#ಕಾಮೇಂದ್ರಿಯ_ತೊರೆ_ಅರ್ಜುನ_ಕರ್ಮ__ಯೋಗ__ಸಮಾಪ್ತಿ_
ನಮ್ಮಲ್ಲಿ ಇತಿಹಾಸ ಪುರಾಣಗಳು ಮರದಂತೆ ಕಾಲ ಕಾಲಕ್ಕೆ ಬೆಳೆ ಯುತ್ತಾ ಹೋಗುವುವು . ಮೊದಲು ಜಯ ಎಂಬ ಕಾವ್ಯ ಸುಮಾರು ಹತ್ತು ಸಾವಿರ ಶ್ಲೋಕಗಳನ್ನೋಳ ಗೊಂಡಿತ್ತು . ಅನಂತರ ಇಪ್ಪತ್ತು ನಾಲ್ಕು ಸಾವಿರ ಶ್ಲೋಕದ ಭಾರತವಾಯಿತು . ಕೊನೆಗೆ ಒಂದು ಲಕ್ಷ ಶ್ಲೋಕಗಳ ಮಹಾಭಾರತವಾಯಿತು . ಸಣ್ಣ ಜಯ ಎಂಬ ಗ್ರಂಥ ಕ್ರಮೇಣ ಇತರ ಕಥೆಗಳನ್ನೆಲ್ಲ ಒಳಗೊಂಡು ಮಹಾಭಾರತವೆಂಬ ದೊಡ್ಡ ಗ್ರಂಥವಾಯಿತು .
ಹೇಗೆ ನದಿ ಮೂಲದಲ್ಲಿ ಸಣ್ಣಾದಾಗಿದ್ದರೂ ಹರಿಯುತ್ತಿರುವಾಗ ಇತರ ಉಪನದಿಗಳನ್ನು ಸೇರಿಸಿಕೊಂಡು ದೊಡ್ಡ ನದಿಯಾಗುವುದೋ ಹಾಗೆಯೇ ಜಯ ಎಂಬ ಮೂಲಗ್ರಂಥ ಹಲವು ಕಥೆಗಳು ಮತ್ತು ತತ್ತ್ವಗಳು ಇವುಗಳನ್ನೆಲ್ಲ ಸೇರಿಸಿಕೊಂಡು ಈಗ ನಮಗೆ ಕಾಣುವ ಮಹಾಭಾರತವಾಗಿದೆ .ಈಗಿರುವುದೆಲ್ಲ ಒಂದೇ ಕಾಲದಲ್ಲಿ ಹುಟ್ಟಿದ್ದಲ್ಲ . ಅನಂತರ ಸೇರಿದ್ದು ಇರಬಹುದು . ಹಾಗೆ ಅನಂತರ ಮಹಾಭಾರತ ವೆಂಬ ನದಿಗೆ ಸಂಗಮ ವಾದ ಉಪನದಿ ಭಗವದ್ಗೀತೆ ಕೆಲವರು ಇದನ್ನು ಸಮರ್ಥನೆ ಮಾಡು ವುದಕ್ಕೆ ಕೆಲವು ಕಾರಣಗಳನ್ನು ಕೊಡುವರು .
