#ದೇವರಿಗೆ__ಪೂಜೆ__ಪ್ರಾರ್ಥನೆ__ಯಾಕೆ__ಮಾಡಬೇಕು___
ಪೂಜೆ ಯಾಕೆ ಮಾಡಬೇಕು. ಪ್ರಾರ್ಥನೆ ಯಾಕೆ ಮಾಡಬೇಕು ಬಹಳ ಜನರನ್ನು ಕಾಡುವ ಪ್ರಶ್ನೆಯಿದು ಕಾಣದ ದೇವರಿಗೆ ಪೂಜೆ ಯಾಕೆ ಮಾಡಬೇಕು ದೇವರ ಪೂಜೆಯಿ೦ದ ನಿಜವಾಗಿಯೂ ಲಾಭವಿದೆಯೇ?
ನಾವು ದೇವರ ಪೂಜೆ ಮಾಡದಿದ್ದರೆ, ಏನಾಗುತ್ತದೆ ಪೂಜೆ' ಎನ್ನುವುದು ಒ೦ದು ಯೋಗ ಶಾಸ್ತ್ರದ ಪದ್ಧತಿ ಸಾಧನೆಗೆ ಅನು ಸಂಧಾನವಾದ ಪ್ರಕ್ರಿಯೆ ಎಂಬ ಪರಮಾರ್ಥ ಸೃಷ್ಟಿ ಸ್ಥಿತಿ ಲಯಗಳೆಂಬ ಜೀವನ ವ್ಯವಸ್ಥೆಗೆ ಕಾರಣವಾದ ದೇವಾನು ದೇವನಿಗೆ ಸರ್ವೋತ್ತಮನಿಗೆ ಕೃತಜ್ಞತೆ ಸಲ್ಲಿಸುವ ಧಾರ್ಮಿಕ ವಿಧಾನವೇ ಪೂಜೆ ___
ಪೂಜೆ ಮಾಡದೇ ಇದ್ದರೇ ಏನಾಗುತ್ತದೆಯೋ ಗೊತಿಲ್ಲ. ಅದಕ್ಕೆ ಪೂಜೆ ಮಾಡಿದರೆ, ಮಾತ್ರ ನಮ್ಮ ಜೀವನಕ್ಕೇನು ಬೇಕೋ ಎಲ್ಲವೂ ಸಿಗುತ್ತವೆ ಶಾಂತಿ, ನೆಮ್ಮದಿ, ನಂಬಿಕೆ, ಸರಿತೋಷ." ಸಹೃದಯತೆ, ಯೋಜನಾ ಮುನ್ನಡೆ, , ಧೈರ್ಯ, ಕಾರ್ಯದಕ್ಷತೆ, ದೀಕ್ಷೆ, ಆಶಾವಾದ, ಶ್ರದ್ಧೆ, ಗಹಿತ್ಯ ಕಲಿಯುವಿಕೆ, ಆರಾಧನೆ, ಐಕ್ಕತೆ, ಮು೦ತಾದ ಶಕ್ತಿ ಕ್ರಿಯೆಗಳು ಲಭಿಸುತವೆ ಪೂಜೆಯಿಂದ ಮನೋಶಕ್ತಿ ವೃದ್ಧಿಯಾಗುತ್ತದೆ.
ಅವಶ್ಯ ಮನುಭೋಕ್ತವ್ಯ೦ ಗತ೦ ಜನ್ಮಶುಭಾಶುಭಂ”
ಗತ ಜನ್ಮದಲ್ಲಿ ಮಾಡಿರುವ ಪಾಪ ಪುಣ್ಯಗಳನ್ನೇ ನಾವು
ಈ ಜನ್ಮದಲ್ಲಿ ಅನುಭವಿಸುತ್ತಿದ್ದೇವೆ. ಅಂದಮೇಲೆ ಗತ ಜನ್ಮದ ಕಾರಣದಿಂದ ಬಂದ ಕಷ್ಟಗಳನ್ನು ಈಗ ಅನುಭವಿಸಬೇಕಾಗಿ ಬಂದಿದೆ. ಈಗ ಮಾಡುವ ಪೂಜೆಗೂ ಕಷ್ಟಗಳಿಗೂ ಸಂಬಂಧವಿಲ್ಲ. ನಾವೀಗ ಮಾಡುವ ಪೂಜಾಫಲದಿಂದ ಕಷ್ಟ ನಿವಾರಣೆ ಯಾಗದಿದ್ದರೂ. ಉಪಶಮನ ಸಿಗುತ್ತದೆ. ಸಹನಶಕ್ತಿ ಸಿಗುತ್ತದೆ.ಗತ ಜನ್ಮದ ರೋಗಕ್ಕೆ ಈ ಜನ್ಮದ ಔಷಧಿಯೇ ಪೂಜೆ
ಪ್ರಾರ್ಥನೆ ಪೂಜೆ ನಂಬಿದವರಿಗೆ ದೇವರಿದ್ದಾನೆ ಪಾಲಿಸುತಾನೆ ರಕ್ಷಿಸುತ್ತಾನೆ. ಸಹಕರಿಸುತ್ತಾನೆ. ಎಂಬುದಕ್ಕೆ ಸಾಕ್ಷಿಯಾಗುವ ಸ್ವಾರಸ್ಯಕರ
ಪ್ರಸಂಗವೊಂದು ಇಲ್ಲಿದೆ ನಗರದಲ್ಲಿ ಔಷಧ ಅಂಗಡಿ ಹೊಂದಿದ್ದ ವ್ಯಕ್ತಿಯೊಬ್ಬ ದೇವರನ್ನು ನಂಬದ ಪರಮ ನಾಸ್ತಿಕನಾಗಿದ್ದ.
