Tuesday, 9 June 2020

*ಮನೆಯಲ್ಲಿ ಅನುಸರಿಸಬೇಕಾದ ಒಂದಿಷ್ಟು ನಿಯಮಗಳು ಸಂಪ್ರದಾಯಗಳ ಕುರಿತು ಮಾಹಿತಿ*

🕉 ಶ್ರೀ ಗುರುಭ್ಯೋ ನಮಃ 🕉 ‌           ‌                          ‌                               ‌       

*ಮನೆಯಲ್ಲಿ ಅನುಸರಿಸಬೇಕಾದ ಒಂದಿಷ್ಟು ನಿಯಮಗಳು ಸಂಪ್ರದಾಯಗಳ ಕುರಿತು ಮಾಹಿತಿ*

*1) ಸಂಜೆ ದೇವರ ದೀಪ* ಹಚ್ಚುವ ಸಮಯದಲ್ಲಿ ಮುಂಭಾಗದಲ್ಲಿರುವ ಬಾಗಿಲನ್ನು ತೆರೆದು ಮನೆಯ ಹಿಂಭಾಗದಲ್ಲಿರುವ ಬಾಗಿಲನ್ನು ಮುಚ್ಚಬೇಕು.

*2) ಮನೆಯ ಮುಖ್ಯ ದ್ವಾರ* ಬಾಗಿಲ ಹೊಸ್ತಿಲ ಮೇಲೆ ನಿಲ್ಲಬೇಡಿ. ಅಷ್ಟು ಮಾತ್ರವೇ ಅಲ್ಲ ಬೇರೆ ಯಾರು ಸಹ ಹೊಸ್ತಿಲ ಮೇಲೆ ನಿಲ್ಲದಂತೆ ಎಚ್ಚರ ವಹಿಸಿ ತಿಳಿ ಹೇಳಿ.

*3) ಸಂಜೆ ದೀಪ ಹೊತ್ತಿಸಿದ* ಮೇಲೆ ಮನೆಯಲ್ಲಿ ಕಸ ಗುಡಿಸಬೇಡಿ. ರಾತ್ರಿ ಮಲಗುವ ಮೊದಲು ಕಸ ಗುಡಿಸಿದರೆ ಹೊರಗೆ ಹಾಕಬೇಡಿ. ಒಂದು ಕಡೆ ಗುಡ್ಡೆ ಮಾಡಿ ಶೇಖರಿಸಿಟ್ಟು ಬೆಳಗಿನ ಜಾವ ಸೂರ್ಯೋದಯದ ನಂತರ ಹೊರಗೆ ಹಾಕಿ.

*4) ಪರಕೆಯ ತುದಿಯ ಭಾಗ* (ಕಸ ಗುಡಿಸುವ ಭಾಗ) ವನ್ನು ಮೇಲೆ ಮಾಡಿ ನಿಲ್ಲಿಸಬೇಡಿ ಅದು ಸ್ಮಶಾನ ಮನೆಯ ಸೂಚಕವಾಗಿದೆ. ಆದ್ದರಿಂದ ಹಾಗೆ ಇಡುವುದು ಸತ್ತವರ ಮನೆಯಲ್ಲಿ ಮಾತ್ರ.

*5) ಮೊರ, ಪರಕೆಗಳನ್ನು* ಕಾಲುಗಳಿಂದ ಒದೆಯಬೇಡಿ ಅಥವಾ ತುಳಿಯಬೇಡಿ ಹಾಗೇನಾದರೂ ನಿಮ್ಮ ಕಾಲು ಅಕಸ್ಮಾತ್ತಾಗಿ ತಗುಲಿದರೆ ಪೊರಕೆಗೆ ನಮಸ್ಕರಿಸಿ.

*6) ಚಪ್ಪಲಿಗಳನ್ನು ಮನೆಯ* ಹೊಸ್ತಿಲು ಮತ್ತು ಮುಖ್ಯ ದ್ವಾರದ ಎದುರಿಗೆ ಅಥವಾ ಬಳಿ ಬಿಡಬೇಡಿ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿಯೇ ಬಿಟ್ಟರೆ ಒಳ್ಳೆಯದು. ರಂಗೋಲಿ ಹಾಕದೆ ಹಾಗೆ ಬಾಗಿಲ ಮುಂಭಾಗವನ್ನು ಸಾರಿಸಿ ಇಡುವುದು ಒಳ್ಳೆಯದಲ್ಲ. ಯಾವುದಾದರೂ ಒಂದು ಪುಟ್ಟ ರಂಗೋಲಿಯನ್ನಾದರೂ ಹಾಕಿ.

*7) ಮನೆಯ ಗೋಡೆಯ* ಮೇಲೆ, ದೇವರ ಮನೆ ಮುಂತಾದ ಸ್ಥಳಗಳಲ್ಲಿ ಗೋಡೆಗಳ ಮೇಲೆ ಶಾಯಿ ಅಥವಾ ಕರಿ ಬಣ್ಣ ಇತ್ಯಾದಿಗಳಿಂದ ವಿಕಾರ ಆಕೃತಿಗಳನ್ನು ಬರೆಯಬೇಡಿ.