ಅದೇ ಯುದ್ಧಕ್ಕೆ ಸಿದ್ಧ ನಾಗಿ ಬಂದಿರುವ ಅರ್ಜುನನಿಗೆ ಆಗಲೇ ಗೊತ್ತಿತ್ತು , ಯಾರ ಮೇಲೆ ಯುದ್ಧ ಮಾಡಬೇಕಾಗಿದೆ ಎಂಬುದು ಅವರನ್ನು ಯುದ್ಧರಂಗದಲ್ಲಿ ನೋಡಿದಾಗ ವೈರಾಗ್ಯ ಬರುವುದು ಸೋಜಿಗವಾಗಿ ಕಾಣುವುದು . ಅದಕ್ಕಿಂತ ಸೋಜಿಗವಾಗಿ ಕಾಣುವುದೇ ಶ್ರೀಕೃಷ್ಣ ನಿಧಾನವಾಗಿ ಏಳು ನೂರು ಶ್ಲೋಕಗಳಲ್ಲಿ ಗೀತೆಯ ಬೋಧನೆ ಯನ್ನು ಮಾಡುವನು ಅಬ್ಬಬ್ಬಾ ಇನ್ನು ಸ್ವಲ್ಪಹೊತ್ತಿಗೆ ಯುದ್ಧ ಶುರು ವಾಗಬೇಕಾಗಿದೆ . ಅಂತ ಹ ಸಮಯದಲ್ಲಿ ಇಂತಹ ದೀರ್ಘವಾದ ಉಪನ್ಯಾಸವನ್ನು ಕೊಡುವುದ ಕ್ಕಾದರೂ ಸಮಯವೆಲ್ಲಿದೆ ? ಅಲ್ವಾ?
ನಾನು ನನ್ನ ಕೂತುಹಲಕ್ಕೆ ಐದರಿಂದ ಆರು ಬೇರೆ ಬೇರೆ ಭಗವದ್ಗೀತೆಯ ಪುಸ್ತಕ ಓದಿರುವೆ ಇಲ್ಲಿ ವಿವರಣೆಗಳೆಲ್ಲ ಒಂದೇ ಆದರೆ ಗ್ರಂಥ ವಿಮ ರ್ಶಕರು ವಿವರಿಸಿರುವ ಅಳ ತುಂಬಾ ದೊಡ್ಡದು ನೀವೇ ಸುಮ್ಮನೆ ಅಲೋಚಿಸಿ ಏಳೂನೂರು ಶ್ಲೋಕದ ವಿವರಣೆಗೆ ಆರೂನೂರರಿಂದ ಎಂಟುನೂರು ಪುಟದ ವಿವ ರಣೆ ಕೃಷ್ಣನಿಗೆ ಇದನ್ನು ಅರ್ಜುನನಿಗೆ ಹೇಳಲು ಎಷ್ಟು ಸಮಯ ಬೇಕು ಕೆಲವು ಪುಸ್ತಕದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ನಾಲವತ್ತೈದು ನಿಮಿಷಗಳ ಬೋಧನೆ ಮಾಡುವನು ಎಂದು ಹೇಳಿರುವರು ನಾಲ ವತ್ತೈದು ನಿಮಿಷಕ್ಕೆ ಇಷ್ಟೊಂದು ವಿವರಣೆ ಕೊಡಲು ಹೇಗೆ ಸಾದ್ಯ ವಾಯಿತು ಎಲ್ಲೋ ಕೃಷ್ಣ ಅರ್ಜುನನ ತಲೆ ಮೇಲೆ ಕೈಯಿಟ್ಟು ಅರಿವಿನ ವರ ಕೊಟ್ಟು ಪಟ ಪಟ ಅಂತಾ ಅರ್ಥಮಾಡಿಸಿರಬೇಕು ಅನಿಸುತ್ತೆ....
ಬನ್ನಿ ಕರ್ಮ ಯೋಗದಿ ಕೃಷ್ಣನೆಳುವ ಮತ್ತಷ್ಟು ವಿಷಯ ತಿಳಿದು ಕೊಳ್ಳೋಣ ಅರ್ಜುನ ಶ್ರೇಷ್ಠ ನಾಯಕನನ್ನು ಜನಸಾಮಾನ್ಯರು ಅನುಸರಿಸುತ್ತಾರೆ. ಯಾವುದನ್ನು ಮಾದರಿಯಂತೆ ಆಚರಿಸುವನೋ ಅದನ್ನೇ ಲೋಕವು ಅನುಸರಿಸುತ್ತದೆ ಪಾರ್ಥ ಜನರಲ್ಲಿ ಯಾರು ಮುಂದಾಳಾಗಿದ್ದಾನೆಯೋ ನಾಯಕನೆಂದು ಪರಿಗಣಿಸಲ್ಪಟ್ಟಿರುವನೋ ಅವನು ಮಾಡಿದುದನ್ನೇ ಇತರರು ಅನುಸರಿಸುತ್ತಾರೆ .
