#ದೇವ ಋಣ, #ಪಿತೃ ಋಣ ಹಾಗೂ #ಋಷಿ ಋಣ ಎಂಬ ಮೂರು ಪ್ರಕಾರದ ಋಣಗಳನ್ನು ಪ್ರತಿಯೊಬ್ಬ ಜೀವಿಯೂ ತನ್ನ ಜೀವಿತಾ ಅವಧಿಯಲ್ಲಿ ತೀರಿಸಲೇ ಬೇಕಾದ ಋಣಗಳೆಂಬುದಾಗಿ #ಹಿಂದೂ #ಧರ್ಮ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಇದೇ ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯವರೆಗೂ (15.9.18 – 28.9.18) ಪಿತೃಗಳ ಋಣ ತೀರಿಸಲು ಸೂಕ್ತವಾದ ದಿನಗಳಾಗಿವೆ. ಈ ಹದಿನೈದು ದಿನಗಳು ಯಾರು #ಪಿತೃಪಕ್ಷ ಕಾರ್ಯಗಳನ್ನು ಮಾಡುತ್ತಾರೆಯೋ ಅವರಿಗೆ #ಆಯುವೃದ್ಧಿ ಮತ್ತು ಸಕಲ ಇಷ್ಟ ಪ್ರಾಪ್ತಿಯು ಪಿತೃಗಳ ಆಶೀರ್ವಾದ ಬಲದಿಂದ ಲಭಿಸುತ್ತದೆ ಎಂಬುದು ಎಲ್ಲರ ನಂಬಿಕೆ. ಈ ಪಿತೃ ಪಕ್ಷದಲ್ಲಿ ನಾವು ಮಾಡುವ ದಾನ ಧರ್ಮಳು ಅದರಲ್ಲೂ #ಪಿಂಡ_ದಾನ ಹಾಗೂ #ಅನ್ನ_ದಾನ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ.
ಪಿತೃಗಳಿಗೆ ಮಾಡುವ ಅನ್ನದಾನ ಹೇಗಿರಬೇಕು?
ನಖಾದಿನಾ ಚೋಪಪನ್ನಂ ಕೇಶಕೀಟಾಭಿರ್ನೃಪ |
ನ ಚೈವಾಭಿಷವೈರ್ಮಿಶ್ರಮನ್ನಂ ಪರ್ಯುಷಿತಂ ತಥಾ ||
ಶ್ರಾದ್ಧಾಸಮನ್ವಿತೈರ್ದತ್ತಂ ಪಿತೃಭ್ಯೋ ನಾಮ ಗೋತ್ರತಃ |
ಯದಾಹಾರಾಸ್ತು ತೇ ಜಾತಾಸ್ತದಾಹಾರತ್ವಮೇತಿ ತತ್ ||
#ಕೂದಲು, #ಉಗುರು, #ಹುಳುಗಳು ಇವುಗಳಿಂದ ದೂಷಿತವಾಗದೆ ರಸಹೀನವಾಗದೆ ಇತರರಿಗೆ ಬಡಿಸಿ ಮಿಗದ ಪರಿಶುದ್ಧವಾದ ಅನ್ನವನ್ನು ಪಿತೃಗಳಿಗೆ ನಾಮ ಗೋತ್ರಗಳನ್ನು ಉಚ್ಚಾರಮಾಡಿ ದಾನಮಾಡಿದರೆ ಆ ಅನ್ನವು ಅವನ ಪಿತೃಗಳು ಜನ್ಮಾಂತರದಲ್ಲಿ ಯಾವ ಆಹಾರವನ್ನು ಉಪಯೋಗಿಸುವ ಜನ್ಮವನ್ನು ಪಡೆದಿರುವರೋ ಅವರಿಗಾಗಿ ಕೊಟ್ಟ ಅನ್ನವು ಅದೇ ಆಹಾರವಾಗಿ ಪರಿಣಮಿಸುವುದು. ಅಂದರೆ ದೇವ ಜನ್ಮವನ್ನು ಪಡೆದಿದ್ದರೆ ಅಮೃತವಾಗಿಯೂ, ಮನುಷ್ಯಜನ್ಮವನ್ನು ಪಡೆದಿದ್ದರೆ ಅನ್ನವಾಗಿಯೂ, ಪಶುಜನ್ಮವನ್ನು ಪಡೆದಿದ್ದರೆ ಹುಲ್ಲಿನ ರೂಪವಾಗಿಯೂ ಆಗಿ ಅವರನ್ನು ತೃಪ್ತಿಪಡಿಸುವುದು.
ಉಲ್ಲೇಖ : #ವಿಷ್ಣು_ಪುರಾಣ
ನಮ್ಮ ನಾಡು, ನಮ್ಮ ನುಡಿ, ನಮ್ಮ Someಸ್ಕೃತಿ
No comments:
Post a Comment