🌹🔔🕉🔔🌹
*||ಶ್ರೀ ವಿಷ್ಣುಸಹಸ್ರನಾಮ||*
*||श्री विष्णुसहस्रनाम||*
******************
*ಚಿಂತನೆ ॐ ನಾಮ - 429*
*भावनम् ॐ नामन् - 429*
******************
*ಬೀಜಮವ್ಯಯಮ್:*
*बीजमव्ययम्:*
******************
*ॐ श्री ಬೀಜಮವ್ಯಯಾಯ ನಮ:*
*ॐ श्री बीजमव्ययाय नमः*
****************
ಬೀಜಮವ್ಯಯಮ್: = ಭಗವಂತ.
ಬೀಜ + ಅವ್ಯಯ = ಬೀಜಮವ್ಯಯಮ್.
ಬೀಜ = ಉಗಮಸ್ಥಾನ, ಸತ್ಯ, ಕಾರಣ, ಹೇತು, ಉತ್ಪತ್ತಿ, ತತ್ವ, ಮೂಲಕಾರಣ, ಬೀಜ, ಧಾನ್ಯ, ಕಾಳು, ಹಣ್ಣಿನ ತಿರುಳು, ಅನ್ನ, ಆಹಾರ, ದೇಹದೊಳಗಿನ ಸಾರ, ಇತ್ಯಾದಿ.,
ಅವ್ಯಯ = ನಾಶವಾಗದ, ಶಾಶ್ವತವಾದ, ಖರ್ಚಿಲ್ಲದ, ವ್ಯತ್ಯಾಸಹೊಂದದ, ವ್ಯಯವಿಲ್ಲದ, ಹಾಳಾಗದ, ಶಾಶ್ವತವಾದ ಫಲವನ್ನು ಕೊಡುವ, ಅವ್ಯಯ, ವಿಕಾರ ರೂಪವನ್ನು ಹೊಂದದಿರುವ, ಇತ್ಯಾದಿ.,
ಭಗವಂತ ಎಂದೂ ವಿಕಾರಗೊಳ್ಳದ, ನಾಶವಾಗದ ಬೀಜ. ಈ ಜಗತ್ತು ಭಗವಂತನೆಂಬ ಬೀಜದಿಂದಲೇ ಹುಟ್ಟಿ ಬಂತು. ಆದರೆ ಆ ಬೀಜ ಜಗತ್ತಾಗಿ ವಿಕಾರಗೊಂಡ ಬೀಜವಲ್ಲ. ಭಗವಂತನಿಂದ ಈ ಪ್ರಪಂಚ ಅಭಿವ್ಯಕ್ತವಾಯಿತೇ ಹೊರತು ಭಗವಂತ ಪ್ರಪಂಚವಾಗಿ ರೂಪಾಂತರಗೊಂಡಿದ್ದಲ್ಲ. ಈ ಪ್ರಪಂಚ ಆತನ ಶರೀರವಲ್ಲ. ಜ್ಞಾನಾನಂದಮಯನಾದ ಭಗವಂತ ಈ ಪ್ರಪಂಚದ ಮೂಲಕಾರಣ ಹಾಗು ಧಾರಕ ಶಕ್ತಿ. ಹೀಗೆ ಅಳಿವಿರದ, ವಿಕಾರಗೊಳ್ಳದ ಜಗದ ಮೂಲ ಕಾರಣ ಭಗವಂತ "ಬೀಜಮವ್ಯಯಮ್".
ಶ್ರೀಮದ್ಭಗವದ್ಗೀತೆ: 9-18:
"ಗತಿರ್ಭರ್ತಾ ಪ್ರಭು: ಸಾಕ್ಷೀ ನಿವಾಸ: ಶರಣಂ ಸುಹೃತ್|
ಪ್ರಭವ: ಪ್ರಲಯ: ಸ್ಥಾನಂ ನಿಧಾನಂ ಬೀಜಮವ್ಯಯಮ್||"
ಈ ಜಗತ್ತಿಗೆ ನಾನೇ ಗತಿ. ಅದರ ಭರಣ ಮಾಡುವವನು, ಪ್ರಭು ಮತ್ತು ಸಾಕ್ಷಿಯು ನಾನೇ. ಜಗತ್ತಿಗೆ ನಿವಾಸಸ್ಥಾನವು, ಆಶ್ರಯದಾತನು, ಆಪ್ತನು, ಉತ್ಪತ್ತಿ-ಸ್ಥಿತಿ-ಪ್ರಳಯಕಾರನೂ, ಮತ್ತು ನಾನೇ ಶಾಶ್ವತವಾದ ಬೀಜ.