ಮನುಷ್ಯನಲ್ಲಿ ಈ ಅನುಕರಿಸುವ ಗುಣ ಇರುವುದು . ಏಕೆಂದರೆ ಅದು ಸುಲಭ , ನಾವೇ ಒಂದು ನಿರ್ಣಯಕ್ಕೆ ಬರಬೇಕಾದರೆ ಅದು ಅತಿ ಪ್ರಯಾಸದ ಕೆಲಸ ಅದಕ್ಕಾಗಿ ತುಂಬಾ ಯೋಚಿಸಬೇಕು . ಮನಸ್ಸಿನಲ್ಲಿ ದೊಡ್ಡ ದಾಂಧಲೆ ಏಳುವುದು . ಇಷ್ಟೊಂದು ಕಷ್ಟಪಟ್ಟು ಒಂದು ನಿರ್ಣಯಕ್ಕೆ ಬಂದರೂ , ಯಾರಿಗೆ ಗೊತ್ತು ಒಂದು ವೇಳೆ ನಾನು ತಪ್ಪಾಗಿ ಇದ್ದರೂ ಇರಬಹುದು ಎಂಬ ಅನುಮಾನ ಯಾವಾಗಲೂ ನಮ್ಮನ್ನು ಕಾಡುತ್ತ ಇರುವುದು . ಅದಕ್ಕಾಗಿಯೇ ಒಬ್ಬ ದೊಡ್ಡವನನ್ನು ಅನುಸರಿಸಬೇಕು ಅವನು ಜವಾಬ್ದಾರಿಯ ಮನುಷ್ಯ , ನನಗಿಂತ ಚೆನ್ನಾಗಿ ಆ ವಿಷಯವನ್ನು ಕುರಿತು ಆಲೋಚಿಸಿರುವನು ,
ಅವನು ಎಂದಿಗೂ ತಪ್ಪುವುದಿಲ್ಲ . ಒಂದು ವೇಳೆ ಅವನು ತಪ್ಪಿದರೂ ಅವನ ಜೊತೆಯಲ್ಲಿಯೇ ತಪ್ಪು ಮಾಡುತ್ತೇವೆ . ಅವನಿಗೆ ಆದದ್ದೇ ನಮಗೆ ಆಗುವುದು ಎಂದು ಭಾವಿಸುತ್ತೇವೆ . ದೊಡ್ಡ ವ್ಯಕ್ತಿ ಯಾವುದನ್ನು ಪ್ರಮಾಣ , ಆದರ್ಶ ಎಂದು ಸ್ವೀಕರಿಸುತ್ತಾನೆಯೋ ಅದನ್ನು ಇತರರೆಲ್ಲರೂ ಸ್ವೀಕರಿಸುತ್ತಾರೆ. ಅದಕ್ಕೆ ದೊಡ್ಡ ವ್ಯಕ್ತಿತ್ವವನ್ನು ಅನುಸರಿಸಬೇಕು.
