Sunday, 7 June 2020

ಕೃಷ್ಣ ಸುಳ್ಳು ಮಹಾಭಾರತ ನಡೆದೇ ಇಲ್ಲ ಎನ್ನುವ ಮೂರ್ಖರಿಗೊಂದು ಸವಾಲು.ಸುಳ್ಳೇ ಆಗಿರಲಪ್ಪ.ಆದರೆ ಕಥೆಯ ಸಂದೇಶವನ್ನಾದರೂ ಓದಿ ನೋಡಿ.

ಕೃಷ್ಣ ಸುಳ್ಳು ಮಹಾಭಾರತ ನಡೆದೇ ಇಲ್ಲ ಎನ್ನುವ ಮೂರ್ಖರಿಗೊಂದು ಸವಾಲು.ಸುಳ್ಳೇ ಆಗಿರಲಪ್ಪ.ಆದರೆ ಕಥೆಯ ಸಂದೇಶವನ್ನಾದರೂ ಓದಿ ನೋಡಿ.

ಕುರುಕ್ಷೇತ್ರದಲ್ಲಿ ಭೀಷ್ಮಾಚಾರ್ಯರ ಸಾರಥ್ಯದಲ್ಲಿ ಮೊದಲ ಸಂಗ್ರಾಮ. ಮೊದಲ ಎರಡು ದಿನದಲ್ಲಿ ಅಷ್ಟೇನೂ ವಿಪರೀತಕ್ಕೆ ಹೋಗಿರಲಿಲ್ಲ ಭೀಷ್ಮಾಚಾರ್ಯರ ಪ್ರತಾಪ. ಇದರಿಂದ ಕುಪಿತನಾದ ದುರ್ಯೋಧನನು ಭೀಷ್ಮಾಚಾರ್ಯರನ್ನು,' ನಿಮ್ಮ ದ್ವಂದ್ವ ನಿಲುವು ಅರ್ಥವಾಗುತ್ತಿದೆ ಪಿತಾಮಹ. ಪಾಂಡವರ ವ್ಯಾಮೋಹ ನಿಮ್ಮಲ್ಲಿ ಎದ್ದು ಕಾಣುತ್ತಿದೆ' ಎಂದು ನಿಂದಿಸಿದ. ಕುರುವಂಶ ರಕ್ಷಣೆಯ ನಿಷ್ಟಾವಂತ ಭೀಷ್ಮರಿಗೆ ಇದು ತೀವ್ರ ಆಘಾತವಾಯ್ತು. ಬೇರೆ ಮನುಷ್ಯರಾಗಿದ್ದರೆ  ರಾಜಿನಾಮೆ ನೀಡಿ ಹೋಗುತ್ತಿದ್ದರು.ಆದರೆ ಕರ್ಮನಿಷ್ಟೆ,ರಾಜನಿಷ್ಟೆಗೆ ಬದ್ಧರಾಗಿದ್ದ ಭೀಷ್ಮೆರು ಹಾಗೆ ಮಾಡಲಿಲ್ಲ. ಎದ್ದುನಿಂತು,' ದುರ್ಯೋಧನಾ, ನನ್ನ ನಿಷ್ಟೆಯಲ್ಲಿ ಸಂದೇಹವೇ? ನೋಡುತ್ತಿರು.ನಾಳೆಯ ಯುದ್ಧವನ್ನು. ಯುದ್ಧದಲ್ಲಿ ಶಸ್ತ್ರ ಹಿಡಿಯುವುದಿಲ್ಲ ಎಂದ ಕೃಷ್ಣನನ್ನೇ ಶಸ್ತ್ರ ಹಿಡಿಯುವಂತೆ ಮಾಡುತ್ತೇನೆ. ಆಗ ಹೇಳು ನಿನ್ನ ಸಂದೇಹದ ಬಗ್ಗೆ' ಎಂದು ಭೀಷ್ಮ ಪ್ರತಿಜ್ಞೆಯ ಗರ್ಜನೆ ಮಾಡಿದರು.

