ರಾತ್ರಿ ವೇಳೆ ಆಕಾಶವನ್ನು ನೋಡಿದರೆ ಕೋಟ್ಯಂತರ ನಕ್ಷತ್ರಗಳು ಕಾಣಿಸುತ್ತದೆ. ಅವುಗಳನ್ನು ನೋಡಿದರೆ ಏನೋ ಒಂದು ರೀತಿಯ ಆನಂದ ಸಂತೋಷಕ ಕೂಡ ಆಗುತ್ತೆ. ಅದೇ ರೀತಿ ನಮ್ಮ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡುತ್ತದೆ. ಅಷ್ಟಕ್ಕೂ ಈ ನಕ್ಷತ್ರಗಳು ಹೇಗೆ ಬಂದವು ಈ ಪ್ರಪಂಚ ಹೇಗೆ ಸೃಷ್ಟಿಯಾಯಿತು ಈ ಪ್ರಾಣಿಕೋಟಿ ಹೇಗೆ ಸೃಷ್ಟಿಯಾಯಿತು. ಅದೇ ರೀತಿ ನಮ್ಮ ಆತ್ಮ ಎಲ್ಲಿಂದ ಬಂತು ನಾವು ಸತ್ತ ಮೇಲೆ ನಮ್ಮ ಆತ್ಮ ನಮ್ಮ ದೇಹ ಬಿಟ್ಟು ಎಲ್ಲಿಗೆ ಹೋಗುತ್ತದೆ. ಈ ರೀತಿಯಾದ ಅನೇಕ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಹುಟ್ಟುತ್ತದೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸೈನ್ಸ್ ನಾ ನೋಡಿದಾಗ ಎಲ್ಲವೂ ಗೊತ್ತು ಎಂದು ಅನಿಸುತ್ತೆ. ನಂತರ ನನ್ನ ಬಗ್ಗೆ ಕರೆಕ್ಟಾಗಿ ಗೊತ್ತಿಲ್ಲ ಈ ಅಖಿಲಾಂಡ ಕೋಟಿ ಬ್ರಹ್ಮಾಂಡ ದ ಬಗ್ಗೆ ಹೇಗೆ ತಿಳಿದುಕೊಳ್ಳಬಲ್ಲೆ ಎಂದು ಅನಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.
ನಮ್ಮ ಪುರಾಣದಲ್ಲಿರುವ ಮಾಹಿತಿಯನ್ನು ಸೂಕ್ಷ್ಮವಾಗಿ ಓದಿ ತಿಳಿದುಕೊಂಡರೆ ನಮ್ಮ ಪ್ರಶ್ನೆಗೆ ಉತ್ತರ ಹುಡುಕಿ ಕೊಳ್ಳಬಹುದು. ಹಿಂದೂಗಳು ಪೂಜಿಸುವ ದೇವರುಗಳಲ್ಲಿ ಮಹಾಶಿವನು ಪ್ರಥಮ ಸ್ಥಾನದಲ್ಲಿದ್ದಾನೆ.ನಾವು ಈ ಮಾತನ್ನ ತುಂಬಾ ಸಾರಿ ದೊಡ್ಡವರ ಬಾಯಲ್ಲಿ ಕೇಳಿದ್ದೇವೆ ಶಿವನ ಅನುಗ್ರಹ ಇಲ್ಲದೆ ಒಂದು ಹುಲ್ಲುಕಡ್ಡಿ ಸಹ ಅಲ್ಲಾಡುವುದಿಲ್ಲ. ಶಿವನು ಜನನ-ಮರಣ ಗಳಿಗೆ ಅತೀತ ನು. ಕಾಲಾತೀತ ನು. ಅಂದ್ರೆ ಜನನ-ಮರಣ ಕಾಲಚಕ್ರ ವನ್ನೂ ಮೀರಿದವನು. ಅದಕ್ಕೆ ಶಿವನನ್ನು ಎಲ್ಲದಕ್ಕೂ ಹೋಲಿಸುತ್ತಾರೆ. ಕೇವಲ ಮಾನವರೆಲ್ಲ ಸಮಸ್ತ ದೇವತೆಗಳು ಸಹ ಶಿವಾರಾಧನೆ ಮಾಡುತ್ತಾರೆ. ಅಖಿಲಾಂಡ ಕೋಟಿ ಬ್ರಹ್ಮಾಂಡ ವನ್ನು ವಿಸ್ತರಿಸಿದಂತೆ ಶಿವನನ್ನು ಮಹಾಶಿವ ಪರಮಶಿವ ಎಂದು ಕರೆಯುತ್ತಾರೆ. ಈ ಕೆಳಗಿನ ವಿಡಿಯೋ ನೋಡಿ.
No comments:
Post a Comment