Monday, 16 December 2019

ಶೋಡಶಸಂಸ್ಕಾರಗಳು

#ಶೋಡಶಸಂಸ್ಕಾರಗಳು..

ಮೊನ್ನೆ ಯಾರೊ ಕೇಳಿದ್ದರು ಶೋಡಸ ಸಂಸ್ಕಾರಗಳ  ಬಗ್ಗೆ ಬರೆದು ಹಾಕಿ ಅಂತ... ನನಗೆ ಗೊತ್ತಿರುವಷ್ಟು ಬರೆದಿದ್ದೇನೆ..

1) ,ಗರ್ಭಾದಾನ :  ಉತ್ಕೃಷ್ಟ ಸಂತತಿ ಗೋಸ್ಕರ ಪತ್ನಿಯನ್ನು, ದೇಹ ಸಂಬಂಧದಿಂದ ಗರ್ಭವತಿಯನ್ನಾಗಿ ಮಾಡುವುದು 
ತಮ್ಮ ಪೂರ್ವಜರ  ಪಿತೃಋಣ ನನ್ನು ತಿರಿಸಲು (ಅವರನ್ನು ಪುತ್ ನರಕದಿಂದ ಪಾರು ಮಾಡಲು-ಗಂಡು ಮಗು -ಪುತ್ರ) ಮಗುವನ್ನು ಪಡೆಯುವುದು ಹಿಂದೂಗಳಿಗೆ ಕರ್ತವ್ಯವಾಗಿದೆ.

2]. ಪುಂಸವನ  ಗರ್ಭಧಾರಣೆಯ ಮೂರನೇ ತಿಂಗಳಲ್ಲಿ ನಡೆಸುವ ಕ್ರಿಯೆ ಗರ್ಭಸ್ಥ ಶಿಶುವನ್ನು ಪಾವನಗೊಳಿಸುವ ಸಂಸ್ಕಾರವಿದು.

3]. ಸೀಮಂತೋನ್ನಯನ :  ಗರ್ಭಧಾರಣೆಯ ಐದನೇ ಮತ್ತು ಎಂಟನೇ ತಿಂಗಳ ನಡುವೆ ನಡೆಸುವ ಕ್ರಿಯೆ  , ಗರ್ಭಿಣಿ ಸ್ತ್ರೀಯ ಮನಸ್ಸು ಶಕ್ತವೂ ಪ್ರಸನ್ನ ವೂ ಆಗಿ ಧರಿಸಿದ ಗರ್ಭ ಅದೃಷ್ಟವು ಆರೋಗ್ಯಪೂರ್ಣ ಆಗಿ ದಿನಂಪ್ರತಿ ವೃದ್ಧಿಯಾಗುವಂತೆ ಮಾಡುವ ವಿಧಾನವಿದು...

4]. ಜಾತಕರ್ಮ (ಮಗುವಿನ ಜನನದ ಸಮಯದಲ್ಲಿ ಕ್ರಿಯೆ ಶಿಶು ಗರ್ಭದಿಂದ ಹೊರಬಂದಾಗ ಅದನ್ನು ಪ್ರೀತ್ಯಾದರಗಳಿಂದ ಸತ್ಕರಿಸಿ ಸ್ವಾಗತಿಸುವ ವಿಧಿ..

5]. ನಾಮಕರಣ (ಮಗುವಿನ ನಾಮಕರಣಉತ್ತಮ ಪ್ರಜೆಯಾಗಲು ಪ್ರೇರಣೆ ನೀಡುವ ಹೆಸರನ್ನು ಇಡುವ ಸಂಸ್ಕಾರ..

6]. ನಿಷ್ಕ್ರಮಣ(ಮಗುವನ್ನು ಹೊರಗೆ ತರುವುದು 5ನೇ ತಿಂಗಳಲ್ಲಿ ಜನ್ಮ ಪಡೆದ  ಗೃಹದಿಂದ ಶಿಶುವನ್ನು ಹೊರತಂದು ಜಗತ್ತನ್ನು ಪ್ರಥಮಬಾರಿಗೆ ದರ್ಶನ ಮಾಡಿಸುವ ವಿಧಿ..

