ನಾಳೆ
ಶನಿವಾರ ಶನಿ ಗ್ರಹದ ಬಗ್ಗೆ ಒಂದಷ್ಟು ಮಾಹಿತಿ ಕೇಳಿದವರಿಗಾಗಿ ಬೇಕಾದವರಿಗಾಗಿ
---------------------------~
ಶನಿ ಒಬ್ಬ ಶಿಸ್ತಿನ ಅಧಿಕಾರಿ.ಯಾರನ್ನು ಲೆಕ್ಕಿಸದೆ ಅವರವರ ಕರ್ಮಗಳಿಗೆ ಅನುಸಾರವಾಗಿ ಫಲ ನೀಡುವವನು.
ಶನಿ ಸಾಡೇಸಾತಿ.ಪಂಚಮ.ಅಷ್ಟಮ.ಸ್ಥಾನಗಳಲ್ಲಿ ಸಂಚರಿಸುವಾಗ ,ಎಂತಹ ಪರಾಕ್ರಮ ಶಾಲಿಯಾದರೂ ತಂದೆತಾಯಿ ಸೋದರಿ ಬಂಧು ಯಾರನ್ನೂ ಲೆಕ್ಕಿಸದೆ ಅವರ ಗ್ರಹಚಾರಕೆ ತಕ್ಕಂತೆ ಫಲಕೊಟ್ಟು ಕಾಡಿಸಿ ಬಳಲಿಸಿ,ಬೆಂಡಾಗಿಸಿ,ಸಕಲ ಐಶ್ವರ್ಯಗಳನೂ ಧೂಳೀಪಟ ಮಾಡಿ ದಾರಿದ್ರ್ಯ ಕೊಟ್ಟು ಅವಮಾನಿಸಿ
ಎಲ್ಲಾ ಕಷ್ಟಗಳನು ಕೊಟ್ಟು ಸಾಕಪ್ಪಾ ಈ ಜೀವನ ಎನ್ನುವಂತೆ ಮಾಡಿ.....
ಗ್ರಹಚಾರ ಮುಗಿವುದರೊಳಗೆ ಅನಾಚಾರ.ದುರಾಚಾರ.ಅಹಂಕಾರಗಳಿಗೆ .ಬುಧ್ದಿಯನು ಕಲಿಸಿ ಬದುಕಿನ ದಿಕ್ಕನ್ನು ಬದಲಿಸಬಲ್ಲ ಏಕೈಕ ಗ್ರಹ.
------------------------------
ಮಕರ ಕುಂಭ ರಾಶಿಗಳ ಅಧಿಪತಿ.
ಕಪ್ಪು ಬಣ್ಣ.ಆದಿದೇವ.ನಪಂಸುಕ.ವಾಯುತತ್ವ . ತಮೋಗುಣ.
------------------------------
ಶನಿ ಕಾರಕ ಉದ್ಯೋಗ ಗಳು.
ಮನೆಗೆ ಉಪಯೋಗಿಸುವ ವಸ್ತುಗಳ
ಮೆಕಾನಿಕಲ್ ಮತ್ತು ಸಿವಿಲ್.
ಅಗ್ರಿಕಲ್ಚರ್.ಮೆಟಲರ್ಜಿಕಲ್.ಮೈನಿಂಗ್.ಪ್ರಿಂಟಿಂಗ್.
ಲೆದರ್ ಟೆಕ್ನಾಲಜಿ. ರಸಾಯನಿಕ ಶಾಸ್ತ್ರ. ಔಷಧೀಯ ಶಾಸ್ತ್ರ. ಹೋಮಿಯೋಪತಿ. ಪೆಟ್ರೋಲ್. ಡೀಸಲ್. ಕಟ್ಟಿಗೆ.ಸಿಮೆಂಟ್.ಕಾಯಿದೆ.ಪಶುವಿಜ್ಞಾನ.ಸ್ಯಾನಿಟರಿ.
ಪ್ರಾಚ್ಯ ವಸ್ತು ಸಂಶೋಧನೆ. ಇತಿಹಾಸ ಭೂಗರ್ಭ ಶಾಸ್ತ್ರ. ಕಲ್ಲಿದ್ದಲು. ಕೋಕ್ .ಫಿಟ್ಟರ್ ಮಿಲ್ಲರ್. ವೆಲ್ಡರ್.ಸಮಾಜ ಶಾಸ್ತ್ರ. ಖಾದಿ.ಗ್ರಾಮೋದ್ಯೋಗ.