ಮರುದಿನದ ಸೂರ್ಯೋದಯವು ರಕ್ತದಲ್ಲಿ ಮುಳುಗಿತು ಆಚಾರ್ಯರ ಶರಸಂಧಾನದಲ್ಲಿ.ಪಾಂಡವರ ಸೈನ್ಯ ನುಚ್ಚು ನೂರಾಯ್ತು. ಇಷ್ಟಕ್ಕೇ ಮುಗಿಯಲಿಲ್ಲ ಆಚಾರ್ಯರ ಪ್ರತಾಪ. ಇದೂ ಸಾಲದು ಎಂಬಂತೆ ಶರವೊಂದನ್ನು ನೇರವಾಗಿ ಕೃಷ್ಣನ ಭುಜಕ್ಕೇ ಪ್ರಯೋಗಿಸಿಬಿಟ್ಟರು.! ಇದರಿಂದ ಸ್ವಯಂ ಭಗವಂತನಿಗೇ ಘಾಸಿಮಾಡಿದಂತಾಯ್ತು. ಪರಿಣಾಮ? ಕೇಳಬೇಕೇ? ಎದ್ದು ನಿಂತ ಭಗವಂತನು ಸುದರ್ಶನದಾರಿಯಾಗಿಬಿಟ್ಟ!! ಅಂಬರದಲ್ಲಿ ದೇವಾದಿ ದೇವತೆಗಳು ಇದನ್ನು ವೀಕ್ಷಿಸಿ ಕರಮುಗಿದು ನಿಂತರು. 
ಆಚಾರ್ಯ ಭೀಷ್ಮರು ಕೃಷ್ಣನಿಗೆ ಕೈಮುಗಿದು ,' ಹೇ ಸ್ವಾಮಿ, ಇದನ್ನೇ ನಾನು ಬಯಸಿದ್ದು.ಈ ಘೋರ ನಿಂದನಾ ಜಗತ್ತಿನಿಂದ ಮುಕ್ತನಾಗಲು ಈ ಅಪರಾಧ ಮಾಡಬೇಕಾಯ್ತು.ರಣ ನೀತಿಯ ಉಲ್ಲಂಘನೆ ಮಾಡಬೇಕಾಯ್ತು' ಎಂದು ಸ್ತುತಿ ಮಾಡಿದರು.
' ಪಿತಾಮಹ ತಾವು ತಪ್ಪಿದ ರಣನೀತಿಗೆ ಉತ್ತರ ಕೊಡಲು ಸಮಯವು ಸೂರ್ಯಾಸ್ತವು ಅಡ್ಡ ಬಂದಿದೆ.ಇಂದು ಬೇಡ. ನಾಳೆಯ ಸೂರ್ಯೋದಯಕ್ಕೆ ತಾವು ತಪ್ಪಿದ ರಣನೀತಿಗೆ ಉತ್ತರ ದೊರಕಲಿದೆ. ಅಧರ್ಮವನ್ನು ಅಧರ್ಮದಿಂದಲೇ ಖಂಡಿಸಿ ಧಂಡಿಸಬೇಕಾದ ಅನಿವಾರ್ಯತೆಯನ್ನು ನಾಳೆ ನೋಡುವಿರಂತೆ' ಎಂದು ಕೃಷ್ಣನು ನಗುತ್ತಾ, ಪಾಂಚಜನ್ಯವನ್ನೂದಿ, ಅಂದಿನ ಯುದ್ಧಕ್ಕೆ ವಿರಾಮ ಘೋಷಿಸಿದ. ' ಕೃತಾರ್ಥನಾದೆ.ಧನ್ಯೋಸ್ಮಿ ಭಗವಂತಾ' ಎನ್ನುತ್ತಾ ಆಚಾರ್ಯ ಭೀಷ್ಮರು ಶಂಖ ಊದುತ್ತಾ ರಣ ವಿರಾಮ ಘೋಷಣೆ ಮಾಡಿದರು.

