Monday, 16 December 2019

ನವರಾತ್ರಿ 9 ದಿನಗಳು

ನವರಾತ್ರಿ_ದಿನ_1
#ಶೈಲಪುತ್ರಿಯನ್ನು #ಪಾರ್ವತಿಯ ಅವತಾರ ಎನ್ನಲಾಗುತ್ತದೆ. ಪರ್ವತ ರಾಜನ ಮಗಳಾದ ಈಕೆ #ನಂದಿವಾಹನೆಯಾಗಿ ಬಲ ಹಸ್ತದಲ್ಲಿ #ತ್ರಿಶೂಲವನ್ನು ಎಡಹಸ್ತದಲ್ಲಿ #ಕಮಲವನ್ನೂ ಹಿಡಿದಿರುವುದನ್ನು ಕಾಣಬಹುದು. ದೇವಿಯು ದುಷ್ಟಶಕ್ತಿಯ ಸಂಹಾರಕ್ಕಾಗಿ ಆಯುಧಪಾಣಿಯಾಗಿದ್ದು ಸಾಕ್ಷಾತ್ #ಮಹಾಕಾಳಿಯೇ ಈ ರೂಪದಲ್ಲಿದಾಳೆಂದು ಭಕ್ತರ ನಂಬಿಕೆ. ಕ್ರಾಂತಿಯ ಸಂಕೇತವಾಗಿ ಈ ದಿನವನ್ನು #ಕೆಂಪು ಬಣ್ಣದ ಮೂಲಕ ಗುರುತಿಸಲಾಗುತ್ತದೆ.
********************************************************************
ನವರಾತ್ರಿ_ದಿನ_2
#ನವರಾತ್ರಿಯ ಎರಡನೇ ದಿನವಾದ ಇಂದು #ಬ್ರಹ್ಮಚಾರಿಣೀ ದಿನವೆಂದು ಹೇಳಲಾಗುತ್ತದೆ. ಬ್ರಹ್ಮಚಾರಿಣೀ ಎಂದರೆ ಆಶ್ರಮ ಒಂದರಲ್ಲಿ ಇತರೇ ವಿದ್ಯಾರ್ಥಿಗಳೊಂದಿಗೆ ಗುರುವಿನ ಆಶ್ರಯದಲ್ಲಿ ವಾಸಿಸುವ ಒಬ್ಬ ವಿದ್ಯಾರ್ಥಿನಿ. #ಆನಂದ ಮತ್ತು #ಶಾಂತ ಸ್ಥಿತಿಯಲ್ಲಿ ದೇವಿ ಬ್ರಹ್ಮಚಾರಿಣೀಯನ್ನು ಕಾಣಬಹುದು. ಮೋಕ್ಷದಾಯಿನಿಯಾದ ಈಕೆ, ಲೌಕಿಕ ಬಂಧನಗಳಿಂದ ಮುಕ್ತಗೊಳಿಸುವವಳೆಂಬುದಾಗಿ ಭಕ್ತರು ಆರಾಧಿಸುತ್ತಾರೆ. ಶಾಂತ ಮೂರ್ತಿಯೂ, ಅಭಿವೃದ್ಧಿಯ ಪ್ರೇರಕಳೂ ಆಗಿರುವ ದೇವಿಯು #ಜಪಮಾಲೆಯನ್ನು ಹಾಗೂ #ಕಾಮಂಡಲವನ್ನೂ ತನ್ನ ಕರಗಳಲ್ಲಿ ಅಲಂಕರಿಸಿಕೊಂಡಿದ್ದಾಳೆ. ಈ ದಿನದ ಸಂಕೇತ #ನೀಲಿಯ ಬಣ್ಣ.