ಆದರೆ ಜನಸೇವೆಯೆಂಬ ಕಾಯಕದಿಂದ ಆಸುಪಾಸಿನವರಿಗೆಲ್ಲ ಅಚ್ಚುಮೆಚ್ಚಿನವನಾಗಿದ್ದ. ಆತನ ಮನೆಯವರೆಲ್ಲ ಆಸ್ತಿಕರಾಗಿದ್ದರು. ದೇವಸ್ಥಾನ, ದೇವರು, ಪ್ರಾರ್ಥನೆ ಇಂತಹ ವಿಚಾರದಲ್ಲಿ ನಂಬಿಕೆ ಇದ್ದ ಮನೆಮಂದಿಯೆಲ್ಲ ಈತನನ್ನು ಪ್ರಾರ್ಥಿಸುವಂತೆ ಒತ್ತಾಯಿಸುತ್ತಿದ್ದರೂ ನಾಸ್ತಿಕನಾಗಿಯೇ ಉಳಿದಿದ್ದ.
ಒಂದು ದಿನ ರಾತ್ರಿ ಜೋರಾಗಿ ಮಳೆಸುರಿಯಲಾರಂಭಿಸಿದಾಗ ವಿದ್ಯುತ್ ಕಡಿತವಾಯಿತು. ಆ ವೇಳೆಯಲ್ಲಿ ಮಳೆಯಲ್ಲಿ ತೋಯ್ದು ಹೋಗಿದ್ದ ಬಾಲಕನೊಬ್ಬ ಓಡೋಡಿ ಬಂದು ಅನಾರೋಗ್ಯ ಪೀಡಿತಳಾಗಿರುವ ತನ್ನ ತಾಯಿಗೆ ತುರ್ತಾಗಿ ಔಷಧ ಕೊಡುವಂತೆ ಕೋರಿ ಔಷಧ ಚೀಟಿಯನ್ನು ಕೊಟ್ಟ. ಅಂಗಡಿ ಮಾಲೀಕ ಒಲ್ಲದ ಮನಸ್ಸಿನಿಂದಲೇ ಟಾರ್ಚ್ ಬೆಳಕಿನಲ್ಲಿ ತಡಕಾಡಿ ಔಷಧ ಕೊಟ್ಟು ಕಳಿಸಿದ.
ಕೊಂಚ ಹೊತ್ತಲ್ಲಿ ಮಳೆ ನಿಂತು, ವಿದ್ಯುತ್ ದೀಪಗಳು ಬೆಳಗಿದವು. ಅಷ್ಟರಲ್ಲಿ ಅಂಗಡಿ ಮಾಲೀಕ, ತಾನು ಕತ್ತಲಲ್ಲಿ ಬಾಲಕನಿಗೆ ಕೊಟ್ಟ ಔಷಧಗಳತ್ತ ಗಮನ ಹರಿಸಿ ಹೌಹಾರಿದ. ಅದು ಮನುಷ್ಯರು ಸೇವಿಸುವ ಔಷಧವಾಗಿರದೆ ಕ್ರಿಮಿನಾಶಕದ ಬಾಟಲಿಯಾಗಿತ್ತು. ತನ್ನಿಂದ ಅಮಾಯಕ ಜೀವವೊಂದು ಬಲಿಯಾಗುತ್ತದಲ್ಲ ಎಂಬ ಪಾಪಪ್ರಜ್ಞೆಯ ಜತೆಗೆ ಆ ಬಾಲಕ ಅನಾಥನಾಗುತ್ತಾನಲ್ಲ, ಎಂಬ ಅಪರಾಧ ಪ್ರಜ್ಞೆಯೂ ಕಾಡಿತು. ಏನು ಮಾಡಬೇಕೆಂಬುದನರಿಯದೆ ಈ ದುರಂತವನ್ನು ಹೇಗೆ ತಪ್ಪಿಸಲಿ ಎಂದು ಯೋಚಿಸುತ್ತಾನೆ.