ಪಾಂಡವರೊಡನೆ ಕೃಷ್ಣನು ತಮ್ಮ ಬಿಡಾರ ಸೇರಿದರು.ಅಂದಿನ ಯುದ್ಧ ವಿಶ್ಲೇಷಣೆ ನಡೆಯಿತು. ಎಲ್ಲರೂ ಖಿನ್ನರಾಗಿದ್ದರು. ಗೆಲುವು ಅಸಾಧ್ಯ ಎನ್ನುವಲ್ಲಿಯವರೆಗೆ ಬಂದಿದ್ದರು. ಆಗ ಕೃಷ್ಣನು,' ಖಿನ್ನತೆ ಯೋಧರಿಗಿರಬಾರದು. ರಣದ ಚತುರತೆಯಲ್ಲಿ ಮತ್ಸರ,ಭಯ ಇರಬಾರದು. ಆಚಾರ್ಯರ ರಣತಂತ್ರವನ್ನು ಪ್ರಶಂಸಿಸಲೇ ಬೇಕು.ಇದು ನೈಜ ಯೋಧನ ಗುಣ. ಹಾಗಾಗಿ ನಾವು ಆಚಾರ್ಯರನ್ನು ಭೇಟಿ ಮಾಡಿ ಅವರ ಸಾಹಸವನ್ನು ಪ್ರಶಂಸಿಸಿ ಬರೋಣ' ಎಂದು ಕೃಷ್ಣನು ಸಲಹೆ ನೀಡಿದ. ಪಾಂಡವರೊಂದಿಗೆ ಕೃಷ್ಣನು ಆಚಾರ್ಯರ ಬಿಡಾರಕ್ಕೆ ತೆರಳಿದರು.

'ಪ್ರಣಾಮ್ ಪಿತಾಮಹ' ಎನ್ನುತಾ ಆಚಾರ್ಯರಿಗೆ ಪಾಂಡವರು ವಂದಿಸಿದರು. ಆಚಾರ್ಯರು ದಿಗ್ಗನೆ ಎದ್ದು ನಗುತಾ,' ವಿಜಯೀ ಭವ' ಎನ್ನುತ್ತಾ,ಕೃಷ್ಣನ ಕೈಹಿಡಿದು ಕಣ್ಣಿಗೊತ್ತಿಕೊಂಡರು. 
'ಧರ್ಮ ಯುದ್ಧವೆಂದರೆ ಹೀಗೆ ಇರಬೇಕು. ರಣದಲ್ಲಿ ಪರಾಕ್ರಮವೇ ಹೊರತು ಮತ್ಸರ ಸಲ್ಲದು.' ಎಂದು ಭೀಷ್ಮರು ಕೃಷ್ಣನನ್ನು ನೋಡಿ ನಕ್ಕರು.
'ಹೇ ಆಚಾರ್ಯರೇ ನಾವಿಲ್ಲಿ ತಮ್ಮ ಆಶೀರ್ವಾದಕ್ಕಾಗಿ ಬಂದವರಲ್ಲ.ನಿಮ್ಮ ರಣವಿಕ್ರಮವನ್ನು ಪ್ರಶಂಸೆ ಮಾಡಲಿಕ್ಕಾಗಿ ಬಂದಿದ್ದೇವೆ' ಎಂದನು ಶ್ರೀಕೃಷ್ಣ. 
ಸಂತೋಷ. ಇದು ನೈಜ ಯೋಧ ಧರ್ಮದ ಪಾಲನೆ.ಆದರೆ ನನಗೆ ಸರಿಸಾಟಿ ಯಾರೂ ಇಲ್ಲವಲ್ಲ ಎಂಬುದೇ ನನ್ನ ದುಃಖ. ಅರ್ಜುನನ ನಿರೀಕ್ಷೆಯಲ್ಲಿದ್ದೆ. ಆದರೆ ಅದು ವಿಫಲವಾಯ್ತು. ಅದಕ್ಕಾಗಿ ನೀತಿ ಉಲ್ಲಂಘಿಸಿ ನಿನ್ನನ್ನೇ ಕೆರಳಿಸಿ ಮುಕ್ತನಾಗಬೇಕೆಂದಿದ್ದೆ. ಆದರೆ ಸೂರ್ಯಾಸ್ತವು ಅಡ್ಡಿಯಾಯ್ತು. ಪಾಪಿಗೆ ಮುಕ್ತಿ ಎಲ್ಲಿದೆ ಭಗವಂತಾ' ಎಂದು ಆಚಾರ್ಯರು ತನ್ನೊಳಗಿನ ದುಃಖವನ್ನು ಪ್ರಕಟಿಸಿದರು. ಮಾತು ಮುಂದುವರಿಸುತ್ತಾ,' ನನ್ನ ರಣತಂತ್ರವು ಅವಿರತ (unstoppable fighting) ಶರ ಸಂಧಾನವಾಗಿದೆ. ಅದನ್ನೆದುರಿಸಲು ಇವರಿಂದ ಸಾಧ್ಯವೇ ಇಲ್ಲ ಎಂದು ಸಂತೋಷ ಪಡುವ ಬದಲು ದುಃಖವಾಗುತ್ತಿದೆ ' ಎಂದು ಆಚಾರ್ಯರು ತನ್ನ ಅಳಲನ್ನು ಭಗವಂತನಲ್ಲಿ ಹೇಳಿಕೊಂಡರು. ಕೃಷ್ಣ ಮುಗುಳ್ನಕ್ಕ.ಆಚಾರ್ಯರ ಆಶೀರ್ವಾದ ಪಡೆದು ಅಲ್ಲಿಂದ ನಿರ್ಗಮಿಸಿದರು.