7]. ಅನ್ನಪ್ರಾಶನ ಆರು ತಿಂಗಳಲ್ಲಿ ಏಕದಳ ಮೊದಲ ಆಹಾರ..ಶರೀರಕ್ಕೆ ಬಲವನ್ನು ನೀಡುವ ಪುಷ್ಟಿದಾಯಕ ಆಹಾರವನ್ನು ಪ್ರಥಮಬಾರಿಗೆ ನೀಡುವ ಸಂಸ್ಕಾರ

8]. ಕರ್ಣವೇಧ  ಮೂರನೇ ಅಥವಾ ಐದನೇ ವರ್ಷದ ಕಿವಿ ಚುಚ್ಚುವ ಕ್ರಿಯೆ ರಕ್ಷಣೆ ಹಾಗೂ ಸೌಂದರ್ಯ ವೃದ್ಧಿಗಾಗಿ ಕಿವಿ ಚುಚ್ಚಿ ಆಭರಣಗಳನ್ನು ಧರಿಸುವ ಸಂಸ್ಕಾರ..

9. ಚೌಲ/ಚೂಡಾಕರ್ಮ (ಕೂದಲು ಮೊದಲ ಬಾರಿಗೆ ಕತ್ತರಿಸುವುದು, 1 ವರ್ಷ ಅಥವಾ 3 ನೇ ವರ್ಷದಲ್ಲಿ .... ಶುಚಿ ಸೌಂದರ್ಯ  ಉತ್ಸಾಹ ವೃದ್ಧಿಗಾಗಿ ಪ್ರಥಮ ಬಾರಿಗೆ ಮಗುವಿನ ಕೂದಲನ್ನು ಕತ್ತರಿಸುವಿವ ವಿಧಿ

10)ಅಕ್ಷರಭ್ಯಾಸ   ವಿದ್ಯಾರ್ಜನೆಗೆ ಹೆಬ್ಬಾಗಿಲಾಗಿ ರುವ ಲಿಪಿ ಮತ್ತು ಅಕ್ಷರಗಳನ್ನು ಪ್ರಥಮಬಾರಿಗೆ ಕಲಿಸುವ ಸಂಸ್ಥಾರ

11) ಉಪನಯನ : ವಿದ್ಯಾರ್ಥಿನಿಗೆ ಸಮರ್ಥ ನ್ನಾಗಿಸುವ ವಿಧಿ
12) ಗೋದಾನ :ಪ್ರಥಮ ಬಾರಿಗೆ ಗಡ್ಡ ಮೀಸೆಗಳನ್ನು ತೆಗೆಸಿ ವಿದ್ಯೆಯನ್ನು ಧಾರೆಯೆರೆದು ಆಚಾರ್ಯನಿಗೆ ಗೋವನ್ನು ದಾನಮಾಡುವ ಸಂಸ್ಕಾರ

13]. ಗೃಹಸ್ಥಾಶ್ರಮ ಸಂಸಾರದಲ್ಲಿ ಗೃಹಸ್ಥ ನಾಗಿ ಅದಕ್ಕೆ ಸಂಬಂಧಿಸಿದ.ಕ್ರಿಯೆ.. ಅಧ್ಯಯನಪೂರ್ಣ ಪೂರೈಸಿ ಸ್ವಗೃಹಕ್ಕೆ ಮರಳಿ ಅನುರೂಪವಾದ  ಕನ್ಯೆಯೊಂದಿಗೆ ವಿವಾಹ ಮಾಡಿಕೊಳ್ಳುವ ವಿಧಿ

14]. ವಾನಪ್ರಸ್ಥ (ಗೃಹಸ್ಥ ಜೀವನ ತ್ಯಜಿಸುವ ಕ್ರಿಯೆ)

15]. ಸಂನ್ಯಾಸ ಆಶ್ರಮ(ಸನ್ಯಾಸಿ ಜೀವನ -ತ್ಯಾಗದ/ವಿರಕ್ತ ಜೀವನ)

16] ಅಂತ್ಯೇಷ್ಟಿ : ಮಾನವನ ಮೃತ ಶರೀರವನ್ನು ವಿಧಿಪೂರ್ವಕವಾಗಿ ದಹನ ಮಾಡಿ ಪ್ರೇತತ್ವ ನಿವೃತ್ತಿಯ ಮೂಲಕ ಚಿತ್ರ ಸಂಗಮದ ವರಗಿನ ವಿಧಿ....

No comments:

Post a Comment