ಯಾರೊ ಸುಲಭವಾಗಿ ಪೂಜಾ ವಿಧಾನ ತಿಳಿಸಿ ಅಂದ್ರಿ ಅಲ್ವ ಅದಕ್ಕಾಗಿ ಈ ಪೋಸ್ಟ್.
ಈ ಕೆಳಗಿನ ೧೬ ಸಾಲುಗಳನ್ನು ಬಾಯಿಗೆ ಕಲಿತರೆ , ಅದೇ ಕ್ರಮದಲ್ಲಿ ಪೂಜೆ ಮಾಡಲು ಸುಲಭ ; ಕ್ರಮ ತಪ್ಪುವುದಿಲ್ಲ .
ಆರಂಭ
ಶ್ರೀ ಗಣೇಶಾಯ ನಮಃ || ಓಂ ಶ್ರೀ ಗುರುಬ್ಯೋ ನಮಃ
ದೇವ ದೇವತಾ ಆಗಮನಾರ್ಥೇ ಘಂಟಾವಾದನಂ ಕೃತ್ವಾ , |
ಚತುರ‍್ದಶ ದ್ವಾರ ಪಾಲ ಪೂಜಾಂ ಕುರ್ಯಾತು ||೧||
ಸಂಕಲ್ಪಂ ಕೃತ್ವಾ ಗಾಯತ್ರಿ ಮಂತ್ರೇಣ ಕಲಶಂ ಪೂಜಯೇತ್ |
ದೇವತಾ ಧ್ಯಾನಂಕೃತ್ವಾ , ಆವಾಹನಂ ಕುರ್ಯಾತು || ೨||
ಆಸನಂ ದದ್ಯಾತು , ನಂತರಂ ಪಾದ್ಯಂ ಅರ್ಘ್ಯಂ ಆಚಮನಂ|
ಸ್ನಾನಂ ಪುನಃ ಶುದ್ಧೋದಕ ಸ್ನಾನಂ ಚ ವಸ್ತ್ರಂ ಆಭರಣ ಸಮರ್ಪಣಂ ||೩||
ನಂತರಂ ಉಪವೀತಂ ಚ ಗಂಧಂ ಚ ಅಕ್ಷತಾಂ ಪುಷ್ಪಂ ಸಮರ್ಪಣಂ |
ನಾಮ ಪೂಜಾಂ ಪುಷ್ಪ ಸಹಿತಂ ನಂತರಂ ಧೂಪ ದೀಪಂ ಸಮರ್ಪಯೇತ್ ||೪||
ಭೋಜನಾರ್ಥಂ ಫಲಂ ತಾಂಬೂಲಂ ನೇವೇದ್ಯಂ ಕುರ್ಯಾತ್ |
ಕುರ್ಯಾತ್ ಮಂಗಲ ನೀರಾಜನಂ ; ತದನಂತರಂ ಪ್ರದಕ್ಷಿಣ ನಮಸ್ಕಾರಂ ||೫||
ಗಂಧಾಕ್ಷತ ದೂರ್ವಸಹಿತಂ ಪ್ರಸನ್ನಾರ್ಘ್ಯಂ ದದ್ಯಾತು |
ದೇವತಾ ಪ್ರಾರ್ಥನಂ ಪುನಃ ದೇವ ವಂದನಂ ||೬||
ಲೋಪದೋಷ ನಿವಾರಣಾರ್ಥಂ ವಿಷ್ಣು ಸ್ಮರಣಂ ಕುರ್ಯಾತ್ |
ಪೂಜಾಫಲಂ ಕೃಷ್ಣಾರ್ಪಣಂ ಕೃತ್ವಾ |ತೀರ್ಥ ಪ್ರಸಾದಂ ಸ್ವೀಕರೇತ್,
ಘಂಟಾ ನಾದೇನ ವಿಸರ್ಜಯೇತ್||೭||
ವಿವರಣೆ ಸಂಪಾದಿಸಿ