ಮರುದಿನದ ಸೂರ್ಯೋದಯವು ಹೊಸ ಹುರುಪನ್ನು ನೀಡಿತು. ರಣಾಂಗಣದಲ್ಲಿ ಆಚಾರ್ಯರೆದುರು ಅರ್ಜುನನ ರಥ ನಿಂತಿತು. ಇನ್ನೇನು ಘಾಂಡೀವ ಠೇಂಕರಿಸುತ್ತಿದ್ದಂತೆ, ಕೃಷ್ಣನ ರಣತಂತ್ರದಂತೆ ಶಿಖಂಡಿಯು ಅರ್ಜುನನ ರಥವೇರಿಬಿಟ್ಟ. ಘಾಂಡೀವ ಠೇಂಕಾರ ಮಾಡಿದ! ಆಗ ಆಚಾರ್ಯರು ತನ್ನ ರಣನಿಯಮದಲ್ಲಿ ಶಿಖಂಡಿಗಳ ಜತೆ ಯುದ್ಧ ಮಾಡುವುದಿಲ್ಲ ಎಂಬ ನಿಯಮ ಪ್ರಕಾರವಾಗಿ ಧನುಸ್ಸನ್ನು ಕೆಳಗಿರಿಸಿದರು. ಆಗ ಶ್ರೀಕೃಷ್ಣನು ಅರ್ಜುನನಿಗೆ , 'ಅರ್ಜುನಾ,ಆಚಾರ್ಯರ ಮೇಲೆ ಅವಿರತ(unstoppable) ಅಸ್ತ್ರ ಪ್ರಯೋಗಿಸು' ಎಂದು ಆಜ್ಞೆ ನೀಡಿದ.ಆಗ ರಣನಿಯಮ ಪಾಲಕ ಅರ್ಜುನನು,' ಕೃಷ್ಣಾ??' ಎಂದಾಗ, ಕೃಷ್ಣನು,' ಯೋಚಿಸಬೇಡ.ನಿನ್ನೆಯ ಆಚಾರ್ಯರ ರಣನಿಯಮ ಉಲ್ಲಂಘನೆಗಿದು ಉತ್ತರ. ಅಧರ್ಮದ ನಾಶಕ್ಕಾಗಿ ಅದೇ ದಾರಿಯಲ್ಲಿ ಉತ್ತರ ನೀಡಬೇಕು' ಎನ್ನುವಷ್ಟರಲ್ಲಿ ಅರ್ಜುನನ ಬತ್ತಳಿಕೆಯ ಶರಗಳು ಕಾಲಿಯಾಗಲು ಶುರುವಾಯ್ತು. ಸಹಸ್ರಾರು ಅಂಬುಗಳು ಭೀಷ್ಮರ ದೇಹವನ್ನು ಛೇದಿಸಿತು.ಆಚಾರ್ಯರು ಶರಶೈಯೆಗೊರಗಿ ಧರೆಗೆ ಕುಸಿದರು.
