#ವಿಧಿಯಾಟ
ನಮ್ಮ ಹಿರಿಯರು ನಮಗೆ ಹೇಳ್ತಿದ್ರು ಬೇರೆಯವರ ವಸ್ತ್ರ ,ವಡವೆ ಧರಿಸಬಾರದು ಅಂತ ಯಾಕೆ ಗೊತ್ತಾ ಅದಕ್ಕೂ ಕಾರಣಗಳಿವೆ ಒಂದು ಉದಾಹರಣೆ ಹೇಳ್ತೇನೆ ಕೇಳಿ....
ಜರಾಸಂಧನ ವಧೆಯ ನಂತರ ಅದರ ಜ್ಞಾಪಕಾರ್ಥವಾಗಿ ಅವನು ಧರಿಸಿದ್ದ ಅದ್ಭುತವಾದ ಕಿರೀಟವನ್ನೊಂದನ್ನು ತಂದು ಕೋಶಾಗಾರದಲ್ಲಿ ಇಟ್ಟಿದ್ದರು.
ಆದರೆ ಅದನ್ನು ಹೊರಗೆ ಇಟ್ಟಿರಲಿಲ್ಲ.
*ಒಂದು ಪೆಟ್ಟಿಗೆಯ ಒಳಗೆ ಇಟ್ಟಿದ್ದರು.*
ಪರೀಕ್ಷಿತ ರಾಜ ತನಗೆ ರಾಜ್ಯಾಧಿಕಾರ ದೊರೆತ ಮೇಲೆ ಬೇಟೆಗೆ ಹೋಗುವ ಒಂದು ಪ್ರಸಂಗದಲ್ಲಿ ತಲೆಗೆ ಸರಿದೂಗುವ ಒಂದು ಕಿರೀಟಾನ್ವೇಷಣೆಗೆ ಕೋಶಾಗಾರ ಪ್ರವೇಶಿಸಿದ ಪರೀಕ್ಷಿತ.
*ಅಲ್ಲಿ ಪ್ರತಿ ಪದಾರ್ಥಗಳನ್ನು ತೆಗೆದು ನೋಡಿ ನೋಡಿ ಅದರಲ್ಲಿ ಶ್ರೀ ಕೃಷ್ಣ ಶ್ರೀಕೃಷ್ಣ ಎಂದು ಬರೆದಿರುವುದನ್ನು ಗಮನಿಸುತ್ತಾನೆ.*
*ತನ್ನ ಪೂರ್ವಜರಿಗೆ ಇದ್ದ ಭಗವದ್ಭಕ್ತಿ, ಕೃಷ್ಣಾರ್ಪಣ ಬುದ್ಧಿ ನೋಡಿ ಆನಂದಾಶ್ರು ಸುರಿಸುತ್ತಾನೆ.*
*ದೈವ ಚೋದಿತನಾಗಿ(ಪ್ರೇರಣೆ ಯಿಂದಾಗಿ) ಜರಾಸಂಧನ ಕಿರೀಟವನ್ನಿಟ್ಟ ಪೆಟ್ಟಿಗೆಯ ಬಳಿ ಬರುತ್ತಾನೆ.*
*ಅದರ ಬಾಯಿ ತೆರೆದಾಗ ಮಿಂಚು ಹೊಡೆದಂತಹ ಬೆಳಕು ಕಂಡು ಅತ್ಯಾಶ್ಚರ್ಯದಿಂದ ಹಿಂದುಮುಂದು ನೋಡದೇ ಧಾರಣೆ ಮಾಡುತ್ತಾನೆ.*
*ದುರದೃಷ್ಟವಶಾತ್ ಆ ಕಿರೀಟವು ಅವನ ತಲೆಗೆ ಸರಿಹೊಂದುತ್ತದೆ.*
*ಅದನ್ನೇ ಧರಿಸಿಕೊಂಡು ಭೇಟೆಗೆ ಹೋಗುತ್ತಾನೆ.*
ವಿಧಿಯ ಲೀಲೆ ಇದುವೇ....
ಒಂದು ಸಲ ಪರೀಕ್ಷಿತ ರಾಜ ಕಲಿಯನ್ನು ನಿಗ್ರಹ ಮಾಡಿದಾಗ ಕಲಿಯು ನಿನ್ನ ರಾಜ್ಯದಲ್ಲಿ ಇರಲು ಅವಕಾಶ ಮಾಡಿಕೊಡು ಎಂದು ಕೇಳಿಕೊಂಡನು.
ಆಗ ಪರಿಕ್ಷೀತ ಅವನಿಗೆ ಇರಲು ಕೆಲ ಸ್ಥಳಗಳಲ್ಲಿ ಅವಕಾಶ ಮಾಡಿಕೊಟ್ಟಿರುತ್ತಾನೆ.
ಅವು ಯಾವುವೆಂದರೆ
ಜೂಜು, ಸುರಾಪಾನ, ವೇಶ್ಯೆ ಸ್ತ್ರೀಯರಲ್ಲಿ ಮತ್ತು ಎಲ್ಲಿ ಹಿಂಸೆ ಕೊಲೆ ನಡೆಯುತ್ತದೆ ಅಲ್ಲಿ ಇರಲು ಅವಕಾಶ ಮಾಡಿಕೊಡುವ.
ಆದರೂ
*ಕಲಿಯು ಮತ್ತೆ ಪುನಃ ನಮಸ್ಕರಿಸಿ ನನಗೆ ಇನ್ನೊಂದು ಜಾಗ ಕೊಡು ಎಂದಾಗ ಬಂಗಾರದಲ್ಲಿ ನೀನಿರು ಎಂದ.*
*ಯಾರು ಎಷ್ಟು ವಿಹಿತವೋ ಅಷ್ಟು ಬಂಗಾರ ಬಳಸಿದರೆ ಸರಿ. ಅದಕ್ಕಿಂತ ಹೆಚ್ಚಾಗಿ ಕಂಡು ಬಂದರೆ ಕಲಿಯ ಪ್ರವೇಶ ತಕ್ಷಣ ಆಗುತ್ತದೆ.*
*ಅದರಂತೆ ಸುವರ್ಣ ಕಿರೀಟದಲ್ಲಿ ಕಲಿ ಪ್ರವೇಶ ಮಾಡಿ ಈ ತರಹದ ಒಂದು ದುಷ್ಟ ಕಾರ್ಯವನ್ನು ಪರೀಕ್ಷಿತ ನಿಂದ ಮಾಡಿಸುವ.*
ಗರ್ಭದಲ್ಲಿರುವಾಗಲೇ ಕೃಷ್ಣ ಪರಮಾತ್ಮನಿಂದ ಆಶೀರ್ವಾದ ಪಡೆದ ಪರೀಕ್ಷಿತ ಕ್ಷಣಹೊತ್ತು ವಿವೇಕವನ್ನು ಮರೆತುಬಿಟ್ಟ. ಮುನಿಯ ಕೊರಳಿಗೆ ಸತ್ತ ಸರ್ಪವನ್ನು ಹಾಕಿ ತನ್ನ ಸಾವನ್ನು ತಾನೇ ತಂದುಕೊಂಡ... ತಲೆಯ ಮೇಲಿದ್ದ ಭಾರೀ ಬಂಗಾರದ ಜರಾಸಂದನ ಕಿರೀಟ ನಗುತ್ತಿತ್ತು...
*ಶ್ರೀ ಕೃಷ್ಣ, ಮುಖ್ಯ ಪ್ರಾಣ ಇದ್ದ ಕಡೆ ಅವನ ಆಟ ಸಾಗದು.*
No comments:
Post a Comment