Monday, 15 June 2020

ಘೃಷ್ಣೇಶ್ವರ

ಘೃಷ್ಣೇಶ್ವರ ಶಬ್ದದ ಅರ್ಥ ಘನವಾದ ಗಟ್ಟಿಯಾದ ತುಪ್ಪದಿಂದ ಅಭಿಷೇಕ ಗೊಳ್ಳುವ ಈಶ್ವರ ಎಂದರ್ಥ. 

ತುಪ್ಪ ಕಾಯಿಸಿದಾಗ ದೃವರೂಪ ಇದ್ದರೆ ಘನಿಕೃತ ರೂಪದಲ್ಲಿ ಘನವಾಗಿ ಮಾರ್ಪಾಡು ಆಗುತ್ತದೆ. 
ಹಾಗೆ ಪರಶಿವನು  ಸಂಕುಚಿತ ಸ್ಥಿತಿಯಲ್ಲಿ ಬೇರೆ ಶಕ್ತಿಯ ವಿಕಸನ ರೂಪದಿಂದ ಮತ್ತೊಂದು ಅವಸ್ಥೆ ಪಡೆಯುವುದು ಕಾಣಬಹುದಾಗಿದೆ.  

ಸಗುಣ ( ಘನಿಕೃತ ತುಪ್ಪದಂತೆ ಸಾಧನಾ ಹಂತಗಳನ್ನುಸಂಸ್ಕಾರ ಕೊಟ್ಟಾಗ ದೃವ ರೂಪದಲ್ಲಿ )

ಗ್ರುಷ್ಮ ಹುತ್ತ ಎಂಬ ಅರ್ಥವು ಕೊಡುವುದು

ಕತೆಯ ಪ್ರಕಾರ ದಂಪತಿಗೆ ಮಕ್ಕಳಾಗದಿರಲು ಸತಿಯ ಒಪ್ಪಿಗೆ ಮೇರೆಗೆ ಪತಿ ನಾದಿನಿ ಘೃಷ್ಣೆಯನ್ನು ಮದುವೆಯಾಗುತ್ತಾನೆ.ಮಗ ಹುಟ್ಟಿ ಸಂಸಾರ ಸುಖಮಯವಾಗಿರಲು ಕಾಲಗತಿಸಿದಂತೆ ಅಕ್ಕ ಮೂಲೆಗುಂಪಾಗಿ  ಅಸೂಯೆಯಿಂದ ಆ ಮಗುವನ್ನು  ಒಂದು ಕೊಳಕ್ಕೆ ಎಸೆಯುತ್ತಾಳೆ. ನಾದಿನಿ ಮದುವೆಗೆ ಮುಂಚೆ ನೂರೊಂದು ಮಣ್ಣಿನ ಲಿಂಗ ಮಾಡಿ ಪೂಜಿಸಿ ಪ್ರತಿದಿನ ಆ ಕೊಳಕ್ಕೆ ವಿಸರ್ಜನೆ ಮಾಡುತ್ತಿರುತ್ತಾಳೆ.  ಮಗು ಕಳಕೊಂಡ ನಾದಿನಿ ಘೃಷ್ಣಾ ಶಿವನನ್ನು ಸ್ತುತಿಸುತ್ತಾಳೆ. ಮಗು ಪ್ರಾಪ್ತವಾಗುತ್ತದೆ. ಗಂಡನು  ಹಿರಿ ಹೆಂಡತಿಯ ಪಾಪ ಪರಿಹರಿಸುವಂತೆ ಶಿವನನ್ನು ಕೇಳಿಕೊಂಡಾಗ ಶಿವನು ಜ್ಯೋತಿರ್ಲಿಂಗವಾಗಿ ಧರೆಗಿಳಿಯುತ್ತಾನೆ. ಘೃಷ್ಣೇಶ್ವರ ಹೆಸರಿನಿಂದ ಪೂಜಿಸುವಂತೆ ಶಿವನ ಆಜ್ಞೆಯಾಗುತ್ತದೆ.ಇದು ಕತೆ. 

Dattatreya S Mulge

No comments:

Post a Comment