ಪ್ರಾರ್ಥನೆ :ಓಂ, ಶ್ರೀ ಗಣೇಶಾಯ ನಮಃ || ಶ್ರೀ ಗುರುಭ್ಯೋ ನಮಃ ||
೧) ದೇವತಾ ಆಗಮನಕ್ಕಾಗಿ ಘಂಟಾನಾದ; (ಮಂಟಪವನ್ನು ಶುಚಿಗೊಳಿಸಿಮಂಟಪದ ಒಳಗೆ ಎಲ್ಲಾ ದಿಕ್ಕಿಗೆ ಹೂವು ಇಡುವುದು)
೨) ಚತುರ್ದಿಶ ದ್ವಾರ ಪಾಲ ಪೂಜೆ (ನಾಲ್ಕು ದಿಕ್ಕುಗಳಲ್ಲಿರುವ ದೇವತೆಗಳ ಪೂಜೆ-
(ಮಂಟಪದೊಳಗೆ ನಾಲ್ಕು ದಿಕ್ಕಿಗೆ ಹೂವು ಇಡುವುದು/ ಹಾಕುವುದು)
೩) ಸಂಕಲ್ಪ (ಅಸ್ಮಿನ್ ಶುಭದಿನೇ ಶ್ರೀಪರಮೇಶ್ವರ ಪ್ರೀತ್ಯರ್ಥಂ ಯಥಾಶಕ್ತಿ ಯಥಾಜ್ಞಾನ ದೇವ ಪೂಜಾಂಕರಿಷ್ಯೇ -ನೀರು ಬಿಡು)
೪) ಕಲಶಪೂಜೆ - ಕಲಶಕ್ಕೆ (ನೀರು ತುಂಬಿದ ಚಂಬಿಗೆ) ಹೂ ದೂರ್ವೆ ಹಾಕಿ ಗಾಯತ್ರಿ ಮಂತ್ರ ಹೇಳುವುದು.
೫) ಧ್ಯಾನ- (ಸೂರ್ಯಗಣಪತಿ ಅಂಬಿಕಾ ಶಿವ ವಿಷ್ಣು ದೇವತಾಭ್ಯೋ ನಮಃ) (ಇಷ್ಟವಾದ ದೇವತೆಯ ಹೆಸರು ಹೇಳಿ- ನಮಃ ಎಂದು ಕೈಮುಗಿದು ನಮಸ್ಕರಿಸುವುದು)
೬)ಆವಾಹನ -((ಸೂರ್ಯಗಣಪತಿ ಅಂಬಿಕಾ ಶಿವ ವಿಷ್ಣುಂ - ಲಕ್ಕ್ಮೀ ನಾರಾಯಣಂ ಆವಾಹಯಾಮಿ ಅಥವಾ ಇಷ್ಟ ದೇವರ ಹೆಸರು ಹೇಳುವುದು.)
೭) ಆಸನಂ ಸಮರ್ಪಯಾಮಿ || (ಪೀಠವನ್ನು ಮುಟ್ಟುವುದು )
೮) ಪಾದ್ಯ - ಸಮರ್ಪಯಾಮಿ (ದೇವರ ಮೂರ್ತಿ ಪಾದಕ್ಕೆ ನೀರು ಹಾಕುವುದು-ಚಮಚದಲ್ಲಿ ತಟ್ಟೆಗೆ ನೀರುಬಿಡುವುದು ' ಪ್ರೋಕ್ಷಣೆ ಮಾಡಿದರೂ ಸರಿ)
೯)ಅರ್ಘ್ಯಂ ಸಮರ್ಪಯಾಮಿ - (ದೇವರ ಮೂರ್ತಿ ಹಸ್ತಕ್ಕೆ ನೀರು ಹಾಕುವುದು -ಮೇಲಿನಂತೆ - ಚಿಮುಕಿಸಿದರೂ ತಟ್ಟೆಗೆ ನೀರು ಬಿಟ್ಟರೂ, ದೇವರಿಗೆ ತಲುಪುವುದು.)