-------------------------------
ಆರೋಗ್ಯದಲಿ.
ಕಣ್ಣಿನಲಿ ಅಕ್ಷಿಪಟಲ ಕಾರಕ.
ಎಡಕಿವಿ.ದೊಡ್ಡಕರುಳು.ಪಾದಗಳು.ಸಂಧಿವಾತ.ವೃಷಣಗಳು.ಪೋಲಿಯೋ. ಕೀಲು.ಕೂದಲು.ಅತಿನಿದ್ರೆ.ಲಕ್ವ.ನಾಯಿಕೆಮ್ಮು.ಮೂತ್ರುರಿ.ಹರ್ನಿಯಾ ಮೂಲವ್ಯಾಧಿ. ಬಾಲಗ್ರಹ.ಕ್ಷಯ.ಗ್ಯಾಸ್ಟ್ರಿಕ್. ಕುಷ್ಠ.ಕಿವುಡು.ಹಲ್ಲು.ಶೀತದಿಂದ ಬರುವ ಜ್ವರ.
ರಾಜಕ್ಷಯ.ವ್ಯಾಕುಲತೆ.ಧೀರ್ಘಾವದಿವ್ಯಾದಿ.ಮೂಳೆಗಳ ಸ್ಥಿತಿ. ಇಸುಬು.ತುರಿಕೆ .ಕಜ್ಜಿ.ಗುದ್ದಾಟದಲ್ಲಿ ಆಗುವ ಗಾಯಗಳು.ಮೂಳೆ ಮುರಿತ.ಅಂಗಛೇದನ.ಬೆನ್ನೆಲುಬು ಬಾಗುವಿಕೆ.ಪಿತ್ತದಲಿ ಕಲ್ಲು.ಮಿದುಳಿನ ರಕ್ತಸ್ರಾವ .ಮಿದುಳಿನ ಜ್ವರ.ರಕ್ತಹೆಪ್ಪುಗಟ್ಟುವುದು.
ರಕ್ತಚಲನೆಗೆ ಅಡ್ಡಿಗಳು.
ಮಾರಾಣಾಂತಿಕ ವ್ಯಾಧಿಗಳು.
ಹೆರಿಗೆ ಸಮಯದಲಿ ಆಗುವ ತಡೆಗಳು.
ನಿಧಾನ.ಸೋಮಾರಿತನ.ನಿರುತ್ಸಾಹ.ವಿರಸಗಳು ವಿವಾದಗಳುು.ಕಷ್ಟಗಳು.
-------------------------------
ಶನಿ ಶುಭವಾಗಿದ್ದರೆ.....
ಸಹನೆ.ಕಾರ್ಖಾನೆ. ಭವಿಷ್ಯ. ಸ್ಥಿರತೆ. ಕರ್ತವ್ಯದ ಜ್ಞಾನ. ದಾರಿದ್ರ್ಯ ನಿವಾರಣೆ.
-------------------------------
ಶನಿದೋಷ ನಿವಾರಣೆಗೆ.
ಪ್ರತಿಶನಿವಾರ ತಾಂಬೂಲಸಮೇತಎಳ್ಳು ದಾನ ಮಾಡಿ
ಶನಿ ಅಷ್ಟೋತ್ತರ ಪಠಿಸಿ
ನವಗ್ರಹಕೆ ಏಳು ಪ್ರದಕ್ಷಿಣೆ ಹಾಕಿ.
ಭಿಕ್ಷುಕರಿಗೆ ಅನ್ನದಾನ ಮಾಡಿ.
-------------------------------
ತುಂಬಾ ತೊಂದರೆಯಲ್ಲಿರುವವರು ಶನಿವಾರ
ನವಗ್ರಹಕೆ ೧೦೮ ಪ್ರದಕ್ಷಿಣೆ ಹಾಕಿಇದರಿಂದ ಸರ್ವಕಷ್ಟಗಳಿಗೂ ಪರಿಹಾರ ಲಭ್ಯ.
