Monday, 16 December 2019

ಅಕ್ಷೋಹಿಣಿ_ಸೈನ್ಯ

#ಅಕ್ಷೋಹಿಣಿ_ಸೈನ್ಯ .

💥ಪುರಾಣಗಳ ಕಾಲದಲ್ಲಿ ರಾಜರುಗಳು ಯುದ್ದಕ್ಕೆ ಹೋಗುವಾಗ ಸೈನ್ಯವನ್ನೂ ಕರೆದುಕೊಂಡು ಹೋಗುತ್ತಿದ್ದರು . ಅಕ್ಷೋಹಿಣಿ ಸೈನ್ಯದ ಜೊತೆ ಯುದ್ದ ಮಾಡುತ್ತಿದ್ದರು . ಒಬ್ಬೊಬ್ಬರು ಹಲವು ಅಕ್ಷೋಹಿಣಿ ಸೈನ್ಯದ ಜೊತೆಗೆ ಯುದ್ದಕ್ಕೆ ಹೋಗುತ್ತಿದ್ದರು .

💥ಹೀಗೆ ಭಾರತದ ಮಹಾ ಯುದ್ದವಾದ #ಮಹಾಭಾರತ ಯುದ್ದದಲ್ಲಿ ಬರೋಬ್ಬರಿ 18 ಅಕ್ಷೋಹಿಣಿ ಸೈನ್ಯ ಯುದ್ದ ಮಾಡಿತಂತೆ . ಅಂದರೆ 
#ಕೌರವರು 11 ಅಕ್ಷೋಹಿಣಿ ಸೈನ್ಯ
#ಪಾಂಡವರು 7 ಅಕ್ಷೋಹಿಣಿ ಸೈನ್ಯ ಯುದ್ದ ಮಾಡಿತಂತೆ .

💥ಒಂದು ಅಕ್ಷೋಹಿಣಿ ಸೈನ್ಯದ ಒಟ್ಟಾರೆ ಮಾಹಿತಿ .
ಒಂದು ಅಕ್ಷೋಹಿಣಿ ಸೈನ್ಯ ವಾಗಲು ಇಷ್ಟು ಸಂಖ್ಯೆ ಯಲ್ಲಿ ರಥ ಗಜ ಅಶ್ವ ಕಾಲ್ದಳ ಇರಬೇಕು .
ಬನ್ನಿ ಅಕ್ಷೋಹಿಣಿ ಸೈನ್ಯ ಹೇಗೆ ಆಗುತ್ತದೆ ಎಂದು ತಿಳಿಯೋಣ .

💥#ಪತ್ತಿ - 1 ರಥ , 1 ಆನೆ , 3 ಕುದುರೆ , 5 ಜನ ಕಾಲ್ದಳ ಸೇರಿದರೆ 1 #ಪತ್ತಿ ಯಾಗುತ್ತದೆ .

💥#ಸೇನಾಮುಖ - 3 ಪತ್ತಿ ಸೇರಿದರೆ ಒಂದು ಸೇನಾಮುಖ . ಅಂದರೆ 
3 ರಥ , 3 ಆನೆ , 9 ಕುದುರೆ , 15 ಜನ ಕಾಲ್ದಳ ಸೇರಿದರೆ ಒಂದು ಸೇನಾಮುಖ ವಾಗುತ್ತದೆ .

💥#ಕುಲ್ಮ - 3 ಸೇನಾಮುಖ ಕೂಡಿದರೆ ಒಂದು ಕುಲ್ಮ ವಾಗುತ್ತದೆ . ಅಂದರೆ 9 ರಥ , 9 ಆನೆ , 27 ಕುದುರೆ , 45 ಜನ ಕಾಲ್ದಳ ಸೇರಿದರೆ ಒಂದು ಕುಲ್ಮ .

💥#ಗಣ - 3 ಕುಲ್ಮ ಸೇರಿದರೆ ಒಂದು ಗಣ . ಅಂದರೆ 
27 ರಥ , 27 ಆನೆ , 81 ಕುದುರೆ , 135 ಜನ ಕಾಲ್ದಳ ಸೇರಿ ಒಂದು ಗಣ ವಾಗುತ್ತದೆ . 

💥#ವಾಹಿನಿ - 3 ಗಣ ಸೇರಿದರೆ ಒಂದು ವಾಹಿನಿ . ಅಂದರೆ 
81 ರಥ , 81 ಆನೆ , 243 ಕುದುರೆ , 405 ಜನ ಕಾಲ್ದಳ ಸೇರಿ ಒಂದು ವಾಹಿನಿ ಯಾಗುತ್ತದೆ .

💥#ವೃತನ - 3 ವಾಹಿನಿ ಸೇರಿ ಒಂದು ವೃತನ ವಾಗುತ್ತದೆ . ಅಂದರೆ 
243 ರಥ , 243 ಆನೆ , 729 ಕುದುರೆ , 1215 ಜನ ಕಾಲ್ದಳ ಸೇರಿ ಒಂದು ವೃತನ ವಾಗುತ್ತದೆ . 

