Thursday, 18 June 2020

"ಕತ್ತಲು ಬೆಳಕಿದ್ದಲ್ಲಿಗೆ ಹೋಗುವುದಿಲ್ಲ , ಬೆಳಕು ಕತ್ತಲಿದ್ದಲ್ಲಿಗೆ ಹೋಗಬೇಕು ".

"ಕತ್ತಲು ಬೆಳಕಿದ್ದಲ್ಲಿಗೆ ಹೋಗುವುದಿಲ್ಲ , ಬೆಳಕು ಕತ್ತಲಿದ್ದಲ್ಲಿಗೆ ಹೋಗಬೇಕು ". 

ಒಂದೊಮ್ಮೆ ಶ್ರೀಕೃಷ್ಣ ತನ್ನ ಅಲಂಕರಿಸುವ ಕನ್ನಡಿಯ ಮುಂದೆ ಅಲಂಕಾರವನ್ನು ಮಾಡುತ್ತಿದ್ದ . ಅವನು ತನ್ನ ತಲೆಯ ಮೇಲೆ ವಿವಿಧ ಕಿರೀಟಗಳನ್ನು  ತೊಟ್ಟು ಹೇಗೆ ಕಾಣುತ್ತದೆ ಎಂದು ನೋಡುತ್ತಿದ್ದ , ಹಾಗೆ ತನಗೆ ಬೇಕಾದ ಒಳ್ಳೊಳ್ಳೆಯ ಆಭರಣಗಳನ್ನು ತೊಡುತ್ತಿದ್ದ , ಹೊರಗೆ ಅವನ ರಥವು ಸಾರಥಿಯ ಸಮೇತ ಅವನಿಗಾಗಿ ಕಾಯುತ್ತಿತ್ತು  .
ಬಹಳ ಸಮಯ ಕಾದರು ಕೃಷ್ಣ ಹೊರಗೆ ಬರದಿರಲು...
ಅವನ ರಥದ ಸಾರಥಿಯು  ಕಾಯುತ್ತಾ ಕಾಯುತ್ತಾ ತಾನೇ ಯೋಚಿಸಲಾರಂಭಿಸಿದ  - ಸಾಮಾನ್ಯವಾಗಿ, ಕೃಷ್ಣ ತಕ್ಷಣ ಬರುತ್ತಾನೆ, ಇಂದು ಅವನು ಇನ್ನೂ ಬಂದಿಲ್ಲ.ಯಾವತ್ತೂ ಕೃಷ್ಣ ತಡವಾಗಿ ಹೋದವನಲ್ಲ ಮಾತ್ತೆ ಇಂದುಯಾಕೆ ಹೀಗೆ  ಎಂಬ ಕುತೂಹಲ ಸಾರಥಿಗೆ , ಕೃಷ್ಣ ಹೋಗಬೇಕಾದ ಕಾರ್ಯಕ್ರಮಕ್ಕೆ ತಡವಾಗಬಹುದೆಂದು ಆಲೋಚಿಸಿ ಒಳಗೆ ಏನು ನಡೆಯುತ್ತಿದೆ  ಮತ್ತು ಕೃಷ್ಣನಿಗೆ ಅದನ್ನು ತಿಳಿಸಲೆಂದು ಸಾರಥಿಯು ಒಳಗೆ ಹೋಗುತ್ತಾನೆ  , ಕೃಷ್ಣ ಯಾವಾಗ ಬೇಕಿದ್ದರೂ ತನ್ನ ಕಾರ್ಯಕ್ರಮವನ್ನು ಬದಲಾಯಿಸಬಹುದು ಹಾಗಾಗಿ ಒಳಗೆ ಏನಾಗುತ್ತಿದೆ ಎಂದು ನೋಡಲು ಒಳಗೆ ಹೋದರೆ ,ಶ್ರೀಕೃಷ್ಣನು ಕನ್ನಡಿಯ ಮುಂದೆ ನಿಂತು ತನ್ನಅಂದವನ್ನು  ಮೆಚ್ಚಿಕೊಳ್ಳುವುದನ್ನು ನೋಡುತ್ತಾನೆ.