********************************************************************
ನವರಾತ್ರಿ_ದಿನ_3
#ಪರಶಿವನನ್ನು ವಿವಾಹವಾದ #ಪಾರ್ವತಿಯು ತನ್ನ ಲಲಾಟವನ್ನು #ಅರ್ಧಚಂದ್ರನಿಂದ ಅಲಂಕರಿಸಿಕೊಂಡಿರುತ್ತಾಳೆ. #ಚಂದ್ರಘಂಟಾ ಎಂದರೆ ಅರ್ಧ ಚಂದ್ರಾಕೃತಿಯಲ್ಲಿರುವ ಘಂಟೆಯನ್ನು ಅಲಂಕಾರ್ಥವಾಗಿ ಧರಿಸಿರುವವಳು. ಎಂಟು ಬುಜಗಳುಳ್ಳ ದೇವಿಯ ಕೈಗಳಲ್ಲಿ #ತ್ರಿಶೂಲ, #ಗಧೆ, #ಬಿಲ್ಲು-ಬಾಣ, #ಖಡ್ಗ, #ಕಮಲ, #ಘಂಟೆ ಹಾಗೂ #ಕಮಂಡಲಗಳನ್ನು ಕಾಣಬಹುದು. ಹಣೆಯ ಮೇಲೆ ಮೂರನೆಯ ಕಣ್ಣನ್ನು ಹೊಂದಿರುವ ದೇವಿಯು #ಸೌಂದರ್ಯ ಮತ್ತು #ಧೀರತನದ ಪ್ರತೀಕವಾಗಿರುವಳು. ಈ ದೇವಿಯನ್ನು ಪೂಜಿಸುವ ದಿನವನ್ನು #ಪೀತವರ್ಣದಿಂದ ಗುರುತಿಸಲಾಗಿದೆ. ಇದು ನವರಾತ್ರಿಯ ಹಬ್ಬದ ಮೂರನೇ ದಿನವಾಗಿರುತ್ತದೆ.
********************************************************************
ನವರಾತ್ರಿ_ದಿನ_4
ನಾಲ್ಕನೆಯ ದಿನವೇ #ಕೂಷ್ಮಾಂಡಾ ದೇವಿಯು ಪೂಜಿಗೊಳ್ಳುವ ಸಂಭ್ರಮದ ದಿನ. ಇಡೀ ವಿಶ್ವದ #ಸೃಷ್ಟಿ ಶಕ್ತಿಯೂ ಆಗಿರುವ ದೇವಿಯೇ ಕೂಷ್ಮಾಂಡಾ. ಇಲ್ಲಿ “ಕೂ” ಎಂದರೆ ಸ್ವಲ್ಪ, “ಉಷ್ಮ” ಎಂದರೆ ಶಾಕ ಅಥವಾ ಶಕ್ತಿ ಹಾಗೂ “ಅಂಡ” ಎಂದರೆ ಅಂಡಾಣು ಎಂದರ್ಥ. #ಪೃಥ್ವಿಯ ಮೇಲೆ ಸಸ್ಯಕೋಟಿಯ ಚೈತನ್ಯಪೂರ್ಣವಾದ ಇರುವಿಕೆಗೆ ಮತ್ತು ಹಸಿರಿನ ವನಸಿರಿಯ ಉಳಿಯುವಿಕೆಗೆ ಕಾರಣೀಭೂತಳಾದ ದೇವಿ. ಎಲ್ಲದರ ರಕ್ಷಣೆಗಾಗಿ ಈಕೆಯು ಎಂಟು ತೋಳುಗಳಿಂದ ಶೋಭಿತಳಾಗಿದ್ದು ಸಿಂಹವಾಹನೆಯಾಗಿರುತ್ತಾಳೆ. ಈ ದಿನದ ಸಂಕೇತ #ಹಸಿರು ಬಣ್ಣ.