ಭಗವಂತನಿಗೆ ಅನ್ಯತಾಭಾವವು (ಭಾವಾಂತರವು) ಇಲ್ಲವಾದುದರಿಂದ ಅವನು ಜಗತ್ತಿಗೆ ನಾಶರಹಿತವಾದ ಕಾರಣನಾಗಿ ಇರುವನು. ಆದುದರಿಂದ ಭಗವಂತನನ್ನು "ಬೀಜಮವ್ಯಯಮ್" ಎಂದು ಕರೆಯುತ್ತಾರೆ.
ಜಗತ್ತಿಗೆ ಅವಿನಾಶಿಯಾದ ಕಾರಣ ಸ್ವರೂಪಿಯು;
ಜಗತ್ತಿಗೆ ನಾಶರಹಿತವಾದ ಕಾರಣನಾಗಿ ಇರುವವನು;
ಜ್ಞಾನಿಗಳಿಂದ ಹೊಂದಲ್ಪಡುವವನು;
ಶುಭವಿಧಿಗಳಿಂದ ಯುಕ್ತನಾದವನು;
ವ್ಯಾಸಾದಿರೂಪನಾದ ಯಾವನಿಂದ ಜ್ಞಾನವು ಉಂಟಾಗುತ್ತದೆಯೋ - ಅವನು;
ಕಲಿಯುಗದ ಕೊನೆಯಲ್ಲಿ ಧರ್ಮವನ್ನು ಮತ್ತೆ ಮತ್ತೆ ಬೆಳೆಸುವುದರಿಂದ ಅವಿನಾಶಿಯಾದ ಧರ್ಮಕಾರಣನು;
ವ್ಯಂಜಕನಾದವನು;
ನಾಶವಾಗದ ಮೂಲ ಕಾರಣನು;
ಜಗತ್ತಿನ ಅಭಿವ್ಯಕ್ತಿಗೆ ಕಾರಣನಾಗಿ ಇರುವವನು;
ನಿರ್ವಿಕಾರನಾಗಿ ಇರುವವನು;
ಜಗತ್ತೆಂಬ ವೃಕ್ಷಕ್ಕೆ ಬೀಜವಾಗಿ ಇರುವವನು;
ನಾಶವಾಗದ ಬೀಜದಂತಹವನು;
ಆದುದರಿಂದ ಭಗವಂತನಿಗೆ "ಬೀಜಮವ್ಯಯಮ್" ಎಂದು ಹೆಸರು.
"ಯೋ ವೈ ಕಲಿಯುಗಸ್ಯಾನ್ತೇ ಮುಹುರ್ಧರಮಪ್ರರೋಹಣಮ್|
ಕರೋತಿ ಭಕ್ತರಕ್ಷಾರ್ಥಂ ಸೋಚ್ಯತೇ ಬೀಜಮವ್ಯಯಮ್||"
ನಾಮಧೇಯಗಳನ್ನು ಚತುರ್ಥೀವಿಭಕ್ತ್ಯಂತವನ್ನಾಗಿ ಮಾಡಿ ಅವುಗಳ ಮುಂದೆ *"ನಮ:"* ಎಂಬ ಶಬ್ದವನ್ನು ಸೇರಿಸಿ ಪೂಜೆಗೂ, ಅರ್ಚನೆಗೂ ವಿನಿಯೋಗಿಸಿಕೊಳ್ಳುವಾಗ ಈ ನಾಮವನ್ನು
*"ಓಂ ಅವ್ಯಯಾಯ ಬೀಜಾಯ ನಮ:"* ಎಂದು ಪಠಿಸುವ ಪಾಠವೂ ಇರುತ್ತದೆ.
******************
ಶ್ರೀಕೃಷ್ಣಾರ್ಪಣಮಸ್ತು.
श्रीकृष्णार्पणमस्तु.
||ಸರ್ವೇ ಜನಾ: ಸುಖಿನೋ ಭವಂತು||
||सर्वे जना: सुखिनो भवंतु||
||ನಾಹಂ ಕರ್ತಾ ಹರಿ: ಕರ್ತಾ:||
||नाहं कर्ता हरि: कर्ता:||
******************
ಸಂಗ್ರಹ/संग्रह/Collection.
ವಿಜಯೇಂದ್ರ ರಾಮನಾಥ ಭಟ್.
ಶಿವಮೊಗ್ಗ. Shivamogga.
****************
*12-06-2020.*
****************
🌹🔔🕉🔔🌹
No comments:
Post a Comment