🕉 ಓಂ ಶ್ರೀ ಗುರುಭ್ಯೋ ನಮಃ 🕉 *ವೃಕ್ಷಗಳ ಆರಾಧನೆ*
ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ ಅಗ್ರತೋ ರುದ್ರರೂಪಾಯ ವೃಕ್ಷ ದೇವಾಯತೇ ನಮಃ.
ಸರ್ವ ವೃಕ್ಷಂ ಸರ್ವ ದೇವತಾ ನಿವಾಸಿತಂ, ಸರ್ವ ಆಯುರ್ವೇದಂ ಮೂಲಂ, ಸರ್ವವೃಕ್ಷ ದೇವಂ ಸರ್ವಾರೋಗ್ಯ ನಿವಾರಕಂ, ಸರ್ವಸಂಕಷ್ಟನಿವಾರಕಂ ಇದಂ ವೃಕ್ಷದೇವ ಸಂಕುಲಂ.
ಭೂಮಿಯಲ್ಲಿರುವ ಸಕಲ ಸಸ್ಯಗಳಲ್ಲೂ ದೇವಾನು ದೇವತೆಗಳು ನೆಲೆಸಿದ್ದಾರೆ. ಇಂತಹ ವೃಕ್ಷಗಳ ಪೂಜೆ ಆರಾಧನೆಗಳಿಂದ ಧನ್ಯತೆಯುಂಟಾಗುವುದರಲ್ಲಿ ಸಂಶಯವೇ ಇಲ್ಲ.
*ಔದುಂಬರ (ಅತ್ತಿ ಮರ) ವೃಕ್ಷ* ಓಂ ಔದುಂಬರವೃಕ್ಷದೇವಾಯೈ ನಮಃ - ಶುಕ್ರಗ್ರಹ ವೃಕ್ಷ. ಮಹಾಲಕ್ಷ್ಮಿ ನೆಲೆಸಿರುವಳು. ದತ್ತದೇವರ ನಿವಾಸ. ಅರವತ್ನಾಲ್ಕು ಯೋಗಿನಿಯರು ನೆಲೆಸಿದ್ದಾರೆಂದು ಗುರುಚರಿತ್ರೆಯಲ್ಲಿ ಉಲ್ಲೇಖವಾಗಿದೆ.
*ಅಶ್ವತ್ಥ (ಅರಳಿ ಮರ) ವೃಕ್ಷ* ಓಂ ಅಶ್ವಥ್ಥವೃಕ್ಷದೇವೇಯೈ ನಮಃ - ಗುರುಗ್ರಹ ವೃಕ್ಷ. ತ್ರಿಮೂರ್ತಿಗಳು ನೆಲೆಸಿರುತ್ತಾರೆ. ಸಂತಾನಕ್ಕಾಗಿ, ಸರ್ವಸಂಕಷ್ಟ ನಿವಾರಣೆಗಾಗಿ ಈ ವೃಕ್ಷ ಪೂಜನೀಯ.
*ಅರ್ಕ (ಎಕ್ಕ ಗಿಡ) ವೃಕ್ಷ* ಎಕ್ಕವೃಕ್ಷದೇವ್ಯೈನಮಃ - ಸೂರ್ಯಗ್ರಹ ಹಾಗೂ ಗಣಪತಿ ವೃಕ್ಷ . ಸರ್ವಜಯ ಹಾಗೂ ವಿಘ್ನ ನಿವಾರಣೆಗಾಗಿ ಪೂಜನೀಯ. ಎಕ್ಕದ ಹೂವಿನಿಂದ ಶಿವ ಪೂಜೆ ಬಹಳ ಪವಿತ್ರ.
*ಫಲಾಶ (ಮುತ್ತುಗ ಮರ) ವೃಕ್ಷ* ಮುತ್ತುಗ ವೃಕ್ಷ - ಚಂದ್ರ ಗ್ರಹ ವೃಕ್ಷ. ಮನಃಶ್ಯಾಂತಿಗಾಗಿ, ಮದುವೆಗಾಗಿ, ಸಂಕಷ್ಟ ಪರಿಹಾರಕ್ಕಾಗಿ ಪೂಜನೀಯ.
*ತುಳಸೀವೃಕ್ಷ* - ಸರ್ವ ದಾರಿದ್ರ್ಯನಾಶಿನಿ ಲಕ್ಷ್ಮಿರೂಪಿಣಿ. ವಿಷ್ಣು ಪ್ರಿಯೆ . ತುಳಸಿಯಿಲ್ಲದ ಮನೆ ಸುಖವಿರದ ಜೀವನ ಎರಡೂ ಒಂದೇ.
