Monday, 15 June 2020

ಯೋಗಕ್ಷೇಮಂ ವಹಾಮ್ಯವಂ

"ಯೋಗಕ್ಷೇಮಂ ವಹಾಮ್ಯವಂ"
(ಯೋಗಕ್ಷೇಮ ದೇವರ ಹೊಣೆ)

ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಅರ್ಜುನನಿಗೆ ಹೇಳಿದ ಮಾತು: “ಯಾರು
ಏಕಚಿತ್ತದಿಂದ ನನ್ನನ್ನು ನಿರಂತರ ಉಪಾಸನೆ ಮಾಡುತ್ತಾರೋ, ಅವರ
ಸಂಪೂರ್ಣ ಯೋಗ ಕ್ಷೇಮದ ಜವಾಬ್ದಾರಿ ನನ್ನದು”,
ಅದಕ್ಕೊಂದು ಉದಾಹರಣೆ ಕಥೆ ಇದೆ ಓದಿ

ಒಂದು ಊರಿನಲ್ಲಿ ಯಾದವ ಆಚಾರ್ಯ ಎಂಬ ಹೆಸರಿನ ಒಬ್ಬ
ಗುರುಗಳು ಇದ್ದರು. ಅವರಿಗೆ ಭಗವಂತನಲ್ಲಿ ಅಪಾರ ನಂಬಿಕೆ. ಅವರು
ನಿಶ್ಚಲ ಶ್ರದ್ದೆ, ಭಕ್ತಿ, ಹಾಗು ಸಹನೆಯ ಸಾಕಾರ ಮುಾರ್ತಿಯಾಗಿದ್ದರು.
ಶ್ರೀಕೃಷ್ಣ ಅವರ ಆರಾಧ್ಯ ದೈವ.

ಅವರ ಮನೆಯೇ ಗುರುಕುಲ, ಅವರ ಮನೆಯಲ್ಲಿದ್ದ ಎಲ್ಲಾ
ವಿದ್ಯಾರ್ಥಿಗಳ ಜವಾಬ್ದಾರಿ ಗುರುಪತ್ನಿಯ ಮೇಲಿತ್ತು. ಲಕ್ಷ್ಮಿ ಇದ್ದಲ್ಲಿ
ಸರಸ್ವತಿ ಇರಲ್ಲ, ಸರಸ್ವತಿ ಇದ್ದಲ್ಲಿ ಲಕ್ಷ್ಮಿ ಇರಲ್ಲ ಅಂತ ಹೇಳುವಂತೆ,
ಆಚಾರ್ಯರಿಗೆ ಬಡತನ, ಅಲ್ಲಿ ಇಲ್ಲಿ ಸಿಕ್ಕ ಸಹಾಯದಿಂದ
ಜೀವಿಸುತ್ತಿದ್ದರು, ಗುರುಕುಲ ನಡೆಸುತ್ತಿದ್ದರು.

ಆಚಾರ್ಯರಿಗೆ ಭಗವದ್ಗೀತೆ ಬಹಳ ಪ್ರೀತಿಯದ್ದು.
“ಅನನ್ಯಾಶ್ಚಿಂತಯಂತಾ ಮಾಂ ಯೇ ಜನಾಃ ಪರ್ಯುಪಾಸತೇ।
ತೇಷಾಂ ನಿತ್ಯಾಭಿಯುಕ್ತಾನಾಂ ಯಾಗಕ್ಷೇಮಂ ವಹಾಮ್ಯಹಮ್|
“ಯಾವ ಜನರು ಅನನ್ಯರಾಗಿ ನನ್ನನ್ನು ಧ್ಯಾನಿಸುತ್ತಾ ನನ್ನ ಉಪಾಸನೆ
ಮಾಡುತ್ತಾರೆಯೋ ಆ ಭಕ್ತರ,ಅಂತಹ ನಿತ್ಯಯುಕ್ತ ಭಕ್ತರ
ಯೋಗ ಕ್ಷೇಮವನ್ನು ನಾನು ವಹಿಸಿ ಕೊಳ್ಳುತ್ತೇನೆ.

