಪಡಿಸುವರು. ಹೀಗೆ ಒಬ್ಬರು ಮತ್ತೊಬ್ಬರನ್ನು ಸಂತೋಷಪಡಿಸಿ ಉತ್ಕೃಷ್ಟವಾದ ಶ್ರೇಯಸ್ಸನ್ನು ಹೊಂದುವಿರಿ

ಭಗವದ್ಗೀತೆಯಲ್ಲಿ ಬರುವ ಒಂದು ಅತ್ಯಂತ ಶ್ರೇಷ್ಟ ಭಾವನೆ ಯಜ್ಞ , ಶ್ರೀಕೃಷ್ಣ ಅರ್ಜುನನಿಗೆ ಯಜ್ಞದೃಷ್ಟಿ ಅದರ ಭಾವನೆಯನ್ನು ವಿಸ್ತರಿಸಿ ಇಡೀ ಬ್ರಹ್ಮಾಂಡವೇ ಹೇಗೆ ಯಜ್ಞದ ಭಾವನೆಯ ಮೇಲೆ ನಿಂತಿದೆ ' ಅನ್ನುವುದನ್ನು ಇಲ್ಲಿ ಹೇಳುತ್ತಾನೆ ಕೃಷ್ಣನ ಪ್ರಕಾರ ದಕ್ಷ ಪ್ರಜಾಪತಿ ಯಜ್ಞಗಳೊಂದಿಗೆ ಪ್ರಜೆಗಳನ್ನು ಸೃಷ್ಟಿಸಿ , ಪ್ರಜೆಗಳಿಗೆ ನೀವು ಯಜ್ಞದಿಂದ ವೃದ್ಧಿ ಯಾಗಿ , ಅದು ನಿಮ್ಮ ಬಯಕೆಗಳನ್ನು ಈಡೇರಿಸುವ ಕಾಮಧೇನುವಾಗಲಿ " ಎನ್ನುವನು .

ಭಗವಂತನ ಹತ್ತಿರವೇ ಕುಸಿದು ನಿಂತಿದ್ದ ಅರ್ಜುನನನ್ನು ಅರ್ಜುನನ ನೆಪದಲ್ಲಿ ನಮ್ಮನ್ನು ಮೇಲೆತ್ತಲು , ಯಜ್ಞ ಭಾವನೆ ಎಂಬುದನ್ನು ವಿವರಿಸುವನು . ಸೃಷ್ಟಿಯ ಆದಿಯಲ್ಲಿ ಭಗವಂತನು ಜೀವಿಗಳನ್ನು ಸೃಷ್ಟಿಸುವಾಗಲೇ ಯಜ್ಞವನ್ನು ಸೃಷ್ಟಿಸುವನು , ಎಂದು ಹೇಳುತ್ತದೆ . ಭಗವದ್ಗೀತೆ ನಾವುಗಳು ಬೆಳೆಯಬೇಕು , ವೃದ್ಧಿಯಾಗಬೇಕು . ಹಾಗೆ ಆಗಬೇಕಾದರೆ ಕೃಷ್ಣ ಒಂದು ಮಾರ್ಗ ಭಾವನೆಯನ್ನು ತೋರುತ್ತಾನೆ . ಆ ಭಾವನೆಯೇ ಯಜ್ಞದ ಭಾವನೆ 

ಇದನ್ನು ಸಹ ನಾವು ಅರ್ಥ ಮಾಡಿಕೊಂಡು ಇದನ್ನು ನಮ್ಮ ಮನಸ್ಸಿ ನಲ್ಲಿಟ್ಟುಕೊಂಡು ನಮ್ಮ ಪಾಲಿನ ಕರ್ತವ್ಯಗಳನ್ನು ಮಾಡಬೇಕು 
ಆಗ ಯಾವ ವ್ಯಕ್ತಿಯಾಗಲೀ , ವ್ಯಕ್ತಿಗಳ ಸಮುದಾಯದ ಸಮಾಜ ವಾಗಲೀ ಅಭಿವೃದ್ಧಿಯಾಗುವುದು . ಅದನ್ನು ಪ್ರಪಂಚದಲ್ಲಿ ಯಾವು ದೂ ನಿರ್ನಾಮ ಮಾಡು ವುದಕ್ಕೆ ಆಗುವುದಿಲ್ಲ . ಒಂದು ಜನಾಂಗದ ಶಕ್ತಿ ಕೇಂದ್ರವೇ ಈ ಯಜ್ಞದ ಭಾವನೆಯಲ್ಲಿದೆ .ಎಂದು ಹೇಳುತ್ತಾ 

