Thursday, 12 December 2019

ಈ ವಾರದಲ್ಲಿ ತಲೆಕೂದಲು ಕತ್ತರಿಸಿದರೆ ಬೀದಿಗೆ ಬೀಳಿವುದು ಗ್ಯಾರಂಟಿ..!!

ಈ ವಾರದಂದು ಕೂದಲನ್ನು ಕತ್ತರಿಸುವುದು ಮತ್ತು ಉಗುರನ್ನು ಕತ್ತರಿಸುವುದು ನಿಷೇಧ ಎಂದು ನಮ್ಮ ಪೂರ್ವಿಕರು ನಂಬುತ್ತಿದ್ದರು ಹಾಗಾದರೆ ಯಾವ ದಿನದಂದು ಈ ಎರಡು ಕೆಲಸಗಳನ್ನು ಮಾಡಬೇಕು ಮತ್ತು ಯಾವ ದಿನದಂದು ಮಾಡಬಾರದು ಯಾಕೆ ಮಾಡಬಾರದು ಅನ್ನೋದರ ಬಗ್ಗೆ ನಾವು ಪೂರ್ತಿಯಾಗಿ ಈ ದಿನ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ತಪ್ಪದೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ಈಗಲೇ ನೀವೇನಾದರೂ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ನಿಲ್ಲಿಸಿಬಿಡಿ.
ನಮ್ಮ ಪೂರ್ವಜರು ಏನೇ ಒಂದು ನಿಯಮವನ್ನು ಅಥವಾ ಪದ್ಧತಿಯನ್ನು ಮಾಡಿದ್ದರೂ ಕೂಡ ಅದಕ್ಕೆ ಒಂದು ಕಾರಣವಿರುತ್ತದೆ ಮತ್ತು ಆ ಕಾರಣ ಎಲ್ಲರಿಗೂ ಕೂಡ ಅನ್ವಯವಾಗುತ್ತದೆ ಹಾಗಾದರೆ ನಮ್ಮ ಪೂರ್ವಜರು ಯಾಕೆ ಈ ದಿನದಂದೇ ಕೂದಲನ್ನು ಕತ್ತರಿಸಬೇಕು ಕತ್ತರಿಸಬಾರದು ಉಗುರನ್ನು ಕತ್ತರಿಸಬೇಕು ಕತ್ತರಿಸಬಾರದು ಅಂತ ನಂಬುತ್ತಿದ್ದರು ಅನ್ನೋದನ್ನು ನಾವು ಈ ದಿನ ತಿಳಿಯೋಣ.

ಸೋಮವಾರದಂದು ಈಶ್ವರನ ವಾರ ಎಂದು ಹೇಳಲಾಗುತ್ತದೆ ಮತ್ತು ಈ ದಿನದಂದು ಚಂದ್ರನ ವಾರ ಅಂತ ಕೂಡ ಹೇಳುತ್ತಾರೆ , ಮಂಗಳವಾರದ ದಿನದಂದು ಆಂಜನೇಯನ ವಾರ , ಬುಧವಾರ ಕೃಷ್ಣನ ವಾರ ಮತ್ತು ಗುರುವಾರ ವಿಷ್ಣುವಿನ ವಾರ ಮತ್ತು ಶುಕ್ರವಾರ ದುರ್ಗಾ ಮಾತೆಯ ವಾರ , ಶನಿವಾರ ಶನಿದೇವನ ವಾರ ಮತ್ತು ಭಾನುವಾರ ಸೂರ್ಯ ದೇವನ ವಾರ ಎಂದು ನಮ್ಮ ಹಿಂದೂ ಧರ್ಮದಲ್ಲಿ ನಂಬಲಾಗುತ್ತದೆ. ಸೋಮವಾರದಂದು ಚಂದ್ರನ ದಿನದಂದೂ ಕೂದಲನ್ನು ಅಥವಾ ಉಗುರನ್ನು ಕತ್ತರಿಸುವುದು ನಿಷೇಧ ಯಾಕೆ ಅಂದರೆ ಈ ದಿನದಂದು ಈ ರೀತಿ ಕೆಲಸ ಮಾಡಿದರೆ ನಕಾರಾತ್ಮಕ ಶಕ್ತಿ ನಮ್ಮನ್ನು ಹೇರುತ್ತದೆ ಎಂದು ನಂಬಲಾಗದು ಯಾಕೆಂದರೆ ಚಂದ್ರನ ವಾರವಾಗಿರುವುದರಿಂದ , ಚಂದ್ರ ಸಂಪತ್ತಿನ ಸಂಕೇತ ಈ ರೀತಿ ಕೆಲಸ ಮಾಡಿದ್ದಲ್ಲಿ ನಮ್ಮ ಸಂಪತ್ತನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ನಂಬಲಾಗದು.