(9.22)(ರಾಜ
ವಿದ್ಯಾಯೋಗ,ಭಗವದ್ಗೀತೆ- 9ನೇ ಅಧ್ಯಾಯ, ಶ್ಲೋಕ 22).
ಒಂದು ದಿನ ಆಚಾರ್ಯರ ಪತ್ನಿ ಅವರಿಗೆ ಹೇಳುತ್ತಾಳೆ: “ಸ್ವಾಮಿ,
ಮನೆಯಲ್ಲಿ ಒಂದು ಅಕ್ಕಿ ಕಾಳು ಇಲ್ಲ. ಬಿಡಿ ಕಾಸು ಇಲ್ಲ. ನಮಗೆ
ಉಪವಾಸ ಮಾಡಿ ಅಭ್ಯಾಸವಾಗಿದೆ. ಆದರೆ ಈ ಮಕ್ಕಳ ಊಟಕ್ಕೆ
ಏನು ಮಾಡುವುದು? ಮಕ್ಕಳು ಹಸಿವಿನಿಂದ ಕಂಗೆಡುವುದನ್ನು ನನ್ನಿಂದ
ನೋಡಲಾಗುತ್ತಿಲ್ಲ.

 ನಿಮಗೆ ಊರಲ್ಲಿ ಒಳ್ಳೆಯ ಹೆಸರು ಇದೆ.
ಅಂಗಡಿಯವನಿಂದ ಸಾಲವಾಗಿ ಒಂದಿಷ್ಟು ಅಡುಗೆ ಸಾಮಾನು
ತರಿಸಬಾರದೆ?”

ಆಚಾರರು ಎಂದು ಪರರತ್ತ ಕೈ ಚಾಚಿದವರಲ್ಲ. ಒಡನೆ ಪೂಜಾ
ಕೋಣೆಗೆ ಹೋಗಿ ಶ್ರೀಕೃಷ್ಣನ ಮಾರ್ತಿಯ ಮುಂದೆ ಕುಳಿತರು.

ಭಗವದ್ಗೀತೆಯಲ್ಲಿಯ 9ನೇ ಅಧ್ಯಾಯದಲ್ಲಿರುವ “ಯೋಗಕ್ಷೇಮಂ
ವಹಾಮ್ಯಹಮ್” ಶ್ಲೋಕವನ್ನು ಹಲಬಾರಿ ಓದಿದರು. ಕಣ್ಣೀರು
ಸುರಿಸುತ್ತಾ, “ಶ್ರೀ ಕೃಷ್ಣಾ, ಇಷ್ಟು ದಿನ ನಮ್ಮನ್ನು ಕಾಪಾಡಿದೆ. ಇಂದು
ನಮ್ಮ ಕೈ ಬಿಟ್ಟೆಯಾ? ನಿನ್ನ ವಾಗ್ದಾನ ಮರೆತೆಯಾ?” ಅಂತ ಹೇಳುತ್ತಾ
ಲೇಖನಿ ಹಿಡಿದರು, 

ಒಂದು ಘಳಿಗೆ ಅವರ ನಂಬಿಕೆ, ಸಹನೆ ತಪ್ಪಿತು. ಆ
ಲೇಖನಿಯಿಂದ ಆ ಶ್ಲೋಕವನ್ನು ಗೀಚಿದರು. ಪುಸ್ತಕ ಮುಚ್ಚಿ
ಮನೆಯಿಂದ ಹೋರಟರು. 

ಅವರ ಪತ್ನಿ, “ರೀ, ಅಂಗಡಿಯವನಿಗೆ
ಅಡುಗೆ ಸಾಮಾನು ಕಳುಹಿಸಲು ಹೇಳಲು ಮರೆಯಬೇಡಿ” ಅಂದಳು.

