Saturday, 13 June 2020

ಸರ್ಪ ದೋಷ ಅಂದರೆ ಏನು ಎಷ್ಟು ದೋಷಗಳಿವೆ ನಾವು ಏನು ಮಾಡಬೇಕು...

ಸರ್ಪ ದೋಷ ಅಂದರೆ ಏನು ಎಷ್ಟು ದೋಷಗಳಿವೆ ನಾವು ಏನು ಮಾಡಬೇಕು...
ಜಾತಕದಲ್ಲಿ ಕಾಲಸರ್ಪ ದೋಷ ಇದು ತುಂಬಾ ಡೇಂಜರ್  ಅಂತಾರೆ...⚠️

ಸೂರ್ಯ ಚಂದ್ರ ಬುಧ ಮಂಗಳ ಗುರು ಶುಕ್ರ    ಮತ್ತು ಶನಿ ಈ ಏಳು ಗ್ರಹಗಳು ರಾಹು ಮತ್ತು ಕೇತುವಿನ ನೆರಳಿನಲ್ಲಿ ಇರುವುದು ಇಂತಹ ಸಮಯದಲ್ಲಿ ಜಾತಕದಲ್ಲಿ ಕಾಲಸರ್ಪ ದೋಷವು ಕಾಣಿಸಬಹುದು...ರಾಹು ಸರ್ಪದ ತಲೆಯನ್ನು ಪ್ರತಿನಿಧಿಸಿದರೆ ಕೇತು ಸರ್ಪದ ಬಾಲವನ್ನು ಪ್ರತಿನಿಧಿಸುತ್ತಾರೆ...ಜಾತಕದಲ್ಲಿ ೧ ೨ ೫ ೮ ನೆ  ಮನೆಯಲ್ಲಿ ರಾಹು ಕೇತು ಇದ್ದರೆ ಅದನ್ನು ಕಾಳ ಸರ್ಪ ದೋಷ ಎಂದು ಪರಿಗಣಿಸಲಾಗುತ್ತದೆ...

ಜಾತಕದಲ್ಲಿ ಕಾಲಸರ್ಪ ದೋಷವಿದ್ದರೆ ಏನಾಗುವುದು...🤔

ಜಾತಕದಲ್ಲಿ ಕಾಲಸರ್ಪ ದೋಷವಿದ್ದರೆ ಆ ವ್ಯಕ್ತಿಯ ಜೀವನಕ್ಕೆ ತುಂಬಾ ಹಾನಿಯಾಗುವುದು ಮತ್ತು ಆತನ ಜೀವನದ ಪ್ರತಿಯೊಂದು ಹಂತದಲ್ಲೂ ಇದು ಪರಿಣಾಮ ಬೀರುವುದು...
ಆತನಿಗೆ ದುರಾದೃಷ್ಟವೋ ಕಾಡುತ್ತಾ ಇರುತ್ತದೆ... ಜಾತಕದಲ್ಲಿ ಗ್ರಹಗತಿಗಳು ಸರಿಯಾಗಿದ್ದರೂ ಆತ ಮಾಡುವಂತಹ ಕೆಲಸಗಳು ಕೈಗೂಡದೆ ಇರಬಹುದು...
ಈ ದೋಷದಿಂದ ಎಲ್ಲಾ ಒಳ್ಳೆಯ ಪ್ರಭಾವಗಳು ದೂರವಾಗುವುದು...

ಟಿಪ್ಸ್ : ಜಾತಕದಲ್ಲಿ ದೋಷ ಕಂಡುಹಿಡಿದು ಪರಿಹಾರ ಮಾಡಿಸಿಕೊಂಡರೆ ಅದು ಯೋಗವಾಗುತ್ತದೆ...

ವಿವಿಧ ಬಗೆಯ ಕಾಳಸರ್ಪ ದೋಷಗಳು...
ಅನಂತ ವಾಸುಕಿ ಪದ್ಮನಾಭ ಕುಳಿಕ ಶಂಕಪಾಲ ಮಹಾಪದ್ಮ ತಕ್ಷಕ ಶೇಷ ಘಟಕ ಎನ್ನುವ ಹೆಸರುಗಳನ್ನು ಹೊಂದಿರುವ ೯ ಬಗೆಯ ಸರ್ಪಗಳಿವೆ...
ರಾಹು ಕೇತುಗಳು ಇರುವ ಮನೆಗಳಿಗೆ ಅನುಗುಣವಾಗಿ ಯಾವ ಸರ್ಪದೋಷ ಎಂದು ಗುರುತಿಸಲಾಗುವುದು....