-------------------------------
ಶನಿ ಪರಿಹಾರ
ಒಬ್ಬರ ಜನ್ಮ ಕುಂಡಲಿಯಲ್ಲಿ ಸಾಡೇ ಸಾತಿ ಅಥವಾ ಅಷ್ಟಮ ಪ್ರಭಾವವು ಆರಂಭವಾದಾಗ ವ್ಯತಿರಿಕ್ತ ಪರಿಣಾಮಗಳು ಉಂಟಾಗುವವು. ಶನಿ ಪೂಜೆ, ಗ್ರಹಶನಿಶಾಂತಿ ಪೂಜೆಗಳಿಂದ ಕೆಲವು ಸಮಸ್ಯೆಯನ್ನು ಪರಿಹರಿಸಬಹುದು. ಇದರಿಂದಾಗಿ ಶನಿದೇವನನ್ನು ತೃಪ್ತಗೊಳಿಸಬಹುದು ಹಾಗೂ ಕಠಿಣ ಸಮಯದಲ್ಲಿ ಬರುವ ಸಂಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಪೂಜೆಯನ್ನು ಹೊರತುಪಡಿಸಿ ಹಲವಾರು ರೀತಿಯ ಪರಿಹಾರಗಳನ್ನು ಕೂಡಾ ಪಾಲಿಸಬಹುದು.
ಶನಿ ಮಂತ್ರ ಜಪಿಸುವುದರ ಮೂಲಕವೂ ಬರುವಂತಹ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಶನಿ ಮಂತ್ರ ಜಪಿಸುವಾಗ ಪಶ್ಚಿಮಾಭಿಮುಖವಾಗಿ ನಿಂತು ಜಪಿಸಬೇಕು. ದಿನದಲ್ಲಿ ಏಳು ಬಾರಿ ಇದನ್ನು ಜಪಿಸಬೇಕು. ರುದ್ರಾಕ್ಷ ಮಾಲೆಯನ್ನು ಹಿಡಿದುಕೊಂಡು 108 ಬಾರಿ ಈ ಮಂತ್ರ ಜಪಿಸಬಹುದು.
ಸೂರ್ಯದೇವ ಹಾಗೂ ಛಾಯಾ ದೇವಿಯ ಪುತ್ರನಾಗಿರುವ ಶನಿಗೆ ಸಂಬಂಧಿಸಿದಂತೆ ವಾರದಲ್ಲಿ ಶನಿವಾರವು ನಿರ್ದಿಷ್ಟ ದಿನವಾಗಿದೆ. ಹಾಗಾಗಿ ಈ ದಿನದಂದು ಶುದ್ಧ ಮನಸ್ಸಿನಿಂದ, ಏಕಾಗ್ರತೆಯಿಂದ ಶನಿದೇವನನ್ನು ಧ್ಯಾನಿಸಿದರೆ ಕಷ್ಟಗಳೆಲ್ಲಾ ದೂರವಾಗುವವು. ಶನಿಗೆ ಶಿವನೆಂದರೆ ಪ್ರಿಯವಾದುದರಿಂದ ಶಿವನ ಆರಾಧನೆ ಮಾಡಬೇಕು. ಶನಿ ಉಚ್ಛ ಸ್ಥಾನದಲ್ಲಿದ್ದರೆ ವೆಂಕಟೇಶ್ವರನ ಆರಾಧನೆ ಮಾಡಬೇಕು. ಶನಿಯ ಪ್ರಭಾವ ಅತಿಯಾದರೆ ಆಂಜನೇಯನ ಆರಾಧನೆ ಮಾಡಬೇಕು.
🎙️ ಶನಿ ಬೀಜ ಮಂತ್ರ:
ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ||
🎙️ ಶನಿ ಮೂಲ ಮಂತ್ರ: ಯಾರಿಗೆ ಶನಿ ದೆಸೆ ಹಾಗೂ ಸಾಡೇ ಸಾತಿ ನಡೆಯುತ್ತಿರುತ್ತದೋ ಅವರು ಶನಿಯ ಮೂಲ ಮಂತ್ರ ಪಠಿಸಬೇಕು