*8) ನಡೆಯುವಾಗ ನಿಮ್ಮ* ಪಾದವನ್ನು ನೆಲಕ್ಕೆ ಸವರಿಕೊಂಡು ಓಡಾಡಬೇಡಿ. ಕಾಲಿನ ಪಾದವನ್ನು ಎತ್ತಿ ಇಟ್ಟು ನಡೆಯಬೇಕು. ಸಾಧ್ಯವಾದಷ್ಟು ಶಬ್ದ ಕಡಿಮೆ ಇರಲಿ. ಹೆಣ್ಣುಮಕ್ಕಳು ಕಾಲಿಗೆ ಕಾಲ್ಗೆಜ್ಜೆಯನ್ನು ಧರಿಸುವುದು ಒಳ್ಳೆಯದು.

*9) ಯಾರೂ ಕೂಡ ಮನೆಯಲ್ಲಿ ಅವಾಚ್ಯ ಶಬ್ದಗಳಿಂದ ಮಾತನಾಡಬಾರದು ಅದರಲ್ಲಿ ವಿಶೇಷವಾಗಿ ಮಂಗಳವಾರ, ಶುಕ್ರವಾರದಂದು ಯಾರನ್ನು* ಸಹ ಅವಾಚ್ಯ ಶಬ್ದಗಳಿಂದ ಬಯ್ಯಬೇಡಿ, ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಆ ದಿನಗಳು ಅವಾಚ್ಯ ಶಬ್ದಗಳಿಂದ ಬಯ್ಯಲುಬಾರದು ಮತ್ತು ಅವರ ಮನಸ್ಸನ್ನು ಸಹ ನೋಯಿಸಬಾರದು.

*10) ಹರಿದು ಹೋದ* ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಧರಿಸಬೇಡಿ. ಒಂದು ವೇಳೆ ನೀವೇನಾದರೂ ಧರಿಸಿದರೆ ಮಾಟ ಮಂತ್ರ ದೃಷ್ಟಿಗಳ, ಪ್ರಯೋಗ ಮಾಡಿಸಿದ್ದರೆ ಅವುಗಳ ಪರಿಣಾಮ ಬೇಗ ತಾಗುತ್ತದೆ.

*11) ಕೈ ಮತ್ತು ಕಾಲುಗಳ* ಉಗುರುಗಳನ್ನು ವಿಪರೀತ ಬೆಳೆಸಬೇಡಿ. ಅದು ದಾರಿದ್ರ್ಯದ ಸಂಕೇತವಾಗಿದೆ.

*12) ಉಗುರುಗಳನ್ನು ಸಂಜೆ* 
ಮತ್ತು ರಾತ್ರಿಯ ಸಮಯದಲ್ಲಿ ಕತ್ತರಿಸಬೇಡಿ ಹಾಗೆ ಗುರುವಾರ, ಮಂಗಳವಾರ ಹಾಗೂ ಶನಿವಾರದ ದಿನ ಉಗುರುಗಳನ್ನು ಕತ್ತರಿಸಬಾರದು. ಕತ್ತರಿಸಿದ ಉಗುರುಗಳನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಎಸೆಯಬಾರದು. ಹಾಲನ್ನು ಚೆಲ್ಲಿದ್ದರೆ ತುಳಿದುಕೊಂಡು ಓಡಾಡಬೇಡಿ ಒಂದು ವಸ್ತ್ರವನ್ನು ತೆಗೆದುಕೊಂಡು ಕೈಗಳಿಂದ ಸ್ವಚ್ಛಗೊಳಿಸಬೇಕು.

*13) ಮನೆಯಲ್ಲಿ ಹೆಣ್ಣುಮಕ್ಕಳು* 
ಕೆದರಿದ ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು, ಕುಂಕುಮವಿಲ್ಲದ ಹಣೆ, ಕೆದರಿದ ಕೂದಲು ಅರಿಶಿನ ಹಚ್ಚದ ಕೈ ಕಾಲುಗಳು ಮಹಿಳೆಯರಿಗೆ ಅಶುಭದ ಸಂಕೇತವಾಗಿವೆ.

*14) ಮುಸ್ಸಂಜೆ ಮತ್ತು* ಸೂರ್ಯಾಸ್ತದ ಬಳಿಕ ತಲೆಯ ಕೂದಲನ್ನು ಬಾಚಬಾರದು.

*15) ಹಾಸಿಗೆ, ಸೋಫಾ*, ಮಂಚದ ಮೇಲೆ ಕುಳಿತು ಧ್ಯಾನ ಪೂಜೆಗಳನ್ನು ಮಾಡಬೇಡಿ. ಅಂತಹವು ಯಾವ ಫಲವನ್ನು ಸಹ ನೀಡುವುದಿಲ್ಲ.

*16) ಸೂರ್ಯೋದಯಕ್ಕೆ* ಮುಂಚಿತವಾಗಿಯೇ ಹಾಸಿಗೆಯಿಂದ ಏಳುವ ಅಭ್ಯಾಸ ಮಾಡಿಕೊಳ್ಳಿ. ಮುಸ್ಸಂಜೆ ವೇಳೆ ಮತ್ತು ಸೂರ್ಯೋದಯದ ಸಮಯದಲ್ಲಿ ಮಲಗಬೇಡಿ ಹಾಗೆ ಮಾಡಿದರೆ ಅದು ದರಿದ್ರಲಕ್ಷ್ಮೀ ಮನೆಯಲ್ಲಿ ತಾಂಡವವಾಡುತ್ತಾಳೆ.

*ಕರ್ಮ ಅಂದರೆ ಬೇರೇನೂ ಅಲ್ಲ. ನಾವು ಮಾಡಿದ ತಪ್ಪು- ಸರಿಗಳನ್ನು ಅನುಭವಿಸುವುದು. ಕರ್ಮ*
**********

No comments:

Post a Comment