Monday, 15 June 2020

ಅಶ್ವಥ್ಥ

ಉಪಯುಕ್ತ ಮಾಹಿತಿ

ಅಶ್ವಥ್ಥ 
ಪೈಕಸ್ ರಿಲಿಜಿಯೋಸ
ಮೊರೆಸಿ
ಪರ್ಯಾಯ: ಅರಳಿಮರ
ಸಂ: ಚಲಪತ್ರ
ಹಿಂ: ಪಿಪಾಲ
ಇಂ: ಪೀಪಲ್ ಟ್ರೀ/ ಸೆಕ್ರೆಡ್ ಅಶ್ವತ್ಥ

ಪರಿಚಯ
ಅರಳಿ ಮರ ಎಲ್ಲರಿಗೂ ಪರಿಚಯವಿದೆ ಈ ಗಿಡ ಬಹಳ ಪವಿತ್ರ ಇದಕ್ಕೆ ಕಟ್ಟೆಕಟ್ಟಿ ಪೂಜಿಸುತ್ತಾರೆ.ಸಾಮಾನ್ಯವಾಗಿ ನೂರು ಅಡಿ ಎತ್ತರ ಬೆಳೆಯುತ್ತದೆ ಹಾಗೆ ಹೆಚ್ಚು ಪ್ರಾಣವಾಯು ನೀಡುವ ಮರ, ಇದರ ಹಣ್ಣನ್ನು ತಿಂದು ಹಕ್ಕಿಗಳು ಬೀಜ ಪ್ರಸಾರ ಮಾಡುತ್ತದೆ.
ಯಾವ ಖಾಯಿಲೆಗೆ
  ಬಿಕ್ಕಳಿಕೆ,ಪಿತ್ತಶಮನಕ್ಕೆ, ದಮ್ಮು, ಗರ್ಭಸ್ಥಾಪನೆಗೆ, ಮೂಲವ್ಯಾಧಿ ಇತ್ಯಾದಿ

೧.ಬಿಕ್ಕಳಿಕೆ
ಅರಳೀ ಮರದ ಚಕ್ಕೆ ಹೊತ್ತಿಸಿ ಉರಿಯುತ್ತಿದ್ದಾಗ ನೀರಲ್ಲಿ ಅದ್ದಿ ಆಮೇಲೆ ಆ ನೀರನ್ನು ಸೋಸಿ ಕುಡಿಯುವುದರಿಂದ  ಜ್ಚರದಿಂದ ಬಂದ ಬಿಕ್ಕಳಿಕೆ ಗುಣವಾಗುವುದು

೨.ವಾಕರಿಕೆ
ಅರಳಿ ಮರದ ಚಕ್ಕೆ ಸುಟ್ಟು ಬೂದಿ ಮಾಡಿ ಇದನ್ನು ಸ್ವಲ್ಪ ನೀರಿಗೆ ಹಾಕಿ ಕದಡಿ ಕುಡಿಯುವುದರಿಂದ ವಾಕರಿಕೆ ನಿಲ್ಲುತ್ತದೆ

೩.ಪಿತ್ತ
ಅರಳಿಚಕ್ಕೆಯ ಬಸ್ಮವನ್ನು ( ಬೂದಿ) ರಾತ್ರಿ ಎರಡು ಚಮಚ ಕದಡಿ ಇಟ್ಟು ಬೆಳಿಗ್ಗೆ ಮೇಲಿದ್ದ ತಿಳಿನೀರು  ಕುಡಿಯಿರಿ ಪ್ರಮಾಣ ಒಂದು ಗ್ಲಾಸ್