ಓಂ ಹ್ರಾಂ ಹ್ರೀಂ ಹ್ರೌಂ ಸಃ ಸೂರ್ಯಾಯ ನಮಃ
ಓಂ ಶ್ರಾಂ ಶ್ರೀಂ ಶ್ರೌಂ ಸಃ ಚಂದ್ರಾಯ ನಮಃ
ಓಂ ಕ್ರಾಂ ಕ್ರೀಂ ಕ್ರೌಂ ಸಃ ಮಂಗಳಾಯ ನಮಃ
ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ
ಓಂ ಹ್ರಾಂ ಹ್ರೀಂ ಹ್ರೌಂ ಸಃ ಬ್ರಹಸ್ಪತಿಯೇ ನಮಃ
ಓಂ ದ್ರಾಂ ದ್ರೀಂ ದ್ರೌಂ ಸಃ ಶುಕ್ರಾಯ ನಮಃ
ಓಂ ಖ್ರಾಂ ಖ್ರೀಂ ಖ್ರೌಂ ಸಃ ಶನೈಶ್ಚರಾಯ ನಮಃ
ಓಂ ಭ್ರಾಂ ಭ್ರೀಂ ಭ್ರೌಂ ಸಃ ರಾಹುವೇ ನಮಃ
ಓಂ ಪ್ರಾಂ ಪ್ರೀಂ ಪ್ರೌಂ ಸಃ ಕೇತುವೇ ನಮಃ
🎙️ ಶನಿ ಮಂತ್ರ: ಶನಿಯನ್ನು ಸಂತುಷ್ಟಗೊಳಿಸಲು ಹಾಗೂ ಬರುವಂತಹ ಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಲು ಈ ಮಂತ್ರ ಪಠಿಸಿ
ಓಂ ಹಿಲ್ಮ್ ಶಾಮ್ ಶನಾಯ ನಮಃ
ಓಂ ಪ್ರಾಂ ಪ್ರೀಂ ಪ್ರೌಂ ಸಹ ಶನೈಶ್ರಾಯ ನಮಃ
ಓಂ ಶಾಮ್ ಶನೇಶ್ಚಾರ ನಮಃ
ಓಂ ಐಂಗ್ ಹ್ರಿಂಗ್ ಶ್ರೀಂಗ್ ಶಂಗ್ ಶನೈಶ್ಚರಾಯ ನಮ ಓಂ
🎙️ ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಯಾತ್
ಶನಿ ಮಹಾ ಮಂತ್ರ: ಶನಿ ದೇವನು ಎಲ್ಲವನ್ನೂ ಕೊಡುವ ಹಾಗೂ ಎಲ್ಲವನ್ನೂ ನಾಶ ಮಾಡುವ ದೇವನೆಂದು ಕರೆಯುತ್ತಾರೆ. ಶನಿ ದೇವನನ್ನು ನಿಷ್ಕಲ್ಮಶ ಭಕ್ತಿಯಿಂದ ಪೂಜಿಸುವವರು ಎಲ್ಲಾ ಸಂಕಷ್ಟದಿಂದ ಪಾರಾಗಿ ನೆಮ್ಮದಿಯ ಜೀವನ ನಡೆಸುತ್ತಾರೆ.
ಓಂ ನಿಲಾಂಜನ ಸಮಾಭಾಸಂ| ರವಿ ಪುತ್ರಂ ಯಮಾಗ್ರಜಂ||
ಛಾಯಾ ಮಾರ್ತಾಂಡ ಸಂಭೂತಂ| ತಂ ನಮಾಮಿ ಶನೈಶ್ಛರಂ||
🎙️ ಶನಿ ದೋಷ ಧಮನಕ್ಕೆ ಅಖಂಡ ಜ್ಯೋತಿ
ಶನಿ ದೋಷ ನಿವಾರಣಾ ಪರಿಹಾರ ಕ್ರಮ
51 ದಿನ ಉಪವಾಸ ಮಾಡಿ ಸಂಜೆ ಸೂರ್ಯಾಸ್ತ ಬಳಿಕ ಅಕ್ಕಿ ಮತ್ತು ಕಪ್ಪು ಉದ್ದಿನಿಂದ ಮಾಡಿರುವ ಕಿಚಡಿಯನ್ನು ಸೇವಿಸಬೇಕು.