ಪಾರ್ಥ! ಮೂರು ಲೋಕಗಳಲ್ಲಿಯೂ ನನಗೆ ನಿಯತವಾದ ಕರ್ತವ್ಯ ವಿಲ್ಲ, ನಾನು ಏನನ್ನೂ ಬಯಸುವುದಿಲ್ಲ, ಪಡೆಯಬೇಕಾದುದು ಏನೂ ಇಲ್ಲ. ಆದರೂ ನಾನು ನಿಯಮಿತ ಕರ್ತವ್ಯಗಳಲ್ಲಿ ತೊಡಗಿದ್ದೇನೆ
ಆದರೆ ಪಾರ್ಥ! ನಾನು ನಿಯಮಿತ ಕರ್ಮಾಚರಣೆಯಲ್ಲಿ ನಿರತ ನಾಗದಿದ್ದರೆ ಮನುಷ್ಯರೆಲ್ಲರೂ ನನ್ನ ಮಾರ್ಗವನ್ನು ಅನುಸರಿಸುತ್ತಾರೆ
ಇಲ್ಲಿ ಶ್ರೀಕೃಷ್ಣ ತನ್ನ ಜೀವನವನ್ನೇ ಇದಕ್ಕೆ ಉದಾಹರಣೆಯಾಗಿ ಕೊಡು ವನು . ಉದಾಹರಣೆ ಇಲ್ಲದಿದ್ದರೆ ಸಾಧಾರಣ ಮನುಷ್ಯ ನಂಬು ವುದಿಲ್ಲ . ಎಂಬ ಕಾರಣ ಅರ್ಜುನನ ಬುದ್ದಿಗೆ ಮತ್ತು ನಮ್ಮ ಬುದ್ದಿಗೆ ಇದು ಹಿಡಿಯುವುದಿಲ್ಲ . ಶ್ರೀಕೃಷ್ಣ ಅವತಾರ , ಅವನು ಸತ್ಯಸಂಕಲ್ಪ ಪೂರ್ಣಕಾಮ . ಅವನಿಗೆ ಯಾವ ಕೊರತೆಯೂ ಇಲ್ಲ . ಅವನು ಕರ್ಮವನ್ನು ಮಾಡಿ ನಮ್ಮಂತೆ ಪುಣ್ಯ ಸಂಪಾದಿಸಿ ಪಾಪದ ಸಾಲವನ್ನು ತೀರಿಸಬೇಕಾಗಿಲ್ಲ . ಕರ್ತವ್ಯವೆಂದರೆ ಮಾಡಲೇಬೇಕಾಗಿರುವುದು . ಅದರಿಂದ ತಪ್ಪಿಸಿಕೊಂಡು ಹೋಗುವುದಕ್ಕೆ ಆಗುವುದಿಲ್ಲ ,
ಹಾಗೆ ತಪ್ಪಿಸಿಕೊಳ್ಳುವುದು ಅಕ್ಷಮ್ಯ . ಆದರೆ ಶ್ರೀಕೃಷ್ಣ ಆ ಗುಂಪಿಗೆ ಸೇರಿಲ್ಲ . ಆದರೂ ಅವನು ಕರ್ಮದಲ್ಲಿ ನಿರತನಾಗಿರುವನು . ಕಂಸನನ್ನು ಕೊಂದಾದ ಮೇಲೆ ಶ್ರೀಕೃಷ್ಣನು ಹಲವು ಯುದ್ಧಗಳನ್ನು ಮಾಡಿದನು . ಆದರೆ ಎಂದಿಗೂ ಅವರ ಅವರ ರಾಜ್ಯವನ್ನು ತೆಗೆದುಕೊಳ್ಳಲಿಲ್ಲ . ಅದಕ್ಕೆ ಉತ್ತರಾಧಿಕಾರಿಗಳನ್ನು ಹುಡುಕಿ ಅವರನ್ನು ಕುಳ್ಳಿರಿಸಿದನು . ಕರ್ಮ ಮಾಡುತ್ತಿದ್ದರೂ ಫಲದ ಮೇಲೆ ಅಪೇಕ್ಷೆ ಇರುತ್ತಿರಲಿಲ್ಲ , ಹಾಗೆ ಕರ್ಮ ಮಾಡುವುದರಿಂದ ಲೋಕೋಪಕಾರ ವಾಗುವುದು ಎಂಬ ದೃಷ್ಟಿ ಒಂದೇ ಅವನಲ್ಲಿತ್ತು . ಇದು ದೊಡ್ಡವನ ದೊಡ್ಡತನ ಈಗ ನಮಗೆ ಮತ್ತು ಅರ್ಜುನನಿಗೆ ಕೃಷ್ಣ ದೊಡ್ಡವನು ಇವನನ್ನು ನಾವು ಜೀವನದಲ್ಲಿ ಅನುಸರಿಸಬೇಕು
ನೋಡಿ ಇಲ್ಲಿ ಈಗ ಕೌರವ ಪಾಂಡವರ ಯುದ್ಧವಾಗುತ್ತಿರುವಾಗ ಶ್ರೀಕೃಷ್ಣನಿಗೆ ಯಾರಿಂದಲೂ ಏನೂ ಲಾಭವಿಲ್ಲ . ಆದರೆ ಅವನು ಈ ಯುದ್ಧವನ್ನು ನೋಡುತ್ತಿರುವುದು ಧರ್ಮಕ್ಕೂ ಅಧರ್ಮಕ್ಕೂ ಈಗ ಒಂದು ಘರ್ಷಣೆ ಆಗುತ್ತಿದೆ ಎಂಬ ದೃಷ್ಟಿಯಿಂದ , ಅವನು ಧರ್ಮದ ಕಡೆ ವಾಲುವನು , ತಾನೇ ಕೈ ಹಿಡಿದು ಯುದ್ಧಮಾಡದೆ ಇದ್ದರೂ ಅರ್ಜುನನ ಸಾರಥಿಯಾಗುವನು . ಅರ್ಜುನ ಯುದ್ಧ ಮಾಡುವುದಿಲ್ಲ ವೆಂದರೂ ಅವನ ಮೂಲಕ ಮಾಡಿಸಲು ಯತ್ನಿಸುವನು. ಅದು ಹೇಗೆ ಅರ್ಜುನನಿಂದ ಯುದ್ದ ಮಾಡಿಸುತ್ತಾನೆ ಇದು ಎಲ್ಲರಿಗೂ ಇರುವ ದೊಡ್ಡ ಕೂತುಹಲ
ಏಯ್" ಅರ್ಜುನ ನಾನೇನಾದರೂ ವಿಧ್ಯುಕ್ತ ಕರ್ಮಗಳನ್ನು ಆಚರಿಸದಿದ್ದರೆ ಈ ಲೋಕಗಳೆಲ್ಲಾ ನಾಶವಾಗುವವು. ನಾನೇ ವರ್ಣಗಳ ಕಲಬೆರಕೆಗೆ ಕಾರಣನಾಗುತ್ತೇನೆ. ಅದರಿಂದ ನಾನೇ ಎಲ್ಲಾ ಜೀವಿಗಳ ಶಾಂತಿಯನ್ನು ನಾಶಮಾಡುವೆನು ಭರತವಂಶಜನೇ! ಅಜ್ಞಾನಿಗಳು ಹೇಗೆ ಫಲಾಸಕ್ತರಾಗಿ ಕರ್ಮವನ್ನು ಮಾಡುತ್ತಾರೋ ಹಾಗೆಯೇ ವಿದ್ವಾಂಸರು ಅನಾಸಕ್ತರಾಗಿ ಜನಸಾಮಾನ್ಯರನ್ನು ಯೋಗ್ಯಮಾರ್ಗದಲ್ಲಿ ಮುನ್ನಡೆಸಲು ಆಶಿಸಬೇಕು.
