ಕಂಕಣ ಸೂರ್ಯಗ್ರಹಣ ಎಂದರೇನು? :
ಸೂರ್ಯನಿಗೆ ಎದುರಾಗಿ ಚಂದ್ರ ಮತ್ತು ಭೂಮಿ ಒಂದೇ ನೇರದಲ್ಲಿ ಬಂದಾಗ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಆಗ ಸೂರ್ಯಗ್ರಹಣ ಉಂಟಾಗುತ್ತದೆ.
ಗ್ರಹಣವನ್ನು ಭೂಮಿಯಿಂದ ನೋಡುವಾಗ ಅದು ಎಷ್ಟು ಭಾಗ ಚಂದ್ರನನ್ನು ಮರೆ ಮಾಡುತ್ತದೆ ಎಂಬುದನ್ನಾಧರಿಸಿ ಗ್ರಹಣ ಖಗ್ರಾಸವೊ, ಪಾರ್ಶ್ವವೊ ಅಥವಾ ಕಂಕಣವೊ ಎಂದು ಹೇಳಲಾಗುತ್ತದೆ.
ಪ್ರಸಕ್ತ ಗ್ರಹಣದ ವಿದ್ಯಮಾನದಲ್ಲಿ ವೃತ್ತದೊಳಗಿನ ವೃತ್ತದಂತೆ ಗೋಚರಿಸುತ್ತದೆ.ಸೂರ್ಯನ ಪರಿಧಿಯ ಭಾಗ ಬೆಂಕಿಯ ಬಳೆಯಂತೆ ಕಾಣಿಸುತ್ತದೆ. ಹೀಗಾಗಿ ಇದನ್ನು ಖಗೋಳ ವಿಜ್ಞಾನ ಭಾಷೆಯಲ್ಲಿ ಕಂಕಣ ಸೂರ್ಯಗ್ರಹಣ ಎಂದು ಕರೆಯುತ್ತಾರೆ.
ಗ್ರಹಣವು ಜೂನ್ 21ರಂದು ಬೆಳಗ್ಗೆ 10:31ಕ್ಕೆ ಪ್ರಾರಂಭವಾಗಿ, ಮಧ್ಯಾಹ್ನ 2:30ಕ್ಕೆ ಕೊನೆಗೊಳ್ಳುತ್ತದೆ,
ಗ್ರಹಣವು 12:18ಕ್ಕೆ ಪೂರ್ಣ ಪರಿಣಾಮ ಬೀರುತ್ತದೆ. ಇದು ಗ್ರಹಣದ ಮಧ್ಯಕಾಲ. ಒಟ್ಟು 3 ಗಂಟೆ 33 ನಿಮಿಷಗಳ ಕಾಲ ಈ ಪ್ರಕ್ರಿಯೆಯು ನಡೆಯಲಿದೆ.
ಗ್ರಹಣ ಮೋಕ್ಷ ಮಧ್ಯಾಹ್ನ 2 ಗಂಟೆಗೆ ಇರುತ್ತದೆ. ಸೂರ್ಯಗ್ರಹಣದ ಸೂತಕದ ಅವಧಿ ಗ್ರಹಣದ ಹನ್ನೆರಡು ಗಂಟೆಗಳ ಮೊದಲು ಅಂದರೆ ಜೂನ್ 20 ರ ರಾತ್ರಿ 9:25ರಿಂದ ಪ್ರಾರಂಭವಾಗುತ್ತದೆ. ಸೂತಕದ ಅಂತ್ಯವು ಗ್ರಹಣ ಮೋಕ್ಷದೊಂದಿಗೆ ಅಂತ್ಯಗೊಳ್ಳುತ್ತದೆ.
ಸೂರ್ಯಗ್ರಹಣದ ಫಲ ಮತ್ತು ಪ್ರಭಾವಗಳು
ಜ್ಯೋತಿಷಿಗಳ ಪ್ರಕಾರ ಈ ಸೂರ್ಯಗ್ರಹಣದಿಂದಾಗಿ ಗ್ರಹಗಳು ಮತ್ತು ನಕ್ಷತ್ರಪುಂಜಗಳಲ್ಲಿನ ಬದಲಾವಣೆಗಳು ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಅಂತ್ಯವನ್ನು ಹಾಡಬಹುದು ಎನ್ನಲಾಗುತ್ತದೆ.
ಈ ಬಾರಿ ಭಾನುವಾರ ಸೂರ್ಯಗ್ರಹಣವಾದ್ದರಿಂದ ಮಳೆ, ಗೋಧಿ, ಭತ್ತ ಮತ್ತು ಇತರ ಧಾನ್ಯಗಳ ಉತ್ಪಾದನೆಯಲ್ಲಿ ಇಳಿಕೆ ಕಂಡು ಬರುತ್ತದೆ.
ಇದೇ ಸಮಯದಲ್ಲಿ ಹಸುವಿನ ಹಾಲಿನ ಉತ್ಪಾದನೆಯೂ ಕಡಿಮೆಯಾಗಬಹುದು. ಇದಲ್ಲದೇ ಪ್ರಮುಖ ದೇಶಗಳ ರಾಷ್ಟ್ರಾಧ್ಯಕ್ಷರ ಮಧ್ಯೆ ಒತ್ತಡಗಳು ಹಾಗೂ ಚರ್ಚೆ ಉಂಟಾಗಬಹುದು ಎಂದು ನಂಬಲಾಗಿದೆ. ಅದೇ ಸಮಯದಲ್ಲಿ ಈ ಗ್ರಹಣವು ವ್ಯಾಪಾರಿಗಳಿಗೆ ಒಳ್ಳೆಯದು ಹಾಗೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಗ್ರಹಣದ ಕುರಿತಾದ ನಂಬಿಕೆಗಳು
ಸೂರ್ಯಗ್ರಹಣದ ಬಗ್ಗೆ ಜನರಲ್ಲಿ ವಿಭಿನ್ನ ರೀತಿಯ ನಂಬಿಕೆಗಳಿವೆ. ಈ ಸಮಯದಲ್ಲಿ ಜನರು ಮನೆಯೊಳಗೇ ಇರುತ್ತಾರೆ ಹಾಗೂ ಯಾವ ಆಹಾರವನ್ನೂ ಸೇವಿಸುವುದಿಲ್ಲ.
ತುಳಸಿ ಎಲೆಗಳನ್ನು ನೀರು, ಹಾಲು, ಮೊಸರು, ತುಪ್ಪದಲ್ಲಿ ಹಾಕುವುದರಿಂದ ಗ್ರಹಣದ ಪರಿಣಾಮಗಳನ್ನು ತಡೆಯಬಹುದು. ಗ್ರಹಣ ಸಮಯದಲ್ಲಿ ಪೂಜೆ ಮಾಡುವುದನ್ನು ನಿಷೇಧಿಸಲಾಗಿದೆ.
ವಿಗ್ರಹಗಳನ್ನೂ ಕೂಡಾ ಮುಟ್ಟಬಾರದು. ಗ್ರಹಣ ಮೋಕ್ಷದ ನಂತರ ಸ್ನಾನ ಮಾಡಿ ಪೂಜಾ ನಂತರವೇ ಆಹಾರ ಸೇವನೆ ಮಾಡಲಾಗುತ್ತದೆ. ಗ್ರಹಣ ಸಮಯದಲ್ಲಿ ಸೂರ್ಯನನ್ನು ಪೂಜಿಸುವ ಮಂತ್ರಗಳನ್ನೂ ಪಠಿಸಲಾಗುತ್ತದೆ.
No comments:
Post a Comment