ಧನುರ್ಮಾಸ ಈ ದಿನ ಪ್ರಾರಂಭ.
ಧನುರ್ಮಾಸ ಎಂದರೆ ಸೂರ್ಯನು ಮೂಲಾ ನಕ್ಷ ತ್ರದಿಂದ ಹಿಡಿದು ಉತ್ತರಾಷಢ ನಕ್ಷ ತ್ರವು 1ನೇ ಪಾದದವರೆಗಿನ ಧನುರಾಶಿಯಲ್ಲಿ ಸಂಚರಿಸುವ ಸಮಯವನ್ನು ಧನುರ್ಮಾಸ ಎಂದು ಕರೆಯಲಾಗುತ್ತದೆ. ಧನುರ್ಮಾಸದ ಆರಂಭವು ಸೂರ್ಯನ ಪರಿಚಲನೆಯ ಆಧಾರದ ಮೇಲೆ ನಿರ್ಧರಿತವಾಗಿದೆ. ಸೂರ್ಯನ ಧರ್ನುರಾಶಿಯ ಪ್ರವೇಶವನ್ನು ಧನುರ್ ಸಂಕ್ರಮಣವೆಂದು ಹಾಗೂ ಧನುರ್ರಾಶಿಯಿಂದ ಮಕರ ರಾಶಿಗೆ ಸೂರ್ಯನ ಪ್ರವೇಶವನ್ನು ಮಕರ ಸಂಕ್ರಮಣವೆಂದು ಕರೆಯಲಾಗುತ್ತಿದ್ದು, ಈ ಮಧ್ಯೆ ಬರುವ ಇಪ್ಪತ್ತೊಂಬತ್ತು ದಿನಗಳೇ ಧನುರ್ಮಾಸವಾಗಿದೆ.
ಪುಣ್ಯಮಾಸ.ದೇವತೆಗಳ ಮಾಸ.ಶ್ರೀ ಹರಿಯ
ಸ್ತುತಿಸುವ ಮಾಸ.ಶ್ರೀಮನ್ನಾರಯಣನ ಮಾಸ.
*ಧನುರ್ಮಾಸ ಪೂಜೆ ಯಲ್ಲಿ ಪಠಿಸಬಹುದಾದ ಸರಳ ಹಾಗೂ ಪ್ರಭಾವಶಾಲಿ ವಿಷ್ಣು ಮಂತ್ರಗಳು*
|| ಧನುರ್ಮಾಸದಲ್ಲಿ ಒಂದು ಪೂಜೆ ಮಾಡಿದರೂ ಸಾವಿರಾರು ದಿನಗಳ ಕಾಲ ಪೂಜೆ ಮಾಡಿದ ಪುಣ್ಯ ಲಭಿಸುತ್ತದೆ.
*ಅದೃಷ್ಟ, ಸಮಾಧಾನ, ಮತ್ತು ಶಾಂತಿ ನೆಲೆಗೊಳ್ಳಲು ಮಹಾವಿಷ್ಣುವನ್ನು ಪೂಜಿಸಲಾಗುತ್ತದೆ. ದೇವತೆಗಳಲ್ಲಿ ಹೆಚ್ಚು ಶಾಂತಿಪ್ರಯರು ಮಹಾವಿಷ್ಣು. ಭಕ್ತರ ಸಕಲ ಪಾಪಗಳನ್ನು ಮನ್ನಿಸುವ ಮಹಾವಿಷ್ಣುವು ಭಕ್ತರ ಮೊರೆಯನ್ನು ಬೇಗನೆ ಆಲಿಸುವವರಾಗಿದ್ದಾರೆ. ಹಾಗೆಯೇ ಹೆಚ್ಚು ಪರಿಣಾಮಕಾರಿ ದೇವರು ಎಂಬುದು ಕೂಡ ಹೌದು.
*ಮಹಾವಿಷ್ಣುವನ್ನು ಸಂಪ್ರೀತಿಗೊಳಿಸುವ ಮಂತ್ರ ಹಾಗೂ ಸ್ತೋತ್ರಗಳು ಹೆಚ್ಚು ಫಲಪ್ರದ ಎನಿಸಿವೆ. ಅವುಗಳಲ್ಲಿ
ವಿಷ್ಣು ಮೂಲ ಮಂತ್ರ-
ಓಂ ನಮೋ ನಾರಾಯಣಾಯ, ವಿಷ್ಣು ಭಗವತೇ ವಾಸುದೇವ ಮಂತ್ರ, ವಿಷ್ಣುಗಾಯತ್ರಿ ಮಂತ್ರ, ವಿಷ್ಣು ಸಂಕಷ್ಟಹರ ಮಂತ್ರ, ಮಂಗಳಂ ಭಗವಾನ್ ವಿಷ್ಣು ಮಂತ್ರ ಇತ್ಯಾದಿ.
*ಅದರಲ್ಲಿ ಹೆಸರೇ ಹೇಳುವಂತೆ "ವಿಷ್ಣು ಸಂಕಷ್ಟಹರ ಮಂತ್ರ" ವು ಕಷ್ಟ, ದುಃಖ, ತಾಪತ್ರಯ, ನಿವಾರಣೆಗೆ, ಮನಃಶಾಂತಿಗೆ ಅತ್ಯಂತ ಸೂಕ್ತವಾಗಿರುತ್ತದೆ.
*"ವಿಷ್ಣು ಸಂಕಷ್ಟಹರ ಮಂತ್ರ"*
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ!
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭೃದ್ಯಾನ ಗಮ್ಯಂ
ವಂದೇ ವಿಷ್ಣುಂ ಭವ ಭಯಹರಂ ಸರ್ವಲೋಕೈಕ ನಾಥಂ!!
*"ಮಂಗಳಂ ಭಗವಾನ್ ವಿಷ್ಣು ಮಂತ್ರ"*
ಮಂಗಳಂ ಭಗವಾನ್ ವಿಷ್ಣು ಮಂಗಳಂ ಗರುಡಧ್ವಜಾ
ಮಂಗಳಂ ಪುಂಡರೀಕಾಕ್ಷ ತನ್ನೋ ಹರಿಃ!!
ಶ್ರೀ ಮಹಾವಿಷ್ಣು ದೇವಾಯ ನಮಃ.
🍁🍁🍁🙏🙏🙏🌹🌹🌹
*"ಶ್ರೀ ವಿಷ್ಣು ಭಗವಾನರು ಎಲ್ಲರನ್ನೂ ಕಾಪಾಡಲಿ"*
ಸರ್ವೇ ಜನಾಃ ಸುಖಿನೋ ಭವಂತು ಸನ್ಮಂಗಳಾನಿ ಭವಂತು
* ಸರ್ವರಿಗೂ ಶುಭವಾಗಲಿ. ಶುಭಮಸ್ತು *
No comments:
Post a Comment