ಯಾವುದೆ ಕಾರಣಕ್ಕೂ ಕರ್ಮಫಲಕ್ಕೆ ಅಂಟಿಕೊಂಡವರ ಕೆಲಸವನ್ನು ವಿದ್ವಾಂಸನು ನಿಲ್ಲಿಸಬಾರದು, ನಿಲ್ಲಿಸಿದರೆ ಅವರ ಬುದ್ಧಿ ಭಂಗ ವಾಗುತ್ತದೆ. ವಿದ್ವಾಂಸನು ನಿರತನಾಗಿ ಅಜ್ಞಾನಿಗಳನ್ನು ಕರ್ಮಗಳಲ್ಲಿ ತೊಡಗಿಸಿ ಹೊಂದಾಣಿಕೆ ಮಾಡಿಕೊಳ್ಳಬೇಕು ಎಲ್ಲಾ ಬಗೆಯ ಚಟು ವಟಿಕೆಗಳನ್ನು ಭೌತಿಕ ಪ್ರಕೃತಿಯ ಗುಣಗಳೇ ಮಾಡುತ್ತವೆ. ಅಹಂ ಕಾರದಿಂದ ಮೂಢನು ತಾನೇ ಮಾಡುವವನೆಂದು ಭಾವಿಸುತ್ತಾನೆ
ಪಾರ್ಥ ! ಪರಮ ಸತ್ಯವನ್ನು ತಿಳಿದವನು ಇಂದ್ರಿಯ ಮತ್ತು ಅವುಗಳ ತೃಪ್ತಿಯಲ್ಲಿ ತೊಡಗುವುದಿಲ್ಲ. ಆದರೆ ಅವನಿಗೆ ಇಂದ್ರಿಯ ಗುಣಗಳ ಹಾಗು ಫಲಕ್ಕಂಟಿರುವ ಕರ್ಮಗಳ ವ್ಯತ್ಯಾಸವು ತಿಳಿದಿರುತ್ತದೆ
ಈ ರೀತಿಯಾಗಿ ಪ್ರಕೃತಿಯ ಗುಣಗಳಿಂದ ಮೂಢರಾದ ಅಲ್ಪಜ್ಞಾನಿಗಳು ಭೌತಿಕ ಕಾರ್ಯಗಳಲ್ಲಿ ನಿರತರಾಗುತ್ತಾರೆ. ನಿಜ ಜ್ಞಾನಿಗಳು ಆತ್ಮ ಸಾಕ್ಷಾ ತ್ಕಾರವನ್ನರಿಯಲು ಸೋಮಾರಿಗಳಾದ ಅವರನ್ನು ವಿಚಲಿತಗೊಳಿಸಲು ಪ್ರಯತ್ನಿಸಬಾರದು
ಆದ್ದರಿಂದ ನಿನ್ನ ಎಲ್ಲಾ ಕರ್ಮಗಳನ್ನು ನನಗೆ ಅರ್ಪಿಸಿ ಪೂರ್ಣ ಆತ್ಮಜ್ಞಾನದ ಪ್ರಜ್ಞೆಯಿಂದ, ಫಲಾಪೇಕ್ಷೆಯಿಲ್ಲದೆ, ಒಡೆತನದ ಭಾವವಿಲ್ಲದೆ, ಉತ್ಸಾಹವನ್ನು ಕಳೆದುಕೊಳ್ಳದೆ ಯುದ್ಧ ಮಾಡು
ನೋಡು ಯಾರು ನನ್ನ ಈ ಆಜ್ಞೆಗಳನ್ನು ಕರ್ತವ್ಯವೆಂದು ಅಸೂಯೆ ಯಿಲ್ಲದೆ, ಶ್ರದ್ಧೆಯಿಂದ, ತಪ್ಪದೇ ಪಾಲಿಸುತ್ತಾರೋ ಅವರೆಲ್ಲರೂ ಕರ್ಮಫಲದ ಬಂಧನದಿಂದ ಮುಕ್ತರಾಗುತ್ತಾರೆ