ಆಗ ಆತನಿಗೆ ಗೋಡೆಯಲ್ಲಿ ತೂಗುಹಾಕಿದ್ದ ದೇವರ ಚಿತ್ರಪಟವೊಂದು ಕಣ್ಣಿಗೆ ಬಿತ್ತು. ಬೇಡವೆಂದರೂ ಒತ್ತಾಯದಿಂದ ಆತನ ತಂದೆ ಅದನ್ನಲ್ಲಿ ತೂಗು ಹಾಕಿದ್ದರು. ‘ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿ ನಿನ್ನ ಕೈಮೀರಿ ಹೋದಾಗ, ಅಸಹಾಯ ಸ್ಥಿತಿಯಲ್ಲಿದ್ದಾಗಲಾದರೂ ಈ ಚಿತ್ರ ಪಟಕ್ಕೆ ಕೈಮುಗಿದು ಮನಃಪೂರ್ವಕವಾಗಿ ಪ್ರಾರ್ಥಿಸು, ದಾರಿಯೊಂದು ಗೋಚರವಾಗುತ್ತದೆ’ ಎಂದು ಅಪ್ಪ ಹೇಳಿದ್ದ ಮಾತು ಆ ಕ್ಷಣಕ್ಕೆ ನೆನಪಿಗೆ ಬಂತು. ಎಂದೂ ದೇವರಿಗೆ ಕೈಮುಗಿಯದಿದ್ದ ಆತ ಮೊದಲ ಬಾರಿಗೆ ಕೈಮುಗಿದು ಪ್ರಾರ್ಥನೆ ಸಲ್ಲಿಸಿದ.
ಕೆಲವೇ ಕ್ಷಣಗಳಲ್ಲಿ ಪವಾಡವೋ ಎಂಬಂತೆ ಔಷಧ ತೆಗೆದುಕೊಂಡು ಹೋಗಿದ್ದ ಬಾಲಕ ಏದುಸಿರು ಬಿಡುತ್ತ ಓಡೋಡಿ ಅಂಗಡಿಗೆ ಬಂದು ‘ಅಂಕಲ್ ಜೋರುಮಳೆಯಲ್ಲಿ ನಾನು ಓಡೋಡಿ ಹೋಗುತ್ತಿದ್ದಾಗ ನೀವು ಕೊಟ್ಟಿದ್ದ ಔಷಧ ಬಾಟಲಿ ಕೈಜಾರಿ ಕೆಳಗೆ ಬಿದ್ದು ಒಡೆದು ಹೋಯಿತು, ನನಗೆ ಇನ್ನೊಂದು ಔಷಧ ಬಾಟಲಿ ಕೊಡಿ, ಆದರೆ ನನ್ನಲ್ಲೀಗ ಕೊಡಲು ಹಣವಿಲ್ಲ’ ಎಂದು ಗಾಬರಿಯಿಂದ ಒಂದೇ ಉಸಿರಿಗೆ ಹೇಳಿ ಕಣ್ಣೀರು ಹಾಕಿದ.
ಆಗ ಅಂಗಡಿಯವನು ಆ ಬಾಲಕನನ್ನು ತಬ್ಬಿಕೊಂಡು, ಆತನಿಗೆ ಬೇಕಾದ ಔಷಧದ ಜತೆಗೆ ಕೊಂಚ ಹಣವನ್ನೂ ಕೊಟ್ಟು ಕಳಿಸಿದ. ನಾಸ್ತಿಕನಾಗಿದ್ದರೂ ಪರಿಶುದ್ಧ ಮನಸ್ಸಿನಿಂದ ಆತ ಮೊದಲ ಬಾರಿಗೆ ದೇವರಲ್ಲಿ ಮೊರೆಇಟ್ಟು ಮಾಡಿದ ಪ್ರಾರ್ಥನೆ ಕೈಗೂಡಿತ್ತು. ಮನುಜ ಶುದ್ಧಭಕ್ತಿಯ ಮೂಲಕ ಮೋಕ್ಷವನ್ನು ಪಡೆಯಬಹುದು. ಸರ್ವಶಕ್ತನಾದ ಭಗವಂತನಲ್ಲಿ ಅನುದಿನ-ಅನುಕ್ಷಣ ಪ್ರಾರ್ಥನೆ ಸಲ್ಲಿಸುತ್ತಿರಬೇಕು. ನಿಷ್ಕಲ್ಮಶ ಮನದಿಂದ ಪ್ರಾರ್ಥನೆ ಸಲ್ಲಿಸಿದಾಗ ಅಸಾಧ್ಯವೂ ಸಾಧ್ಯವಾಗುತ್ತದೆ.
No comments:
Post a Comment