೧೦)ಆಚಮನಂ ಸಮರ್ಪಯಾಮಿ - ಸಮರ್ಪಯಾಮಿ (ಆಚಮನ- ಕುಡಿಯಲು ನೀರು; ದೇವರ ಮೂರ್ತಿ ಹಸ್ತಕ್ಕೆ ನೀರು ಹಾಕುವುದು -ಮೇಲಿನಂತೆ-)
೧೧) ದೇವರಿಗೆ ಅಭಿಷೇಕ ಮಾಡುವುದು ತೊಳೆದು ಪುನಃ ಅಭಿಷೇಕ; (ಫೋಟೋ ಆದರೆ ನೀರು ಚಿಮುಕಿಸಬಹುದು
೧೨)ವಸ್ತ್ರಂ ; ಆಭರಣಂ ; ಉಪವೀತಂ (ಸಮರ್ಪಯಾಮಿ )- ಎಲ್ಲದಕ್ಕೂ ಒಂದೊಂದು ಹೂವು ಹಾಕುವುದು
೧೩)ಗಂಧ ಅಕ್ಷತೆ ಹೂವು (ಗಂಧವನ್ನು ಹೂವಿಗೆ ಹಚ್ಚಿ ಹಾಕಬಹುದು- ಅರಿಶಿನ- ಕುಂಕುಮವನ್ನು ಹೂವಿಗೆ ಮುಟ್ಟಿಸಿ ಹಾಕಬಹುದು)
(ಹಾಕುವಾಗ ದೇವರ ಹೆಸರು ಹೇಳಿ ಹಾಕಬೇಕು ಉದಾ: ಓಂ ಶಿವಾಯ ನಮಃ, ವಿಷ್ಣವೇನಮಃ)
೧೪) ಧೂಪ ದೀಪಂ ಸಮರ್ಪಯಾಮಿ (ತೋರಿಸುವುದು).
೧೫) ಭೋಜನಾರ್ಥಂ ಫಲಂ ಸಮರ್ಪಯಾಮಿ ತಾಂಬೂಲ ಸಮರ್ಪಯಾಮಿ- ನೇವೇದ್ಯ ಮಾಡುವುದು.
೧೬) ಮಂಗಲ ನೀರಾಜನಂ ಸಮರ್ಪಯಾಮಿ- ಆರತಿ.
೧೭) ಗಂಧಾಕ್ಷತ ದೂರ್ವಸಹಿತಂ ಪ್ರಸನ್ನಾರ್ಘ್ಯಂ ಸಮರ್ಪಯಾಮಿ (ಕೊಡುವುದು-) ಅಂಗೈಯಿಂದ ತಟ್ಟೆಗೆ ನೀರು ಬಿಡುವುದು.
೧೮) ದೇವತಾ ಪ್ರಾರ್ಥನಂ -ಪ್ರಾರ್ಥನೆ ಮಾಡುವುದು (ಸಮರ್ಪಯಾಮಿ);ದೇವರನ್ನು ಕೊಡು ಎಂದು ಕೇಳುವುದು. ಪ್ರಾರ್ಥನೆಯ ಯಾವುದೇ ಶ್ಲೋಕವನ್ನು- ಪದ್ಯವನ್ನು-ಕೀರ್ತನೆಯನ್ನು ಹೇಳಬಹುದು. ಉದಾ: "ಸದ್‍ಬುದ್ಧಿಯನ್ನೂ, ವಿದ್ಯೆಯನ್ನೂ, ಸಂಪತ್ತನ್ನೂ ಕೊಡು"
೧೯) ದೇವ ವಂದನಂ ಪ್ರದಕ್ಷಿಣ ನಮಸ್ಕಾರ (ಸಮರ್ಪಯಾಮಿ)ಎಡದಿಂದ ಬಲಕ್ಕೆ ತಿರುಗಿ ಪ್ರದಕ್ಷಿಣೆ.
೨೦) ಲೋಪದೋಷ ನಿವಾರಣಾರ್ಥಂ ವಿಷ್ಣು ಸ್ಮರಣೆ ಮಾಡುವುದು| (ಪೂಜಾ ಫಲಂ -) ಕೃಷ್ಣಾರ್ಪಣ ಎಂದು ತುಳಸಿ ನೀರು ಬಿಡುವುದು
೨೧)ತೀರ್ಥ ಪ್ರಸಾದ ಸ್ವೀಕಾರ (ಅಕಾಲ ಮರಣ-ವ್ಯಾಧಿ -ಕಷ್ಟ ನಿವಾರಣೆ ಗಾಗಿ ತೀರ್ಥ ಸ್ವೀಕಾರ)
೨೨) ಘಂಟಾ ನಾದ ಮಾಡುವುದು ( ಘಂಟಾ ನಾದದಿಂದ ದೇವರ ವಿಸರ್ಜನೆ.)
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
No comments:
Post a Comment