💥#ಚಮುವು - 3 ವೃತನ ಸೇರಿದರೆ ಒಂದು ಚಮುವು ಆಗುತ್ತದೆ . ಅಂದರೆ 
729 ರಥ , 729 ಆನೆ , 2187 ಕುದುರೆ , 3645 ಜನ ಕಾಲ್ದಳ ಸೇರಿ ಒಂದು ಚಮುವು ಆಗುತ್ತದೆ . 

💥#ಅನಿಕಿನಿ - 3 ಚಮುವು ಸೇರಿದರೆ ಒಂದು ಅನಿಕಿನಿ ಆಗುತ್ತದೆ . ಅಂದರೆ 
2387 ರಥ , 2387 ಆನೆ , 6561 ಕುದುರೆ , 10,355 ಜನ ಕಾಲ್ದಳ ಸೇರಿ ಒಂದು ಅನಿಕಿನಿ ಯಾಗುತ್ತದೆ .

💥#ಅಕ್ಷೋಹಿಣಿ - 10 ಅನಿಕಿನಿ ಸೇರಿದರೆ ಒಂದು ಅಕ್ಷೋಹಿಣಿ ಯಾಗುತ್ತದೆ . ಅಧರೆ 
21,870 ರಥ , 21,870 ಆನೆ , 65,610 ಕುದುರೆ , 1,09.350 ಜನ ಕಾಲ್ದಳ ಸೇರಿ ಒಂದು ಅಕ್ಷೋಹಿಣಿ ಯಾಗುತ್ತದೆ . 

ಒಟ್ಟರೆ ಯಾಗಿ ಒಂದು  ಅಕ್ಷೋಹಿಣಿ ಸೈನ್ಯ ಎಂದರೆ .

#ರಥಗಳು - 21,870 
#ಗಜಪಡೆ - 21,870 
#ಅಶ್ವದಳ - 65,610 
#ಕಾಲ್ದಳ - 1,09.350  ಎಂದು .

💥 18 ಅಕ್ಷೋಹಿಣಿ ಎಂದರೆ 

#ರಥಗಳು - 3,96.600 
#ಗಜಪಡೆ - 3,96.600
#ಅಶ್ವದಳ - 11,80.980 
#ಕಾಲ್ದಳ - 19,68.300 ಆಗುತ್ತದೆ .

💥ಮಹಾಭಾರತದ ಯುದ್ದದಲ್ಲಿ ಒಟ್ಟು ಎಲ್ಲಾ ಸೇರಿ ಅಂದರೆ ಪ್ರತಿ ಆನೆಯ ಮಾವುತ , ಪ್ರತಿ ರಥದ ಸಾರಥಿ ಸಂಖ್ಯೆ ಸೇರಿ ಬರೋಬ್ಬರಿ 45 ಲಕ್ಷ ಜನ ಯುದ್ದ ಮಾಡಿದ್ದರು . 

ಮಹಾಭಾರತದ ಯುದ್ದದಲ್ಲಿ ಹಲವಾರು ಕಡೆಯಿಂದ ಜನರು ಬಂದಿದ್ದರು . ಅಂಗ ವಂಗ ಕಳಿಂಗ ಮಾಳ್ವ ಗಾಂಧಾರ ಅಭೀಷ ತುರ್ಕಿ ಇಂದೆಲ್ಲಾ ಬಂದಿದ್ದರು . ಅರಬ್ ನಿಂದ ಅಶ್ವಗಳನ್ನು ಕರೆಸಿಕೊಂಡಿದ್ದರಂತೆ . 

ಇಷ್ಟು ಸಂಖ್ಯೆಯಲ್ಲಿ ಜನ ಯುದ್ದ ಮಾಡಿದರೂ ಉಳಿದದ್ದು ಬೆರಳೆಣಿಕೆಯಷ್ಡು ಮಾತ್ರ .
#ಕೌರವರಲ್ಲಿ 4 ಜನ ಉಳಿದರೆ #ಪಾಂಡವರಲ್ಲಿ 8 ಜನ ಉಳಿಯುವರು .

#ಕೌರವರಲ್ಲಿ ಉಳಿದವರು - ಕೃಪಾಚಾರ್ಯ , ಕೃತವರ್ಮ , ಅಶ್ವತ್ಥಾಮ , ಸಂಜಯ .

#ಪಾಂಡವರಲ್ಲಿ ಉಳಿದವರು - ಧರ್ಮರಾಯ , ಭೀಮ , ಅರ್ಜುನ , ನಕುಲ , ಸಹದೇವ , ಕೃಷ್ಣ , ಸನಕ , ಯುಯುತ್ಸು . 
ಇಷ್ಟು ಜನ ಮಾತ್ರ ಉಳಿದರು .

ಧನ್ಯವಾದಗಳು
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

No comments:

Post a Comment