ಸಾರಥಿಯು  ನಯವಾಗಿ , “ನನ್ನ ಪ್ರಿಯ ಮಹಾಪಭು  , ಹೇಳು , ನೀನು ಇಂದು ಏಕೆ ತುಂಬಾ ಉತ್ತಮವಾದ ಉಡುಗೆಯನ್ನು ತೊಟ್ಟು ನಿನ್ನ ಅಲಂಕಾರಕ್ಕೆ ಮಹತ್ವ ಕೊಡುತ್ತಿದ್ದೀಯ ? . ನಾವು ಎಲ್ಲಿಗೆ ಹೋಗುತ್ತಿದ್ದೇವೆ?"
ಶ್ರೀಕೃಷ್ಣನು, “ನಾನು ದುರ್ಯೋಧನನನ್ನು ಭೇಟಿಯಾಗಲಿದ್ದೇನೆ” ಎಂದು ಹೇಳಿದನು.
ಸಾರಥಿಯು  “ದುರ್ಯೋಧನನನ್ನು ಭೇಟಿಯಾಗಲು ನೀವು ಈ ಪರಿಯ ಉಡುಗೆ ತೊಡುತ್ತಿದ್ದೀರಾ  ?” ಎಂದು ಕೇಳಿದನು .
ಆಗ ಕೃಷ್ಣನು, “ಅವನು ನನ್ನ ಅಂತರಾತ್ಮವನ್ನು ಅರಿಯಲಾರ ಮತ್ತು  ನೋಡಲಾರ, ಅವನು ನನ್ನ ಬಾಹ್ಯ ಅಂದವನ್ನಷ್ಟೇ ನೋಡಿ ಅದನ್ನು ಅಳೆಯುವವ ಮತ್ತು ಮೆಚ್ಚುವವನು  ಹಾಗಾಗಿ ನನ್ನ ಅಂತರಾತ್ಮವನ್ನು  ನೋಡಲು ಸಾಧ್ಯವಾಗದ ಕಾರಣ ನಾನು ಹೀಗೆ ಉಡುಗೆ  ಧರಿಸಿದ್ದೇನೆ ಅದು ಅವನು ಇದನ್ನು ಮೆಚ್ಚುವುದಕ್ಕಾಗಿ  ”

ಆಗ ಸಾರಥಿ , “ನೀವು ದುರ್ಯೋಧನಲ್ಲಿಗೆ  ಹೋಗುತ್ತಿದ್ದೀರಾ? ನೀವು ಹೋಗಬಾರದು, ಅವನು ನಿಮ್ಮ ಬಳಿಗೆ ಬರಬೇಕು. ಇದನ್ನು ನಾನು ಒಪ್ಪಲು ಸಾಧ್ಯವಿಲ್ಲ. ” ಎಂದು ಹೇಳುತ್ತಾ , “ಇದು ನ್ಯಾಯವಲ್ಲ. ನೀವು ಯಾರು ಮತ್ತು ಅವನಾರು ! ನೀವು ಮೂರುಲೋಕದ ಲೋಕದ ಪ್ರಭು. ನೀವು ಹೋಗಬಾರದು, ಅವನೇ ಬೇಕಿದ್ದರೆ  ಬರಲಿ. ”
ಕೃಷ್ಣ ಹಿಂದೆ ತಿರುಗಿ, ಅವನತ್ತ ನೋಡುತ್ತಾ, ಮುಗುಳ್ನಕ್ಕು,
ಹೇ ಸಾರಥಿ....
"ಕತ್ತಲು ಬೆಳಕಿದ್ದಲ್ಲಿಗೆ ಹೋಗುವುದಿಲ್ಲ , ಬೆಳಕು ಕತ್ತಲಿದ್ದಲ್ಲಿಗೆ ಹೋಗಬೇಕು ". 
ಹಿರಿಯರಿಂದ ಕೇಳಿದ ಪ್ರಸಂಗ.

No comments:

Post a Comment