14 ಮುಖವಿರುವ ರುದ್ರಾಕ್ಷಿ ಅಥವಾ ಸಪ್ತಮುಖಿ ರುದ್ರಾಕ್ಷಿ ಮಾಲೆ ಅಥವಾ 36 ಮಣಿ ಇರುವಂತಹ ಶನಿ ಮಾಲೆ ಧರಿಸಿ
ಶನಿವಾರದಂದು ಎಳ್ಳು ದಾನ ಮಾಡಿ
ಶನಿವಾರ ಹನುಮಾನ್ ಚಾಲೀಸ ಪಠಿಸಿ ಹಾಗೂ ಹನುಮಂತನ ಮೂರ್ತಿಯ ಮುಂದೆ ತುಪ್ಪದ ದೀಪವನ್ನು ಹಚ್ಚಿ
ಶನಿದೋಷದಿಂದ ಉದ್ಯೋಗ ಸಿಗದೇ ಇದ್ದಲ್ಲಿ ಎಳ್ಳೆಣ್ಣೆಯಲ್ಲಿ ನಿಮ್ಮ ಪ್ರತಿಬಿಂಬ ನೋಡಿ ನಂತರ ಭಿಕ್ಷುಕರಿಗೆ ದಾನ ಮಾಡಿ
ಶನಿ ಪ್ರಕೋಪ ಕಡಿಮೆ ಮಾಡಲು ಮಹಾಮೃತ್ಯುಂಜಯ ಮಂತ್ರ ಜಪಿಸಿ
ಶನಿ ದೋಷದಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಲ್ಲಿ ಪುಷ್ಯಾ ಅಥವಾ ಪುನರ್ವಸು ನಕ್ಷತ್ರ ಇರುವ ಗುರುವಾರದ ದಿನ ವೀಳ್ಯದೆಲೆಯ ಮೇಲೆ ಹನುಮಂತನ ವಿಗ್ರಹವನ್ನು ಇಟ್ಟು ಪೂಜೆ ಮಾಡಬೇಕು. ಹಾಗೂ ಹನುಮಂತ್ರನ ಮಂತ್ರವಾದ ಹನುಮಾನ್ ಚಾಲೀಸವನ್ನು ಕನಿಷ್ಠ ಮೂರು ಬಾರಿ ಪಠಿಸಬೇಕು ^
🎙️ ಜಾತಕದಲ್ಲಿ ಶನಿದೋಷವಿದ್ದರೆ,
ಕಪ್ಪು ಎಳ್ಳನ್ನು ಒಂದು ಕಪ್ಪು ಬಟ್ಟೆಯಲ್ಲಿಕಪ್ಪು ದಾರದ ಮೂಲಕ ಕಟ್ಟಿ ಶನಿವಾರದ ದಿನ ಪೂರ್ತಿ ನಿಮ್ಮ ಬಳಿಯೇ ಇಟ್ಟುಕೊಂಡಿರಬೇಕು
ಸಂಜೆ ದೇವಸ್ಥಾನಕ್ಕೆ ಹೋಗಿ ಕಪ್ಪು ಎಳ್ಳಿನ ಬಟ್ಟೆಯಲ್ಲಿ ಎಳ್ಳೆಣ್ಣೆ ಅಥವಾ ತುಪ್ಪದ ಸಹಾಯದಿಂದ ದೀಪ ಬೆಳಗಿಸಬೇಕು
ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಯನ್ನು ಶನಿ ದೇವರಿಗೆ ಅರ್ಪಿಸಿ ನಿಮ್ಮ ಹೆಸರಿನಲ್ಲಿ ಪೂಜೆ ಮಾಡಬೇಕು
ಎಳ್ಳಿನಿಂದ ಮಾಡಿದ ಪ್ರಸಾದವನ್ನು ಇತರರಿಗೂ ಕೊಟ್ಟು ನೀವೂ ಸೇವಿಸಬೇಕು
ಶನಿಗಾಯತ್ರಿ ಅಥವಾ ಮೂಲಮಂತ್ರವನ್ನು 9, 27, 81 ಅಥವಾ 108 ಬಾರಿ ಜಪಿಸಬೇಕು
ಸೋಮವಾರ ಶಿವನಿಗೆ ಅಥವಾ ಶನಿವಾರ ಶನಿಗೆ ಅಭಿಷೇಕ ಮಾಡಬೇಕು
ಈ ಸಮಯದಲ್ಲಿ ಮದ್ಯಪಾನ, ಧೂಮಪಾನ, ಮಾಂಸ ಭಕ್ಷಣೆ, ಲೈಂಗಿಕ ಸಂಪರ್ಕದಿಂದ ದೂರವಿರಬೇಕು
ಶನಿವಾರ ಮುಂಜಾನೆಯಿಂದ ಭಾನುವಾರ ಮುಂಜಾವಿನವರೆಗೂ ಉಪವಾಸವಿರಬೇಕು
ಶನಿವಾರದ ದಿನ ಕಪ್ಪು ಅಥವಾ ನೀಲಿ ಬಟ್ಟೆಯನ್ನೇ ಧರಿಸಬೇಕು
ಮನೆಯಲ್ಲಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚಿ ನೀಲಿ ಪುಷ್ಪಗಳನ್ನು ಅರ್ಪಿಸಿ ಜಪವನ್ನು ಮಾಡಿ, ಪ್ರಸಾದವನ್ನು ಹಸುವಿಗೆ ನೀಡಿ ನಂತರ ನೀವು ಸೇವಿಸಬೇಕು.
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
No comments:
Post a Comment