ಯಾರು ಅಸೂಯೆಯಿಂದ ನನ್ನ ಆಜ್ಞೆಯನ್ನು ಆಚರಿಸುವುದಿಲ್ಲವೋ ಅವರು ಮೂಢರು, ಪ್ರಜ್ಞಾರಹಿತರು, ವಿನಾಶದತ್ತ ಸಾಗುವರು ಎಂದು ತಿಳಿ ಎಲ್ಲಾ ಜೀವಿಗಳೂ ವಿದ್ವಾಂಸರೂ ತಮ್ಮ ಪ್ರಕೃತಿ ಗುಣಗಳಿಗೆ ಅನುಸಾರವಾಗಿ ನಡೆದುಕೊಳ್ಳುವರು. (ಕರ್ಮಗಳನ್ನು ಹಠಾತ್ತನೆ) ನಿಗ್ರಹಿಸಿ ಫಲವೇನು? ಮನುಷ್ಯನಾದವನು ಇಂದ್ರಿಯಗಳ ಮತ್ತು ಅವುಗಳ ವಿಷಯಗಳಲ್ಲಿ ಆಸಕ್ತಿ-ಅನಾಸಕ್ತಿಯೂ ಕೂಡ ನಿಯಂತ್ರಣಕ್ಕೆ ಒಳಗಾಗಿವೆ. ಇವುಗಳಿಗೆ ವಶನಾಗಬಾರದು. ಅವು ಖಂಡಿತವಾಗಿಯೂ (ಆತ್ಮಸಾಕ್ಷಾತ್ಕಾರಕ್ಕೆ) ಅಡ್ಡಿಯಾಗುತ್ತವೆ.
ಇತರ ಧರ್ಮವನ್ನು ಚೆನ್ನಾಗಿ ಆಚರಿಸುವುದಕ್ಕಿಂತಲೂ ತನ್ನ ನಿಯತ ಕರ್ತವ್ಯಗಳನ್ನು ತಪ್ಪಾಗಿ ಆಚರಿಸುವುದು ಉತ್ತಮವಾದುದು. ಸ್ವಧರ್ಮದಲ್ಲಿ ನಾಶವು ಇತರ ಧರ್ಮದಾಚರಣೆಗಿಂತ ಉತ್ತಮ. ಪರಧರ್ಮವು ಅಪಾಯಕಾರಿಯಾದುದು ಕೃಷ್ಣನಿಂದ ಕರ್ಮಯೋಗದ
ಬಗ್ಗೆ ಇಷ್ಟೇಲ್ಲಾ ಕೇಳಿಸಿಕೊಂಡ ಅರ್ಜುನ ಈಗ ಈ ರೀತಿ ಪ್ರಶ್ನೆ ಮಾಡುತ್ತಾನೆ.
ಅರ್ಜುನನು ಹೇಳುವನು "ಭಾವ ಮನುಷ್ಯನು ಅಪೇಕ್ಷಿಸದಿದ್ದರೂ ಯಾವುದರಿಂದ ಬಲವಂತವಾಗಿ ಪಾಪಗಳನ್ನು ಮಾಡಲು ತೊಡ ಗುತ್ತಾನೆ?" ಕೃಷ್ಣನು ಹೇಳಿದನು "ಅರ್ಜುನ ರಜೋಗುಣದಿಂದ ಹುಟ್ಟಿದ ಕಾಮವು ಕ್ರೋಧವಾಗಿ ಎಲ್ಲವನ್ನೂ ನುಂಗಿ ಹಾಕುವ, ಈ ಜಗತ್ತಿನ ಮಹಾಪಾಪಪೂರ್ಣವಾದ ವೈರಿ ಎಂದು ತಿಳಿದುಕೊ ನೋಡು ಹೊಗೆ ಯು ಬೆಂಕಿಯನ್ನು ಆವರಿಸುವಂತೆ, ಧೂಳಿನಿಂದ ಕನ್ನಡಿ ಮುಚ್ಚುವಂತೆ, ಗರ್ಭಕೋಶವು ಭ್ರೂಣವನ್ನು ಮುಚ್ಚುವಂತೆ, ಆ ಕಾಮವು ಇದೆಲ್ಲವನ್ನೂ ಆವರಿಸುತ್ತದೆ