ಮಂಗಳವಾರದ ದಿನದಂದು ಆಂಜನೇಯನ ವರ ಈ ದಿನದಂದು ಕೂಡ ಈ ಎರಡು ಕೆಲಸ ಮಾಡುವುದಕ್ಕೆ ನಿಷೇಧ ಮತ್ತು ಬುಧವಾರದ ದಿನದಂದು ಕೃಷ್ಣನ ವಾರವಾಗಿದ್ದರೂ ಕೂಡ ಈ ದಿನ ಎಲ್ಲರಿಗೂ ಕೂಡ ಇಷ್ಟವಾಗುವಂತಹ ದಿನ ಮತ್ತು ಈ ದಿನದಂದು ಯಾವುದೇ ಕೆಲಸ ಮಾಡಿದರೂ ಕೂಡಾ ಒಳ್ಳೆಯದು ಎಂದು ನಂಬಲಾಗಿದೆ ಈ ದಿನದಂದು ಈ ಎರಡೂ ಕೆಲಸವನ್ನು ಮಾಡುವುದರಿಂದ ಲಕ್ಷ್ಮಿಕಟಾಕ್ಷವೂ ಕೂಡ ನಮ್ಮ ಮೇಲೆ ಬೀಳುತ್ತದೆ ಎಂದು ನಂಬಲಾಗಿದೆ ಆದ್ದರಿಂದ ಬುಧವಾರದ ದಿನದಂದು ಉಗುರು ಮತ್ತು ಕೂದಲನ್ನು ಕತ್ತರಿಸುವುದಕ್ಕೆ ಒಳ್ಳೆಯ ದಿನವಾಗಿದೆ.


ಗುರುವಾರದ ದಿನದಂದು ವಿಷ್ಣುವಿನ ವಾರವಾಗಿದ್ದು ಈ ದಿನ ಇಂತಹ ಕೆಲಸ ಮಾಡಿದರೆ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಮತ್ತು ನಿಮಗೆ ಲಕ್ಷ್ಮಿ ಒಲಿಯುವುದಿಲ್ಲ ಎಂದು ನಂಬಲಾಗಿದೆ ಆದ್ದರಿಂದ ಈ ದಿನದಂದು ಈ ಕೆಲಸವನ್ನು ಮಾಡಿದ್ದಲ್ಲಿ ನಿಮಗೆ ದುರಾದೃಷ್ಟ ಬರುತ್ತದೆ ಅಂತ ಹೇಳುತ್ತಾರೆ .
ಶುಕ್ರವಾರದ ದಿನದಂದು ಶುಕ್ರನ ವಾರ ಮತ್ತು ಶುಕ್ರ ಸೌಂದರ್ಯದ ಸಂಕೇತವಾಗಿರುವುದರಿಂದ ಕೂದಲು ಕತ್ತರಿಸುವುದು ಮತ್ತು ಉಗುರನ್ನು ಕತ್ತರಿಸುವುದಕ್ಕೆ ಇದು ಪ್ರಶಸ್ತವಾದ ದಿನ ಎಂದೇ ಹೇಳಬಹುದು.


ಶನಿವಾರದ ದಿನದಂದು ಶನಿದೇವನ ವಾರವಾಗಿರುವುದರಿಂದ ಇಂತಹ ಕೆಲಸ ಮಾಡಿದರೆ ಶನಿಯ ವಕ್ರ ದೃಷ್ಟಿ ನಿಮ್ಮ ಮೇಲೆ ಬೀರುತ್ತದೆ ಮತ್ತು ನಕಾರಾತ್ಮಕ ಶಕ್ತಿ ನಿಮ್ಮನ್ನು ಕುಗ್ಗುವಂತೆ ಮಾಡುತ್ತದೆ ಆದ್ದರಿಂದ ಶನಿವಾರದ ದಿನದಂದು ಈ ಕೆಲಸ ಮಾಡಬೇಡಿ. ಭಾನುವಾರದ ದಿನದಂದು ಸೂರ್ಯನ ವಾರವಾಗಿರುವುದರಿಂದ ಈ ಎರಡು ಕೆಲಸ ಮಾಡುವುದರಿಂದ ನೀವು ಆರ್ಥಿಕವಾಗಿ ಕುಗ್ಗಬಹುದು ಅನ್ನುವುದು ನಂಬಿಕೆ ಇದೆ ಆದ್ದರಿಂದ ಭಾನುವಾರದಂದು ಕೂಡ ಈ ಕೆಲಸವನ್ನೂ ಮಾಡದೆ ಇರುವುದೇ ಉತ್ತಮ.

No comments:

Post a Comment