********************************************************************
ನವರಾತ್ರಿ_ದಿನ_5
#ಸ್ಕಂದಮಾತೆಯಾಗಿರುವ ಈ ದೇವಿಯು #ಮಾತೃಶಕ್ತಿಯ ಸ್ವರೂಪವಾಗಿದ್ದಾಳೆ. ತನ್ನ #ಶಿಶುವಿಗೆ ಯಾವುದೇ ಅಪಾಯವಾಗಲೀ, ತೊಂದರೆಯಾಗಲೀ ಆಗದಂತೆ ರಕ್ಷಿಸುವ ಕಾಳಜಿ ಈಕೆಯದು ಆದ್ದರಿಂದ, ಗರ್ಜಿಸುತ್ತಿರುವ #ಸಿಂಹದ ಮೇಲೆ ಕುಳಿತಿರುವ ದೇವಿಯು ನಾಲ್ಕು ಬಾಹುಗಳನ್ನು ಹೊಂದಿದ್ದು ತನ್ನ ಮಗುವನ್ನು ಭದ್ರವಾಗಿ ಅಪ್ಪಿಹಿಡಿದಿರುತ್ತಾಳೆ. ದಿನದ ಸಂಕೇತವಾಗಿ #ಬೂದು ಬಣ್ಣವಾಗಿದ್ದು ದೇವಿಯು #ಪರಿವರ್ತನೆಯ, #ಬದಲಾವಣೆಯ ಸಂಕೇತವಾಗಿದ್ದಾಳೆ.
********************************************************************
ನವರಾತ್ರಿ_ದಿನ_6
#ಕಾತ್ಯಾಯನ ಋಷಿಪುತ್ರಿಯಾಗಿದ್ದೂ ಧೀರತನವನ್ನೂ ಪ್ರದರ್ಶಿಸುವ ಈ ದುರ್ಗಾವತಾರವನ್ನು ಹೊರಾಡುವ ದೇವತೆಯೆನ್ನಲಾಗುತ್ತದೆ. #ಪಾರ್ವತಿಯ ಈ ರೂಪವು ಆಕೆಯ ಉಗ್ರರೂಪಗಳಲ್ಲಿ ಒಂದಾಗಿದೆ. ಸಿಂಹವಾಹನೆಯಾಗಿದ್ದು ನಾಲ್ಕು ಬಾಹುಗಳನ್ನು ಹೊಂದಿರುವ ಈ #ಕಾತ್ಯಾಯಿನಿಯು #ಕತ್ತಿ, #ಕಮಲ, #ಅಭಯಮುದ್ರೆ ಹಾಗೂ #ವರದಮುದ್ರೆಯೊಂದಿಗೆ ಕಾಣಬಹುದು.ಈ ದಿನದ ಸಾಂಕೇತಿಕ ಬಣ್ಣವು #ಕಿತ್ತಳೆಯದಾಗಿದೆ.
********************************************************************
ನವರಾತ್ರಿ_ದಿನ_7
ಏಳನೆಯ ದಿನವೇ #ಕಾಳರಾತ್ರಿ ಎಂಬ ದೇವಿಯನ್ನು ಪೂಜಿಸುವ ದಿನವಾಗಿದೆ. ಈ ದೇವಿ ಆದಿಶಕ್ತಿಯ ರೌದ್ರಾವತಾರಗಳಾದ #ಕಾಳಿ, #ಮಹಾಕಾಳಿ, #ಭದ್ರಕಾಳಿ, #ಭೈರವಿ, #ಮೃತ್ಯು, #ರೌದ್ರಾಣಿ, #ಚಾಮುಂಡಿ, #ಚಂಡಿ ಮತ್ತು #ದುರ್ಗೆಯರಲ್ಲಿ ಅಗ್ರಸ್ಥಾನವನ್ನು ಹೊಂದಿದ ದೇವತೆಯಾಗಿದ್ದಾಳೆ. ಶ್ವೇತವರ್ಣದ ಜಗನ್ಮಾತೆಯು #ಶುಂಭ, #ನಿಶುಂಭರೆಂಬ ದಾನವರನ್ನು ಸಂಹಾರ ಮಾಡಲು ತಾಳಿದ ರೂಪವೇ ಇದಾಗಿದೆ. ಈಕೆಯನ್ನು #ಶುಭಂಕರಿ ಎಂದೂ ಕರೆಯಲಾಗಿದೆ. ರೌದ್ರಾವತಾರವನ್ನು ತಳೆದ ಪರಿಣಾಮವಾಗಿ ಆಕೆಯ ಬಣ್ಣವು #ಕಪ್ಪಾದುದರ ಕಾರಣ ಕಾಳರಾತ್ರಿಯೆನಿಸಿಕೊಂಡಿದ್ದಾಳೆ.