ಅರ್ಜುನ ಜೀವನದ ವಿವಿಧ ಅವಶ್ಯಕತೆಗಳನ್ನು ಖಂಡಿತ ವಾಗಿ ಯೂ ಯಜ್ಞದಾಚರಣೆಯಿಂದ  ದೇವತೆಗಳು ನಿಮಗೆ ನೀಡುವರು, ಅವರಿಂದ ಕೊಟ್ಟ ವಸ್ತುಗಳನ್ನು ದೇವತೆಗಳಿಗೆ ಅರ್ಪಿಸದೆ ಅನು ಭವಿಸುವವನು ನಿಜವಾಗಿಯೂ ಕಳ್ಳನೇ ಯಜ್ಞಾ ಚರಣೆಯ ಆಹಾರವನ್ನು ಸ್ವೀಕರಿಸಿದ ಭಗವಂತನ ಭಕ್ತರು ಬಿಡುಗಡೆ ಹೊಂದುವರು. ಇಂದ್ರಿಯ ತೃಪ್ತಿಗಾಗಿ ಆಹಾರವನ್ನು ಸಿದ್ಧಪಡಿ ಸುವವರು ಘೋರ ಪಾಪವನ್ನೇ ಊಟ ಮಾಡುವರು

ಯಜ್ಞಾ ಆಚರಣೆಯ ಬಗ್ಗೆ ಕೃಷ್ಣನ ಮಾರ್ಮಿಕ ವಿವರಣೆ :

ಕೃಷ್ಣನ ಪ್ರಕಾರ ಯಜ್ಞದ ಭಾವನೆ ಇದನ್ನು ಮಾರ್ಮಿಕವಾಗಿ ವಿವರಿಸಿ ಹೇಳುವುದಾದರೆ ಸೃಷ್ಟಿಯ ಪ್ರಾರಂಭದಲ್ಲಿ ದಕ್ಷ ಪ್ರಜಾ ಪತಿ ಎಂದರೆ ಮೂಲ ಭಗವಂತನು ಪ್ರಜೆಗಳನ್ನು ಸೃಷ್ಟಿ ಮಾಡಿ ದಾಗ ಜೊತೆ ಜೊತೆ ಯಲ್ಲಿಯೇ ಯಜ್ಞವನ್ನು ಸೃಷ್ಟಿ ಮಾಡಿದನು . ಯಜ್ಞ ಎಂದರೆ ಸಮಷ್ಟಿ ಯ ಜೀವನಕ್ಕೆ ವ್ಯಷ್ಟಿ ಮಾಡುವ ಕ್ರಿಯೆಗಳು . ನಮ್ಮ ಸಮಾಜ ನಿಂತಿ ರುವುದೇ ಈ ಆಧಾರದ ಮೇಲೆ ಒಂದು ಸಂಸಾರ ನಿಂತಿರುವುದು , ಊರು ಇರುವುದು , ದೇಶ ಇರುವುದು ಈ ಆಧಾರದ ಮೇಲೆ ಮನೆಯ ಯಜಮಾನ ಸಂಸಾರ ನಿರ್ವಹಣೆಗೆ ಕಷ್ಟಪಡಬೇಕು . 

