Monday, 16 December 2019

ಅವಳಿ ಬಾಳೆಹಣ್ಣು

ಉಪಯುಕ್ತ ಮಾಹಿತಿ

ಬಹಳಷ್ಟು ಸಲ ನಮಗೆ ಗೊತ್ತಿಲ್ಲದೇ ಈ ಅವಳಿ ಬಾಳೆಹಣ್ಣು ಬರುತ್ತಿರುತ್ತವೆ. ಅವುಗಳನ್ನು ಮಕ್ಕಳಿಗೂ ಕೊಡದೆ ದೇವರಿಗೂ ಇಡದೆ ದೊಡ್ಡವರೇ ತಿನ್ನುತ್ತಿರುತ್ತಾರೆ. ಇಷ್ಟಕ್ಕೂ ಜಂಟಿ ಬಾಳೆಹಣ್ಣನ್ನು ಮಕ್ಕಳಿಗೆ ಕೊಡುವ ಸಂಗತಿ ಪಕ್ಕಕ್ಕಿಟ್ಟರೆ. ಈ ರೀತಿಯ ಅವಳಿ ಬಾಳೆ ಹಣ್ಣನ್ನು ದೇವರಿಗೂ ಸಹ ಇಡಬಾರದು.

ಇದಕ್ಕೆ ಪಂಡಿತರು ಈ ರೀತಿ ಉತ್ತರ ಕೊಡುತ್ತಾರೆ. 

ಬಾಳೆ ಗಿಡ ಎಂದರೆ ಬೇರೆ ಯಾರೂ ಅಲ್ಲ. ಸಾಕ್ಷಾತ್ ದೇವ ನರ್ತಕಿ ರಂಭೆಯ ಅವತಾರ. ಶ್ರೀ ಮಹಾವಿಷ್ಣುವಿನ ಬಳಿ ರಂಬೆ ತಾನೇ ಸೌಂದರ್ಯವತಿ ಎಂದು ಅಹಂಕಾರದಿಂದ ಮೆರೆಯುತ್ತಿದ್ದಳು. ಈ ರೀತಿ ನಡೆದುಕೊಂಡ ಕಾರಣ ಆಕೆಗೆ ಭೂಲೋಕದಲ್ಲಿ ನೀನು ಬಾಳೆ ಗಿಡವಾಗಿರು ಎಂದು ಮಹಾವಿಷ್ಣು ಶಾಪ ಕೊಟ್ಟನು.

ಆದರೆ ಆಕೆ ತನ್ನ ತಪ್ಪು ತಿಳಿದುಕೊಂಡು ಬೇಡಿಕೊಂಡ ಕಾರಣ ದೇವರಿಗೆ ನೈವೇದ್ಯವಾಗಿ ಬಾಳೆಹಣ್ಣನ್ನು ಇಡುವ ಅರ್ಹತೆಯನ್ನು ವಿಷ್ಣು ವರ ಪ್ರಸಾದಿಸಿದ. ಅಷ್ಟು ಪವಿತ್ರವಾದ ಹಣ್ಣಿನಲ್ಲಿ ನಾವು ಯಾವುದೇ ದೋಷಗಳನ್ನು ಹುಡುಕಬಾರದು. ಹುಡುಕಬೇಕಾದ ಅಗತ್ಯವೂ ಇಲ್ಲ . ಅವಳಿ ಬಾಳೆಹಣ್ಣನ್ನು ಯಾವುದೇ ಅಭ್ಯಂತರವಿಲ್ಲದೆ ದೇವರಿಗೆ ಅರ್ಪಿಸಬಹುದು.

ಆದರೆ ತಾಂಬೂಲದಲ್ಲಿ ಮಾತ್ರ ಜಂಟಿ ಬಾಳೆಹಣ್ಣನ್ನು ಇಡಬಾರದು. 

ಯಾಕೆಂದರೆ ಅವಳಿ ಬಾಳೆ ಹಣ್ಣಿನಲ್ಲಿ ಎರಡು ಹಣ್ಣು ಇದ್ದರೂ ಅದು ಒಂದು ಹಣ್ಣಿನ ಲೆಕ್ಕಾಚಾರದಲ್ಲೇ ಬರುತ್ತದೆ ತಾಂಬೂಲದಲ್ಲಿ ಒಂದೇ ಒಂದು ಹಣ್ಣು ಇಡುವುದಿಲ್ಲ. ಹಾಗಾಗಿ ತಾಂಬೂಲದಲ್ಲಿ ಈ ರೀತಿಯ ಜಂಟಿ ಬಾಳೆಹಣ್ಣು ಇಟ್ಟರೆ ನೋಡುವುದಕ್ಕೆ ಚೆನ್ನಾಗಿರಲ್ಲ. ಹಾಗಾಗಿ ತಾಂಬೂಲದಲ್ಲಿ ಅವಳಿ ಬಾಳೆ ಹಣ್ಣನ್ನು ಇಟ್ಟು ಯಾರಿಗೂ ಸಹ ಕೊಡಬಾರದು.

ಸರ್ವೇಜನಾಃ ಸುಖಿನೋಭವಂತು ಕೃಷ್ಣಾರ್ಪಣಮಸ್ತು

No comments:

Post a Comment