Tuesday, 17 December 2019

ನದಿ ಕೆರೆಗಳ ನೀರಿನಲ್ಲಿ ನಾಣ್ಯವನ್ನು ಹಾಕುವುದು ಏಕೆ

ಸಾಮಾನ್ಯವಾಗಿ ಬಹಳಷ್ಟು ಜನರು ಇದನ್ನು ಕೇಳಿರುತ್ತಾರೆ ಅಥವಾ ನೋಡಿರುತ್ತಾರೆ. ಆದ್ರೆ ಇದರ ಹಿಂದಿರುವ ಅಸಲಿ ಕಾರಣವೇನು ಅನ್ನೋದನ್ನ ತಿಳಿದಿರುವುದು ತುಂಬಾನೇ ಕಡಿಮೆ ಅನಿಸುತ್ತದೆ. ಹಾಗಾಗಿ ಇದರ ಹಿಂದಿರುವ ಕಾರಣವೇನು ಇದರಿಂದ ನಮಗೆ ಸಿಗುವ ಲಾಭವಾದರೂ ಏನು ಅನ್ನೋದನ್ನ ನೋಡುವುದಾದರೆ. ಇದು ಇವತ್ತಿನ ಕಾಲದಿಂದದಲ್ಲ ಹಿಂದಿನ ಕಾಲದಿಂದಲೂ ಕೂಡ ಈ ರೀತಿಯಾಗಿ ಮಾಡುತ್ತಲೇ ಬಂದಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ವಿಧಾನ ಕಡಿಮೆಯಾಗಿರಬಹುದು. ಇದನ್ನು ಹೆಚ್ಚಾಗಿ ಊರು ದೇವಸ್ಥಾನದ ಕಲ್ಯಾಣಿಗಳಲ್ಲಿ ಹಾಗೂ ದೇವಸ್ಥಾನ ಇರುವಂತ ನದಿ ಕೆರೆಗಳ ನೀರಿನಲ್ಲಿ ನಾಣ್ಯವನ್ನು ಹಾಕುತ್ತಾರೆ.

ನಮ್ಮಹಿರಿಯರು ಮಾಡಿಕೊಂಡು ಬಂದಿರುವಂತ ಕೆಲವು ಸಂಪ್ರದಾಯವನ್ನು ನಾವುಗಳು ಇಂದಿಗೂ ಸಹ ಮಾಡುತ್ತಲೇ ಇದೀವಿ. ಆದ್ರೆ ಇದು ಬರಿ ಸಂಪ್ರದಾಯವಲ್ಲದೆ ಇದರ ಹಿಂದಿದೆ ವಿಜ್ಞಾನಿಕ ಕಾರಣ. ಹೌದು ನಾಣ್ಯವನ್ನು ಹಾಕುವುದರಿಂದ ಆ ನೀರಿನಲ್ಲಿ ತಾಮ್ರದ ಅಂಶ ಪಸರಿಸುತ್ತಿತ್ತು ಹಾಗಾಗಿ ಆ ನೀರನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಆರೋಗ್ಯಕಾರಿ ಅಂಶಗಳು ದೊರೆಯುತ್ತಿತ್ತು ಅನ್ನೋದನ್ನ ಹೇಳಲಾಗುತ್ತದೆ. ಈ ಹಿಂದೆ ಮನೆಯಲ್ಲಿ ಬೋರ್ ವೆಲ್ ಇರಲಿಲ್ಲ ಹಾಗೂ ನೀರನ್ನು ಶುದ್ದೀಕರಿಸುವಂತ ಯಾವುದೇ ರೀತಿಯ ಯಂತ್ರಗಳು ಸಹ ಇರಲಿಲ್ಲ ಹಾಗಾಗಿ ನದಿ ಕೆರೆಗಳ ನೀರನ್ನು ಶುದ್ದಿಸುವ ಜೊತೆಗೆ ನೀರನ್ನು ಪಿಲ್ಟಾರ್ ಮಾಡುವ ಗುಣಗಳನ್ನು ನಾಣ್ಯಗಳು ಮಾಡುತ್ತಿದ್ದವು ಅನ್ನೋದನ್ನ ಹೇಳಲಾಗುತ್ತದೆ.


ಆ ದಿನಗಳಲ್ಲಿ ಜನರು ನದಿ ಕೆರೆ ಹಾಗೂ ಕಲ್ಯಾಣಿಗಳಿಂದ ತಂದು ಸೇವನೆ ಮಾಡುತ್ತಿದ್ದ ನೀರು ಶುದ್ಧವಾಗಿರುತ್ತಿದ್ದವು. ಅಷ್ಟೇ ಅಲ್ದೆ ನೀರಿನಲ್ಲಿ ನಮ್ಮ ಶರೀರಕ್ಕೆ ಅನುಕೂಲವಾಗುವಂತಹ ತಾಮ್ರ ಲೋಹದ ಅಣುಗಳು ಸೇರಿಕೊಂಡಿರುತ್ತಿತ್ತು ಹಾಗಾಗಿ ನಾಣ್ಯವನ್ನು ನೀರಿನಲ್ಲಿ ಎಷ್ಟು ಬೇಕು ಅಷ್ಟು ಹಾಕುತ್ತಿದ್ದರು. ಆದ್ರೆ ಇಂದಿನ ದಿನಗಳಲ್ಲಿ ನೂರಕ್ಕೆ 70 ರಷ್ಟು ಜನ ತಮ್ಮ ಮನೆಯಲ್ಲೇ ಪಿಲ್ಟಾರ್ ನೀರು ಕುಡಿಯುತ್ತಿದ್ದಾರೆ. ಹಾಗಾಗಿ ಇದರ ಬಳಕೆ ಕಡಿಮೆಯಾಗಿದೆ ಅನ್ನೋದನ್ನ ಹೇಳಲಾಗುತ್ತದೆ.










No comments:

Post a Comment