ತಕ್ಷಣ ಪಾಂಡವರೆಲ್ಲರೂ ಆಚಾರ್ಯರ ಬಳಿಗೆ ಧಾವಿಸಿದರು.ಕೃಷ್ಣನು ನಿಧಾನವಾಗಿ ಆಗಮಿಸಿ ಆಚಾರ್ಯರ ಹಣೆಗೊಮ್ಮೆ ತನ್ನ ಕಮಲ ಹಸ್ತವನ್ನೊತ್ತಿ ' ನೋವಾಯ್ತೇ ಪಿತಾಮಹ' ಎಂದು ನಕ್ಕನು.' ಭಗವಂತನ ಸಾನ್ನಿಧ್ಯ ಸೇರುವವನಿಗೆ ನೋವಿದೆಯೇ?' ಎಂದು ಶರ ಮಂಚದಿಂದಲೇ ಪ್ರಣಾಮ ಮಾಡಿದ ಭೀಷ್ಮ.' ಇಂದಾದರೂ ಮುಕ್ತಿ ನೀಡಿದೆಯಲ್ಲವೇ ಭಗವಂತಾ.ಧನ್ಯೋಸ್ಮಿ' ಎನ್ನುತ್ತಾ ಆ ಭಗವತ್ ಸ್ವರೂಪವನ್ನೇ ನೋಡುತ್ತಾ, ಮುಗುಳ್ನಗುತ್ತಾ,
'ಜಗತ್ಪ್ರಭುಂ ದೇವದೇವಮನಂತಂ ಪುರುಷೋತ್ತಮಂ|
ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ ... ಎಂದು ಆಚಾರ್ಯರು ಮನಸಲ್ಲೇ ಪ್ರಭುವನ್ನು ಸ್ಮರಣೆ ಮಾಡುತ್ತಾರೆ. ಅಲ್ಲಿಗೆ ಭೀಷ್ಮ ಪ್ರತಿಜ್ಞೆಯೂ ನೆರವೇರಿತು,ಭೀಷ್ಮ ಪರ್ವವೂ ಮುಗಿಯಿತು.

ದುರಾಡಳಿತದ ಮುಕ್ತಿಗೆ,ಈ ಪರ್ವಕ್ಕೆ ಮುತ್ಸದಿತನದಿಂದ, ಅಧರ್ಮ ಮಾರ್ಗದಿಂದ ಉತ್ತರಿಸಬೇಕಾದ ಅನಿವಾರ್ಯತೆಯು ಸಮೀಪಿಸುತ್ತಿದೆ.ಇದು ಪಾಪವಾಗದು.ಸನಾತನದ ಉಳಿವಿಗಾಗಿ ಮಾಡುವ ಸೇವೆಯಾಗುತ್ತದೆ. 
ಜೈ ಹಿಂದ್.

No comments:

Post a Comment