೪.ಜ್ವರ
ಅರಳಿಮರದ ತೊಗಟೆಯ ಒಳನಾರಿನ ಕಷಾಯ ಮಾಡಿ ಕುಡಿಯಿರಿ ಸುಮಾರು ೧ ಹಿಡಿ ನಾರು ೪ ಲೋಟ ನೀರು ಹಾಕಿ ಕುದಿಸಿ ಅರ್ಧಕ್ಕೆ ಇಳಿಸಿ ನಂತರ ಮೂರು ಹೊತ್ತು ಸೇವಿಸಿ
ಅಥವಾ ಒಳನಾರು ಜೀರಿಗೆ, ಹಿಪ್ಪಲಿ ಶುಂಠಿ ಸೇರಿಸಿ ಮೊಸರಿನಲ್ಲಿ ಅರೆದು ಕುಡಿಯಿರಿ

೫.ರಕ್ತಪ್ರದರ 
ಅರಳಿ ತೊಗಟೆ ಒಣಗಿಸಿ ಪುಡಿ ಮಾಡಿ ಇದನ್ನು ಎರಡುತೊಲೆ ಹಾಕಿ ಕಶಾಯ ಮಾಡಿ ಕುಡಿಯಿರಿ. ದಿನಕ್ಜೆರಡುಸಲ ಆದರೆ ಹೆಚ್ಚು ಖಾರ ಮಸಾಲೆಭರಿತ ಆಹಾರ ಸೇವನೆ ಬೇಡ.

೬.ಹೊಟ್ಟೆನೋವಿಗೆ
ಅರಳಿಯ ಚಿಗುರು ಮತ್ತು ಬೆಲ್ಲ  ಅರೆದು ತಿನ್ನಿ ಪ್ರಮಾಣ ಚಿಗುರೆಲೆ ಅರೆದಾಗ ಗೋಲಿಗಾತ್ರ ಅಷ್ಟೇ ಬೆಲ್ಲ

೭.ಊತ
ಊತವಿರುವಲ್ಲಿ ಅರಳಿ ಹಾಲು ಲೇಪಿಸಿ

೮.ಗರ್ಭಸ್ಥಾಪನೆಗೆ
ಅರಳಿಮರದಲ್ಲಿ ಬೆಳೆದ ಬದನಿಕೆಯನ್ನು ಗುರುವಾರ/ ಆದಿತ್ಯವಾರ  ತಂದು ಹಾಲಿನಲ್ಲಿ ೫ ತೊಲೆ ಅರೆದು ಕುಡಿಸಿ ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸ ಬೇಕು

೯.ಮೂಲವ್ಯಾಧಿ
ಅರಳಿ ಮರದ ಚೂರ್ಣ ( ಬೇರು, ತೊಗಟೆ, ಕಾಯಿ, ಎಲೆ) ಅರ್ಧ ತೊಲೆ ತೆಗೆದುಕೊಳ್ಳಿ ಇದಕ್ಕೆ ಕಾಲುತೊಲೆ ಮುಸುಕಿನ ಜೋಳದ ಭಸ್ಮ ಸೇರಿಸಿ  ಮತ್ತು ಅರ್ಧ ತೊಲೆ ಕೆಂಪು ಕಲ್ಲುಸಕ್ಕರೆ ಸೇರಿಸಿ  ಸೇವಿಸಿ ಎರಡು ಹೊತ್ತು ಮತ್ತು ಹದಿನೈದು ದಿನ

೧೦.ದಮ್ಮು
ಅರಳಿಮರದ ಕಾಯಿ ಚೂರ್ಣ + ತೊಗಟೆ ಚೂರ್ಣ ಸರಿ ಪ್ರಮಾಣದಲ್ಲಿ ಸೇರಿಸಿ  ಇದನ್ನು ಅರ್ಧ ತೊಲೆ ತೆಗೆದುಕೊಂಡು ನೀರಿನಲ್ಲಿ ೪೫ ದಿನ ಸೇವಿಸಿ.

೧೧.ವೀರ್ಯವೃದ್ಧಿ
ಅರಳಿಹಣ್ಣನ್ನು ಒಣಗಿಸಿ ಚೂರ್ಣ ಮಾಡಿ ಇದನ್ನು ಅರ್ಧತೊಲೆ ಹಾಲಿಗೆ ಹಾಕಿ ಸೇವಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ

No comments:

Post a Comment