ಅದನ್ನು ಚೆನ್ನಾಗಿ ಇಟ್ಟಿರುವುದಕ್ಕೆ ಅದರಲ್ಲಿರುವ ಪ್ರತಿಯೊಬ್ಬ ರಿಗೂ ಏನೇನು ಬೇಕೋ ಅದನ್ನು ಒದಗಿಸುವುದಕ್ಕೆ ದುಡಿಯ ಬೇಕು . ಅದ ರಂತೆಯೇ ಊರು ಮತ್ತು ದೇಶ , ಸಮಷ್ಟಿ ಗೆ ನಾವು ಕೊಟ್ಟರೆ ನಮಗೆ ಇದೆಲ್ಲಾ ಬರುವುದು ಯಜ್ಞವನ್ನು ಬಲ ಮಾಡಿ ದರೆ ಭಗ ವಂತನಿಗೆ ಬಲ ಬರುವುದು ಭಗ ವಂತನಿಗೆ ಬಲ ಬಂದರೆ ನಮಗೆ ಬಲ ಬರುವುದು . ಭಗವಂತನ ದೃಷ್ಟಿಯಲ್ಲಿ ಯಜ್ಞ ಎಂದರೆ ನಮ್ಮ ಪಾಲಿಗೆ ಬಂದ ಕರ್ತವ್ಯಗಳನ್ನು ಮಾಡುವುದು . 

ಆನ್ನದಿಂದ ಪ್ರಾಣಿಗಳು ಹುಟ್ಟುತ್ತವೆ . ಮಳೆಯಿಂದ ಅನ್ನ ವಾಗು ವುದು . ಯಜ್ಞದಿಂದ ಮಳೆಯಾಗುವುದು . ಕರ್ಮದಿಂದ ಯಜ್ಞ ಆಗುವುದು . ಕರ್ಮ ಬ್ರಹ್ಮದಿಂದ ಉಂಟಾಯಿತು . ಬ್ರಹ್ಮ ಅಕ್ಷರ ದಿಂದ ಆಯಿತು . ಸರ್ವವ್ಯಾಪಿಯಾಗಿರುವ ಬ್ರಹ್ಮ ಸದಾ ಯಜ್ಞ ದಲ್ಲಿ ನೆಲೆಸಿದ್ದಾನೆ ಆಹಾರವನ್ನು ತಿಂದು ಪ್ರಾಣಿಗಳು ಬೆಳೆಯು ವುದನ್ನು ನೋಡುತ್ತೇವೆ . ಆಹಾರ ಬೆಳೆಯಬೇಕಾದರೆ ಮಳೆ ಬರಬೇಕು . ಮಳೆ ಇಲ್ಲದೆ ಇದ್ದರೆ ಯಾರಿಗೂ ಆಹಾರ ಲಭಿಸು ವುದಿಲ್ಲ , ಇಡೀ ಪ್ರಾಣಿ ಪ್ರಪಂಚವೇ ತನ್ನ ಆಹಾರಕ್ಕೆ ಮಳೆಯನ್ನು ಎದುರು ನೋಡಬೇಕಾಗಿದೆ . ಈ ಮಳೆ ಯಜ್ಞದಿಂದ ಆಗುವುದು ಎನ್ನುವನು ಶ್ರೀಕೃಷ್ಣ , 

ಇಲ್ಲಿ ನೋಡಿ ಎಲ್ಲಿಂದ ಎಲ್ಲಿಯವರೆಗೂ ಲಿಂಕ್ ಕೊಡೊತ್ತಾ ಹೋಗುವನು ಕೃಷ್ಣ ಭಗವದ್ಗೀತೆ ಕಥೆಯಲ್ಲ ಕಥೆಯನ್ನು ಮೀರಿ ಸಿದ್ದು ಅಂದರೆ ಇದು ಮಹಾಕಥೆ ಲಿಂಕ್ ಹೇಗೆ ಬೆಳೆಯುತ್ತಾ ಹೋಗುವುದು ನೋಡಿ ವಿಷಾದ, ಆತ್ಮ ಜ್ಞಾನ ಇಂದ್ರಿಯ ಕರ್ಮ ಯಜ್ಞ,ಭಾವನೆ ಸರ್ವ ಸೃಷ್ಟಿಗೆ ನಾಂಧಿ ಭೌತಿಕ ದೇಹಗಳು ಧಾನ್ಯದಿಂದ ಬೆಳೆಯುತ್ತದೆ. ಮಳೆಯಿಂದ ಆಹಾರ ಧಾನ್ಯಗಳ ಉತ್ಪತ್ತಿಯು. ಯಜ್ಞಾಚರಣೆಯಿಂದ ಮಳೆಯು ಸಾಧ್ಯವಾಗುತ್ತದೆ ಮತ್ತು ಯಜ್ಞವು ನಿಯತ ಕರ್ಮಗಳಿಂದ ಹುಟ್ಟುತ್ತದೆ ಕರ್ಮವು ವೇದಗಳಿಂದ ಉತ್ಪತ್ತಿಯಾಗಿದೆ ಎಂದು ನೀನು ತಿಳಿ. ವೇದಗಳು ಪರಬ್ರಹ್ಮನಿಂದ ಸಾಕ್ಷಾತ್ತಾಗಿ ವ್ಯಕ್ತವಾಗಿವೆ. ಆದ್ದರಿಂದ ಸರ್ವ ವ್ಯಾಪಿಯಾದ ಪರಬ್ರಹ್ಮನು ಶಾಶ್ವತವಾಗಿ ಯಜ್ಞಕರ್ಮಗಳಲ್ಲಿ ನೆಲೆಸಿದ್ದಾನೆ