*ಕಗ್ಗಲೀವೃಕ್ಷ*- ಮಂಗಳ ವೃಕ್ಷ . ಅಂಗಾರಕ ದೋಷ, ಸರ್ಪ ದೋಷ, ರಕ್ತ ದೋಷ ನಿವಾರಣೆಗಾಗಿ ಪೂಜನೀಯ.
*ಉತ್ತರಾಣಿ ವೃಕ್ಷ* - ಬುಧದೇವ ವೃಕ್ಷ . ಸರ್ವಬುದ್ದಿಕಾರಕ, ಬುಧನ ಅನುಗ್ರಹಕ್ಕಾಗಿ, ನರದೋಷ ನಿವಾರಣೆಗೆ ಪೂಜನೀಯ.
*ಶಮೀವೃಕ್ಷ ಅಥವ ಬನ್ನಿ ಮರ* - ಶ್ರೀಶನೈಶ್ಚರ ವೃಕ್ಷ . ಸರ್ವಸಂಕಷ್ಟ ನಿವಾರಣೆ. ಏಳೂವರೆ ವರ್ಷಗಳ ಮಹಾತ್ಮನ ಅವಧಿಯಲ್ಲಿ ಈ ವೃಕ್ಷ ಪೂಜೆಯಿಂದ ಶುಭ. ಮೂಳೆಯ ಸಂಬಂಧಿಸಿದ ರೋಗಗಳ ನಿವಾರಣೆಗೆ ಪೂಜನೀಯ.
*ದೂರ್ವಾ (ಗರಿಕೆ)* - ರಾಹು ಗ್ರಹ ಪ್ರತಿನಿಧಿ. ಸರ್ವ ಶುಭ ಕಾರ್ಯಗಳಲ್ಲೂ, ಸರ್ವ ವಿಘ್ನ ನಿವಾರಕ ಗಣಪತಿಯ ಪೂಜೆ ಸಲ್ಲಿಸಲು.
*ಕುಶ (ದರ್ಭೆ)* - ಕೇತು ಗ್ರಹ ವೃಕ್ಷ . ಕೇತುವಿನ ಅನುಗ್ರಹಕ್ಕಾಗಿ ಪೂಜನೀಯ. ಸರ್ವ ವಿಧವಾದ ಶುಭ ಹಾಗೂ ಅಶುಭ ಕಾರ್ಯಗಳಗೂ ಅವಶ್ಯಕ.
*ಅಶೋಕ ವೃಕ್ಷ* - ವಾಮಾಚಾರ ಮಾಟ ಮಂತ್ರಗಳ ವಿಮುಕ್ತಿಗಾಗಿ ಇದರ ಆರಾಧನೆಯಿಂದ ಮುಕ್ತಿ ಹೊಂದಬಹುದು.
*ಕದಂಬ ವೃಕ್ಷ*- ದೇವಿ ನಿವಾಸ ವೃಕ್ಷ. ಕದಂಬನಿವಾಸಿನಿ ದುರ್ಗಾದೇವಿ. ಇದರ ಪೂಜೆಯಿಂದ ಶತೃಬಾಧಾ ನಿವಾರಣೆ.
*ತೆಂಗಿನಮರ* - ಕಲ್ಪವೃಕ್ಷ . ಪ್ರತಿದಿನ ಮುಂಜಾನೆ ಈ ವೃಕ್ಷ ದರ್ಶನ ಶುಭಕಾರಕ, ಎಲ್ಲಾ ಕಾರ್ಯಗಳಿಗೂ ಅತ್ಯವಶ್ಯಕ.
*ಬಿಲ್ವವೃಕ್ಷ* - ಶಿವನಿಗೆ ಪ್ರಿಯವಾದದ್ದು. ಸಾಕ್ಷಾತ್ ಶಿವನೇ ಬಿಲ್ವ. ಶ್ರೀದೇವಿಯೂ ಬಿಲ್ವದಲ್ಲಿ ನೆಲೆಸಿರುವಳು. ಇದರ ಪೂಜೆಯಿಂದ ಏನನ್ನಾದರೂ ಸಾಧಿಸಬಹುದು.
*ಬಾಳೆಗಿಡ* - ಯಕ್ಷಿಣಿಯರು ನೆಲೆಸಿರುವರು. ಇದರ ಪೂಜೆಯಿಂದ ಸರ್ವ ದೋಷ ನಿವಾರಣೆ.
ಹೀಗೆ ಇನ್ನೂ ಹಲವಾರು ಪೂಜನೀಯ ವೃಕ್ಷಗಳಿವೆ. ಸಕಲ ವೃಕ್ಷದ ಆರಾಧನೆಯಿಂದ, ಪ್ರಕೃತಿಯಿಂದ ಸಕಲವನ್ನೂ ಸಾಧಿಸಬಹುದು. ವೃಕ್ಷಂ ಪ್ರತ್ಯಕ್ಷ ದೇವ ರೂಪಂ.
No comments:
Post a Comment