ಪಿತ್ತಕೋಶ ರೋಗ
(Liver problem)
6,8 ನೇ ಅಧಿಪತಿ ಆಗಿ ಬುಧನು ರವಿಯೊಂದಿಗೆ ಸೇರಿ ಮೇಷ,ತುಲಾ ,ಮಕರ,ಕಟಕದಲ್ಲಿ ಇದ್ದು ಕುಜ, ಶನಿ ,ರಾಹು ಜೊತೆ ಸೇರಿದರೆ ಪಿತ್ತಕೋಶದಲ್ಲಿ ರೋಗ ಇರುತ್ತದೆ
ರವಿ,ಶನಿ,ಶುಕ್ರರು ಮೇಲಿನ ರಾಶಿಗಳಲ್ಲಿ ಇದ್ದು 1,6,8,12ನೇ ಅಧಿಪತಿ ಆಗಿ ಕುಜ, ರಾಹು ನೋಡಿದರೆ ಶೀತಪಿತ್ತ ಆಗುವುದು
6,8ನೇ ಭಾವದಲ್ಲಿ ಕುಜ ಇದ್ದು ಶನಿ ,ರಾಹು ನೋಡಿದರೆ ಪಿತ್ತಕೋಶದಲ್ಲಿ ಉಷ್ಣ ಹೆಚ್ಚಾಗಿ ಉಕ್ಕಿದ ಪಿತ್ತರಸದಿಂದ ಮೈತುರಿ ಉಂಟಾಗುವುದು
5 ನೇ ಭಾವವು ಮೇಷ,ಕಟಕ,ತುಲಾ,ಮಕರ,ಕನ್ಯಾ,ಧನಸ್ಸು,ವೃಶ್ಚಿಕವಾಗಿ ಅಲ್ಲಿ ಕುಜ ,ಶನಿ,ರಾಹು ಇದ್ದು ಪಂಚಮಾದಿಪತಿ ಕುಜ,ಶನಿ,ರಾಹು ನಕ್ಷತ್ರದಲ್ಲಾಗಲಿ ಅಷ್ಠಮಾದಿಪತಿ ನಕ್ಷತ್ರದಲ್ಲಾಗಲಿ ಇದ್ದರೆ ಪಿತ್ತಕೋಶದಲ್ಲಿ ರೋಗ ಇರುತ್ತದೆ
ಗುರು ಕಟಕ ,ಕನ್ಯಾದಲ್ಲಿದ್ದು 1,6,8,12 ನೇ ಸ್ಥಾನ ಆಗಿ ಅಲ್ಲಿ ಕುಜ,ಶನಿ,ರಾಹು ನೋಡಿದರೆ ರಕ್ತದಲ್ಲಿ ಪಿತ್ತರಸ ಸೇರಿ ಅರೋಗ್ಯ ಕೆಡುವುದು
ಕುಜನು ಕನ್ಯಾದಲ್ಲಿ ಇದ್ದು 1,6,8,12 ನೇ ಅಧಿಪತಿ ಆಗಿ ಅಲ್ಲಿದ್ದರೂ1,6,8,12ನೇ ಭಾವದಲ್ಲಿ ಇದ್ದರೂ ಶನಿ,ರಾಹುಗಳಿಂದ ನೋಡಿದರೆ ಪಿತ್ತಕೋಶ ಜ್ವರ ಬರುವುದು
ರವಿಯು ಮೇಷ,ಕಟಕ,ತುಲಾ,ಮಕರದಲ್ಲಿ ಇದ್ದು 1,6,8,12ನೇ ಭಾವವಾಗಿ ಕುಜ,ಶನಿ,ರಾಹು ನೋಡಿದರೆ ಪಿತ್ತಕೋಶವು ಕೆಟ್ಟು ಹೋಗಿರುವುದು
ಚಂದ್ರನು ಮೇಲಿನ ರಾಶಿಗಳಲ್ಲಿ ಇದ್ದು 1,6,8,12 ನೇ ಸ್ಥಾನ ಆಗಿ ಗುರುವಿನಿಂದ ನೋಡಿದರೆ ಪಿತ್ತಕೋಶ ಭಾದೆ ಇರುತ್ತದೆ
ಶನಿ ಸಿಂಹ , ಕನ್ಯಾದಲ್ಲಿ ಇದ್ದು 1,6,8,12ನೇ ಸ್ಥಾನ ಆಗಿ ಕುಜ,ರಾಹು ನೋಡಿದರೆ liver complete damage ಆಗಿಯುತ್ತದೆ
ಗುರು ಮಿಥುನ, ಕಟಕ,ಕನ್ಯಾ,ಮಕರದಲ್ಲಿ ಇದ್ದು 1,6,8,12 ನೇ ಸ್ಥಾನವಾಗಿ ಶನಿ,ಕುಜ,ರಾಹು ನೋಡಿದರೆ ಪಿತ್ತಕೋಶದ ತೊಂದರೆ ಇರುತ್ತದೆ
ಶನಿಯು ಕನ್ಯಾ,ತುಲಾ, ವೃಶ್ಚಿಕದಲ್ಲಿ ಇದ್ದು 1,6,8,12 ಆದರೆ ಕುಜ,ರಾಹು ನೋಡಿದರೆ ಪಿತ್ತಕೋಶದಲ್ಲಿ ಕಲ್ಲು ಮತ್ತು ಮಣ್ಣು ಇರುತ್ತದೆ
No comments:
Post a Comment