#ॐಓಂ_ನಮಃ_ಶಿವಾಯ 🚩🚩🚩
ಜಂಬುಕೇಶ್ವರ, ತಮಿಳುನಾಡು:
ಒಮ್ಮೆ ಈ ಪುಣ್ಯಕ್ಷೇತ್ರದಲ್ಲಿ ತಪಸ್ಸು ಮಾಡುತ್ತಿದ್ದ ಋಷಿಯೊಬ್ಬ ತನ್ನ ಬಳಿ ಇದ್ದ ಜಂಬೂ ಹಣ್ಣೊಂದನ್ನು ಶಿವನಿಗೆ ಅರ್ಪಿಸಿ, ಅದನ್ನು ಬೀಜಸಹಿತ ತಿಂದನೆಂದೂ ಆ ಬೀಜ ಅವನೊಳಗೇ ಬೆಳೆದು ಮರವಾಯಿತೆಂದೂ ಅದರಡಿಯಲ್ಲಿ ಲಿಂಗರೂಪದಲ್ಲಿ ನೆಲೆಸಿದ ಶಿವನಲ್ಲಿ ಆ ಋಷಿ ಐಕ್ಯಹೊಂದಿದನೆಂದೂ ಅಲ್ಲಿಯ ಸ್ಥಳಪುರಾಣ ಹೇಳುತ್ತದೆ. ಪುಷ್ಪದಂತ, ಮಾಲ್ಕವಾನ್ ಎಂಬ ಶಿವನ ಗಣನಾಥರಿಬ್ಬರು ಶಾಪವಶಾತ್ ಅನುಕ್ರಮವಾಗಿ ಆನೆಯಾಗಿಯೂ ಜೇಡವಾಗಿಯೂ ಹುಟ್ಟಿ ಆ ಸ್ಥಳದಲ್ಲಿ ಜಂಬುಲಿಂಗವನ್ನು ಆರಾಧಿಸುತ್ತಿದ್ದರೆಂದೂ ಮರದಿಂದ ಎಲೆಗಳು ಉದುರಿ ಲಿಂಗದ ಮೇಲೆ ಬೀಳದಂತೆ ಜೇಡ ಭಕ್ತಿಪೂರ್ವಕವಾಗಿ ನೇದಿದ್ದ ಬಲೆಯನ್ನು ಆಶುದ್ಧವೆಂದು ಬಗೆದು ಆನೆ ಅಳಿಸಿದಾಗ ಕೋಪಗೊಂಡ ಜೇಡ ಆನೆಯ ನಾಶಿ ದ್ವಾರವನ್ನು ಹೊಕ್ಕಿತೆಂದೂ ಅದರ ಪರಿಣಾಮವಾಗಿ ಆನೆ ಮತ್ತು ಜೇಡ ಎರಡೂ ಜೀವ ತೊರೆದು ತಮ್ಮ ಪೂರ್ವಸ್ವರೂಪ ಪಡೆದುವೆಂದೂ ಅದೇ ಸ್ಥಳಪುರಾಣದಲ್ಲಿ ಹೇಳಲಾಗಿದೆ. ಜೇಡರ ಹುಳುವಾಗಿದ್ದ ಮಾಲ್ಕವಾನ್ ಅನಂತರ ಕೋಚ್ಚೆಂಗಣಾನ್ ಎಂಬ ಚೋಳರಾಜನಾಗಿ ಜನ್ಮವೆತ್ತಿ, ಜಂಬುಕೇಶ್ವರವೂ ಸೇರಿದಂತೆ ಎಪ್ಪತ್ತು ಶಿವಾಲಯಗಳನ್ನು ನಿರ್ಮಿಸಿದನೆಂದು ತಮಿಳು ಸಾಹಿತ್ಯದಿಂದ ತಿಳಿದುಬರುತ್ತದೆ.
🕉💐💐ಸಮಸ್ತರಿಗೂ ಪರಮೇಶ್ವರನ ಕೃಪೆಯಿರಲಿ💐💐
No comments:
Post a Comment