Monday, 15 June 2020

ಆಷಾಢ ಮಾಸದ ಮಹತ್ವ

ಆಷಾಢ ಮಾಸದ ಮಹತ್ವ

* ಈ ಮಾಸದಲ್ಲೇ ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು
* ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಈ ಮಾಸದಲ್ಲಿ.
* ಅನುಸೂಯದೇವಿ ಎಂಬ ಮಹಾ ಪತಿವ್ರತೆ ಈ ಮಾಸದ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದಳು.
* ಅಮರನಾಥನ ಹಿಮಲಿಂಗ ದರ್ಶನ ಪ್ರತಿ ವರ್ಷ ಈ ಸಮಯದಲ್ಲೇ ಆರಂಭವಾಗುತ್ತದೆ
* ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಆಷಾಢದಲ್ಲಿ.
* ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮೀ ಪೂಜೆಯನ್ನು ವಿಶೇಷವಾಗಿ ಆಚರಿಸುವರು. ಆ ದಿನ ಸಂಜೆ ಮನೆ ಮುಂದೆ ದೀಪ ಹಚ್ಚಿ ಇಡುತ್ತಾರೆ. ಮೈಸೂರು ಪ್ರಾಂತ್ಯಗಳಲ್ಲಿ ಈ ಆಚರಣೆ ನಡೆಯುತ್ತದೆ.

ಈ ಮಾಸದಲ್ಲೇ ಇದೆಲ್ಲಾ ಆರಂಭವಾಗಿದ್ದು..

* ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ್ದು
* ಇಂದ್ರನು ಗೌತಮರಿಂದ ಶಾಪ ಪಡೆದ. ಹಾಗೂ ಆಷಾಢದಲ್ಲಿ ನಾಲ್ಕು ಸೋಮವಾರ ಸೋಮೇಶ್ವರ ಜಯಂತಿ ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದ.
* ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ಜ್ಯೋತಿ ಭೀಮೇಶ್ವರ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.
* ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ.

ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು ಅಮೃತ ಲಕ್ಷ್ಮೀ ವ್ರತವನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ. ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವೂ ಸಹ ವಿಶೇಷವೇ ಆಗಿದೆ. ಇನ್ನೊಂದು ವಿಶೇಷ ಎಂದರೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮ ದಿನ ಬರುವುದು.

ಜೂನ್ 2020 ಹಬ್ಬಗಳು
2 ಮಂಗಳವಾರ ನಿರ್ಜಲ ಏಕಾದಶಿ
3 ಬುಧವಾರ ಪ್ರದೋಷ್‌ ವ್ರತ (ಶುಕ್ಲ)
5 ಶುಕ್ರವಾರ ಜ್ಯೇಷ್ಠ ಪೂರ್ಣಿಮಾ ವ್ರತ
8 ಸೋಮವಾರ ಸಂಕಷ್ಟ ಚತುರ್ಥಿ
14 ಭಾನುವಾರ ಮಿಥುನ ಸಂಕ್ರಾಂತಿ
17 ಬುಧವಾರ ಯೋಗಿನಿ ಏಕಾದಶಿ
18 ಗುರುವಾರ ಪ್ರದೋಷ್‌ ವ್ರತ (ಕೃಷ್ಣ)
19 ಶುಕ್ರವಾರ ಮಾಸಿಕ ಶಿವರಾತ್ರಿ
21 ಭಾನುವಾರ ಆಷಾಢ ಅಮಾವಾಸ್ಯೆ
23 ಮಂಗಳವಾರ ಜಗನ್ನಾಥ ರಥ ಯಾತ್ರೆ

ಜುಲೈ 2020 ಹಬ್ಬಗಳು

1 ಬುಧವಾರ ದೇವಶಯನಿ ಏಕಾದಶಿ , ಆಷಾಢ ಏಕಾದಶಿ
2 ಗುರುವಾರ ಪ್ರದೋಷ್‌ ವ್ರತ (ಶುಕ್ಲ)
5 ಭಾನುವಾರ ಗುರು ಪೂರ್ಣಿಮೆ , ಆಷಾಢ ಪೂರ್ಣಿಮೆ ವ್ರತ
8 ಬುಧವಾರ ಸಂಕಷ್ಟ ಚತುರ್ಥಿ
16 ಗುರುವಾರ ಕಾಮಿಕ ಏಕಾದಶಿ , ಕರ್ಕ ಸಂಕ್ರಾಂತಿ
18 ಶನಿವಾರ ಮಾಸಿಕ ಶಿವರಾತ್ರಿ , ಪ್ರದೋಷ್‌ ವ್ರತ (ಕೃಷ್ಣ)
20 ಸೋಮವಾರ ಶ್ರಾವಣ ಅಮಾವಾಸ್ಯೆ
23 ಗುರುವಾರ ಹರಿಯಾಲಿ ತೀಜ್‌
25 ಶನಿವಾರ ನಾಗ್‌ ಪಂಚಮಿ
30 ಗುರುವಾರ ಶ್ರಾವಣ ಪುತ್ರದ ಏಕಾದಶಿ

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

No comments:

Post a Comment