ಅರ್ಜುನ ! ವೇದಗಳಿಂದ ಸ್ಥಾಪಿತವಾದ ಈ ಯಜ್ಞಚಕ್ರವನ್ನು ಯಾರು ಜೀವನದಲ್ಲಿ ಅನುಸರಿಸುವುದಿಲ್ಲವೋ ಅವನದು ಪಾಪಭರಿತ ಬದುಕು. ಇಂದ್ರಿಯ ತೃಪ್ತಿಗಾಗಿಯೇ ವ್ಯರ್ಥವಾಗಿ ಬದುಕುತ್ತಾನೆ ಯಾವ ಮನುಷ್ಯನು ಆತ್ಮನಲ್ಲಿಯೇ ಸುಖ ಕಂಡುಕೊಳ್ಳುವನೋ, ಆತ್ಮನಲ್ಲೇ ತೃಪ್ತನೋ, ಆತ್ಮನಲ್ಲಿಯೇ ಸಂತುಷ್ಟನೋ ಅವನಿಗೆ ಖಂಡಿತವಾಗಿಯೂ ಯಾವ ಕರ್ತವ್ಯ ಇರುವುದಿಲ್ಲ

ಅಂತಹವನಿಗೆ (ಆತ್ಮಸಾಕ್ಷಾತ್ಕಾರ ಸಾಧಿಸಿದವನಿಗೆ) ನಿಯಮಿತ ಕರ್ತವ್ಯಗಳನ್ನು ಮಾಡುವ ಯಾವ ಉದ್ದೇಶವೂ ಇರುವುದಿಲ್ಲ, ಮಾಡದೆ ಇರಲು ಕಾರಣವೂ ಇರುವುದಿಲ್ಲ. ಇನ್ನೊಂದು ಜೀವಿಯನ್ನು ಅವಲಂಬಿಸುವ ಕಾರಣವೂ ಇರುವುದಿಲ್ಲ
ಆದ್ದ ರಿಂದ ಕರ್ಮಫಲದಲ್ಲಿ ಅನಾಸಕ್ತನಾಗಿ ಕರ್ತವ್ಯವನ್ನು ಮಾಡಬೇಕು. ಹೀಗೆ ಆಚರಿಸಿದರೆ ಪರಮೋನ್ನತಿಯನ್ನು ಹೊಂದಬಹುದು ಜನಕನಂತಹ ರಾಜರು ಕರ್ಮಗಳನ್ನು ಮಾಡುವುದರಿಂದಲೇ ಪರಿಪೂರ್ಣತೆಯನ್ನು ಹೊಂದಿದರು. ಆದ್ದರಿಂದ ಎಲ್ಲರಿಗೂ ಕೂಡ ತಿಳುವಳಿಕೆ ನೀಡುವ ಹೊಣೆಯಿಂದ ನೀನು ನಿನ್ನ ಕರ್ತವ್ಯವನ್ನು ಮಾಡಬೇಕು ಎಂದು ಹೇಳುವನು. 

ಹಿಂದಿನ__ಭಾಗದ__ಲಿಂಕ್__ಓದಲು__ಇಲ್ಲಿ__ಕ್ಲಿಕ್__ಮಾಡಿ_

https://m.facebook.com/groups/258679464702378?view=permalink&id=688652618371725 

***********ಮುಂದುವರೆಯುತ್ತದೆ********************

No comments:

Post a Comment