#ಕರ್ನಾಟಕ ಪದದ ವ್ಯುತ್ಪತ್ತಿಯ ಹಿಂದೆ ಬಹಳಷ್ಟು ಸಿದ್ಧಾಂತಗಳು ಮತ್ತು ಐತಿಹಾಸಿಕ ಊಹೆಗಳಿವೆ. #ಮಹಾಭಾರತದಲ್ಲಿ, #ಸ್ಕಂದ ಪುರಾಣ, #ಭಾಗವತ ಪುರಾಣ, #ಮತ್ಸ್ಯ ಪುರಾಣ, ಮತ್ತು #ಮಾರ್ಕಂಡೇಯ ಪುರಾಣಗಳಲ್ಲಿ ಇಡೀಯ ಪ್ರದೇಶವನ್ನು #ಕರ್ಣಾಟ ಎಂದು ವರ್ಣಿಸಲ್ಪಟ್ಟಿದೆ. ಪ್ರಾಚೀನ #ಸಂಸ್ಕೃತ ಕೃತಿಗಳಲ್ಲಿ ಕರ್ನಾಟಕವನ್ನು ಉಲ್ಲೇಖಿಸಿರುವುದು ನಮ್ಮ ಭವ್ಯ ಇತಿಹಾಸಕ್ಕೆ ಸಾಕ್ಷಿಯಂತಿದೆ. 5ನೇ ಶತಮಾನದಲ್ಲಿ, ಕರ್ನಾಟಕವನ್ನು ಪ್ರಸಿದ್ಧ ಜ್ಯೋತಿಷಿ #ವರಾಹಮಿಹಿರರು ಬಳಸಿದರು. #ರಾಷ್ಟ್ರಕೂಟದ ಶಾಸನಗಳಲ್ಲಿ #ಚಾಲುಕ್ಯರ ಸೇನೆಗಳನ್ನು ಕರ್ನಾಟಕದ ಸೈನ್ಯ ಅಥವಾ ಕರ್ನಾಟಕ ಸೇನೆ ಎಂದು ಉಲ್ಲೇಖಿಸಲಾಗುತ್ತದೆ.
9ನೇ ಶತಮಾನದ ಕನ್ನಡ ಶಾಸ್ತ್ರೀಯ ಕೃತಿ #ಕವಿರಾಜಮಾರ್ಗದಲ್ಲಿ, #ಗೋದಾವರಿಯಿಂದ #ಕಾವೇರಿಯ ವರೆಗೆ ಕರ್ಣಾಟ ಎಂಬುದಾಗಿ ವಿವರಿಸಲಾಗಿದೆ. ವಿಜಯನಗರ ಸಾಮ್ರಾಜ್ಯವನ್ನು ಕರ್ಣಾಟ ಸಾಮ್ರಾಜ್ಯ ಎಂದು ಕರೆಯಲಾಗುತ್ತಿತ್ತು. ಸಾಮಾನ್ಯವಾಗಿ ಒಪ್ಪುವಂತಹ ವ್ಯುತ್ಪತ್ತಿಯು ಕರ್ನಾಟಕವನ್ನು ವಾಸ್ತವವಾಗಿ #ಕರು ಮತ್ತು #ನಾಡು ಎಂಬ ಎರಡು ಕನ್ನಡ ಪದಗಳಿಂದ ಅಳವಡಿಸಲಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಕರು ಪದವನ್ನು #ಕಪ್ಪು ಎಂಬುದಾಗಿ ಹಾಗೂ ನಾಡು ಪದವು #ಪ್ರದೇಶವನ್ನು ಉಲ್ಲೇಖಿಸುತ್ತದೆ.
ಭವ್ಯ ಇತಿಹಾಸವನ್ನು ತನ್ನ ಗರ್ಭದಲ್ಲಿಟ್ಟುಕೊಂಡಿರುವ ನಮ್ಮ #ಕರುನಾಡಿನ ಬಗ್ಗೆ ಇನ್ನಷ್ಟು ತಿಳಿಯುವ #ಹಂಬಲ, #ಕುತೂಹಲ ನಿಮಗಿದ್ದಲ್ಲಿ, ನಮ್ಮ ಫೇಸ್‌ಬುಕ್ ಪೇಜ್‌ಅನ್ನು ಇಂದೇ ಅನುಸರಿಸಿ.
ನಮ್ಮ ನಾಡು, ನಮ್ಮ ನುಡಿ, ನಮ್ಮ Someಸ್ಕೃತಿ
#ಕನ್ನಡ #ರಾಜ್ಯೋತ್ಸವದ ಶುಭಾಶಯಗಳು.
No comments:
Post a Comment