Monday, 16 December 2019

*ವೀಳ್ಯದೆಲೆ ಹಾರವನ್ನು ದುರ್ಗಾದೇವಿಗೆ ಹಾಕಿ ಪೂಜೆ ಮಾಡಿಸಿದರೆ ಫಲ ಏನು?*

💐 ಉಪಯುಕ್ತ ಮಾಹಿತಿ 💐

*ವೀಳ್ಯದೆಲೆ ಹಾರವನ್ನು ದುರ್ಗಾದೇವಿಗೆ ಹಾಕಿ ಪೂಜೆ ಮಾಡಿಸಿದರೆ ಫಲ ಏನು?*

ವೀಳ್ಯದೆಲೆ ಹಾರವನ್ನು “ದುರ್ಗಾದೇವಿ”ಗೆ ಹಾಕಿ ಪೂಜೆ ಮಾಡಿಸಿದರೆ ಫಲ ಏನು..?
ಯಾರು ಒಬ್ಬೊಬ್ಬರೇ ಇರುವಾಗ ತುಂಬಾ ಭಯಪಡುತ್ತಾರೆಯೋ.
ಒಬ್ಬರೇ ಮಾತಾನಾಡಿಕೊಳ್ಳುತ್ತಾರೋ ಅಥವಾ ಒಬ್ಬರೇ ನಗುತ್ತಿರುತ್ತಾರೋ..
ಸಾರ್ವಜನಿಕರಲ್ಲಿ ಮಾತನಾಡುವಾಗ ಭಯವಾದರೆ.. ಹಾಗೂ ಮಾತನಾಡುವಾಗ ತೊದಲುತ್ತಿದ್ದರೆ,
ಒಬ್ಬರೇ ಒಂಟಿಯಾಗಿ ಕುಳಿತು ತುಂಬಾ ಯೋಚನೆ ಮಾಡೋದು, ಮನಸ್ಸಿನೊಳಗೆ ತುಂಬಾ ದುಃಖ ಪಡೋದು ಆಗುತ್ತಿದ್ದರೆ..
ಎಲ್ಲರೂ ಇದ್ದು ಯಾರೂ ಇಲ್ಲ ಅನ್ನೋ ಒಂಟಿ ಭಾವನೆ ಬರುತ್ತಿದ್ದರೆ..
ಜೀವನ ಸಾಕು ಸತ್ತೋಗಿಬಿಡೋಣ ಅನ್ನಿಸುತ್ತಿದ್ದರೆ..

….
…..ಇತ್ಯಾದಿ

ಇಂಥವರು, “ಶ್ರೀ ದುರ್ಗಾದೇವಿಗೆ” ೭ ಮಂಗಳವಾರ “ವೀಳ್ಯದೆಲೆ “ಹಾರ ಹಾಕಿಸಿ, ಪ್ರಾರ್ಥನೆ ಮಾಡಿ, ಫಲ ಹಾಗೂ ತಾಂಬೂಲವನ್ನು ನೈವೇದ್ಯ ಮಾಡಿಸಿ, ಸುಮಂಗಲಿಯರಿಗೆ ತಾಂಬೂಲ ದಾನ ಮಾಡಿದರೆ , ಸರ್ವ ದೋಷಗಳು ನಿವಾರಣೆಯಾಗುತ್ತದೆ ..

*ದುರ್ಗಾದೆವಿಗೆ ವೀಳ್ಯದೆಲೆ ಹಾರ ತುಂಬಾ ವಿಶೇಷವಾಗಿರುತ್ತದೆ..*

೨. ಯಾರ ಬುದ್ಧಿಯು ಮಂಕಾದರೆ,
ಜ್ಞಾಪಕ ಶಕ್ತಿ, ಬುದ್ಧಿಶಕ್ತಿ ಕಡಿಮೆಯಾದರೆ..
ತಲೆಯಲ್ಲಿ ನೀರು ತುಂಬಿದ್ದರೆ ..
ಬಾಣಂತಿಯರಲ್ಲಿ ಸನ್ನಿಯಾದರೆ,
ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ..
ದೇಹದಲ್ಲಿ ಬಿಳಿ ರಕ್ತಕಣಗಳು ಕಡಿಮೆಯಾದರೆ..
ಕಣ್ಣಿನಲ್ಲಿ ನೀರು ಬರುತ್ತಿದ್ದರೆ..
ದೇಹದಲ್ಲಿ fluid ಕಡಿಮೆಯಾದರೆ.,
ನಾಲಿಗೆ ಯಾವಾಗಲೂ ಒಣಗುತ್ತಿದ್ದರೆ..

… ಇತ್ಯಾದಿ

ಈ ತರಹ ದೋಷವುಳ್ಳವರು “ಶ್ರೀದುರ್ಗಾ” ದೇವಿಗೆ 9 ಮಂಗಳವಾರ ದೇವಿಗೆ “ವೀಳ್ಯದೆಲೆ” ಹಾರ ಹಾಕಿಸಿ, ಪೂಜಿಸಿ ತಾಂಬೂಲ ದಾನ ಮಾಡುತ್ತಾ ಬಂದರೆ..
ಸರ್ವದೋಷ ನಿವಾರಣೆಯಾಗುತ್ತದೆ ..
ಆರೋಗ್ಯಭಾಗ್ಯ ಉಂಟಾಗುತ್ತದೆ ..

ಯಾವುದೇ ತರಹದ “ಶ್ರೇಯಸ್ಸಿಗಾಗಿ ದೇವಿಗೆ ಬೆಳಗ್ಗೆ “ವೀಳ್ಯದೆಲೆ ” ಹಾರ ಹಾಕಿಸಿ..

ಯಾವುದೇ ತರಹದ ಖಾಯಿಲೆಯಿಂದ ಗುಣವಾಗಬೇಕಾದರೆ, “ಸಾಯಂಕಾಲ” ವೀಳ್ಯದೆಲೆ ಹಾರ ಹಾಕಬೇಕು..
(22, 24, 48, 108 ,109 ಎಲೆಗಳಿದ್ದರೆ ತುಂಬಾ ಒಳ್ಳೆಯದು, ಜೋಡಿ ಇರಬೇಕು..  ಆಗದಿದ್ದರೆ 5 , 7, 9, 11 ಎಲೆಗಳ ಹಾರ ಬೇಕಾದರೂ ಹಾಕಬಹುದು)
💐. ವಾಟ್ಸಪ್ ಮೇಸೇಜ್💐

ಸರ್ವಜನ ಸುಖಿನೋಭವಂತು

No comments:

Post a Comment