ಆಚಾರ್ಯರು ಅನ್ಯಮನಸ್ಕರಾಗಿ ಆ ಅಂಗಡಿಯ ಎದುರಿನಲ್ಲೇ ಹಾದು
ಹೋಗುತ್ತಿರುವಾಗ ಅಂಗಡಿಯವನು ಅವರನ್ನು ಕರೆದು, “ಬನ್ನಿ
ಸ್ವಾಮೀ, ಸಾಮಾನು ಬೇಕಿತ್ತಾ? ಚೀಟಿ ಕೊಡಿ. ನಮ್ಮ ಹುಡುಗನ
ಮೂಲಕ ಕಳುಹಿಸಲಾ ಅಂದ. ಆಚಾರ್ಯರು “ ಇಲ್ಲ,ಸ್ವಾಮಿ, ಆ
ಭಗವಂತನ ಕೃಪೆಯಿಂದ ಬೇಕಾದ್ದೆಲ್ಲ ಮನೇಲಿದೆ. ನಿಮ್ಮ
ಮನೆಯಲ್ಲಿ ಎಲ್ಲಾ ಸೌಖ್ಯವೇ?ಅಂತ ಮಧುರ ಮಾತುಗಳನ್ನಾಗಿ ಮುಂದೆ
ಹೋದರು. 

ಊರ ಹೊರಗಿನ ಹಳೆಯ ಶ್ರೀಕೃಷ್ಣ ದೇವಾಲಯದಲ್ಲಿ
ದೇವರ ಮಾರ್ತಿ ಎದುರು ಕುಳಿತರು.. ದುಗುಡದಿಂದ ಯಾಚಿಸಿದರು:

“ಕೃಷ್ಣ, ಎಂತಹ ದುಸ್ಥಿತಿ ಇತ್ತೆಯಪ್ಪಾ, ಮಕ್ಕಳಿಗೆ ಊಟ
ಕೊಡಲಾರದಂತಾಯಿತಲ್ಲಾ? ಇದೇನಾ ನಿನ್ನ ವಾಗ್ದಾನ?” ಅಂತ ಮನ
ತುಂಬಿ ಅತ್ತರು.

ಧ್ಯಾನದಲ್ಲಿ ಕುಳಿತವರು ಎಚ್ಚೆತ್ತಾಗ ಸಂಜೆಯಾಗಿತ್ತು!
ಮಕ್ಕಳು ಹಸಿವಿನಿಂದ ಕಂಗೆಟ್ಟಿರಬಹುದು ಅಂತ ಯೋಚಿಸುತ್ತ
ಸರಸರನೆ ಮನೆಯ ಕಡೆಗೆ ಹೊರಟರು. ಮನೆಯ ಹತ್ತಿರ ಬಂದಾಗ

ವಿದ್ಯಾರ್ಥಿಗಳು ಆಟವಾಡುತ್ತಿದ್ದಾರೆ! ಅಡುಗೆ ಮನೆಯಿಂದ ಸುವಾಸನೆ
ಬರುತ್ತಿದೆ.ಇವರಿಗೆ ಆಶ್ಚರ್ಯ, ಅಷ್ಟರಲ್ಲಿ ಅವರ ಪತ್ನಿ ಹೊರಗೆ ಬಂದು,
“ಏನು ಸ್ವಾಮಿ ಎಲ್ಲಿಗೆ ಹೋಗಿದ್ದಿರಿ? ನಿಮಗಾಗಿ ಮಕ್ಕಳು ತುಂಬಾ
ಕಾದರು. ಕೊನೆಗೆ ನಾನೆ ಒತ್ತಾಯಿಸಿ ಮಕ್ಕಳಿಗೆ ಊಟ ಬಡಿಸಿದೆ”
ಎಂದಳು.

ಆಚಾರ್ಯರು “ಅಡುಗೆ ಸಾಮಾನು ಎಲ್ಲಿಂದ ಬಂತು?” ಅಂತ
ಕೇಳಿದರು. “ನೀವೇ ಅಂಗಡಿಯವನಿಗೆ ಹೇಳಿ ಸಾಮಾನು ಕಳಿಸಿದಿರಲ್ಲ?
ಇನ್ನು ಮೂರು ತಿಂಗಳು ಚಿಂತೆಯಿಲ್ಲ. ಮರೆತು ಬಿಟ್ರ? 

