🙏 ಸರ್ವಂ ಕೃಷ್ಣ ಮಯಂ 🙏
ಒಂದು ಪುಟ್ಟ ಕಥೆ
ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ
ಒಂದು ಕಡೆ ಕದಂಬ ವೃಕ್ಷವಿತ್ತು .
ಆ ಮರದ ಮೇಲೆ ಹಕ್ಕಿಯೊಂದು ಮೊಟ್ಟೆಗಳನ್ನಿಟ್ಟಿತ್ತು. ಯುದ್ಧನಡೆವ ಸಮಯ ಸೈನಿಕರ ಕಿರುಚಾಟ, ಆನೆಗಳ ಘೀಳಿಡುವ ಶಬ್ದ ಕುದುರೆಗಳ ಹೇಷಾರವ ಗದ್ದಲಗಳಿಗೆ ಹೆದರಿ ಮೊಟ್ಟೆಗಳನ್ನು ತನ್ನ ರೆಕ್ಕೆಗಳಲ್ಲಿ ಅವಿತಿಟ್ಟು ಭಯದಿಂದ ಕಂಪಿಸುತಿತ್ತು.
ಒಂದು ಗಾಯಗೊಂಡ ಮದ್ದಾನೆ ಆ ಮರಕ್ಕೆ
ಡಿಕ್ಕೀ ಹೊಡೆದು ಮರ ಕೆಳಗೆ ಉರುಳಿತು.
ಯುದ್ಧದ ಕೊನೆಯ ದಿನ ಗೆದ್ದ ಬಳಿಕ ಕೃಷ್ಣನು
ಪಾಂಡವರೊಡನೆ ರಣಾಂಗಣದಲ್ಲಿ ಸಂಚರಿಸುತ್ತಾ ಇದ್ದಾಗ,
ಎಲ್ಲರೂ ನಾವು ಇಷ್ಟು ಜನರನ್ನು ಕೊಂದೆವು ಅವರಿಗೆ ಇವರಿಗೆ ಇಷ್ಟೊಂದು ಹಾನಿ ಮಾಡಿದೆವು ಎಂದು ಹೇಳಿಕೊಳ್ಳುತ್ತಿದ್ದರು.
ಆಗ ಕೃಷ್ಣನು ಅಲ್ಲಿ ಸತ್ತು ಬಿದ್ದಿದ್ದ ಆನೆಯ ಕೊರಳ ಘಂಟೆಯನ್ನು ಎತ್ತುವಂತೆ ಭೀಮನಿಗೆ ಹೇಳಿದನು.
ಘಂಟೆಯನ್ನು ಎತ್ತಲು ಅದರಿಂದ ರೆಕ್ಕೆಪುಕ್ಕಗಳು ಬಲಿತ
ಮರಿಹಕ್ಕಿಗಳೊಂದಿಗೆ ತಾಯಿ ಹಕ್ಕಿ ಹಾರಿ
ಹೋಯಿತು.
ಎಲ್ಲರೂ ಆಶ್ಚರ್ಯಪಟ್ಟರು.
ಕೃಷ್ಣನು ಪಾಂಡವರನ್ನು ಕುರಿತು.
ಆ ತಾಯಿ ಹಕ್ಕಿ ತನ್ನ ಮರಿಗಳನ್ನು ಕಾಪಾಡಿದೆ. ನೀವು
ಎಲ್ಲರೂ ಅವರನ್ನು ಕೊಂದೆ ಇವರನ್ನು ಕೊಂದೆ ಎನ್ನುತ್ತೀರಿ.
ನೀವು ಯಾರುಯಾರನ್ನು ಕಾಪಾಡಿದಿರಿ
ಈ ಸದ್ದುಗದ್ದಲ ಬಾಣಗಳು ಆಯುಧಗಳ ಮಧ್ಯೆ ತಾಯಿ ಹಕ್ಕಿ ಮತ್ತು ಮರಿಹಕ್ಕಿಗಳನ್ನು ಕಾಪಾಡಿದವರು ಯಾರು ಎಂದು ಕೇಳಿದನು.
ಆಗ ನಾಚಿಕೆಯಿಂದ ತಲೆತಗ್ಗಿಸಿ ಪಾಂಡವರು.
ಮಾನವರು ಏನೆಲ್ಲ ಮಾಡಿದರೂ ಯಾವುದೋ ರೂಪದಲ್ಲಿ ರಕ್ಷಿಸುವವನು ನೀನೇ
ಎಂದು ಹೇಳಿ ನಮಿಸಿದರು.
“ವನೇ ರಣೇ ಶತ್ರುಜಲಾಗ್ನಿ ಮಧ್ಯೇ
ಮಹಾರ್ಣವೇ ಪರ್ವತಮಸ್ತಕೇ ವಾ
ಸುಪ್ತಂ ಪ್ರಮತ್ತಂ ವಿಷಮಸ್ಥಿತಂ ವಾ
ರಕ್ಷಂತಿ ಪುಣ್ಯಾನಿ ಪುರಾಕೃತಾನಿ ”
ಕಾಡಿನಲ್ಲಿ ಬೆಟ್ಟದ ತುದಿಯಲ್ಲಿ ಶತ್ರುಗಳ ಮಧ್ಯ ಸಾಗರದ ನಡುವಲ್ಲಿ ಆಗಲಿ ಯಾವುದೇ ವಿಷಮ ಪರಿಸ್ಥಿತಿಯಲ್ಲಿಯೂ ನಾವು ಮಾಡಿದ ಒಳ್ಳೆಯ ಕೆಲಸಗಳೇ ನಮ್ಮನ್ನು ರಕ್ಷಿಸುತ್ತವೆ.
ಎಂಬುದು ಈ ಶ್ಲೋಕದ ಅರ್ಥ ಅದಕ್ಕೆ ಉದಾಹರಣೆ ಮೇಲ್ಕಂಡ ಕಥೆ.
No comments:
Post a Comment