* ಅನಂತ ಕಾಳಸರ್ಪ ದೋಷ...
ಅನಂತ ಕಾಳ ಸರ್ಪ ದೋಷವು ತುಂಬಾ ವರ್ಷಗಳವರೆಗೆ ಕಾಡುತ್ತದೆ..ಸುಮಾರು ೨೭ ವರ್ಷಗಳವರೆಗೆ ಕಾಡುತ್ತದೆ...
ರಾಹು ಒಂದನೇ ಮನೆಯಲ್ಲಿ ಹಾಗೂ ಕೇತು ಏಳನೆ ಮನೆಯಲ್ಲಿ ಇದ್ದರೆ ಅದನ್ನು ಅನಂತ ಕಾಳ ಸರ್ಪದೋಷ ಎಂದು ಎನುತ್ತಾರೆ...

* ವಾಸುಕಿ ಕಾಳಸರ್ಪ ದೋಷ...
ಜಾತಕದಲ್ಲಿ ೩ನೆ ಮನೆಯಲ್ಲಿ ರಾಹು ೯ನೆ ಮನೆಯಲ್ಲಿ ಕೇತು ಇದ್ರೆ ವಾಸುಕಿ ಸರ್ಪದೋಷವನ್ನು ಅನುಭವಿಸುವನು...

* ಪದ್ಮನಾಭ ಕಾಳಸರ್ಪ ದೋಷ...
ಈ ದೋಷವು ೪೮ ವರ್ಷಗಳವರೆಗೆ ಕಾಡುತ್ತದೆ ಜಾತಕದ ೫ನೆ ಮನೆಯಲ್ಲಿ ರಾಹು ೧೧ನೆ ಮನೆಯಲ್ಲಿ ಕೇತು ಇದ್ರೆ ಅದು ಪದ್ಮನಾಭ ಕಾಳಸರ್ಪ ದೋಷವಾಗುತ್ತದೆ...

* ಕುಳಿಕ ಕಾಳಸರ್ಪ ದೋಷ...
೨ನೆ ಮನೆಯಲ್ಲಿ ರಾಹು ೮ನೆ ಮನೆಯಲ್ಲಿ ಕೇತು ಇದ್ರೆ  ಅದು ಕುಳಿಕ ಕಾಳಸರ್ಪ ದೋಷವಾಗುತ್ತದೆ...

* ಶಂಕಪಾಲ ಕಾಳಸರ್ಪ ದೋಷ...
ಶಂಕಪಾಲ ಕಾಳಸರ್ಪ ದೋಷವು ೪೨ ವರ್ಷ ಕಾಡುವುದು ರಾಹು ೪ನೆ ಮನೆಯಲ್ಲಿ ಕೇತು ೧೦ನೆ ಮನೆಯಲ್ಲಿ ಇದ್ರೆ ಈ ಸಮಸ್ಯೆ ಉಂಟಾಗುವುದು ಎಂದು ಹೇಳಲಾಗುವುದು...

* ಮಹಾಪದ್ಮ ಕಾಳಸರ್ಪ ದೋಷ...
ಈ ದೋಷವು ೫೪ ವರ್ಷ ಕಾಡುವುದು ರಾಹು ೬ನೆ ಮನೆಯಲ್ಲಿ ಕೇತು ೧೨ನೆ ಮನೆಯಲ್ಲಿ ಇದ್ರೆ ಸಮಸ್ಯೆ ಉಂಟಾಗುವುದು ಎಂದು ಹೇಳಲಾಗುವುದು...

* ತಕ್ಷಕ ಕಾಳಸರ್ಪ ದೋಷ...
ಜಾತಕದಲ್ಲಿ ೭ನೆ ಮನೆಯಲ್ಲಿ ರಾಹು ೧ನೆ ಮನೆಯಲ್ಲಿ ಕೇತು ಇದ್ರೆ ದೋಷವಾಗುತ್ತದೆ... 

* ಶೇಷ ಕಾಳಸರ್ಪ ದೋಷ...
ಜಾತಕದಲ್ಲಿ ೧೨ನೆ ಮನೆಯಲ್ಲಿ ರಾಹು ೬ನೆ ಮನೆಯಲ್ಲಿ ಕೇತು ಇದ್ರೆ ದೋಷವಾಗುತ್ತದೆ...

* ಘಟಕ ಕಾಳಸರ್ಪ ದೋಷ...
ಜಾತಕದಲ್ಲಿ ೧೦ನೆ ಮನೆಯಲ್ಲಿ ರಾಹು ೪ನೆ ಮನೆಯಲ್ಲಿ ಕೇತು ಇದ್ರೆ ದೋಷವಾಗುತ್ತದೆ...

ಸೂಚನೆ : ನಿಮ್ಮ ಜಾತಕವನ್ನು ನೋಡ್ಕೊಳಿ ಯಾವ ದೋಷವಿದೆ ಅಂತಾ ಕಾಮೆಂಟ್ಸ್ ಮಾಡಿ ದೋಷದ ಸಮಸ್ಯೆ ಹಾಗು ಪರಿಹಾರ ತಿಳಿಸುತ್ತೆವೆ... ಧನ್ಯವಾದಗಳು

No comments:

Post a Comment