ಅರ್ಜುನ ! ಜೀವಿಯ ಶುದ್ಧ ಪ್ರಜ್ಞೆಯನ್ನು ಅವನ ಶಾಶ್ವತ ಶತ್ರುವಾದ ಕಾಮವು ಆವರಿಸುತ್ತದೆ. ಎಂದಿಗೂ ತೃಪ್ತಿಯಿರದೆ ಅಗ್ನಿಯಂತೆ ಉರಿಯುತ್ತಿರುತ್ತದೆ ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಈ ಕಾಮದ ವಾಸಸ್ಥಾನ ಎಂದು ಹೇಳಲಾಗಿದೆ. ಕಾಮವು ಇವೆಲ್ಲವುಗಳಿಂದ ಜ್ಞಾನವನ್ನು ಆವರಿಸಿ ಭ್ರಾಂತಿಗೊಳಿಸುತ್ತದೆ
ಅರ್ಜುನ ! ಆದ್ದರಿಂದ ಪ್ರಾರಂಭದಲ್ಲೇ ಇಂದ್ರಿಯಗಳನ್ನು ನಿಯಂತ್ರಿಸಿ ಪಾಪದ ಸಂಕೇತವಾಗಿರುವ, ಜ್ಞಾನ ಮತ್ತು ಆತ್ಮಸಾಕ್ಷಾತ್ಕಾರಗಳನ್ನು ನಾಶಮಾಡುವ ಕಾಮವನ್ನು ತಡೆಹಿಡಿ ಯೋಚಿಸು ಜಡವಸ್ತುವಿಗಿಂತ ಇಂದ್ರಿಯ ಗಳು ಶ್ರೇಷ್ಠ, ಮನಸ್ಸು ಇಂದ್ರಿಯಗಳಿಗಿಂತಲೂ ಶ್ರೇಷ್ಠ. ಬುದ್ಧಿಯು ಮನಸ್ಸಿಗಿಂತ ಇನ್ನೂ ಶ್ರೇಷ್ಠ. ಯಾವನು ಬುದ್ಧಿಗಿಂತಲೂ ಶ್ರೇಷ್ಠನೋ ಅವನೇ ಪರತತ್ತ್ವನು
ಪಾರ್ಥ ! ಹೀಗೆ ಬುದ್ಧಿಗಿಂತ ಶ್ರೇಷ್ಠವಾದುದನ್ನು ತಿಳಿ. ಮನಸ್ಸನ್ನು ಸ್ಥಿರಗೊಳಿಸಿ, ಸಮಾಧಾನದ ಬುದ್ಧಿಯಿಂದ ಕಾಮದ ರೂಪದಲ್ಲಿರುವ ವೈರಿಯನ್ನು ಗೆಲ್ಲಬೇಕು ಈ ರೀತಿಯಾಗಿ ಕೃಷ್ಣನು ಕರ್ಮಯೋಗದಿ ಕರ್ಮ ಜ್ಞಾನ ಯಜ್ಞ ಭಾವನೆ ಇವುಗಳನ್ನು ಅಳವಡಿಸಿಕೊಂಡು ಕಾಮವನ್ನು ನಿಗ್ರಹಿಸಬೇಕು ಎಂದು ಅರ್ಜುನನಿಗೆ ಹೇಳುತ್ತಾನೆ ಇಲ್ಲಿಗೆ ಗೀತೆಯ ಮೂರನೇ ಆದ್ಯಾಯ ಸಮಾಪ್ತಿ....
ಹಿಂದಿನ__ಭಾಗದ__ಲಿಂಕ್__ಓದಲು__ಇಲ್ಲಿ__ಕ್ಲಿಕ್__ಮಾಡಿ_
https://m.facebook.com/groups/258679464702378?view=permalink&id=691203911449929
***********ಮುಂದುವರೆಯುತ್ತದೆ********************
No comments:
Post a Comment