Tuesday, 9 June 2020

ಸಾಮಾನ್ಯ ಜ್ಯೋತಿಷ್ಯ ಜ್ಞಾನ

ಸಾಮಾನ್ಯ ಜ್ಯೋತಿಷ್ಯ ಜ್ಞಾನ

ಸೂರ್ಯನ ಚಲನೆಗೆ ಅನುಸಾರವಾಗಿ ಎರಡು ಆಯನಗಳಿವೆ...
ಅದೆಂದರೆ ಉತ್ತರಾಯಣ ಮತ್ತು ದಕ್ಷಿಣಾಯಣ...

ಮಾಸಗಳು : ಹನ್ನೆರಡು ಮಾಸಗಳಿವೆ...
ಅವೆಂದರೆ.. 
ವಸಂತ ಋುತು (ಚೈತ್ರ-ವೈಶಾಖ)
ಗ್ರೀಷ್ಮ ಋುತು (ಜ್ಯೇಷ್ಠ-ಆಷಾಢ)
ವರ್ಷ ಋುತು (ಶ್ರಾವಣ-ಭಾದ್ರಪದ)
ಶರದ್ರುತು (ಆಶ್ವಯುಜ-ಕಾರ್ತಿಕ)
ಹೇಮಂತ ಋುತು (ಮಾರ್ಗಶಿರ-ಪುಷ್ಯ)
ಶಿಶಿರ ಋುತು (ಮಾಘ-ಫಾಲ್ಗುಣ)...

ಒಂದು ತಿಂಗಳಲ್ಲಿ ಎರಡು ಪಕ್ಷಗಳು...
ಶುಕ್ಲ ಪಕ್ಷ (ಹುಣ್ಣಿಮೆಯಿಂದ ಪಾಡ್ಯದವರೆಗೆ - ವೃದ್ಧಿ ಚಂದ್ರ)
ಕೃಷ್ಣ ಪಕ್ಷ (ಪಾಡ್ಯದಿಂದ ಅಮಾವಾಸ್ಯೆಯವರೆಗೆ - ಕ್ಷೀಣ ಚಂದ್ರ)
ವೃದ್ಧಿ ಚಂದ್ರ ಕಾಲದಲ್ಲಿ ಶುಭ ಕಾರ್ಯಗಳನ್ನು ಮಾಡಬೇಕೆನ್ನುವುದು ಶಾಸ್ತ್ರಗಳ ಹೇಳುತ್ತವೆ...

ಯೋಗಗಳು : ಜ್ಯೋತಿಷ್ಯಶಾಸ್ತ್ರವು 27 ನಕ್ಷತ್ರಗಳನ್ನು ಗುರುತಿಸಿದೆ...
ಅದಕ್ಕೆ ಹೊಂದಿಕೊಂಡಂತೆ 27 ಯೋಗಗಳಿವೆ...

ಕರಣಗಳು : ಹನ್ನೊಂದು ಕರಣಗಳು...
ಬವ ಬಾಲವ ಕೌಲವ ತೈತಿಲ ಗರಜ ವಣಿಕ್‌ ಭದ್ರ ಶಕುನಿ ಚತುಷ್ಪಾತ್‌ ನಾಗವಾನ್‌ ಮತ್ತು ಕಿಂಸ್ತುಘ್ನ ಕರಣ...

ರಾಶ್ಯಾಧಿಪತಿ ಲೆಕ್ಕಾಚಾರ: 
ಸಿಂಹರಾಶಿಗೆ ಸೂರ್ಯ 
ಕರ್ಕಾಟಕ ರಾಶಿಗೆ ಚಂದ್ರ 
ಮೇಷ-ವೃಶ್ಚಿಕ ರಾಶಿಗಳಿಗೆ ಅಂಗಾರಕ ಕನ್ಯಾ-ಮಿಥುನ ರಾಶಿಗಳಿಗೆ ಬುಧ
ಧನು-ಮೀನ ರಾಶಿಗಳಿಗೆ ಗುರು
ತುಲಾ-ವೃಷಭ ರಾಶಿಗಳಿಗೆ ಶುಕ್ರ 
ಮಕರ-ಕುಂಭ ರಾಶಿಗಳಿಗೆ ಶನಿ ಅಧಿಪತಿ...

ಲಗ್ನ ಪ್ರಮಾಣ : ಲಗ್ನ ಪ್ರಮಾಣವನ್ನು ಲೆಕ್ಕ ಹಾಕುವಾಗ ಜಾತಕದಲ್ಲಿನ ಆಯಾ ಲಗ್ನಕ್ಕೆ ಅನುಗುಣವಾಗಿ ಲೆಕ್ಕಾಚಾರ ಮಾಡಬೇಕು...
ಮೇಷ ಪ್ರಮಾಣವು 4-12 
ವೃಷಭ ಪ್ರಮಾಣವು 4-38 
ಮಿಥುನ ಪ್ರಮಾಣವು 5-14
ಕರ್ಕಾಟಕ ಪ್ರಮಾಣವು 5-32 
ಸಿಂಹ ಪ್ರಮಾಣವು 5-20 
ಕನ್ಯಾ ಪ್ರಮಾಣವು 5-4 
ತುಲಾ ಪ್ರಮಾಣವು 5-4 
ವೃಶ್ಚಿಕ ಪ್ರಮಾಣವು 5-20 
ಧನು ಪ್ರಮಾಣವು 5-32 
ಮಕರ ಪ್ರಮಾಣವು 5-14 
ಕುಂಭ ಪ್ರಮಾಣವು 4-38 
ಮೀನ ಪ್ರಮಾಣವು 4-12...
ಹೀಗೆ ಮೇಷಾದಿ ಲಗ್ನ ಪ್ರಮಾಣಗಳನ್ನು ಲೆಕ್ಕ ಹಾಕಬೇಕು...
ಲಗ್ನ ಪ್ರಮಾಣ ಲೆಕ್ಕ ಹಾಕಿದ ನಂತರ ಲಗ್ನಭುಕ್ತಿಯನ್ನು ನಿರ್ಣಯಿಸಬೇಕು...
ಧನ್ಯವಾದಗಳು...

ಮಾಹಿತಿ ಇಷ್ಟವಾದರೆ ಶೇರ್ ಮಾಡಿ...
ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ...https://www.facebook.com/Astrovedicscience/

© 2020 Astro Vedic Science All Rights Reserved

No comments:

Post a Comment