Monday, 15 June 2020

ಶ್ರೀ_ಮಹಾಲಕ್ಷ್ಮೀ_ಅಷ್ಟಕಮ್

_ * Today's Kakad Aarti Darshan Mahalaxmi Mata ji's Kolhapur from Maharashtra * * _
   #ಶ್ರೀ_ಮಹಾಲಕ್ಷ್ಮೀ_ಅಷ್ಟಕಮ್ 
ನಮಸ್ತೇಸ್ಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ ||
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ ನಮೋಸ್ಸ್ತುತೇ ||

 ಭಾವಾರ್ಥ :- ಹೇ ಮಹಾಮಯಾರೂಪಿಣಿಯೇ! ಸೌಭಾಗ್ಯದ ಗದ್ದುಗೆಯ  ಮೇಲೆ ವಿರಾಜಿಸುವವಳೇ, ದೇವಾನುದೇವತೆಗಳಿಂದ ಪೂಜಿಸಿಕೊಂಬವಳೇ;  ನಿನಗೆ ನಮಸ್ಕರಿಸುವೆ. ಹೇ! ಶಂಖ, ಚಕ್ರ, ಗಧೆಗಳನ್ನು  ಧರಿಸಿರುವಾಕೆಯೇ, ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

 ನಮಸ್ತೇ ಗರುಡಾರೂಢೇ ಕೋಲಾಸುರಭಯಂಕರಿ ||
ಸರ್ವಪಾಪಹರೇ ದೇವಿ ಮಹಾಲಕ್ಷ್ಮೀ ನಮೋಸ್ಸ್ತುತೇ ||

ಭಾವಾರ್ಥ:- ಹೇ ದೇವಿ ಗರುಢ ವಾಹನೆಯೇ! ಕೋಲನೆಂಬ ರಕ್ಕಸನನ್ನು  ನಾಶಗೊಳಿಸಿದವಳೇ, ನಿನಗಿದೋ ನಮಸ್ಕಾರಗಳು. ಎಲ್ಲಾ ಪಾಪಗಳನ್ನು  ನಾಶ ಮಾಡುವ  ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

ಸರ್ವಜ್ಞೇ ಸರ್ವವರದೇ ಸರ್ವದುಷ್ಟ ಭಯಂಕರಿ ||
ಸರ್ವ ದು:ಖಹರೇ ದೇವಿ ಮಹಾಲಕ್ಷ್ಮೀ ನಮೋಸ್ಸ್ತುತೇ ||

 ಭಾವಾರ್ಥ:- ಹೇ! ದೇವಿ; ಸಮಸ್ತವನ್ನೂ ಬಲ್ಲಾಕೆಯೇ, ಎಲ್ಲವನ್ನೂ ಅನುಗ್ರಹಿಸುವಾಕೆಯೇ, ದುಷ್ಟರಿಗೆ ಭಯಂಕರ  ರೂಪಿಣಿಯೂದವಳೇ, ಸಮಸ್ತ ದು:ಖವನ್ನು ಪರಿಹರಿಸುವವಳೇ, ದೇವಿ  ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ ||
ಮಂತ್ರಮೂರ್ತೇ ಸದಾ ದೇವೀ ಮಹಾಲಕ್ಷ್ಮೀ ನಮೋಸ್ಸ್ತುತೇ ||

 ಭಾವಾರ್ಥ:- ಹೇ ದೇವಿ; ಸಿದ್ಧಿ ಹಾಗೂ ಬುದ್ಧಿಗಳನ್ನು  ಕರುಣಿಸುವವಳೇ, ಭೋಗ ಮತ್ತು ಮುಕ್ತಿಯನ್ನು  ದಯಪಾಲಿಸುವಾಕೆಯೇ, ಮಂತ್ರಗಳಲ್ಲಿ ಅನುದಿನವೂ ನೆಲೆಸಿರುವವಳೇ, ದೇವಿ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

 ಆದ್ಯಂತರಹಿತೇ ದೇವಿ ಆದ್ಯಾಶಕ್ತಿ ಮಹೇಶ್ವರಿ ||
ಯೋಗಜೇ ಯೋಗ ಸಂಭೂತೇ ಮಹಾಲಕ್ಷ್ಮೀ ನಮೋಸ್ಸ್ತುತೇ ||

 ಭಾವಾರ್ಥ:- ಆದಿಯೂ ಅಂತ್ಯವೂ ಇಲ್ಲದಿರುವ ದೇವಿಯೇ, ಆದಿಶಕ್ತಿಯೇ, ಮಹೇಶ್ವರಿಯೇ, ಯೋಗವನ್ನು ಕರುಣಿಸುವಾಕೆಯೇ,  ಯೋಗಮಾಯೆಯಿಂದ ಜನಿಸಿದಾಕೆಯೇ, ದೇವಿ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

 ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ || 
ಮಹಾಪಾಪಹರೇ ದೇವಿ ಮಹಾಲಕ್ಷ್ಮೀ ನಮೋಸ್ಸ್ತುತೇ ||

 ಭಾವಾರ್ಥ:- ಅಸಾಮಾನ್ಯಳೂ, ಸಾಮಾನ್ಯಳೂ, ಮಹಾರುದ್ರ ಸ್ವರೂಪಳೂ, ಮಹಾಶಕ್ತಿರೂಪಿಣಿಯೂ ಆಗಿರುವ ದೇವಿ  ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

 ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ ||
ಪರಮೇಶಿ ಜಗನ್ಮಾತರ್ಮಹಾಲಕ್ಷ್ಮೀ ನಮೋಸ್ಸ್ತುತೇ ||

 ಭಾವಾರ್ಥ:- ಹೇ ದೇವಿ; ಕಮಲದ ಮೇಲೆ ಆರೂಢಳಾಗಿರುವಾಕೆಯೇ,  ಪರಬ್ರಹ್ಮ ರೂಪಿಣಿಯೇ, ಪರಮೇಶ್ವರಿಯೇ, ಜಗತ್ತಿನ  ತಾಯಿಯೇ, ದೇವಿ  ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

 ಶ್ವೇತಾಂಬರಧರೇ ದೇವಿ ನಾನಾಲಂಕಾರಭೂಷಿತೇ || 
ಜಗತ್ ಸ್ಥಿತೇ ಜಗನ್ಮಾತರ್ಮಹಾಲಕ್ಷ್ಮೀ ನಮೋಸ್ಸ್ತುತೇ ||

 ಭಾವಾರ್ಥ:- ಶುಭ್ರವಾಗಿರುವ ಬಿಳಿಯ ವಸ್ತ್ರವನ್ನು  ಧರಿಸಿರುವಾಕೆಯೇ, ವಿವಿಧಾಲಂಕಾರಗಳಿಂದ ಶೋಭಿಸುತ್ತಿರುವಾಕೆಯೇ,  ಜಗತ್ತಿಗೆ ಆಧಾರಶಕ್ತಿಯಾಗಿರುವಾಕೆಯೇ, ಜಗತ್ತಿನ ತಾಯಿ  ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

🌹🌹   ಶ್ರೀ ಮಹಾಲಕ್ಷ್ಮೀ ನಮೋಸ್ತುತೆ 🌹🌹

🕉ಓಂ ಶ್ರೀ ಮಹಾಲಕ್ಷ್ಮಿ ದೇವಿಯೈ ನಮಃ🔔🙏🏻🌺

No comments:

Post a Comment