********************************************************************
ನವರಾತ್ರಿ_ದಿನ_8
#ನವರಾತ್ರಿಯ ಎಂಟನೆಯ ದಿನ ಆರಾಧನೆ ಮಾಡುವ ದೇವಿಯ ಈ ರೂಪವು #ಮಹಾಗೌರಿ ಎನಿಸಿದೆ. ಒಂದು ಕೈಯಲ್ಲಿ #ತ್ರಿಶೂಲ ಹಾಗೂ ಮತ್ತೊಂದು ಕೈಯಲ್ಲಿ #ಡಮರುಗವನ್ನು ಹಿಡಿದಿರುವ ದೇವಿಯು #ಅಭಯಮುದ್ರೆ ಹಾಗೂ #ವರದಮುದ್ರೆಯಲ್ಲಿ ಕಾಣಬಹುದು. ಸೌಮ್ಯ ಭಾವದ ಕಲ್ಯಾಣಿಯು ಎಲ್ಲರಿಗೂ ಮಂಗಳವನ್ನುಂಟು ಮಾಡುವ ದೇವಿಯೆನಿಸಿದ್ದಾಳೆ. ಶಾಂತಿ ಮತ್ತು ಜ್ಞಾನದ ಸಂಕೇತವಾಗಿರುವ ಈ ರೂಪವು #ಗುಲಾಬಿ ಬಣ್ಣದೊಂದಿಗೆ ಗುರುತಿಸಿಕೊಂಡಿದೆ.
********************************************************************
ನವರಾತ್ರಿ_ದಿನ_9
#ನವರಾತ್ರಿಯ ಕಡೆಯ ದಿನವಾದ ನವಮಿಯನ್ನು #ಮಹಾನವಮಿ, #ಮಾರ್ನವಮಿ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ಈ ದಿನ ದೇವಿ #ಸಿದ್ಧಿಧಾತ್ರಿಯನ್ನು ಪೂಜಿಸಲಾಗುತ್ತದೆ. #ಸಿದ್ಧಿ ಎಂದರೆ #ಆಧ್ಯಾತ್ಮಿಕ ಶಕ್ತಿ ಹಾಗೂ #ಧಾತ್ರಿ ಎಂದರೆ ಕೊಡುವವಳು ಅಥವಾ ಕರುಣಿಸುವವಳು ಎಂದರ್ಥ. #ಕಮಲ ಪುಷ್ಪದ ಮೇಲೆ ಆಸೀನಳಾಗಿರುವ ದೇವಿಯು ನಾಲ್ಕು ಬಾಹುಗಳನ್ನು ಹೊಂದಿದ್ದು #ಗಧೆ, #ಸುದರ್ಶನಚಕ್ರ, #ಶಂಕ ಮತ್ತು #ಕಮಲಗಳಿಂದ ಅಲಂಕೃತಳಾಗಿರುವುದನ್ನು ಕಾಣಬಹುದು. ದೇವಿಯು ಭಕ್ತರ ಎಲ್ಲ ಕೋರಿಕೆಗಳನ್ನು ಈಡೇರಿಸುವ ಅನುಗ್ರಹದಾತೆಯೆನಿಸಿದ್ದಾಳೆ. ಸಿದ್ಧಿಧಾತ್ರಿಯನ್ನು #ಸರಸ್ವತೀ ಎಂದೂ ಪೂಜಿಸುತ್ತಾರೆ.
********************************************************************
ನಮ್ಮ ನಾಡು, ನಮ್ಮ ನುಡಿ, ನಮ್ಮ Someಸ್ಕೃತಿ

No comments:

Post a Comment