ಆದರೆ ನೀವು
ಏಕೆ ಅಷ್ಟೋಂದು ನಿರ್ದಯ ಯಾಕದ್ದೀರಿ. ಅಂಗಡಿ ಹುಡುಗ
ಮಾತನಾಡಲಿಲ್ಲ. ಯಾಕಪ್ಪ ಅಂತ ಕೇಳಿದೆ. ಆತ ಬಾಯಿ ತೆರದಾಗ,
ಬಾಯಿ ತುಂಬಾ ರಕ್ತ.’ ಸಾಮಾನು ಕಳುಹಿಸಲಿಲ್ಲ ಅಂತ ನೀವು
ಲೇಖನಿಯಿಂದ ಅವನ ನಾಲಿಗೆ ಮೇಲೆ ಗೀಚಿದರಂತೆ. ಇನ್ನು ಈ ತರಹ
ಮಾಡಬೇಡಿ.”ಅಂದಳು.

ಆಚಾರಿಗೆ ಮಹದಾಶ್ಚರ್ಯವಾಯಿತು. ಮೈಯಲ್ಲಿ ವಿದ್ಯುತ್ ಸಂಚಾರದ
ಅನುಭವ. ಬೆಳಗ್ಗಿನಿಂದ ನಡೆದ ಘಟನೆಗಳು ಕಣ್ಮುಂದೆ ಬಂದವು.
ಸರಸರನೆ ಪೂಜಾ ಕೋಣೆಗೆ ಹೋಗಿ – ಶ್ರೀ ಕೃಷ್ಣ ಮುಾರ್ತಿಯ ಎದುರು
ಕುಳಿತು ಭಗವದ್ಗೀತೆಯ ಪುಸ್ತಕ ತೆರೆದರು. 

9ನೇ ಅಧ್ಯಾಯದ
” ಯೋಗ ಕ್ಷೇಮಂ ವಹಾಮ್ಯಹಂ” ಶ್ಲೋಕದ ಪುಟ ತೆರೆದರು, ಅಲ್ಲಿ
ಅವರು ಲೇಖನಿಯಿಂದ ಗೀಚಿದ ಜಾಗದಲ್ಲಿ ರಕ್ತದ ಕಲೆಗಳು!
ಆಚಾರ್ಯರಿಗೆ ವಿಚಿತ್ರ ಅನ್ನಿಸಿತು, ” ಕೃಷ್ಣಾ, ನನ್ನಿಂದ ತಪ್ಪಾಯಿತು.
ಒಂದು ಕ್ಷಣ ನನ್ನ ಶ್ರದ್ಧೆ, ನಂಬಿಕೆ, ಕಳೆದು ಕೊಂಡೆನಪ್ಪಾ, ನಿನ್ನ
ವಾಗ್ದಾನವನ್ನೇ ಪ್ರಶ್ನಿಸಿದೆ. ಮತ್ತೆ ಹೀಗಾಗದಂತೆ ವಾಗ್ದಾನ ಮಾಡುತ್ತೇನೆ.
ಈ ಒಂದು ಸಲ ನನ್ನನ್ನು ಕ್ಷಮಿಸಪ್ಪ ಎಂದು, ಕಣ್ಣೀರಿನ ಧಾರೆ ಎರೆದರು.

ಆ ಕಣ್ಣೀರು “ಯಾಗಕ್ಷೇಮಂ ವಹಾಮ್ಯಹಂ” ನ ಮೇಲೆ ಅವರು
ಲೇಖನಿಯಿಂದ ಉಳಿದ ಕಡೆ ಬಿದ್ದ, ರಕ್ತದ ಕಲೆಗಳ ಆಳಸಿ ಹೋದವು!

ಆಚಾರ್ಯರ ದೇವರ ಮೇಲಿನ ಪ್ರೀತಿಯು ಭಕ್ತಿ, ಶ್ರದ್ಧೆಯ ಉತ್ತಮ
ನಿರ್ದಶನ, .
ಅವರ ಯೋಗಕ್ಷೇಮದ ಜವಾಬ್ದಾರಿಯನ್ನು ಶ್ರೀಕೃಷ್ಣ ಹೊತ್ತಿದ್ದ.

ಬರೆದವರು ಹಿತೇಶ್ ಕೃಷ್ಣಾಚಾರ್

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

No comments:

Post a Comment